ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಆಗಸ್ಟ್ 21ರಿಂದ ಚುನಾವಣೆ: ಮೌನ ಪಾಲಿಸಿದ ರಾಹುಲ್ ಗಾಂಧಿ

| Updated By: ರಶ್ಮಿ ಕಲ್ಲಕಟ್ಟ

Updated on: Aug 11, 2022 | 1:47 PM

ಗಾಂಧಿ ಕುಟುಂಬದಿಂದ ಅಲ್ಲದೆ ಹೊರಗಿನ ನಾಯಕರನ್ನು ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಮಾಡುವ ಸಾಧ್ಯತೆಯ ಬಗ್ಗೆ ಪಕ್ಷವು ಬಹಳ ಸಮಯದಿಂದ ಚರ್ಚಿಸುತ್ತಿದೆ. ಈ ವಿಚಾರದಲ್ಲಿ ಇನ್ನೂ ಒಮ್ಮತ ಮೂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಆಗಸ್ಟ್  21ರಿಂದ ಚುನಾವಣೆ: ಮೌನ ಪಾಲಿಸಿದ ರಾಹುಲ್ ಗಾಂಧಿ
ಪ್ರಿಯಾಂಕಾ ಗಾಂಧಿ- ರಾಹುಲ್ ಗಾಂಧಿ
Follow us on

ದೆಹಲಿ: ಕಾಂಗ್ರೆಸ್ ಅಧ್ಯಕ್ಷರ (Congress Chief) ಆಯ್ಕೆಗೆ ಆಗಸ್ಟ್ 21 ರಿಂದ ಚುನಾವಣೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ. ಸದ್ಯಕ್ಕೆ ಸೋನಿಯಾ ಗಾಂಧಿ (Sonia Gandhi) ನೇತೃತ್ವದ ಸ್ಥಾನಕ್ಕೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಅವರು ಸ್ಪರ್ಧಿಸುವ ಬಗ್ಗೆ ಬಹಿರಂಗಪಡಿಸಿಲ್ಲ. 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಹುಲ್ ಗಾಂಧಿ ಮತ್ತೊಮ್ಮೆ ಪಕ್ಷದ ಮುಖ್ಯಸ್ಥರಾಗಲು ಕಾಂಗ್ರೆಸ್ ನಾಯಕರು ಮಾಡಿದ ಮನವಿಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ. ಗಾಂಧಿ ಕುಟುಂಬದಿಂದ ಅಲ್ಲದೆ ಹೊರಗಿನ ನಾಯಕರನ್ನು ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ಮಾಡುವ ಸಾಧ್ಯತೆಯ ಬಗ್ಗೆ ಪಕ್ಷವು ಬಹಳ ಸಮಯದಿಂದ ಚರ್ಚಿಸುತ್ತಿದೆ. ಈ ವಿಚಾರದಲ್ಲಿ ಇನ್ನೂ ಒಮ್ಮತ ಮೂಡಿಲ್ಲ ಎಂದು ಮೂಲಗಳು ತಿಳಿಸಿವೆ.ಗುಂಪುಗಾರಿಕೆಯಿಂದ ಕೂಡಿರುವ ಪಕ್ಷವನ್ನು ಒಗ್ಗೂಡಿಸುವ ತಾಕತ್ತು ಗಾಂಧಿ ಕುಟುಂಬಕ್ಕೆ ಇದೆ ಎಂದು ಕಾಂಗ್ರೆಸ್ ನಾಯಕರ ದೊಡ್ಡ ವಿಭಾಗವು ಗಾಂಧಿ ಕುಟುಂಬದವರೇ ನಾಯಕತ್ವ ವಹಿಸಬೇಕು ಎಂದು ಬಯಸುತ್ತಿದ್ದಾರೆ.

ಮಾರ್ಚ್‌ನಲ್ಲಿ ಪಕ್ಷದ ಅಸೆಂಬ್ಲಿ ಚುನಾವಣಾ ಸೋಲಿನ ಬಗ್ಗೆ ಚರ್ಚಿಸಲು ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ ಅವರು ಹಿರಿಯ ನಾಯಕರನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ರಾಜೀನಾಮೆ ನೀಡಲು ಮುಂದಾಗಿದ್ದರು. ಸೋನಿಯಾ ಗಾಂಧಿ ಅವರು ರಾಜೀನಾಮೆ ಪ್ರಸ್ತಾಪವನ್ನು “ಪಕ್ಷದ ಹಿತಾಸಕ್ತಿಗಾಗಿ ಅಂತಿಮ ತ್ಯಾಗ” ಎಂದು ಮುಂದಿಟ್ಟಿದ್ದರು  ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.

2017 ರಲ್ಲಿ ತನ್ನ ತಾಯಿಯಿಂದ ಪಕ್ಷದ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ರಾಹುಲ್ ಗಾಂಧಿ, 2019 ರ ಮೇ ತಿಂಗಳಲ್ಲಿ 543 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಕೇವಲ 52 ಸ್ಥಾನಗಳನ್ನು ಗಳಿಸಿದ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಇದನ್ನೂ ಓದಿ
Shrikant Tyagi Case: ನೊಯ್ಡಾದಲ್ಲಿ ಮಹಿಳೆ ಮೇಲೆ ಹಲ್ಲೆ ಪ್ರಕರಣ; ಶ್ರೀಕಾಂತ್ ತ್ಯಾಗಿ ಜಾಮೀನು ಅರ್ಜಿ ವಜಾ
Vice President Jagdeep Dhankhar: ಭಾರತದ ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಪ್ರಮಾಣವಚನ ಸ್ವೀಕಾರ
ಉಜ್ಜಯಿನಿ ದೇವಸ್ಥಾನದಲ್ಲಿ ಬ್ಯಾರಿಕೇಡ್ ಮುರಿದು, ತೇಜಸ್ವಿ ಸೂರ್ಯ ಬೆಂಬಲಿಗರಿಂದ ಸೆಕ್ಯುರಿಟಿಗಳ ಮೇಲೆ ಹಲ್ಲೆ
ರೇಷನ್ ಅಂಗಡಿಯಲ್ಲಿ ರಾಷ್ಟ್ರಧ್ವಜಕ್ಕಾಗಿ ಬಡವರಿಂದ ಹಣ ವಸೂಲಿ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ; ರಾಹುಲ್ ಗಾಂಧಿ ಆರೋಪ

ಪಕ್ಷದ ಮುಖ್ಯಸ್ಥರನ್ನು ಆಯ್ಕೆ ಮಾಡಲು ಮತದಾನದ ನಂತರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಮತ್ತು ಇತರ ಹುದ್ದೆಗಳಿಗೆ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಸೆಪ್ಟೆಂಬರ್ 7 ರಿಂದ ಪ್ರಾರಂಭವಾಗುವ ಕಾಂಗ್ರೆಸ್‌ನ ಭಾರತ್ ಜೋಡೋ (Unite India) ಯಾತ್ರೆಯಲ್ಲಿ ಭಾಗವಹಿಸುವ ಬಗ್ಗೆ ರಾಹುಲ್ ಗಾಂಧಿ ಈಗ ಗಮನ ಹರಿಸಿದ್ದಾರೆ. ಪಕ್ಷವು 15 ದಿನಗಳಲ್ಲಿ 12 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ “ಕಾಶ್ಮೀರದಿಂದ ಕನ್ಯಾಕುಮಾರಿ” ವರೆಗೆ ಯಾತ್ರೆಗಳನ್ನು ಆಯೋಜಿಸುವುದಾಗಿ ಹೇಳಿದೆ. ಈ ಯಾತ್ರೆ ಸುಮಾರು 3,500 ಕಿಮೀ ದೂರವನ್ನು ಕ್ರಮಿಸುತ್ತದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:42 pm, Thu, 11 August 22