AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಂತಿ ಕದಡುವ ಸುಳ್ಳು ಸುದ್ದಿ ಪೋಸ್ಟ್​ ಮಾಡಿದ ಆರೋಪ: ಡಿಕೆ ಶಿವಕುಮಾರ್ ವಿರುದ್ಧ ದೂರು ನೀಡಿದ ಬಿಜೆಪಿ

Hijab Row in Karnataka: ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಪೊಲೀಸ್​ ಮಹಾ ನಿರ್ದೇಶಕ ಪ್ರವೀಣ್​ ಸೂದ್​ಗೆ ದೂರು ಕೊಡಲಾಗಿದೆ. ರಾಜ್ಯ ಬಿಜೆಪಿ ಕೋಶಾಧ್ಯಕ್ಷ ಸುಬ್ಬನರಸಿಂಹ ನೇತೃತ್ವದಲ್ಲಿ ಪ್ರವೀಣ್ ಸೂದ್​ಗೆ ದೂರು ನೀಡಿದ್ದಾರೆ.

ಶಾಂತಿ ಕದಡುವ ಸುಳ್ಳು ಸುದ್ದಿ ಪೋಸ್ಟ್​ ಮಾಡಿದ ಆರೋಪ: ಡಿಕೆ ಶಿವಕುಮಾರ್ ವಿರುದ್ಧ ದೂರು ನೀಡಿದ ಬಿಜೆಪಿ
ಡಿಕೆ ಶಿವಕುಮಾರ್
TV9 Web
| Edited By: |

Updated on:Feb 09, 2022 | 6:30 PM

Share

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಬಿಜೆಪಿ ದೂರು ನೀಡಿದೆ. ಶಾಂತಿ ಕದಡುವ ಸುಳ್ಳು ಸುದ್ದಿ ಪೋಸ್ಟ್​ ಮಾಡಿದ ಆರೋಪ ಮಾಡಿ ದೂರು ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಿದ ಆರೋಪದಲ್ಲಿ ಪೊಲೀಸ್​ ಮಹಾ ನಿರ್ದೇಶಕ ಪ್ರವೀಣ್​ ಸೂದ್​ಗೆ ದೂರು ಕೊಡಲಾಗಿದೆ. ರಾಜ್ಯ ಬಿಜೆಪಿ ಕೋಶಾಧ್ಯಕ್ಷ ಸುಬ್ಬನರಸಿಂಹ ನೇತೃತ್ವದಲ್ಲಿ ಪ್ರವೀಣ್ ಸೂದ್​ಗೆ ದೂರು ನೀಡಿದ್ದಾರೆ.

ಕೇಸರಿ ಧ್ವಜ ಹಾರಿಸಿದ್ದಕ್ಕೆ ರಾಷ್ಟ್ರಧ್ವಜ ಕೆಳಗಿಳಿಸಿದ ಪ್ರಕರಣ ಎಂದದ್ದರಿಂದ ಏನು ಸಾಧಿಸಲಾಗಿದೆ ಎಂದು ಅರ್ಥ ಆಗ್ತಿಲ್ಲ. ನಿನ್ನೆ ರಾಷ್ಟ್ರಧ್ವಜ ಅಲ್ಲಿ ಇತ್ತು ಎಂದು ಡಿಕೆಶಿ ಹೇಳಿದ್ದರು. ಹೀಗಾಗಿ ಎನ್‌ಎಸ್‌ಯುಐನವ್ರು ರಾಷ್ಟ್ರಧ್ವಜ ಹಾರಿಸಿದ್ದಾರೆ. ಹಿಂದೆ ನಿಂತು ಪ್ರಚೋದಿಸಿ ಅಶಾಂತಿ ಹರಡುವ ಕೆಲಸ ಆಗುತ್ತಿದೆ. ಡಿ.ಕೆ.ಶಿವಕುಮಾರ್‌ ಏನು ಬೇಕಾದ್ರೂ ಆರೋಪಿಸುತ್ತಾರೆ. ನಿನ್ನೆ ಕೊಟ್ಟ ಹೇಳಿಕೆಯನ್ನು ಟ್ವಿಸ್ಟ್‌ ಮಾಡಿ ಹೇಳಿದ್ದಾರೆ. ಮತಾಂಧ ಶಕ್ತಿಯನ್ನು ಅಪ್ರತ್ಯಕ್ಷವಾಗಿ ಬೆಂಬಲಿಸ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷ ದೇಶದಲ್ಲಿ ಕಳೆದು ಹೋಗಿದೆ. ಮತೀಯ ಶಕ್ತಿಗಳ ಜೊತೆ ಆಟವಾಡುವ ಕೆಲಸ ಬೇಡ ಎಂದು ಬುಧವಾರ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದರು.

ಶಿವಮೊಗ್ಗದಲ್ಲಿ ಕೇಸರಿ ಧ್ವಜ ಹಾರಿಸಿದ್ದ ವಿಚಾರಕ್ಕೆ ಸಂಬಂಧಿಸಿ ಡಿಕೆ ಶಿವಕುಮಾರ್ ಟ್ವೀಟ್ ಮಾಡಿದ್ದರು. ಇದೀಗ, ಡಿ.ಕೆ. ಶಿವಕುಮಾರ್ ವಿರುದ್ಧ ದೂರು ನೀಡಲಾಗಿದೆ. ಹಿಜಾಬ್- ಕೇಸರಿ ಶಾಲು ವಿವಾದಕ್ಕೆ ಅನ್ಯ ಪಕ್ಷಗಳು ಕಾರಣ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಪರಸ್ಪರ ಆರೋಪ ಮಾಡಿಕೊಳ್ಳುತ್ತಿವೆ. ಈ ಮಧ್ಯೆ, ಕರ್ನಾಟಕದಲ್ಲಿ ಹಬ್ಬಿರುವ ಹಿಜಾಬ್ ವಿವಾದ ಪ್ರಕರಣ ಬುಧವಾರ ಹೈಕೋರ್ಟ್​ನಿಂದ ವರ್ಗಾವಣೆಗೊಂಡಿದೆ. ಅಂತಿಮವಾಗಿ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಿ ಏಕಸದಸ್ಯ ಪೀಠ ಆದೇಶ ನೀಡಿದೆ.

ಇತ್ತ ಶಾಲಾ-ಕಾಲೇಜುಗಳಿಗೆ ರಜೆ ಮುಂದುವರಿಸುವ ವಿಚಾರವನ್ನು ಸಿಎಂ ಬೊಮ್ಮಾಯಿ‌ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು. ಸಿಎಂ, ನಾನು, ಶಿಕ್ಷಣ ಸಚಿವರು ಸೇರಿ ತೀರ್ಮಾನಿಸ್ತೇವೆ. ರಜೆ ಮುಂದುವರಿಸಬೇಕೆ, ಬೇಡವೇ ಎಂದು ತೀರ್ಮಾನ ಮಾಡುತ್ತೇವೆ. ಹೈಕೋರ್ಟ್‌ ಯಾವ ಆದೇಶ ನೀಡುತ್ತೆಂದೂ ನೋಡ್ತೇವೆ. ಬೆಂಗಳೂರಿನಲ್ಲಿ ಯಾವುದೇ ಸಮಸ್ಯೆ ಆಗಿಲ್ಲ. ಆದ್ರೂ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಕಾಲೇಜು ಬಳಿ ಸೂಕ್ತ ಬಂದೋಬಸ್ತ್‌ ಮಾಡಲಾಗಿದೆ. ಹೆಚ್ಚಿನ ಭದ್ರತೆ ಹಿನ್ನೆಲೆ ರಾಜ್ಯದಲ್ಲಿ ಶಾಂತಿಯುತವಾಗಿದೆ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಹಿಜಾಬ್ ವಿವಾದ ಪ್ರಕರಣ ವರ್ಗಾವಣೆ: ಸರ್ಕಾರದ ಮಟ್ಟದಲ್ಲಿ ಸಭೆ ಬಳಿಕ ಮುಂದಿನ ನಿರ್ಧಾರ ಎಂದ ಆರಗ ಜ್ಞಾನೇಂದ್ರ

ಇದನ್ನೂ ಓದಿ: Karnataka Hijab Row: ಇತ್ಯರ್ಥವಾಗದ ಹಿಜಾಬ್ ಅರ್ಜಿ: ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರಕರಣ ವರ್ಗಾವಣೆ

Published On - 6:16 pm, Wed, 9 February 22

ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಬಿಗ್ ಬಾಸ್: ಬಂಗಾರದ ಅಂಗಡಿಯಲ್ಲಿ ಕಾವ್ಯಾ ಜೊತೆ ಸೆಲ್ಫಿಗೆ ಮುಗಿಬಿದ್ದ ಜನ
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಅಫ್ಘಾನ್ ಬ್ಯಾಟರ್
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
ಅಪರೂಪದ ವಸ್ತು ಪತ್ತೆ:ಲಕ್ಕುಂಡಿ ನೈಜ ಗತವೈಭವ ಈಗ ಆರಂಭ!
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
‘ಈ ಬಂಗಾರದ ಚೈನ್ ನನಗೆ ಅಲ್ವಾ ಸರ್’: ಶಾಕ್ ಆದ ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ರಕ್ಷಿತಾ ಶೆಟ್ಟಿ ಕಣ್ಣಲ್ಲಿ ನನ್ನ ಗೆಲುವಿನ ಖುಷಿ ಕಾಣಿಸಿತು: ಗಿಲ್ಲಿ ನಟ
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ಬಾಬರ್ ಆಝಂ ತಂಡದಿಂದ ಹೊರಬಿದ್ದ ಬೆನ್ನಲ್ಲೇ ಫೈನಲ್​ಗೇರಿದ ಸಿಡ್ನಿ ಸಿಕ್ಸರ್ಸ್
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ರಾಹುಲ್​​ ನೀಡಿದ್ದ ಭರವಸೆ ಬಗ್ಗೆ ಬೈಕ್​​ ಟ್ಯಾಕ್ಸಿ ರೈಡರ್​​ಗಳು ಏನಂದ್ರು?
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಮತ್ತೊಂದು ಕೆಟ್ಟ ದಾಖಲೆಯೊಂದಿಗೆ ವಿಶ್ವ ಮಟ್ಟದಲ್ಲಿ ಸುದ್ದಿಯಾದ ಬೆಂಗಳೂರು
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಸಾಲು ಸಾಲು ರಜೆ ಹಿನ್ನೆಲೆ ಊರಿನತ್ತ ಹೊರಟ ಜನರಿಗೆ ಶಾಕ್​​: ದುಪ್ಪಟ್ಟು ದರ
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್
ಗಿಲ್ಲಿಗೆ ಮನೆಯಲ್ಲೇ 10 ಲಕ್ಷ ರೂಪಾಯಿ ಕೊಟ್ಟ ಕಿಚ್ಚ ಸುದೀಪ್