ಕೇಂದ್ರದ ಬಜೆಟ್ ಫಸ್ಟ್ ಕ್ಲಾಸ್ ಎಂದು ಜಾಹೀರಾತು ಬರುತ್ತಿದೆ, ಸರಿಯಿಲ್ಲ ಅಂದ್ರೆ ಕೇಸ್ ಹಾಕ್ತಾರೆ: ಡಿಕೆ ಶಿವಕುಮಾರ್ ವ್ಯಂಗ್ಯ
ಬಿಜೆಪಿ ಶಾಸಕರು ಕಾಂಗ್ರೆಸ್ಗೆ ಸೇರ್ಪಡೆಯಾಗುವ ವಿಚಾರವಾಗಿ, ಬೆಳಗಾವಿ ಜಿಲ್ಲೆಯಲ್ಲೇ ಸಾಕಷ್ಟು ಶಾಸಕ ಹೆಸರು ಓಡಾಡ್ತಿದೆಯಲ್ಲ. ಅವರನ್ನೇ ಕೇಳಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿ: ಇನ್ನೂ ಮಗುನೇ ಹುಟ್ಟಿಲ್ವಲ್ಲ, ಆಮೇಲೆ ನೋಡೋಣ. ಮಗು ಹುಟ್ಟುತ್ತೋ ಇಲ್ವೋ, ಗಂಡೋ ಹೆಣ್ಣೋ ನೋಡೋಣ ಎಂದು ರಾಜ್ಯ ಬಜೆಟ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಶಾಸಕರು ಕಾಂಗ್ರೆಸ್ಗೆ ಸೇರ್ಪಡೆಯಾಗುವ ವಿಚಾರವಾಗಿ, ಬೆಳಗಾವಿ ಜಿಲ್ಲೆಯಲ್ಲೇ ಸಾಕಷ್ಟು ಶಾಸಕ ಹೆಸರು ಓಡಾಡ್ತಿದೆಯಲ್ಲ. ಅವರನ್ನೇ ಕೇಳಿ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ರೈತರ ಧರಣಿ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವೆ. ಕೇಂದ್ರ ಸರ್ಕಾರ ರೂಪಿಸಿದ್ದ 3 ಮಸೂದೆಯನ್ನು ಹಿಂಪಡೆದಿದೆ. ರಾಜ್ಯ ಸರ್ಕಾರ ರೂಪಿಸಿದ್ದ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು. ಕೇಂದ್ರದ ಬಜೆಟ್ ಬಗ್ಗೆ ಜನರು ಬಹಳ ಸಮಾಧಾನವಾಗಿದ್ದಾರೆ. ಕೊವಿಡ್ ಸಂಕಷ್ಟದ ವೇಳೆ 20 ಲಕ್ಷ ಕೋಟಿ ಹಣ ಹಂಚಿದ್ದಾರೆ. ಬಿ.ಎಸ್. ಯಡಿಯೂರಪ್ಪ ಸಿಎಂ ಆಗಿದ್ದಾಗ 1,900 ಕೋಟಿ ಹಣ ಕೊಟ್ಟಿದ್ದಾರೆ. ಬೀದಿ ಬದಿ ವ್ಯಾಪಾರಿಗಳು, ರೈತರಿಗೆ 1900 ಕೋಟಿ ಕೊಟ್ಟಿದ್ದಾರೆ. ಕೇಂದ್ರದ ಬಜೆಟ್ ಫಸ್ಟ್ ಕ್ಲಾಸ್ ಎಂದು ಜಾಹೀರಾತು ಬರುತ್ತಿದೆ. ಸರಿಯಿಲ್ಲ ಅಂದ್ರೆ ಕೇಸ್ ಹಾಕುತ್ತಾರೆ. ಏನೂ ಮಾತಾಡಬಾರದು ಎಂದು ಕೇಂದ್ರದ ಬಜೆಟ್ ಬಗ್ಗೆ ಕೂಡ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಕರ್ನಾಟಕದಲ್ಲಿ ಹಿಜಾಬ್, ಕೇಸರಿ ಶಾಲು ಸಂಘರ್ಷ ವಿಚಾರವಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ನಿಲುವನ್ನು ರಾಹುಲ್ ಗಾಂಧಿಯವರು ಹೇಳಿದ್ದಾರೆ. ಭಾರತ ದೇಶದ ಸಂವಿಧಾನವೇ ನಮ್ಮ ಧರ್ಮ. ನಾವೆಲ್ಲರೂ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ವಿದ್ಯಾರ್ಥಿಗಳನ್ನು ರಾಜಕಾರಣಕ್ಕೆ ಬಳಸಿಕೊಳ್ಳುವುದು ಬೇಡ. ವಿದ್ಯಾರ್ಥಿಗಳ ಮನಸ್ಸು ಕೆಡಿಸುವುದು ಬೇಡ. ದೇಶದ ಐಕ್ಯತೆ, ಸಮಗ್ರತೆ, ಶಾಂತಿ ನೆಲೆಸುವುದು ಬಳಹ ಮುಖ್ಯ ಎಂದು ತಿಳಿಸಿದ್ದಾರೆ.
ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವುದಾಗಿ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಹೇಳಿಕೆ ನೀಡಿರುವ ಈಶ್ವರಪ್ಪನನ್ನು ಸಂಪುಟದಿಂದ ವಜಾಗೊಳಿಸಲಿ. ಗವರ್ನರ್, ಸಿಎಂ ಬೊಮ್ಮಾಯಿ ಸಂಪುಟದಿಂದ ವಜಾಗೊಳಿಸಲಿ ಎಂದು ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯ ಮಾಡಿದ್ದಾರೆ.
ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ವಿರುದ್ಧ ಪ್ರತಿಭಟನೆ
ಇತ್ತ, ಬೆಂಗಳೂರಿನಲ್ಲಿ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ. ಕಾಂಗ್ರೆಸ್ ಭವನದ ಎದುರು ಯುವ ಕಾಂಗ್ರೆಸ್ನಿಂದ ಧರಣಿ ನಡೆಸಲಾಗಿದೆ. ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ ಖಂಡಿಸಿ ಧರಣಿ ನಡೆಸಿ, ಸಿಎಂ ಹಿಮಂತ್ ಬಿಸ್ವಾ ಶರ್ಮಾ ರಣಹೇಡಿ ಎಂದು ಘೋಷಣೆ ಕೂಗಲಾಗಿದೆ. ವ್ಯಕ್ತಿಗೆ ಶರ್ಮಾ ಮುಖವಾಡ ಹಾಕಿಸಿ ಕತ್ತೆ ಮೇಲೆ ಕೂರಿಸಿ ಧರಣಿ ನಡೆಸಿದ್ದು ಸಿಎಂ ಶರ್ಮಾ ಮುಖವಾಡ ಧರಿಸಿದ್ದ ವ್ಯಕ್ತಿಯ ಕೇಶಮುಂಡನ ಮಾಡಲಾಗಿದೆ.
ಅಸ್ಸಾಂ ಸಿಎಂ ಶರ್ಮಾ ಕ್ಷಮೆಯಾಚಿಸದಿದ್ರೆ ರಾಜ್ಯಾದ್ಯಂತ ಧರಣಿ ನಡೆಸುತ್ತೇವೆ. ಶರ್ಮಾ ಮಾಡಿದ್ದ ಹಗರಣ ಮುಚ್ಚಿಹಾಕಲು ಬಿಜೆಪಿ ಸೇರಿದ್ದಾರೆ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ವಾಗ್ದಾಳಿ ನಡೆಸಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ. ಸೋನಿಯಾ ಗಾಂಧಿ UPA ಸರ್ಕಾರದಲ್ಲಿ ಪ್ರಧಾನಿ ಆಗಬಹುದಿತ್ತು. ದೇಶಕ್ಕಾಗಿ ಸೋನಿಯಾ ಗಾಂಧಿ ಪ್ರಧಾನಿ ಹುದ್ದೆ ತ್ಯಾಗ ಮಾಡಿದ್ದರು. ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಕ್ಷಮೆಯಾಚಿಸಲಿ ಎಂದು ಬೆಂಗಳೂರಿನಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಶಾಂತಿ ಕದಡುವ ಸುಳ್ಳು ಸುದ್ದಿ ಪೋಸ್ಟ್ ಮಾಡಿದ ಆರೋಪ: ಡಿಕೆ ಶಿವಕುಮಾರ್ ವಿರುದ್ಧ ದೂರು ನೀಡಿದ ಬಿಜೆಪಿ
ಇದನ್ನೂ ಓದಿ: ನಿಟ್ಟೂರು ಪುರದಮ್ಮನ ದರ್ಶನ ಮಾಡಿ, ಹರಕೆ ತೀರಿಸಿದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್