ಹಿಜಾಬ್ ವಿವಾದ ಪ್ರಕರಣ ವರ್ಗಾವಣೆ: ಸರ್ಕಾರದ ಮಟ್ಟದಲ್ಲಿ ಸಭೆ ಬಳಿಕ ಮುಂದಿನ ನಿರ್ಧಾರ ಎಂದ ಆರಗ ಜ್ಞಾನೇಂದ್ರ

ರಾಜ್ಯ ಸರ್ಕಾರಕ್ಕೆ ಸರಿಯಾಗಿ ತಿಳಿಹೇಳುವ ನಾಯಕತ್ವ ಇಲ್ಲ. ಗಂಟೆಗಟ್ಟಲೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡ್ತಾರೆ. ಆದರೆ ರಾಜ್ಯದಲ್ಲಿ ಸಚಿವರೇ ಘಟನೆಗಳಿಗೆ ಪ್ರಚೋದನೆ ಮಾಡುತ್ತಿದ್ದಾರೆ ಎಂದು ದೆಹಲಿಯಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಹಿಜಾಬ್ ವಿವಾದ ಪ್ರಕರಣ ವರ್ಗಾವಣೆ: ಸರ್ಕಾರದ ಮಟ್ಟದಲ್ಲಿ ಸಭೆ ಬಳಿಕ ಮುಂದಿನ ನಿರ್ಧಾರ ಎಂದ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
Follow us
| Updated By: ganapathi bhat

Updated on:Feb 09, 2022 | 4:55 PM

ಬೆಂಗಳೂರು: ಹಿಜಾಬ್ ವಿವಾದ ಕುರಿತು ಪ್ರಕರಣವನ್ನು ಇಂದು (ಫೆಬ್ರವರಿ 9) ಅಂತಿಮವಾಗಿ ವಿಸ್ತೃತ ಪೀಠಕ್ಕೆ ಪ್ರಕರಣ ವರ್ಗಾಯಿಸಿ ಏಕಸದಸ್ಯ ಪೀಠ ಆದೇಶ ನೀಡಿದೆ. ಹೈಕೋರ್ಟ್ ಏಕಸದಸ್ಯ ಪೀಠದಿಂದ ಪ್ರಕರಣ ವರ್ಗಾವಣೆ ಮಾಡಲಾಗಿದೆ. ಹಿಜಾಬ್‌ಗೆ ಅನುಮತಿ ಕೋರಿದ್ದ ಅರ್ಜಿ ವಿಚಾರಣೆ ವರ್ಗಾವಣೆ ಮಾಡಲಾಗಿದೆ. ಹೈಕೋರ್ಟ್ ನಿರ್ಣಯ ವಿಚಾರವಾಗಿ ಕರ್ನಾಟಕದ ವಿವಿಧ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಹೈಕೋರ್ಟ್ ಅಭಿಪ್ರಾಯದ ಬಗ್ಗೆ ಅಧ್ಯಯನ ಮಾಡುತ್ತೇವೆ. ನಮ್ಮ ಎಜಿ ಜತೆ ನಾನು, ಸಿಎಂ ಚರ್ಚೆ ನಡೆಸುತ್ತೇವೆ. ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸುತ್ತೇವೆ. ವಕೀಲರ ಜೊತೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ. ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಸಭೆಗಳು ನಡೆಯುತ್ತವೆ ಎಂದು ಟಿವಿ9ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ರಜೆ ಮುಂದುವರಿಸುವ ಬಗ್ಗೆ ಇಂದು ನಿರ್ಣಯ ತೆಗೆದುಕೊಳ್ಳಲ್ಲ. ಸಿಎಂ, ಗೃಹ ಸಚಿವರ ಜೊತೆ ಚರ್ಚಿಸಿ ತೀರ್ಮಾನಿಸುತ್ತೇವೆ. ವಿಸ್ತೃತ ಪೀಠಕ್ಕೆ ವರ್ಗಾವಣೆ ಆಗಿದೆ, ಯಾವುದೇ ಆದೇಶವಾಗಿಲ್ಲ. ಸರ್ಕಾರದ ಸಮವಸ್ತ್ರದ ನೀತಿ ಸಂಹಿತೆ ಈಗಲೂ ಜಾರಿಯಲ್ಲಿದೆ. ಮಕ್ಕಳು ಶಾಲೆಗೆ ಬರುವಾಗ ನಿಯಮ ಪಾಲಿಸಬೇಕು. ಏಪ್ರಿಲ್ ಪರೀಕ್ಷೆಗೆ ಮಕ್ಕಳು ಸಿದ್ಧರಾಗಬೇಕು. ಪಾಪ ಮಕ್ಕಳು ಯಾರದ್ದೋ ಪ್ರಚೋದನೆಗೆ ಒಳಗಾಗಿದ್ದಾರೆ. ಪ್ರಚೋದನೆಗೆ ಒಳಗಾಗಿ ತರಗತಿಗಳನ್ನು ಬಹಿಷ್ಕರಿಸಿದ್ದಾರೆ. ಈ ಘಟನೆ ಬಳಸಿಕೊಂಡು ಕೆಲ ಸಂಘಟನೆಗಳಿಂದ ಕುಮ್ಮಕ್ಕು ನೀಡಲಾಗಿದೆ. ಕೆಲವು ರಾಜಕೀಯ ಪಕ್ಷಗಳು ಈ ಘಟನೆ ಬಳಸಿಕೊಂಡಿವೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಪ್ರತಿಕ್ರಿಯೆ ನೀಡಿದ್ದಾರೆ.

