ನಿಟ್ಟೂರು ಪುರದಮ್ಮನ ದರ್ಶನ ಮಾಡಿ, ಹರಕೆ ತೀರಿಸಿದ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್
ಈ ಹಿಂದೆ ಕೂಡ ಖಾಸಗಿಯಾಗಿ ಬಂದು ದೇವಿ ದರ್ಶನ ಮಾಡಿದ್ದೆ. ನನ್ನ ಅನೇಕ ಸ್ನೇಹಿತರು ದೇವಿಗೆ ಹರಕೆಮಾಡಿಕೊಂಡಿದ್ದರು. ಅವೆಲ್ಲವೂ ಈಡೇರಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಹಾಸನ: ತಾಲ್ಲೂಕು ನಿಟ್ಟೂರು ಗ್ರಾಮದ ಪುರದಮ್ಮ (Puradamma Temple) ದೇಗುಲಕ್ಕೆ ಭೇಟಿ ಗುರುವಾರ ಭೇಟಿ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹರಕೆ ತೀರಿಸಿದರು. ದೇವಿಗೆ ನಮಸ್ಕರಿಸಿದ ನಂತರ ಮಾತನಾಡಿದ ಅವರು, ಈ ಹಿಂದೆ ಕೂಡ ಖಾಸಗಿಯಾಗಿ ಬಂದು ದೇವಿ ದರ್ಶನ ಮಾಡಿದ್ದೆ. ನನ್ನ ಅನೇಕ ಸ್ನೇಹಿತರು ದೇವಿಗೆ ಹರಕೆಮಾಡಿಕೊಂಡಿದ್ದರು. ಅವೆಲ್ಲವೂ ಈಡೇರಿದೆ. ಹೀಗಾಗಿ ನಾನೂ ದೇವಿ ದರ್ಶನ ಮಾಡಿದೆ ಎಂದು ಹೇಳಿದರು. ಚಿಕ್ಕಮಗಳೂರಿನ ಸಿದ್ದಾರ್ಥ ಅವರ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದೆ. ವಾಪಸ್ ಹೋಗುವಾಗ ಪುರದಮ್ಮ ದೇವಿಯ ದರ್ಶನ ಮಾಡಿದ್ದೇನೆ. ಈ ಹಿಂದೆ ನನ್ನ ಕಷ್ಟಕಾಲದಲ್ಲಿ ಇಲ್ಲಿಗೆ ಬಂದಿದ್ದೆ. ದೇವಾಲಯಗಳು ಎಂದರೆ ಭಕ್ತನಿಗೂ-ಭಗವಂತನಿಗೂ ಮಾತುಕತೆ ನಡೆಯುವ ಸ್ಥಳ. ನೋವು, ದುಃಖ ಸಂತೋಷ ಹೇಳಿಕೊಳ್ಳುವ ಸ್ಥಳ. ನಮ್ಮ ಮನೆಯಲ್ಲಿಯೂ ಅಷ್ಟೇ, ನಾನು ದೇವರ ಎದುರು ಎಲ್ಲವನ್ನೂ ಹೇಳಿಕೊಳ್ಳುತ್ತೇನೆ ಎಂದರು.
ದೇವಾಲಯಕ್ಕೆ ಬಂದಾಗ ನಮ್ಮ ಸಮಸ್ಯೆ, ರಾಜ್ಯದ ಸಮಸ್ಯೆ ಪರಿಹಾರವಾಗಲಿ, ಅರೋಗ್ಯ ಭಾಗ್ಯ ಸಿಗಲಿ ಎಂದು ಕೇಳಿಕೊಳ್ಳುವುದು ನಮ್ಮ ಕರ್ತವ್ಯ. ರಾಜ್ಯಕ್ಕೆ ಬಂದಿರುವ ಕಷ್ಟ ನಿವಾರಣೆ ಆದರೆ ಸಾಕು. ದುಃಖವನ್ನು ದೂರಮಾಡುವ ದುರ್ಗಾದೇವಿ ಎಲ್ಲರ ದುಃಖ ದೂರ ಮಾಡಲಿ ಎಂದು ಪ್ರಾರ್ಥನೆ ಮಾಡಿದೆ ಎಂದರು.
ಬಿಜೆಪಿ ಆಂತರಿಕ ವಿಷಯ ಮಾತಾಡಬೇಡಿ: ಕಾಂಗ್ರೆಸ್ ನಾಯಕರಿಗೆ ಡಿಕೆಶಿ ತಾಕೀತು ಸಂಪುಟ ವಿಸ್ತರಣೆ ವಿಚಾರದಲ್ಲಿ ಕೆಲ ಬಿಜೆಪಿ ಶಾಸಕರು ಅಪಸ್ವರ ವ್ಯಕ್ತಪಡಿಸಿರುವ ವಿಚಾರವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಸ್ತಾಪಿಸಿದರು. ಶಾಸಕರಾಗಿ ಸಚಿವ ಸ್ಥಾನ ಕೇಳುವುದು ಅವರ ಹಕ್ಕು. ಬಿಜೆಪಿ ಶಾಸಕರು ಅವರ ಹಕ್ಕನ್ನ ಅವರು ಕೇಳುತ್ತಾರೆ. ಬಿಜೆಪಿಯ ಆಂತರಿಕ ವಿಚಾರದಲ್ಲಿ ನಮ್ಮವರು ಮಾತಾಡಬಾರದು. ಈ ವಿಷಯದ ಬಗ್ಗೆ ಯಾರೂ ಕಾಮೆಂಟ್ ಮಾಡಬಾರದು ಎಂದು ಎಲ್ಲರಿಗೂ ಹೇಳುವೆ ಎಂದರು.
