ರಮೇಶ್ ಜಾರಕಿಹೊಳಿ ನಿವಾಸಕ್ಕೆ ಅಶ್ಲೀಲ ಪೋಸ್ಟರ್ ಅಂಟಿಸಿದ ಡಿಕೆ ಶಿವಕುಮಾರ್ ಅಭಿಮಾನಿಗಳು

| Updated By: ರಮೇಶ್ ಬಿ. ಜವಳಗೇರಾ

Updated on: Oct 31, 2023 | 7:45 AM

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ರಮೇಶ್ ಜಾರಿಕಹೊಳಿ ಸೈಲೆಂಟ್ ಆಗಿದ್ದವರು ಇದೀಗ ಮತ್ತೆ ಏಕಾಏಕಿ ಆ್ಯಕ್ಟೀವ್ ಆಗಿದ್ದಾರೆ. ಇದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಗೋಕಾಕ್ ಸಾಹುಕಾರ ಮತ್ತು ಕನಕಪುರ ಬಂಡೆ ನಡುವೆ ಮತ್ತೊಂದು ಸುತ್ತಿನ ಸಮರ ಶುರುವಾಗಿದೆ.

ರಮೇಶ್ ಜಾರಕಿಹೊಳಿ ನಿವಾಸಕ್ಕೆ ಅಶ್ಲೀಲ ಪೋಸ್ಟರ್ ಅಂಟಿಸಿದ ಡಿಕೆ ಶಿವಕುಮಾರ್ ಅಭಿಮಾನಿಗಳು
ಜಾರಕಿಹೊಳಿ ನಿವಾಸಕ್ಕೆ ಪೋಸ್ಟರ್ ಅಂಟಿಸಿರುವುದು
Follow us on

ಬೆಂಗಳೂರು, (ಅಕ್ಟೋಬರ್ 31): ಡಿಕೆ ಶಿವಕುಮಾರ್ (DK Shivakumar) ಪುಕ್ಕಲ, ಮೋಸಗಾರ, ಸಿಡಿ ಮಾಸ್ಟರ್, ಮಾಜಿ ಮಂತ್ರಿಯಾಗುತ್ತಾರೆ ಎಂದು ರಮೇಶ್ ಜಾರಕಿಹೊಳಿ(Ramesh jarkiholi) ಏಕವಚನದಲ್ಲಿ ಗುಡುಗಿದ್ದಾರೆ. ಇದರಿಂದ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ನೀಡಿದ್ದ ಹೇಳಿಕೆ ಅವರ ಬೆಂಬಲಿಗರು ಕೆಂಡಾಮಂಡಲರಾಗುವಂತೆ ಮಾಡಿದೆ. ಏಕವಚನದಲ್ಲಿ ಡಿಕೆ ಶಿವಕುಮಾರ್ ಅವರನ್ನು ನಿಂದಿಸಿದ್ದಕ್ಕೆ ರೊಚ್ಚಿಗೆದ್ದ ಅವರ ಬೆಂಬಲಿಗರು ನಿನ್ನೆ(ಅ.30) ರಾತ್ರಿ ಸದಾಶಿವನಗರದಲ್ಲಿರುವ ರಮೇಶ್ ಜಾರಕಿಹೊಳಿ ನಿವಾಸದ ಬಳಿ ಲಗ್ಗೆ ಹಾಕಿದ್ದು, ಮನೆ ಗೋಡೆಗಳಿಗೆ ಅವಾಚ್ಯ ಬರಹಗಳಿರುವ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಡಿಕೆ ಶಿವಕುಮಾರ್ ಮನೆಯ ಹಿಂಭಾಗದಲ್ಲೇ ಇರುವ ರಮೇಶ್ ಜಾರಕಿಹೊಳಿ ಮನೆ ಗೋಡೆಗಳಿಗೆ ಅಶ್ಲೀಲ ಬರಹಗಳಿರುವ ಪೋಸ್ಟರ್ ಅಂಟಿಸಿದ್ದಾರೆ. ಕೆಲವೊಂದು ಉಲ್ಲೇಖಿಸಲಾಗದ ಪದಗಳ ಜತೆಗೆ ಇದೇ ನಿನ್ನ ಸಂಸ್ಕೃತಿ ಅಂತೆಲ್ಲಾ ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ. ರಮೇಶ್ ಜಾರಕಿಹೊಳಿ ಮನೆ ಗೋಡೆಗೆ ಅಶ್ಲೀಲ ಬರಹಗಳ ಪೋಸ್ಟರ್ ಅಂಟಿಸಿದ ವಿಚಾರ ಗೊತ್ತಾಗುತ್ತಿದ್ದಂತೆ ಅಲರ್ಟ್ ಆದ ಪೊಲೀಸರು ಕೂಡಲೇ ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದಾರೆ. ಸ್ಥಳಕ್ಕೆ ಶೇಷಾದ್ರಿಪುರ ಉಪ ವಿಭಾಗ ಎಸಿಪಿ ಪ್ರಕಾಶ್ ಬೇಟಿ ಪರಿಶೀಲಿಸಿದ್ದು, ಮುಂಜಾಗ್ರತಾ ಕ್ರಮವಾಗಿ ರಮೇಶ್ ಜಾರಕಿಹೊಳಿ ನಿವಾಸಕ್ಕೆ ಬಿಗಿಭದ್ರತೆ ಕಲ್ಪಿಸಲಾಗಿದೆ.

