ಕರ್ನಾಟಕಕ್ಕೆ ಯೋಜನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ; ಕೇಂದ್ರ ಬಜೆಟ್ಗೆ ಡಿಕೆ ಶಿವಕುಮಾರ್ ಲೇವಡಿ
ಮನ್ರೇಗಾ ಯೋಜನೆಯ ಹಣವನ್ನು ಕಡಿಮೆ ಮಾಡಿದರು. 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಅದನ್ನು ಈಗ 60 ಲಕ್ಷಕ್ಕೆ ಇಳಿಸಿದ್ದಾರೆ ಎಂದು ಟಿಕೆ ಮಾಡಿದ ಡಿಕೆ ಶಿವಕುಮಾರ್, ಕೊರೊನಾ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ.
ಬೆಂಗಳೂರು: ಇದು ಕೇಂದ್ರ ಬಜೆಟ್ ಅಲ್ಲ, ಕೊವಿಡ್ ಬಜೆಟ್ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಕೇಂದ್ರ ಬಜೆಟ್ಗೆ (Budget) ಲೇವಡಿ ಮಾಡಿದ್ದಾರೆ. ರಾಜ್ಯದ ಹೆಸರೇ ಇಲ್ಲದಂತಹ ಬಜೆಟ್ ಕೊಡಿಸಿದ್ದಾರೆ. ರಾಜ್ಯಕ್ಕೆ ಯೋಜನೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಹೀಗಾಗಿ ರಾಜ್ಯದ 25 ಸಂಸದರಿಗೆ, ಸಿಎಂಗೆ ಅಭಿನಂದನೆ. ನಿರ್ಮಲಾ ಸೀತಾರಾಮನ್ ರಾಜ್ಯದಿಂದ ಹೋಗಿದ್ದಾರೆ. ಇಲ್ಲಿನ ಋಣ ತೀರಿಸಬೇಕೆಂದು ಕಾರ್ಯಕ್ರಮ ಕೊಡಬೇಕಿತ್ತು. ದೇಶದಲ್ಲಿ ಜನಸಾಮಾನ್ಯರು ಕೊವಿಡ್ನಿಂದ ನರಳುತ್ತಿದ್ದಾರೆ. ಬಜೆಟ್ ಕೂಡ ಅದೇ ರೀತಿ ನರಳುತ್ತಿದೆ ಅಂತ ಡಿಕೆಶಿ ಟೀಕೆ ಮಾಡಿದ್ದಾರೆ.
ಮನ್ರೇಗಾ ಯೋಜನೆಯ ಹಣವನ್ನು ಕಡಿಮೆ ಮಾಡಿದರು. 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿದ್ದರು. ಅದನ್ನು ಈಗ 60 ಲಕ್ಷಕ್ಕೆ ಇಳಿಸಿದ್ದಾರೆ ಎಂದು ಟಿಕೆ ಮಾಡಿದ ಡಿಕೆ ಶಿವಕುಮಾರ್, ಕೊರೊನಾ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡಿದ್ದಾರೆ. ಈ ಬಜೆಟ್ನಿಂದ ರೈತರಿಗೆ ಏನಾದ್ರು ಸಹಾಯವಾಗಿದ್ಯಾ? ವೇತನ ಪಡೆಯುವವರಿಗೂ ಯಾವುದೇ ರಿಲೀಫ್ ಇಲ್ಲ. 40 ವರ್ಷದಲ್ಲಿ ಇಂತಹ ಪೇಷಂಟ್ ಬಜೆಟ್ ನೋಡಿಲ್ಲ ಅಂತ ಹೇಳಿದರು.
ಕಾರ್ಪೊರೇಟ್ ಲಾಬಿಗೆ ಮಣಿದು ಅವರಿಗೆ ಅವಕಾಶ ನೀಡಿದ್ದಾರೆ. ಎಲ್ಲರ ಜೇಬು ಪಿಕ್‌ಪಾಕೆಟ್ ಮಾಡುವಂತಹ ಬಜೆಟ್ ಇದು ಅಂತ ಕೇಂದ್ರ ಬಜೆಟ್ ಬಗ್ಗೆ ವಾಗ್ದಾಳಿ ನಡೆಸಿದ ಶಿವಕುಮಾರ್, ನದಿ ಜೋಡಣೆ ವಿಚಾರಕ್ಕೂ ಟೀಕೆ ಮಾಡಿದ್ದಾರೆ. ಪೆನ್ನಾರ್ ನದಿ ಎಲ್ಲಿದೆ, ಇದರಿಂದ ರಾಜ್ಯಕ್ಕೇನು ಲಾಭ? ಅದರ ಬದಲಿಗೆ ಮೇಕೆದಾಟು ಯೋಜನೆಯನ್ನು ಕೊಡಲಿ. ಬಡ್ಡಿರಹಿತ ಸಾಲವನ್ನು ರಾಜ್ಯ ಸರ್ಕಾರಗಳಿಗೆ ಕೊಡ್ತಿದ್ದಾರೆ. ದೇಶದಲ್ಲಿರುವ ಜನರಿಗೆ ಬಡ್ಡಿ ರಹಿತ ಸಾಲ ಕೊಡ್ತಿದ್ದಾರಾ? ಡಿಜಿಟಲ್ ವಿವಿ ರಾಜ್ಯದಲ್ಲಿ ಮಾಡಿದ್ರೆ ಜಮೀನು ಕೊಡಿಸ್ತೇನೆ. ಸಿಎಂ ಬೊಮ್ಮಾಯಿ ರಾಜ್ಯಕ್ಕೆ ಡಿಜಿಟಲ್ ವಿವಿಯನ್ನು ತರಲಿ ಎಂದರು.
ನಿಮ್ಹಾನ್ಸ್‌ಗೆ ನೋಡಲ್ ಏಜೆನ್ಸಿ ನೀಡಿರುವುದಕ್ಕೂ ಡಿಕೆಶಿ ಟೀಕೆ ಮಾಡಿದ್ದಾರೆ. ರಾಜ್ಯ ಸರ್ಕಾರದಲ್ಲಿ ಮೆಂಟಲ್ ಕೇಸ್‌ಗಳು ಜಾಸ್ತಿ ಇವೆ. ಅದಕ್ಕೆ ಅದನ್ನ ಕೊಟ್ಟಿದ್ದಾರೆ ಅಂತ ಹೇಳಿದರು.
ಇದನ್ನೂ ಓದಿ
ಒ ಇದ್ದಲ್ಲೆಲ್ಲ ಸೊನ್ನೆ ಹಾಕಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ; ಕೇಂದ್ರ ಬಜೆಟ್ಗೆ ನೀಡಿದ ಪ್ರತಿಕ್ರಿಯೆ ಇದು !
ಕಾಂಗ್ರೆಸ್ ಕಚೇರಿಯಲ್ಲಿ ಕನ್ಹಯ್ಯ ಕುಮಾರ್ ಮೇಲೆ ಮಸಿ ಎರಚಿದ ಯುವಕರು; ಅದು ಇಂಕ್ ಅಲ್ಲ ಆ್ಯಸಿಡ್ ಎಂದು ಕೈ ನಾಯಕರು
Published On - 4:53 pm, Tue, 1 February 22