ರಾಜ್ಯದಲ್ಲಿ ಕತ್ತಲೆ ಹರಡಿ ನಾಪತ್ತೆಯಾಗಿರುವ ಇಂಧನ ಸಚಿವ ಕೆಜೆ ಜಾರ್ಜ್​​ರನ್ನು ಹುಡುಕಿ ಕೊಡಿ: ಸರ್ಕಾರದ ವಿರುದ್ಧ ಬಿಜೆಪಿ ಕಿಡಿ

|

Updated on: Oct 12, 2023 | 4:48 PM

ರಾಜ್ಯದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್​ ಜಾರಿಯಾಗಿದೆ ಅಂತಾ ಹೇಳಲಾಗುತ್ತಿದೆ. ರಾಜ್ಯದ ಅನೇಕ ಕಡೆಗಳಲ್ಲಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ರೈತರು ಲೋಡ್ ಶೆಡ್ಡಿಂಗ್​ನಿಂದ ಕಂಗಲಾಗಿದ್ದಾರೆ. ಕರ್ನಾಟಕದಲ್ಲೆಲ್ಲಾ ಕತ್ತಲೆ ಹರಡಿ ನಾಪತ್ತೆಯಾಗಿರುವ ನಿಮ್ಮ ಇಂಧನ ಸಚಿವ ಕೆ.ಜೆ.ಜಾರ್ಜ್​​ರನ್ನು ಹುಡುಕಿ ಕೊಡಿ, ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

ರಾಜ್ಯದಲ್ಲಿ ಕತ್ತಲೆ ಹರಡಿ ನಾಪತ್ತೆಯಾಗಿರುವ ಇಂಧನ ಸಚಿವ ಕೆಜೆ ಜಾರ್ಜ್​​ರನ್ನು ಹುಡುಕಿ ಕೊಡಿ: ಸರ್ಕಾರದ ವಿರುದ್ಧ ಬಿಜೆಪಿ ಕಿಡಿ
ಬಿಜೆಪಿ ಟ್ವೀಟ್​ ಮಾಡಿರು ಫೋಟೋ
Follow us on

ಬೆಂಗಳೂರು, ಅಕ್ಟೋಬರ್​​​ 12: ರಾಜ್ಯದಲ್ಲಿ ಅನಧಿಕೃತ ಲೋಡ್ ಶೆಡ್ಡಿಂಗ್ (load shedding)​ ಜಾರಿಯಾಗಿದೆ ಅಂತಾ ಹೇಳಲಾಗುತ್ತಿದೆ. ರಾಜ್ಯದ ಅನೇಕ ಕಡೆಗಳಲ್ಲಿ ರೈತರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕುತ್ತಿದ್ದಾರೆ. ರೈತರು ಲೋಡ್ ಶೆಡ್ಡಿಂಗ್​ನಿಂದ ಕಂಗಲಾಗಿದ್ದಾರೆ. ಬೆಳೆಯನ್ನೇ ನಂಬಿಕೊಂಡಿದ್ದ ಬದುಕಿಗೆ ಕರೆಂಟ್ ಇಲ್ಲದೇ ಕತ್ತಲಾವರಿಸಿದಂತಾಗಿದೆ. ಸದ್ಯ ಲೋಡ್​ ಶೆಡ್ಡಿಂಗ್ ಹಿನ್ನೆಲೆ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಕರ್ನಾಟಕದಲ್ಲೆಲ್ಲಾ ಕತ್ತಲೆ ಹರಡಿ ನಾಪತ್ತೆಯಾಗಿರುವ ನಿಮ್ಮ ಇಂಧನ ಸಚಿವ ಕೆ.ಜೆ.ಜಾರ್ಜ್​​ರನ್ನು ಹುಡುಕಿ ಕೊಡಿ, ರಾಜ್ಯದ ಜನ ಸಂಕಷ್ಟದಲ್ಲಿದ್ದಾರೆ ವಾಗ್ದಾಳಿ ಮಾಡಿದೆ.

