‘ಪೊಲೀಸರು, ಅಧಿಕಾರಿಗಳು ನೌಕರರಾಗಿ ಕೆಲಸ ಮಾಡುತ್ತಿಲ್ಲ; ಬಿಜೆಪಿ ಕಾರ್ಯಕರ್ತರಂತೆ ಕೆಲಸ‌ ಮಾಡುತ್ತಿದ್ದಾರೆ’

| Updated By: ganapathi bhat

Updated on: Feb 13, 2022 | 3:50 PM

ಸಿಎಂ ಬಸವರಾಜ ಬೊಮ್ಮಾಯಿ ಒಂದು ಮಾತನ್ನೂ ಆಡುತ್ತಿಲ್ಲ. ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದಾರಾ? ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಗದಗದಲ್ಲಿ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪೊಲೀಸರು, ಅಧಿಕಾರಿಗಳು ನೌಕರರಾಗಿ ಕೆಲಸ ಮಾಡುತ್ತಿಲ್ಲ; ಬಿಜೆಪಿ ಕಾರ್ಯಕರ್ತರಂತೆ ಕೆಲಸ‌ ಮಾಡುತ್ತಿದ್ದಾರೆ’
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
Follow us on

ಗದಗ: ಪೊಲೀಸರು, ಅಧಿಕಾರಿಗಳು ನೌಕರರಾಗಿ ಕೆಲಸ ಮಾಡುತ್ತಿಲ್ಲ. ಬಿಜೆಪಿ ಕಾರ್ಯಕರ್ತರಂತೆ ಕೆಲಸ‌ ಮಾಡುತ್ತಿದ್ದಾರೆ. ಪೊಲೀಸರು, ಅಧಿಕಾರಿಗಳ ವರ್ತನೆಯನ್ನು ಗಮನಿಸುತ್ತಿದ್ದೇವೆ ಎಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ವಿರುದ್ಧ ಗದಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾನುವಾರ ಕಿಡಿಕಾರಿದ್ದಾರೆ. ಕೆಂಪುಕೋಟೆ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ ಎಂಬ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಯಾವನೋ ಈಶ್ವರಪ್ಪ ಅಂತೆ, ತಲೆ ಕೆಟ್ಟ ಈಶ್ವರಪ್ಪ. ಆ ಬೊಮ್ಮಾಯಿ, ಗವರ್ನರ್ ಇಟ್ಕೊಂಡು ಕೂತವ್ರೆ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ 10 ನಿಮಿಷದಲ್ಲಿ ರಾಜೀನಾಮೆ ಪಡೆಯುತ್ತಿದ್ವಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಒಂದು ಮಾತನ್ನೂ ಆಡುತ್ತಿಲ್ಲ. ಬಾಯಿಗೆ ಹೊಲಿಗೆ ಹಾಕಿಕೊಂಡಿದ್ದಾರಾ? ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧ ಕೇಸ್ ದಾಖಲಿಸಬೇಕು ಎಂದು ಗದಗದಲ್ಲಿ ಡಿ.ಕೆ. ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯವರನ್ನ ಹಾದಿಬೀದಿಲಿ ನಿಲ್ಲಿಸಿ ಚಪ್ಪಲಿಯಲ್ಲಿ ಹೊಡಿಬೇಕು: ಶಿವರಾಜ್ ತಂಗಡಗಿ

ಬಿಜೆಪಿಯವರನ್ನ ಹಾದಿಬೀದಿಲಿ ನಿಲ್ಲಿಸಿ ಚಪ್ಪಲಿಯಲ್ಲಿ ಹೊಡಿಬೇಕು ಎಂದು ಇತ್ತ ಕೊಪ್ಪಳದಲ್ಲಿ ಶಿವರಾಜ ತಂಗಡಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ಬಗ್ಗೆ ಮಾತನಾಡುತ್ತಾರೆ. ಯಾರಿಗೆ ಹುಟ್ಟಿದ್ದಾರೆ ಎಂದು ಅಸ್ಸಾಂ ಸಿಎಂ ಶರ್ಮಾ ಕೇಳುತ್ತಾರೆ. ಬಿಜೆಪಿಯವರಿಗೆ ಆರೆಸ್ಸೆಸ್​​ ಇದನ್ನೇ ಹೇಳಿಕೊಡುತ್ತಾ ಹಿಜಾಬ್ ಗಲಾಟೆಯ ಹಿಂದೆ ಬಿಜೆಪಿ, ಸಂಘಪರಿವಾರ ಇದೆ. ಈ ವಿಷಯ ಪ್ರಧಾನಿ ಮೋದಿಗೂ ಗೊತ್ತಿದೆ ಎಂದು ಶಿವರಾಜ ತಂಗಡಗಿ ಹೇಳಿದ್ದಾರೆ.

