ಗ್ಯಾಸ್, ಅಡುಗೆ ಎಣ್ಣೆ ದರ ಇಳಿಸದಿದ್ದರೆ 2023ರ ಚುನಾವಣೆಯಲ್ಲೂ ಬಿಜೆಪಿಗೆ ಸೋಲಾಗಲಿದೆ: ಡಿಕೆ ಶಿವಕುಮಾರ್

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹಾನಗಲ್ ಉಪಚುನಾವಣೆಯಿಂದ ಬಿಜೆಪಿ ಪಾಠ ಕಲಿತಿದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಗ್ಯಾಸ್, ಅಡುಗೆ ಎಣ್ಣೆ ದರ ಇಳಿಸದಿದ್ದರೆ 2023ರ ಚುನಾವಣೆಯಲ್ಲೂ ಬಿಜೆಪಿಗೆ ಸೋಲಾಗಲಿದೆ: ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್
Follow us
TV9 Web
| Updated By: shivaprasad.hs

Updated on: Nov 05, 2021 | 1:17 PM

ಹುಬ್ಬಳ್ಳಿ: ಹಾನಗಲ್ ಮತದಾರರ ಬಗ್ಗೆ ನನಗೆ ಮೊದಲೇ ನಂಬಿಕೆಯಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಅವರು ಮಾತನಾಡಿದರು. ಕೊವಿಡ್​ ವೇಳೆ ರೈತರು, ಕಾರ್ಮಿಕರ ಸಂಕಷ್ಟಕ್ಕೆ ಸರ್ಕಾರ ಸ್ಪಂದಿಸಿರಲಿಲ್ಲ. ಸಹಾಯಮಾಡುವ ಬದಲು ಜನರ ಪಿಕ್​ಪ್ಯಾಕೆಟ್ ಮಾಡುತ್ತಿತ್ತು. ಇದರಿಂದ ಬೇಸತ್ತು ಹಾನಗಲ್ ಜನರು ಉತ್ತರ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಚುನಾವಣೆಯಲ್ಲಿ ಸೋಲು ಎದುರಾಗಿರುವುದರಿಂದಲೇ ಬೊಮ್ಮಾಯಿ ಹಾಗೂ ಪ್ರಧಾನಿ ಮೋದಿ ತೈಲ ಬೆಲೆ ಇಳಿಸಿದ್ದಾರೆ ಎಂದೂ ಡಿಕೆಶಿ ವ್ಯಂಗ್ಯವಾಡಿದ್ದಾರೆ. ಬೈಎಲೆಕ್ಷನ್​ ಬಳಿಕ ಬಿಜೆಪಿ ನಾಯಕರಿಗೆ ತಿಳಿವಳಿಕೆ ಬಂದಿದೆ. ಆದರೆ ಇನ್ನೂ ಗ್ಯಾಸ್, ಅಡುಗೆ ಎಣ್ಣೆ ದರ ಕಡಿಮೆಮಾಡಿಲ್ಲ. ದರ ಇಳಿಸದಿದ್ದರೆ 2023ರ ಚುನಾವಣೆಯಲ್ಲಿ ಇದೇ ಉತ್ತರ ಸಿಗಲಿದೆ ಎಂದು ಶಿವಕುಮಾರ್ ಕುಟುಕಿದ್ದಾರೆ.