ಸಚಿವರೊಬ್ಬರ ಮಗ ಶಾಲು ಹಂಚುತ್ತಿದ್ದಾನೆ ಎಂಬ ಡಿ.ಕೆ. ಶಿವಕುಮಾರ್ ಆರೋಪಕ್ಕೆ ಸಚಿವ ಅಶೋಕ್​ ತಿರುಗೇಟು ನೀಡಿದ್ದಾರೆ. ಡಿ.ಕೆ. ಶಿವಕುಮಾರ್ ಸ್ಪಷ್ಟವಾಗಿ ಹೇಳಲಿ. ಡಿ.ಕೆ.ಶಿವಕುಮಾರ್ ಗೊಂದಲ ಹುಟ್ಟಿಸುವ ಮಾತಾಡಬಾರದು. ಅವರು ಹಿಜಾಬ್ ಹಂಚುತ್ತಿದ್ರು ಎಂದು ಆರೋಪಿಸಬಹುದು. ಬೆಂಕಿ ಬಿದ್ದ ಮನೆಯಲ್ಲಿ ಗಳ ತೆಗೆಯೋ ಕೆಲಸ ಮಾಡಬೇಡಿ ಎಂದು ಸಚಿವ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಜಾಬ್, ಕೇಸರಿ ಶಾಲು​ ವಿವಾದಕ್ಕೆ ಕಾಂಗ್ರೆಸ್​, ಬಿಜೆಪಿ ಕಾರಣ: ಹೆಚ್​ಡಿ ದೇವೇಗೌಡ