ಇದನ್ನೂ ಓದಿ: ಮಹಾರಾಷ್ಟ್ರ ಮಾದರಿಯಲ್ಲಿ ಸರ್ಕಾರ ಪತನ: ಡಿಕೆ ಶಿವಕುಮಾರ್ ಶೀಘ್ರವೇ ಮಾಜಿ: ಹೊಸ ಬಾಂಬ್ ಸಿಡಿಸಿದ ಜಾರಕಿಹೊಳಿ

ಇದರೊಂದಿಗೆ ರಾಜ್ಯ ರಾಜಕಾರಣದಲ್ಲಿ ಗೋಕಾಕ್ ಸಾಹುಕಾರ ಮತ್ತು ಕನಕಪುರ ಬಂಡೆ ನಡುವೆ ಮತ್ತೊಂದು ಸುತ್ತಿನ ಸಮರ ಶುರುವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬಂದ ಬಳಿಕ ರಮೇಶ್ ಜಾರಿಕಹೊಳಿ ಸೈಲೆಂಟ್ ಆಗಿದ್ದವರು ಇದೀಗ ಮತ್ತೆ ಏಕಾಏಕಿ ಆ್ಯಕ್ಟೀವ್ ಆಗಿದ್ದಾರೆ.

ನಿನ್ನೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ರಮೇಶ್ ಜಾರಕಿಹೊಳಿ, ಡಿಕೆಶಿ ವಿರುದ್ಧ ಬೆಂಕಿಮಳೆಯನ್ನೇ ಸುರಿಸಿದ್ದರು. ಡಿಕೆಶಿ ಪುಕ್ಕಲ, ಮೋಸಗಾರ, ಹಿಂಬಾಗಿಲ ರಾಜಕಾರಣಿ ಎಂದೆಲ್ಲ ಗುಡುಗಿದ್ದರು. ಹಿಂದಿನ ಮೈತ್ರಿ ಸರ್ಕಾರ ಪತನಕ್ಕೂ ಡಿಕೆ ಶಿವಕುಮಾರ್ ಕಾರಣ. ಈಗಲೂ ಈ ಸರ್ಕಾರ ಪತನಕ್ಕೆ ಡಿಕೆಶಿಯೇ ಕಾರಣವಾಗುತ್ತಾರೆ. ಬಿಜೆಪಿ ಆಪರೇಷನ್ ಕಮಲ ಮಾಡಲ್ಲ. ಮಹಾರಾಷ್ಟ್ರದ ರೀತಿ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುತ್ತೆ. ಡಿಕೆಶಿ ಮಾಜಿ ಮಂತ್ರಿಯಾಗುತ್ತಾರೆ ಎಂದು ರಮೇಶ್ ಜಾರಕಿಹೊಳಿ ಬಾಂಬ್ ಸಿಡಿಸಿದ್ದರು.

ಅದೇನೆ ಇರಲಿ ಹಿಂದೊಮ್ಮೆ ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ನಡುವೆ ನಡೆದಿದ್ದ ಸಿಡಿ ಯುದ್ಧ ರಾಜ್ಯಾದ್ಯಂತ ಸದ್ದು ಮಾಡಿತ್ತು. ಇದೀಗ ಕೈ ಸರ್ಕಾರದ ಅಸ್ಥಿತ್ವಕ್ಕೆ ಬಂದ 5 ತಿಂಗಳ ಬಳಿಕ ಮತ್ತೆ ಡಿಕೆಶಿ-ಸಾಹುಕಾರ್ ನಡುವೆ ರಣರಣ ಕಾಳಗ ಶುರುವಾಗಿದೆ.

ಮತ್ತಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