ಡಿಯರ್​ ಕಾಂಗ್ರೆಸ್​​​ ಕಾಣೆಯಾಗಿದ್ದ ಬಸ್‌ ಸ್ಟಾಂಡ್‌ನನ್ನು ಕೊನೆಗೂ ಹುಡುಕಿದ್ದೇವೆ ಎಂದು ನಿಮ್ಮ ಬೆನ್ನನ್ನು ನೀವೇ ತಟ್ಟಿಕೊಳ್ಳುತ್ತಿದ್ದೀರಿ. ಇರಲಿ ನಿಮ್ಮ ಸಾಹಸ ನಿಜಕ್ಕೂ ಶ್ಲಾಘನೀಯ! ಕರ್ನಾಟಕದಲ್ಲೆಲ್ಲಾ ಕತ್ತಲೆ ಹರಡಿ ನಾಪತ್ತೆಯಾಗಿರುವ ನಿಮ್ಮ ಇಂಧನ ಸಚಿವ ಕೆ.ಜೆ.ಜಾರ್ಜ್​​ ಅವರನ್ನು ಹುಡುಕಿ ಕೊಡಿ, ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದೆ.

‘ಕಾಂಗ್ರೆಸ್​ ಬಂತೋ ಕರುನಾಡ ತುಂಬಾ ಕಗ್ಗತ್ತಲು ತಂತೋ’ ಎಲ್ಲೆಲ್ಲೂ ಕತ್ತಲು ನ್ಯಾಯ ನೀಡುವ ನ್ಯಾಯಾಲಯದಲ್ಲೂ ಕತ್ತಲು! ಶಾಸಕರ ಸಭೆಯಲ್ಲೂ ಕತ್ತಲೋ ಕತ್ತಲು! ಸಿಎಂ ಸಿದ್ದರಾಮಯ್ಯ ಅವರೇ, ಮೊದಲ ಅವಧಿಯಲ್ಲೂ ಮೊಬೈಲ್ ಟಾರ್ಚ್ ಹಿಡಿದು ಬಜೆಟ್ ಮಂಡಿಸಿದ ಸಾಧನೆ ನಿಮ್ಮದು.

ಇದನ್ನೂ ಓದಿ: ಕರ್ನಾಟಕದಲ್ಲಿ ವಿದ್ಯುತ್ ಲೋಡ್​ ಶೆಡ್ಡಿಂಗ್: ಕೊನೆಗೂ ಸತ್ಯ ಒಪ್ಪಿಕೊಂಡ ಡಿಕೆ ಶಿವಕುಮಾರ್

ಎರಡನೇ ಅವಧಿಯಲ್ಲೂ ಇಡೀ ರಾಜ್ಯಕ್ಕೆ ಕತ್ತಲು ನೀಡಿ ಕತ್ಲೇರಾಮಯ್ಯ ಬಿರುದು ನಿಮ್ಮದಾಗಿಸಿಕೊಂಡಿದ್ದೀರಿ ಎಂದು ಹಿರಿಹಾಯ್ದಿದೆ.

ಬಿಜೆಪಿ ಟ್ವೀಟ್​

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರ ಕರುನಾಡಿಗೆ ಕತ್ತಲೆಯ ಗ್ಯಾರಂಟಿ ಕೊಟ್ಟಿದೆ. ಎಲ್ಲಿ ನೋಡಿದರೂ ಪವರ್ ಕಟ್! ನ್ಯಾಯಾಲಯ, ವಿಧಾನಸೌಧ, ಶಾಸಕರ ಸಭೆ, ರೈತರ ಪಂಪ್‌ಸೆಟ್‌, ಸ್ಕೂಲ್, ಕಾಲೇಜುಗಳು, ಕಂಪನಿ, ಕೈಗಾರಿಕೆಗಳು ಮತ್ತು ಗ್ರಾಮೀಣ ಪ್ರದೇಶದಲ್ಲೂ ಪವರ್ ಕಟ್!

ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಕೆ. ಜೆ. ಜಾರ್ಜ್ ಅವರೇ, ನಿಮ್ಮ ಮನೆಯಲ್ಲಿ ಜನರೇಟರ್ ಇದೆಯೋ ಅಥವಾ ಸೀಮೆಎಣ್ಣೆ ಬುಡ್ಡಿ ಹಚ್ಚುತ್ತಿದ್ದೀರೋ ಎಂದು ಬಿಜೆಪಿ ಪ್ರಶ್ನಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:46 pm, Thu, 12 October 23