ಹಾನಗಲ್​ನಲ್ಲಿ ಫಲಿತಾಂಶ ಬರುವುದಕ್ಕೂ ಮೊದಲೇ ಸಿಎಂ ಬಸವರಾಜ ಬೊಮ್ಮಾಯಿ ಸೋಲೊಪ್ಪಿಕೊಂಡಿದ್ದರು. ಕಳೆದ ಚುನಾವಣೆಯಲ್ಲಿ ಸಿಂದಗಿಯಲ್ಲಿ ಜೆಡಿಎಸ್​ ಗೆದ್ದಿತ್ತು. ಹಾನಗಲ್​ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿತ್ತು. ಆದರೆ ಹಾನಗಲ್​ ನನ್ನ ಮನೆ ಎಂದು ನಾವು ಎಲ್ಲೂ ಹೇಳಿರಲಿಲ್ಲ. ಹಾನಗಲ್ ಅಳಿಯ, ಹಾನಗಲ್ ಮೊಮ್ಮಗನೆಂದು ಹೇಳಿರಲಿಲ್ಲ. ಸಿಎಂ ಬೊಮ್ಮಾಯಿ ಹೇಳಿದ್ದನ್ನು ನೆನಪಿಸಲು ಬಯಸುತ್ತೇನೆ.  ಜೊತೆಗೆ ಬೊಮ್ಮಾಯಿ ಸಂಪುಟದ ಸಚಿವರೆಲ್ಲ ಅಲ್ಲೇ ಬೀಡುಬಿಟ್ಟಿದ್ದರು. ನಮ್ಮ ಗೌರವ ಉಳಿಸಿ ಎಂದು ಕೇಳಿಕೊಂಡಿದ್ದರು. ಆದರೆ ಫಲಿತಾಂಶ ಬರುವ ಮುನ್ನವೇ ಸಿಎಂ ಸೋಲೊಪ್ಪಿಕೊಂಡಿದ್ದರು ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ಬಿಟ್​ ಕಾಯಿನ್ ದಂಧೆಯಲ್ಲಿ ರಾಜಕಾರಣಿಗಳು ಭಾಗಿ ಆರೋಪಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಡಿ.ಕೆ ಶಿವಕುಮಾರ್, ಇಡಿ, ಸಿಬಿಐ ತನಿಖೆಗೆ ಕೊಟ್ಟಿದ್ದೇವೆ ಎಂದು ಸಿಎಂ ಹೇಳುತ್ತಿದ್ದಾರೆ. ಬಿಟ್ ಕಾಯಿನ್ ದಂಧೆ ಬಗ್ಗೆ ಸಿಎಂ ಬೊಮ್ಮಾಯಿ ವಿವರಿಸಲಿ. ನಾನು ಯಾವುದೇ ರಾಜಕಾರಣಿ ಬಗ್ಗೆ ಮಾತನಾಡಿಲ್ಲ. ಬಿಟ್ ಕಾಯಿನ್ ದಂಧೆ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟಪಡಿಸಲಿ. ಮಾಹಿತಿ ಹಕ್ಕು ಕಾಯ್ದೆಯಡಿ ನಾವು ಸಹ ಅರ್ಜಿ ಸಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

ಬೊಮ್ಮಾಯಿ ಹೇಳಿದ್ದೇನು? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಮೊದಲು ಹೇಳಿಕೆ ನೀಡುತ್ತಾ ಕಾಂಗ್ರೆಸ್ ಕಾಲೆಳೆದಿದ್ದರು. ಬಿಜೆಪಿ ನಾಯಕರು ಕಾಂಗ್ರೆಸ್ ಸೇರುತ್ತಾರೆಂಬ ಡಿಕೆಶಿ ಹೇಳಿಕೆಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡುತ್ತಾ, ಸಿಂದಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಾಗಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷ ಹೋಳಾಗುವ ಸ್ಥಿತಿ ಇದೆ. ಕಾಂಗ್ರೆಸ್‌ನವರು ಮೊದಲು ಅವರ ಬಗ್ಗೆ ನೋಡಿಕೊಳ್ಳಲಿ ಎಂದು ಸಿಎಂ ಬೊಮ್ಮಾಯಿ ಟಾಂಗ್ ನೀಡಿದ್ದರು.

ಇದನ್ನೂ ಓದಿ:

ಕುಟುಂಬ ಸಮೇತರಾಗಿ ಆಗಮಿಸಿ ಪುನೀತ್ ಸಮಾಧಿಗೆ ನಮನ ಸಲ್ಲಿಸಿದ ರೇಣುಕಾಚಾರ್ಯ

ಪ್ರಿಯಾಂಕಾ ಗಾಂಧಿಯ ಮಹಿಳಾ ಕೇಂದ್ರಿತ ಭರವಸೆಗಳು ಉತ್ತರ ಪ್ರದೇಶದ ಚುನಾವಣೆಗಾಗಿ ಮಾತ್ರ: ಕಾಂಗ್ರೆಸ್ ಪಕ್ಷದ ನಾಯಕರು

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