ಬಿಜೆಪಿಯವರ ಬಾಯಲ್ಲಿ ಪಾಕಿಸ್ತಾನ ಅನ್ನೋದನ್ನ ಕೇಳಿ ಸಾಕಾಗಿದೆ. ಇವರೇ ಬೆಂಕಿ ಹಚ್ಚಿ ಪಾಕಿಸ್ತಾನ, ಎಸ್​ಡಿಪಿಐ ಮೇಲೆ ಹಾಕೋದು. ಯಾರೂ ಸಿಕ್ಕಿಲ್ಲ ಅಂದ್ರೆ ಕಾಂಗ್ರೆಸ್​ನವರ ಮೇಲೆ ಹಾಕುತ್ತಾರೆ ಎಂದು ಕೊಪ್ಪಳದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗ: ಜನಪರ ಆಡಳಿತ ನೀಡುವಲ್ಲಿ ಬಿಜೆಪಿ ಸರ್ಕಾರ ವಿಫಲ: ಕಿಮ್ಮನೆ ರತ್ನಾಕರ್

ಜನಪರ ಆಡಳಿತ ನೀಡುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಕೋಮುಗಲಭೆ ಸೃಷ್ಟಿಸಿ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದೆ. ಬಿಜೆಪಿ ಬದುಕಿರುವುದೇ ಕೋಮು ಘರ್ಷಣೆಯಿಂದ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ. ಈಶ್ವರಪ್ಪ, ಸಿಟಿ ರವಿ, ಪ್ರತಾಪ ಸಿಂಹ ಇವರ ಮಾತುಗಳು ಕೋಮು ಗಲಭೆ ಸೃಷ್ಟಿ ಮಾಡುತ್ತವೆ. ಜನರಿಗೆ ನೋವು ಆಗುವಂತಹ ಹೇಳಿಕೆ ಬಿಜೆಪಿ ನಾಯಕರು ನೀಡಬಾರದು. ದೇಶದಲ್ಲಿ ಬಿಜೆಪಿ ಬದುಕಿದೆ ಅಂದ್ರೆ ಅದು ಆಡಳಿತದ ಮೂಲಕ ಅಲ್ಲ. ಬಿಜೆಪಿ ಬದುಕಿರುವುದೇ ಕೋಮು ಸಂಘರ್ಷದಿಂದ ಎಂದು ಕಿಮ್ಮನೆ ಹೇಳಿದ್ದಾರೆ.

ಹಿಜಾಬ್ ವಿವಾದದ ಹಿಂದೆ ಬಿಜೆಪಿ ಇದೆ. ನ್ಯಾಯಾಲಯದ ಆದೇಶ ಎಲ್ಲರೂ ಪಾಲಿಸಬೇಕು. ಕೋಮುಗಲಭೆ ಸೃಷ್ಟಿಕರ್ತರು ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಅಮಿತ್ ಶಾ. ಇಬ್ಬರೂ ಜೈಲಿಗೆ ಹೋಗಿ ಬಂದವರು. ಅಮಿತ್ ಶಾ ಎರಡು ವರ್ಷ ಜೈಲಿನಲ್ಲಿ ಇದ್ಧವರು. ಆರಗ ಜ್ಞಾನೇಂದ್ರ ಮೇಲೆ ಎರಡು ಮೂರು ಕೇಸ್ ದಾಖಲು ಆಗಿವೆ. ಅವರಿಂದ ಏನು ಒಳ್ಳೆಯದು ನಿರೀಕ್ಷೆ ಸಾಧ್ಯ? ಆರಗ ಜ್ಞಾನೇಂದ್ರ ಕೇವಲ ಬೆಂಗಳೂರು ಮತ್ತು ತೀರ್ಥಹಳ್ಳಿಗೆ ಮಾತ್ರ ಸೀಮಿತ ಗೃಹ ಸಚಿವ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: ಕೇಂದ್ರದ ಬಜೆಟ್​ ಫಸ್ಟ್ ಕ್ಲಾಸ್​ ಎಂದು ಜಾಹೀರಾತು ಬರುತ್ತಿದೆ, ಸರಿಯಿಲ್ಲ ಅಂದ್ರೆ ಕೇಸ್ ಹಾಕ್ತಾರೆ: ಡಿಕೆ ಶಿವಕುಮಾರ್ ವ್ಯಂಗ್ಯ

ಇದನ್ನೂ ಓದಿ: ಶಾಂತಿ ಕದಡುವ ಸುಳ್ಳು ಸುದ್ದಿ ಪೋಸ್ಟ್​ ಮಾಡಿದ ಆರೋಪ: ಡಿಕೆ ಶಿವಕುಮಾರ್ ವಿರುದ್ಧ ದೂರು ನೀಡಿದ ಬಿಜೆಪಿ

Published On - 3:37 pm, Sun, 13 February 22