ಹಿಜಾಬ್, ಕೇಸರಿ ಶಾಲು​ ವಿವಾದಕ್ಕೆ ಕಾಂಗ್ರೆಸ್​, ಬಿಜೆಪಿ ಕಾರಣ. ಇದರಲ್ಲಿ ಅನುಮಾನವೇ ಇಲ್ಲ. ವಿಸ್ತೃತ ಪೀಠಕ್ಕೆ ಹೋಗಿದೆ ಅಂದ್ರೆ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರ ಈ ವಿವಾದ ಹತ್ತಿಕ್ಕಬಹುದಾಗಿತ್ತು ಆದರೆ ಮಾಡಿಲ್ಲ. ಸರ್ಕಾರಕ್ಕೆ ಮೊದಲೇ ಎಲ್ಲಾ ತರಹದ ಮಾಹಿತಿಯೂ ಇರುತ್ತೆ. ಆದರೂ ಯಾಕೆ ಹೀಗಾಯ್ತು ಎಂದು ದೇವೇಗೌಡರು ಪ್ರಶ್ನೆ ಮಾಡಿದ್ದಾರೆ. ವಿವಾದ ನಡೆಯಲಿ ಎಂದು ಬಿಜೆಪಿಯವರೇ ಬಿಟ್ಟಿದ್ದಾರೆ. ಬಿಜೆಪಿ ಸರ್ಕಾರವೇ ಈ ವಿವಾದ ಹಬ್ಬಲು ಬಿಟ್ಟಿದೆ. ಎಲ್ಲಿಗೆ ಬಂದಿದೆ ನಮ್ಮ ರಾಜ್ಯ. ಎರಡೂ ಪಕ್ಷದ ನಾಯಕರು ಜನರನ್ನ ಪ್ರಚೋದಿಸಿದ್ದಾರೆ. ನಮ್ಮ ಪಾರ್ಟಿಯ ಯಾವ ನಾಯಕರು ಪ್ರಚೋದನೆ ನೀಡಿಲ್ಲ ಎಂದು ದೆಹಲಿಯಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಹೈಕೋರ್ಟ್ ತೀರ್ಪು ಕೊಡುವವರೆಗೂ ಸುಮ್ಮನಿರಬೇಕು. ಇಲ್ಲದಿದ್ದರೆ ರಾಜ್ಯದ ಜನರು ನೋವು ಅನುಭವಿಸಬೇಕಾಗುತ್ತೆ. ರಾಜ್ಯದ ಆಸ್ತಿ ಪಾಸ್ತಿಗೆ ನಷ್ಟವಾಗಲಿದೆ. ರಾಜ್ಯದ ಸಚಿವರೇ ಪ್ರಚೋದನೆ ಮಾಡುತ್ತಿರುವುದು ಸತ್ಯ. ರಾಜ್ಯ ಸರ್ಕಾರಕ್ಕೆ ಸರಿಯಾಗಿ ತಿಳಿಹೇಳುವ ನಾಯಕತ್ವ ಇಲ್ಲ. ಗಂಟೆಗಟ್ಟಲೆ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡ್ತಾರೆ. ಆದರೆ ರಾಜ್ಯದಲ್ಲಿ ಸಚಿವರೇ ಪ್ರಚೋದನೆ ಮಾಡುತ್ತಿದ್ದಾರೆ ಎಂದು ದೆಹಲಿಯಲ್ಲಿ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿಗೂ ತಟ್ಟಿದ ಹಿಜಾಬ್ ವಿವಾದ ಬಿಸಿ

ಸಾಂಸ್ಕೃತಿಕ ನಗರಿ ಮೈಸೂರಿಗೂ ಹಿಜಾಬ್​ ಬಿಸಿ ತಟ್ಟಿದೆ. ಮೈಸೂರು ಡಿಸಿ ಕಚೇರಿ ಎದುರು ನೂರಾರು ಜನ ಜಮಾವಣೆ ಆಗಿದೆ. ಬುರ್ಖಾ ಧರಿಸಿ ನೂರಾರು ವಿದ್ಯಾರ್ಥಿನಿಯರು ಜಮಾವಣೆ ಆಗಿದ್ದಾರೆ. ಪ್ರತಿಭಟನೆ ವದಂತಿಯಿಂದ ಡಿಸಿ ಕಚೇರಿ ಬಳಿಗೆ ಆಗಮಿಸಿದ್ದಾರೆ. ಪ್ರತಿಭಟನೆ ಇದೆ ಎಂದು ವಿದ್ಯಾರ್ಥಿನಿಯರಿಗೆ ಸುಳ್ಳು ಸಂದೇಶ ಹಬ್ಬಿದೆ. ಹೀಗಾಗಿ, ಡಿಸಿ ಕಚೇರಿ ಎದುರು ನೂರಾರು ವಿದ್ಯಾರ್ಥಿನಿಯರು ಸೇರಿದ್ದಾರೆ. ವಾಪಸ್​ ತೆರಳುವಂತೆ ವಿದ್ಯಾರ್ಥಿನಿಯರಿಗೆ ಪೊಲೀಸರು ಸೂಚನೆ ಕೊಟ್ಟಿದ್ದಾರೆ. ಮೈಸೂರು ಡಿಸಿ ಕಚೇರಿ ಎದುರು ಪೊಲೀಸ್ ಬಿಗಿ ಬಂದೋಬಸ್ತ್​ ನೀಡಲಾಗಿದೆ.

ಹಿಜಾಬ್ ಪ್ರಕರಣ ವಿಸ್ತ್ರತ ಪೀಠಕ್ಕೆ ವಿಚಾರಣೆ ವರ್ಗಾವಣೆ; ಸರ್ಕಾರಕ್ಕೆ ಮತ್ತಷ್ಟು ಜವಾಬ್ದಾರಿ

ಹಿಜಾಬ್ ಪ್ರಕರಣ ವಿಸ್ತ್ರತ ಪೀಠಕ್ಕೆ ವಿಚಾರಣೆ ವರ್ಗಾವಣೆ ಆದ ಹಿನ್ನೆಲೆ, ಸರ್ಕಾರಕ್ಕೆ ಮತ್ತಷ್ಟು ಜವಾಬ್ದಾರಿ ಹೆಚ್ಚಿದೆ. ಮೂರು ದಿನಗಳ ರಜೆ ಮುಗಿದ ಬಳಿಕ ಪರಿಸ್ಥಿತಿ ಕೈ ತಪ್ಪದಂತೆ ನಿಯಂತ್ರಿಸಬೇಕಾದ ಜವಾಬ್ದಾರಿ ಇದೆ. ರಜೆ ಮುಗಿದ ಬಳಿಕವೂ ಹಿಜಾಬ್ ಕೇಸರಿ ಫೈಟ್ ಮುಂದುವರಿಯುವ ಸಾಧ್ಯತೆ ಇದೆ. ಹಿಜಾಬ್ ಹಾಗೂ ಕೇಸರಿ ಧರಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಗದ್ದಲ ಮುಂದುವರಿಸುವ ಸಾಧ್ಯತೆ ಇದೆ. ಗದ್ದಲ ತಡೆಯಲು ಸರ್ಕಾರ ಮತ್ತಷ್ಟು ಪ್ಲ್ಯಾನ್ ಮಾಡಲೇಬೇಕಾದ ಒತ್ತಡ ಇದೆ. ಸರ್ಕಾರ ಸುಮ್ಮನೆ ಕುಳಿತರೆ ಮತ್ತೆ ಕೇಸರಿ ಹಿಜಾಬ್ ಫೈಟ್ ನ ಕಿಡಿ ಹೊತ್ತಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಸರ್ಕಾರದ ಟೆನ್ಶನ್ ಇನ್ನೂ ಮುಗಿದಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: Karnataka Hijab Row: ಇತ್ಯರ್ಥವಾಗದ ಹಿಜಾಬ್ ಅರ್ಜಿ: ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರಕರಣ ವರ್ಗಾವಣೆ

ಇದನ್ನೂ ಓದಿ: Karnataka Hijab Row: ಬೆಂಗಳೂರಿನಲ್ಲಿ ಶಾಲಾ-ಕಾಲೇಜು ಸುತ್ತಮುತ್ತ ನಿಷೇಧಾಜ್ಞೆ ಜಾರಿ; ಧರಣಿ, ಪ್ರತಿಭಟನೆ ನಡೆಸುವಂತಿಲ್ಲ 

Published On - 4:49 pm, Wed, 9 February 22

ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?