ಯಾರಿಗೇ ಸಚಿವ ಸ್ಥಾನ ಸಿಕ್ಕರೂ ನಾನು ಅಭಿನಂದಿಸುವುದೂ ಇಲ್ಲ, ದೂಷಿಸುವುದೂ ಇಲ್ಲ, ಅದರ ಬಗ್ಗೆ ನನ್ನ ಅಭಿಪ್ರಾಯ ತಿಳಿಸುವುದೂ ಇಲ್ಲ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಮುಂದುವರಿದ ಬಣ ರಾಜಕೀಯ ಬೆಂಗಳೂರು: ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಮುಂದುವರಿದಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಹಗ್ಗ ಜಗ್ಗಾಟದಲ್ಲಿ ಸಿದ್ದರಾಮಯ್ಯ ಬಣಕ್ಕೆ ಸೇರಿದವರಿಗೆ ನೊಟೀಸ್ ಜಾರಿ ಮಾಡಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.
‘ಈ ಹಿಂದೆಯೂ ಹಲವರು ಅಧ್ಯಕ್ಷರ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರಿಗೆಲ್ಲರಿಗೂ ನೊಟೀಸ್ ಜಾರಿ ಮಾಡಿದ ಉದಾಹರಣೆ ಇಲ್ಲ. ಹೀಗಿರುವಾಗ ಸಿದ್ದರಾಮಯ್ಯ ಬೆಂಬಲಿಗರು ಎನ್ನುವ ಕಾರಣಕ್ಕೆ ಶಾಸಕ ಅಶೋಕ್ ಪಟ್ಟಣ ಅವರಿಗೆ ನೊಟೀಸ್ ಜಾರಿ ಮಾಡಲಾಗಿದೆ’ ಎಂದು ದೂರಲಾಗಿದೆ. ಈ ನಡುವೆ ಸ್ವತಃ ಸಿದ್ದರಾಮಯ್ಯ ಅವರು ಅಶೋಕ ಪಟ್ಟಣ ಪರವಾಗಿ ಬ್ಯಾಟಿಂಗ್ ಆರಂಭಿಸಿದ್ದಾರೆ. ‘ನೊಟೀಸ್ಗೆ ಸರಿಯಾಗಿ ಉತ್ತರ ಕೊಡು’ ಎಂದು ಸಿದ್ದರಾಮಯ್ಯ ಸಲಹೆ ಮಾಡಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ನಲ್ಲಿ ಎರಡು ಬಣಗಳು ರೂಪುಗೊಂಡಿದ್ದು, ಈ ಹಿಂದೆಯೂ ಹಲವು ಸಂದರ್ಭಗಳಲ್ಲಿ ಎರಡೂ ಗುಂಪುಗಳ ನಡುವಣ ಭಿನ್ನಮತ ಹೊರಬಿದ್ದಿತ್ತು. ಮೈಸೂರು ಮೇಯರ್ ಚುನಾವಣೆ, ಮೇಕೆದಾಟು ಪೂರ್ವಭಾವಿ ಸಭೆ ಹಾಗೂ ಮುಂದಿನ ಸಿಎಂ ಯಾರು ಎಂಬ ವಿಚಾರಕ್ಕೆ ಎರಡೂ ಬಣಗಳಲ್ಲಿ ಭಿನ್ನಮತ ತಲೆದೋರಿತ್ತು.
ಇದನ್ನೂ ಓದಿ: ನಾನು ತಪ್ಪೇ ಮಾಡಿಲ್ಲ, ಡಿಕೆ ಶಿವಕುಮಾರ್ ನಾನು ಸ್ನೇಹಿತರು: ಕಾಂಗ್ರೆಸ್ನಿಂದ ನೋಟಿಸ್ ನೀಡಿರುವ ಬಗ್ಗೆ ಅಶೋಕ್ ಪಟ್ಟಣ್ ಹೇಳಿಕೆ ಇದನ್ನೂ ಓದಿ: ಕರ್ನಾಟಕಕ್ಕೆ ಯೋಜನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ; ಕೇಂದ್ರ ಬಜೆಟ್ಗೆ ಡಿಕೆ ಶಿವಕುಮಾರ್ ಲೇವಡಿ
Published On - 5:24 pm, Thu, 3 February 22