ಯಾರನ್ನೂ ನಾನು ಟೀಕಿಸಲ್ಲ, ಟೀಕಿಸುವವರನ್ನ ನಾನು ಬಿಡಲ್ಲ: ಡಿಕೆ ಸುರೇಶ್

| Updated By: ganapathi bhat

Updated on: Jan 03, 2022 | 6:00 PM

ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್, ಸಚಿವ ಅಶ್ವತ್ಥ್ ನಾರಾಯಣ ಕಿತ್ತಾಟ ವಿಚಾರಕ್ಕೆ ಸಂಬಂಧಿಸಿ ಸಚಿವ ಡಾ.ಸಿ.ಎನ್. ಅಶ್ವತ್ಥ್​ ನಾರಾಯಣ ವಿರುದ್ಧ ರಾಮನಗರ ಜಿಲ್ಲೆ ಚನ್ನಪಟ್ಟಣ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಯಾರನ್ನೂ ನಾನು ಟೀಕಿಸಲ್ಲ, ಟೀಕಿಸುವವರನ್ನ ನಾನು ಬಿಡಲ್ಲ: ಡಿಕೆ ಸುರೇಶ್
ಡಿಕೆ ಸುರೇಶ್
Follow us on

ರಾಮನಗರ: ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಚಿಕ್ಕಕಲ್ಯಾ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್​ ಭಾಷಣ ಮಾಡಿದ್ದಾರೆ. ಸಚಿವ ಅಶ್ವತ್ಥ್​ ನಾರಾಯಣ ಹಲವು ವಿಚಾರ ಪ್ರಸ್ತಾಪಿಸಿದ್ದಾರೆ. ನಾನು ಲೋಕಸಭಾ ಸದಸ್ಯನಾದ ನಂತರ ಜಾಗ ಮಂಜೂರು ಮಾಡಿದ್ದೇನೆ. 3 ಎಕರೆ 20 ಗುಂಟೆ ಭೂಮಿ ಕೊಟ್ಟು ಸಂಸ್ಕೃತ ವಿವಿ ಮಂಜೂರು ಮಾಡಲಾಗಿದೆ. 60 ಕೋಟಿ ಮಂಜೂರು ಮಾಡಿರುವ ಸಿಎಂಗೆ ಧನ್ಯವಾದ ತಿಳಿಸುತ್ತೇನೆ. ಸಂಸ್ಕೃತ ವಿವಿಗೆ 200 ಕೋಟಿ ಮೀಸಲಿಡಲು ಸಿಎಂಗೆ ಮನವಿ ಮಾಡುತ್ತೇನೆ. ಅಭಿವೃದ್ಧಿ ಕೆಲಸಕ್ಕೆ ನಾನು ಯಾವತ್ತಿಗೂ ಮುಂದೆ ಇರುತ್ತೇನೆ ಎಂದು ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ.

ಯಾರನ್ನು ನಾನು ಟೀಕಿಸಲ್ಲ, ಟೀಕಿಸುವವರನ್ನ ನಾನು ಬಿಡಲ್ಲ. ಅಭಿವೃದ್ಧಿ ಕೆಲಸ ಮಾಡಿದ ಅಶ್ವತ್ಥ್​ಗೆ ಅಭಿನಂದನೆ ತಿಳಿಸ್ತೇನೆ. ಕುಡಿವ ನೀರಿನ ಯೋಜನೆಗೆ ಡಿ.ಕೆ. ಶಿವಕುಮಾರ್ ಸಚಿವರಿದ್ದಾಗ ಯೋಜನೆ ಮಾಡಲಾಗಿತ್ತು. ಇದರಿಂದ 900 ಹಳ್ಳಿಗಳಿಗೆ ನೀರು ಸಿಗಲಿದೆ. ಬಿಜೆಪಿ ಮಾಡುತ್ತಿರುವ ಇಂದಿನ ಅಭಿವೃದ್ಧಿ ಕೆಲಸಗಳಿಗೆ ಕಾಂಗ್ರೆಸ್ ಸರ್ಕಾರ ಹಿಂದೆಯೇ ಅನುಮೋದನೆ ಕೊಟ್ಟಿತ್ತು. ನಮ್ಮ ಕಾರ್ಯಕ್ರಮಗಳನ್ನ ಇವರು ಮುಂದುವರಿಸುತ್ತಿದ್ದಾರೆ. ಪರೋಕ್ಷವಾಗಿ ಇವು ನಮ್ಮ ಕಾರ್ಯಕ್ರಮ ಎಂದು ಸುರೇಶ್ ಹೇಳಿದ್ದಾರೆ.

ಭಾಷಣ ವೇಳೆ ಡಿ.ಕೆ.ಸುರೇಶ್​ ವಿರುದ್ಧ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದಾರೆ. ಡಿ.ಕೆ.ಸುರೇಶ್​ ಡೌನ್ ಡೌನ್ ಎಂದು ಬಿಜೆಪಿ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ. ನೀವು ಡೌನ್​ಡೌನ್ ಮಾಡೋದಲ್ಲ ಜನ ಮಾಡಬೇಕು ಕೂತ್ಕೊಳ್ಳಿ ಎಂದು ಬಿಜೆಪಿ ಕಾರ್ಯಕರ್ತರಿಗೆ ಕಾಂಗ್ರೆಸ್​ ಸಂಸದ ಸುರೇಶ್ ಹೇಳಿದ್ದಾರೆ. ಈ ವೇಳೆ ಮಧ್ಯೆಪ್ರವೇಶಿಸಿದ ಸ್ಥಳೀಯ ಶಾಸಕ ಮಂಜುನಾಥ್ ಇಲ್ಲಿ ಬಲಾಬಲ ಪ್ರದರ್ಶನ ಬೇಡ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್, ಸಚಿವ ಅಶ್ವತ್ಥ್ ನಾರಾಯಣ ಕಿತ್ತಾಟ ವಿಚಾರಕ್ಕೆ ಸಂಬಂಧಿಸಿ ಸಚಿವ ಡಾ.ಸಿ.ಎನ್. ಅಶ್ವತ್ಥ್​ ನಾರಾಯಣ ವಿರುದ್ಧ ರಾಮನಗರ ಜಿಲ್ಲೆ ಚನ್ನಪಟ್ಟಣ ಕಾಂಗ್ರೆಸ್​ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಡಾ.ಅಶ್ವತ್ಥ್ ಪ್ರತಿಕೃತಿಗೆ ಚಪ್ಪಲಿ ಹಾರಹಾಕಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ- ಕಾಂಗ್ರೆಸ್ ನಾಯಕರ ಕಿತ್ತಾಟ ಪ್ರಕರಣ: ರೌಡಿ ಡಿಕೆ ಬ್ರದರ್ಸ್​ ಎಂದು ಬಿಜೆಪಿ ಘಟಕ ಟ್ವೀಟ್

ಇದನ್ನೂ ಓದಿ: ಕಾಂಗ್ರೆಸ್ ಸೂಜಿ ರೀತಿ, ಬಿಜೆಪಿ ಕತ್ತರಿ ರೀತಿ; ನಾವು ಸಮಾಜ ಒಗ್ಗೂಡಿಸಿದರೆ ಅವರು ಕತ್ತರಿಸುತ್ತಾರೆ: ಡಿಕೆ ಶಿವಕುಮಾರ್