ಕುಸಿದ ಕೊಬ್ಬರಿ ಬೆಳೆ, ಬೆಂಬಲ ಬೆಲೆ ಘೋಷಿಸುವಂತೆ ಪ್ರಧಾನಿಗೆ ಪತ್ರ: ಮಾಜಿ ಸಂಸದ ಮುದ್ದಹನುಮೇಗೌಡ

ಕೊಬ್ಬರಿ ಬೆಳೆ ಪಾತಾಳಕ್ಕೆ ಇಳಿಯುತ್ತಿದ್ದು, ಕೂಡಲೇ ನಫೇಡ್ ಮಧ್ಯ ಪ್ರವೇಶಿಸಿ ಬೆಂಬಲ‌ ಬೆಲೆ‌ ಘೋಷಿಸಬೇಕು ಎಂದು ಮಾಜಿ ಸಂಸದ ಮುದ್ದಹನುಮೇಗೌಡ ಆಗ್ರಹಿಸಿದರು.

ಕುಸಿದ ಕೊಬ್ಬರಿ ಬೆಳೆ, ಬೆಂಬಲ ಬೆಲೆ ಘೋಷಿಸುವಂತೆ ಪ್ರಧಾನಿಗೆ ಪತ್ರ: ಮಾಜಿ ಸಂಸದ ಮುದ್ದಹನುಮೇಗೌಡ
ಮಾಜಿ ಸಂಸದ ಮುದ್ದಹನುಮೇಗೌಡ
Follow us
ಗಂಗಾಧರ​ ಬ. ಸಾಬೋಜಿ
|

Updated on:Jun 08, 2023 | 7:18 PM

ತುಮಕೂರು: 14 ಬೆಳೆಗಳಿಗೆ ಕೇಂದ್ರ ಸರ್ಕಾರ ಬೆಂಬಲ‌ ಬೆಲೆ ಹೆಚ್ಚಳ ಮಾಡಿದೆ. ಆದರೆ ಕೊಬ್ಬರಿ ಬೆಳೆ ಪಾತಾಳಕ್ಕೆ ಇಳಿಯುತ್ತಿದೆ. ಕೂಡಲೇ ನಫೇಡ್ ಮಧ್ಯ ಪ್ರವೇಶಿಸಿ ಬೆಂಬಲ‌ ಬೆಲೆ‌ ಘೋಷಿಸಬೇಕು ಎಂದು ಮಾಜಿ ಸಂಸದ ಮುದ್ದಹನುಮೇಗೌಡ (S. P. Muddahanumegowda) ಆಗ್ರಹಿಸಿದರು. ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 18 ಸಾವಿರದಿಂದ 8 ಸಾವಿರ ಬೆಲೆಗೆ ಇಳಿದಿದೆ. ಕೊಬ್ಬರಿ ಇಳುವರಿ‌ ಹಾಗೂ ಬೆಲೆ ಎರಡು ಕುಸಿದಿದೆ. ಕೊಬ್ಬರಿಗೆ ಬೆಂಬಲ‌ ಬೆಲೆ 11.720 ರೂಪಾಯಿಯನ್ನು ಘೋಷಣೆ ಮಾಡಲಾಗಿದೆ. 16,300    ರೂಪಾಯಿನಷ್ಟು ಬೆಂಬಲ‌ ಬೆಲೆಯನ್ನು ನೀಡಬೇಕೆಂದು ಕೃಷಿ ಇಲಾಖೆ ಹೇಳಿದೆ ಎಂದರು.

ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರ ಕೂಡ ಕೇಂದ್ರಕ್ಕೆ ಬೆಂಬಲ‌ ಬೆಲೆ ನೀಡುವಂತೆ ಮನವಿ ಮಾಡಿದ್ದಾರೆ. ಬೆಲೆ ಕಡಿಮೆ‌ ಪರಿಣಾಮ ಉತ್ಪಾದನೆ ಕೂಡ ಕಡಿಮೆಯಾಗುತ್ತಿದೆ. ಬೆಲೆ ಕುಸಿತದ ಹಿಂದಿನ ಕಾರಣ ಕಂಡುಹಿಡಿಯ ಬೇಕು.‌ ಇಲ್ಲದಿದ್ದರೆ ಜಿಲ್ಲೆಯಲ್ಲಿ ತೆಂಗು ಬೆಳೆ ಕಡಿಮೆಯಾಗಲಿದೆ. ಬೆಂಬಲ ಬೆಲೆ ಘೋಷಿಸುವಂತೆ ಪ್ರಧಾನಿಗೆ ಪತ್ರ ಬರೆಯುತ್ತಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ: MSP List: ಕೇಂದ್ರದಿಂದ ಎಂಎಸ್​ಪಿ ಹೆಚ್ಚಳ; ರಾಗಿ, ಭತ್ತ ಸೇರಿ ಯಾವ್ಯಾವ ಬೆಳೆಗೆ ಕನಿಷ್ಠ ಬೆಲೆ ಎಷ್ಟಿದೆ? ಇಲ್ಲಿದೆ ಪಟ್ಟಿ

14 ಮುಂಗಾರು ಬೆಳೆಗಳ ಬೆಂಬಲ ಬೆಲೆ ಘೋಷಣೆ

ಕೇಂದ್ರ ಸರ್ಕಾರ ಜೂನ್ 7ರಂದು 14 ಮುಂಗಾರು ಬೆಳೆಗಳಿಗೆ ನೀಡಲಾಗುವ ಕನಿಷ್ಠ ಬೆಂಬಲ ಬೆಲೆಯನ್ನು (MSP) ಹೆಚ್ಚಿಸಿದೆ. ಭತ್ತ, ರಾಗಿ, ಜೋಳ, ಹೆಸರುಕಾಳು ಇತ್ಯಾದಿ ಬೆಳೆಗಳಿವೆ. ಭತ್ತಕ್ಕೆ ಎಂಎಸ್​ಪಿಯನ್ನು ಕ್ವಿಂಟಾಲ್​ಗೆ 143 ರೂನಷ್ಟು ಏರಿಸಲಾಗಿದೆ.

ಹೆಸರುಕಾಳಿಗೆ ಬೆಂಬಲ ಬೆಲೆ ಬರೋಬ್ಬರಿ 803 ರೂನಷ್ಟು ಹೆಚ್ಚಳವಾಗಿದೆ. ಕ್ವಿಂಟಾಲ್ ರಾಗಿಗೆ 268 ರೂಗಳಷ್ಟು ಎಂಎಸ್​ಪಿ ಹೆಚ್ಚಿಸಲಾಗಿದೆ. ಈ ವರ್ಷದ ಹಿಂಗಾರು ಬೆಳೆಗಳಿಗೆ ಸರ್ಕಾರ 2022ರ ನವೆಂಬರ್​ನಲ್ಲಿ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿತ್ತು.

2023-24ರಲ್ಲಿ ಮುಂಗಾರು ಬೆಳೆಗೆ ಸರ್ಕಾರ ಪರಿಷ್ಕರಿಸಿರುವ ಎಂಎಸ್​ಪಿ ದರ (ಕ್ವಿಂಟಾಲ್​ಗೆ):

  1. ಭತ್ತ ಸಾಮಾನ್ಯ: 2040 ರೂನಿಂದ 2183 ರೂಗೆ ಏರಿಕೆ
  2. ಭತ್ತ ಗ್ರೇಡ್ ಎ: 2060ರಿಂದ 2203 ರೂಗೆ ಏರಿಕೆ
  3. ಜೋಳ (ಹೈಬ್ರಿಡ್): 2970 ರೂನಿಂದ 3180 ರೂಗೆ ಏರಿಕೆ
  4. ಜೋಳ (ಮಾಳದಂಡಿ): 2990 ರೂನಿಂದ 3225 ರೂಗೆ ಏರಿಕೆ
  5. ಮೆಕ್ಕೆ ಜೋಳ: 1,962 ರೂನಿಂದ 2090 ರೂಗೆ ಏರಿಕೆ
  6. ಬಿಳಿ ಜೋಳ (ಬಾಜ್ರ): 2,350 ರೂನಿಂದ 2500 ರೂಗೆ ಏರಿಕೆ
  7. ರಾಗಿ: 3578 ರೂನಿಂದ 3846 ರೂಗೆ ಏರಿಕೆ
  8. ತೊಗರಿಬೇಳೆ: 6,600 ರೂನಿಂದ 7,000 ರೂಗೆ ಏರಿಕೆ
  9. ಹೆಸರುಕಾಳು: 7,755 ರೂನಿಂದ 8558 ರೂಗೆ ಏರಿಕೆ
  10. ಶೇಂಗಾ: 5,850 ರೂ
  11. ಉದ್ದಿನಬೇಳೆ: 6,600 ರೂನಿಂದ 6950 ರೂಗೆ ಏರಿಕೆ
  12. ಸೋಯಾಬೀನ್ (ಹಳದಿ): 4,300 ರೂನಿಂದ 4600 ರೂಗೆ ಏರಿಕೆ
  13. ಕಡಲೆಕಾಯಿ: 5850 ರೂನಿಂದ 6377 ರೂಗೆ ಏರಿಕೆ
  14. ಸೂರ್ಯಕಾಂತಿ ಬೀಜ: 6400 ರೂನಿಂದ 6760 ರೂಗೆ ಏರಿಕೆ
  15. ಬಿಳಿ ