ಮುಖ್ಯಮಂತ್ರಿ ಸಿದ್ದರಾಮಯ್ಯ ಪದತ್ಯಾಗಕ್ಕೆ ಬೀಳಲಿದೆ ವಿಪರೀತ ಒತ್ತಡ; ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ

ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಯನ್ನು ತ್ಯಜಿಸಬೇಕಾಗುವಂಥ ಒತ್ತಡವು ದೌರ್ಬಲ್ಯ ಎಂದುಕೊಳ್ಳುವುದು ಅಗತ್ಯವಿಲ್ಲ. ಏಕೆಂದರೆ, ತಮಗೆ ನಿಷ್ಠವಾದವರೊಬ್ಬರು ಅಥವಾ ಅನುಯಾಯಿಯೊಬ್ಬರನ್ನು ಗದ್ದುಗೆ ಮೇಲೆ ಅಥವಾ ಆಯಕಟ್ಟಿನ ಸ್ಥಾನದಲ್ಲಿ ಕೂರಿಸಿಯೇ ನಿರ್ಗಮಿಸಲಿದ್ದಾರೆ.?

ಮುಖ್ಯಮಂತ್ರಿ ಸಿದ್ದರಾಮಯ್ಯ ಪದತ್ಯಾಗಕ್ಕೆ ಬೀಳಲಿದೆ ವಿಪರೀತ ಒತ್ತಡ; ಜ್ಯೋತಿಷಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ
ಸಿದ್ದರಾಮಯ್ಯ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 26, 2024 | 10:20 AM

ಕರ್ನಾಟಕ ರಾಜ್ಯ ರಾಜಕಾರಣ ಹಾಗೂ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರ ಜಾತಕಗಳ ವಿಶ್ಲೇಷಣೆ ಮತ್ತು ಅಧ್ಯಯನವನ್ನು ನಿರಂತರವಾಗಿ ಮಾಡುತ್ತಾ ಬರುತ್ತಿರುವ ರಾಜ್ಯ ಮಟ್ಟದ ಖ್ಯಾತ ಜ್ಯೋತಿಷಿಗಳಾದ ಪ್ರಕಾಶ್ ಅಮ್ಮಣ್ಣಾಯ ಅವರು ಪ್ರಮುಖ ಎನಿಸುವಂಥ ಹಲವು ಅಂಶಗಳ ಬಗ್ಗೆ ಭವಿಷ್ಯವನ್ನು ನುಡಿದಿದ್ದಾರೆ. ಇನ್ನು ಈ ಘಟನಾವಳಿಗಳಿಗೆ ಸಂಬಂಧಿಸಿದಂತೆ ದಿನಾಂಕ ಮತ್ತು ತಿಂಗಳನ್ನು ಸಹ ಪ್ರಸ್ತಾವವನ್ನು ಮಾಡಿದ್ದಾರೆ. ಇಂಥದ್ದೊಂದು ಬೆಳವಣಿಗೆ ಆಗುವುದಕ್ಕೆ ಏನು ಕಾರಣ ಎಂಬುದನ್ನು ಅವರು ಜ್ಯೋತಿಷ್ಯ ರೀತಿಯಾಗಿ ಮತ್ತು ರಾಜಕೀಯ ನಾಯಕರ ಜಾತಕಗಳಲ್ಲಿನ ಗ್ರಹಗಳ ಸ್ಥಿತಿ- ಗತಿ ಹೇಗೆ ಕಾರಣ ಎಂಬುದನ್ನು ಸಹ ವಿವರಿಸಿದ್ದಾರೆ. ಅವರು ನುಡಿದಿರುವ ಭವಿಷ್ಯದ ಬಗ್ಗೆ ಅವರದೇ ಮಾತುಗಳಲ್ಲಿ ಮುಂದೆ ಓದಿಕೊಳ್ಳಿ.

ಗ್ರಹಸ್ಥಿತಿಗಳ ಆಧಾರದಲ್ಲಿ ಹೇಳಬೇಕು ಅಂತಾದರೆ, ಇದೇ ಡಿಸೆಂಬರ್ ಹೊತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ತ್ಯಜಿಸುವುದಕ್ಕೆ ವಿಪರೀತ ಒತ್ತಡ ಸೃಷ್ಟಿಯಾಗಲಿದೆ. ಆದರೆ ಹಲವರಿಗೆ ಪ್ರಶ್ನೆಗಳಿವೆ, ತಮ್ಮ ಜನ್ಮದಿನಾಂಕ, ಹುಟ್ಟಿದ ಸಮಯ ಇತ್ಯಾದಿಗಳು ತನಗೇ ಗೊತ್ತಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅದು ಹೇಗೆ ಜಾತಕ ಸಿದ್ಧಪಡಿಸುವುದಕ್ಕೆ ಮತ್ತು ವಿಶ್ಲೇಷಣೆ ಮಾಡುವುದಕ್ಕೆ ಸಾಧ್ಯ ಎಂಬ ಪ್ರಶ್ನೆ ಅದು. ಈ ರೀತಿ ಒಬ್ಬ ವ್ಯಕ್ತಿಯ ಜನ್ಮ ದಿನಾಂಕ, ಸಮಯದ ಬಗ್ಗೆ ನಿಖರತೆ ಇಲ್ಲದಿದ್ದಾಗ ಅದನ್ನು ತಿಳಿದುಕೊಳ್ಳುವುದಕ್ಕೆ ಅಂತಲೇ ವಿಧಾನಗಳಿವೆ. ಅದರ ಆಧಾರದಲ್ಲಿ ಕಂಡುಕೊಂಡಂಥ ನಕ್ಷತ್ರ, ರಾಶಿ ಹಾಗೂ ಜನ್ಮ ಕುಂಡಲಿಯ ಆಧಾರದಲ್ಲಿ ಇದನ್ನು ನುಡಿಯಲಾಗುತ್ತಿದೆ.

ಇನ್ನು ಅವರು ತಮ್ಮ ಹುದ್ದೆಯನ್ನು ತ್ಯಜಿಸಬೇಕಾಗುವಂಥ ಒತ್ತಡವು ದೌರ್ಬಲ್ಯ ಎಂದುಕೊಳ್ಳುವುದು ಅಗತ್ಯವಿಲ್ಲ. ಏಕೆಂದರೆ, ತಮಗೆ ನಿಷ್ಠವಾದವರೊಬ್ಬರು ಅಥವಾ ಅನುಯಾಯಿಯೊಬ್ಬರನ್ನು ಗದ್ದುಗೆ ಮೇಲೆ ಅಥವಾ ಆಯಕಟ್ಟಿನ ಸ್ಥಾನದಲ್ಲಿ ಕೂರಿಸಿಯೇ ನಿರ್ಗಮಿಸಲಿದ್ದಾರೆ.

ಗ್ರಹಗತಿಗಳ ಕಾರಣದಿಂದಾಗಿ ವಿಪರೀತ ಒತ್ತಡ ಸೃಷ್ಟಿಯಾಗಿ, ಸಿದ್ದರಾಮಯ್ಯ ಅವರು ಹುದ್ದೆಯನ್ನು ಬಿಟ್ಟ ನಂತರ ಯಾರೇ ಅಧಿಕಾರಕ್ಕೆ ಬಂದರೂ ತಮ್ಮದೇ ಪಕ್ಷ ಚುನಾವಣೆ ಸಮಯದಲ್ಲಿ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲಾಗದೇ ಚುನಾವಣೆ ಎದುರಿಸುವುದನ್ನು ಅಲ್ಲಗಳೆಯಲಾಗದು. ಏಕೆ ಇದನ್ನು ಸಾಧ್ಯತೆ ಅನ್ನಬೇಕಿದೆ ಅಂದರೆ, ಜ್ಯೋತಿಷ್ಯ ಪ್ರಕಾರವಾಗಿ ಇರುವ ಯೋಗಗಳು ಯಾವುದೋ ಒಬ್ಬ ವ್ಯಕ್ತಿಯ ಕಾರಣಕ್ಕಾಗಿ ತಲೆಯನ್ನು ಕಾಯಬಹುದು ಮತ್ತು ಯಾರದೋ ಪುಣ್ಯದ ಫಲಕ್ಕೋ ಅಥವಾ ದೇವತಾ ಅನುಗ್ರಹದಿಂದ ಆ ಪಕ್ಷದ ನಾಯಕನ ಸ್ಥಾನವನ್ನು- ಮುಖ್ಯಮಂತ್ರಿ ಸಿಂಹಾಸನವನ್ನು ಗಟ್ಟಿಯಾಗಿ ಮಾಡಿಡಬಹುದು. ಆದರೆ ಒಂದಂತೂ ಸತ್ಯ, ಜ್ಯೋತಿಷ್ಯವು ಸನ್ನಿವೇಶ- ಸೂಚನೆಯನ್ನು ಖಂಡಿತಾ ಸೃಷ್ಟಿಸುತ್ತದೆ.

ಮೂಲ ವಿಚಾರಕ್ಕೆ ಬರುವುದಾದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮ ಜಾತಕ ಬಹಳ ವಿಚಿತ್ರವಾಗಿದೆ. ಸಿದ್ದರಾಮಯ್ಯ ಅವರ ಜಾತಕದಲ್ಲಿನ ಯೋಗಗಳನ್ನು ಅವರು ತಮ್ಮದೇ ಸ್ವಭಾವದ ಕಾರಣಗಳಿಂದಾಗಿ ಬಹಳ ಕಳೆದುಕೊಂಡಿರುವುದು ಸಹ ಇದೆ. ಅದೇ ವೇಳೆ ಹಠಮಾರಿ ಧೋರಣೆಯಿಂದ ಆ ಯೋಗವನ್ನು ಅನುಭವಿಸುವುದಕ್ಕೆ ಶತಪ್ರಯತ್ನ ಪಟ್ಟು, ಅವಮಾನಗಳನ್ನು ಅನುಭವಿಸಿರುವುದೂ ಇದೆ. ಇದನ್ನು ಸಿದ್ದರಾಮಯ್ಯ ಅವರು ಎಷ್ಟು ಒಪ್ಪುತ್ತಾರೋ ಬಿಡುತ್ತಾರೋ ಅದು ಅವರಿಗೆ ಬಿಟ್ಟ ವಿಚಾರ, ಆದರೆ ಇದಂತೂ ಸತ್ಯ ಎಂಬುದು ಜ್ಯೋತಿಷ್ಯ ರೀತಿಯಾಗಿ ತಿಳಿಯುತ್ತದೆ.

ಸಿದ್ದರಾಮಯ್ಯ ಅವರಿಗೆ ಅಧಿಕಾರ ಬಿಡಬೇಕಾದ ಸನ್ನಿವೇಶ ಸೃಷ್ಟಿ ಆಗಬಹುದಾದದ್ದು ಏಕೆಂದರೆ, ಗುರು ಗ್ರಹವು ಸಿಂಹಾಂಶದಲ್ಲಿ ಸಂಚರಿಸುವ ಕಾಲ ಇದಾಗಿದ್ದು, ಅವರ ಜನ್ಮ ಜಾತಕದ ವಿಶ್ಲೇಷಣೆ ಮಾಡಿದ ಪ್ರಕಾರ ಕನ್ಯಾ ಲಗ್ನ ಅವರದಾಗುತ್ತದೆ. ಇದಕ್ಕೆ ವ್ಯಯ ಸ್ಥಾನದಲ್ಲಿ ಗುರು ಗ್ರಹವು ಸಿಂಹಾಂಶದಲ್ಲಿ ಇಂಥದ್ದೊಂದು ಸ್ಥಿತಿಯನ್ನು ಸೃಷ್ಟಿ ಮಾಡಬಹುದಾಗಿದೆ. ಇನ್ನು ಅವರ ಜನನ ಕಾಲದಲ್ಲಿ ಸಿಂಹ ರಾಶಿಯಲ್ಲಿ ಶನಿ ಸ್ಥಿತವಾಗಿದ್ದು, ಅಲ್ಲಿಂದ ಎಂಟನೇ ಮನೆಗೆ ಮುಂದಿನ ಯುಗಾದಿ ದಿನ ಮೀನ ರಾಶಿಗೆ ಶನಿ ಗ್ರಹದ ಪ್ರವೇಶ ಆಗುತ್ತದೆ. ಇದು ಅಧಿಕಾರ ಹೋಗುವ ಅಥವಾ ತ್ಯಜಿಸುವ ಸಮಯದ ಮುನ್ಸೂಚನೆಯಾಗಿ ಹೇಳಬಹುದಾಗಿದೆ. ಜನ್ಮ ಜಾತಕದ ವಿಶ್ಲೇಷಣೆ ಪ್ರಕಾರವಾಗಿ ಅವರಿಗಿರುವ ಸಾಮರ್ಥ್ಯ ಏನೆಂದರೆ, ತನಗೆ ಬೇಕಾದ ವ್ಯಕ್ತಿಗಳನ್ನು ಉನ್ನತ ಹುದ್ದೆಗೆ ಹಾಗೂ ಆಯಕಟ್ಟಿನ ಜಾಗದಲ್ಲಿ ಕೂರಿಸುವುದಕ್ಕೆ ನಿರ್ಧರಿಸಿದಲ್ಲಿ ಅದನ್ನು ಮಾಡಿಯೇ ತೀರುತ್ತಾರೆ ಹಾಗೂ ರಾಜಕೀಯವಾಗಿ ವ್ಯಕ್ತಿಗಳನ್ನು ಬೆಳೆಸುತ್ತಾರೆ. ಅದಕ್ಕೆ ಬೇಕಾದ ಚಾಣಾಕ್ಷತನ, ಬುದ್ಧಿವಂತಿಕೆ ಹಾಗೂ ಸಿದ್ದರಾಮಯ್ಯ ಅವರಲ್ಲಿದೆ.

ಇನ್ನು ಮುಂಬೈ- ಕರ್ನಾಟಕ ಭಾಗದ ಪ್ರಭಾವಿ ನಾಯಕರೊಬ್ಬರಿಗೆ ಮುಖ್ಯಮಂತ್ರಿ ಗಾದಿ ದೊರೆಯುವ ಸಾಧ್ಯತೆಯನ್ನು ತೆಗೆದು ಹಾಕುವಂತಿಲ್ಲ. ಒಂದು ವೇಳೆ ತುಂಬ ಬದಲಾವಣೆ ಎದುರಾದಲ್ಲಿ ಆ ನಾಯಕರಿಗೆಉಪಮುಖ್ಯಮಂತ್ರಿ ಹುದ್ದೆಯಾದರೂ ಒಲಿಯುವ ಅವಕಾಶಗಳಿವೆ. ಆತ ತುಂಬ ಪ್ರಭಾವಿಯಾಗುವ ಯೋಗ ನಿಚ್ಚಳವಾಗಿದೆ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ ಜಿಲ್ಲೆ)

ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
ಗರುಡ ಪುರಾಣ ಮನೆಯಲ್ಲಿ ಇಟ್ಟುಕೊಳ್ಳಬಹುದಾ? ಇಲ್ಲಿದೆ ಉತ್ತರ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶುಕ್ರವಾರದ ಗ್ರಹಗಳ ಸಂಚಾರ, ರಾಶಿ ಭವಿಷ್ಯ ತಿಳಿಯಿರಿ
ಅಪ್ಪು ಅಭಿಮಾನಕ್ಕೆ ಫ್ಯಾನ್ಸ್ ಕಟ್ಟಿದ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ
ಅಪ್ಪು ಅಭಿಮಾನಕ್ಕೆ ಫ್ಯಾನ್ಸ್ ಕಟ್ಟಿದ ದೇವಸ್ಥಾನ ಉದ್ಘಾಟಿಸಿದ ಅಶ್ವಿನಿ
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಶ್ರೀಗಳ ಉಪಟಳ ಹೆಚ್ಚಳ: ತಿರುಪತಿ ಲಡ್ಡು ಬಗ್ಗೆ ಕೋಡಿಶ್ರೀ ಮಾತು
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಕ್ಲಾಸ್​ರೂಂನಲ್ಲೇ ಶಿಕ್ಷಕಿಗೆ ಬೆದರಿಕೆ ಹಾಕಿ, ಉಗುಳಿದ ಎಂಬಿಎ ವಿದ್ಯಾರ್ಥಿ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಸಿದ್ದರಾಮಯ್ಯಗೆ ಮುಡಾ ಸಂಕಷ್ಟ: ಈ ಹಿಂದೆ ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಕಂಠಪೂರ್ತಿ ಕುಡಿದು ಅಪ್ಪನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಂದ ಮಗ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಬೆಂಗಳೂರಿನ ‘ಏರಿಯಾನ್ ಟೆಕ್ನಾಲಜಿ ಕಂಪನಿ’ಯಲ್ಲಿ ಅಗ್ನಿ ಅವಘಡ;ತಪ್ಪಿದ ಅನಾಹುತ
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್
ಅಮ್ಮ-ಮಗು ಮೇಲೆ ಬೀದಿ ನಾಯಿಗಳ ದಾಳಿ; ಶಾಕಿಂಗ್ ವಿಡಿಯೋ ವೈರಲ್
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್
ನ್ಯಾಯಾಂಗ ನಿಂದನೆ ತೂಗುಗತ್ತಿ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಮೀರ್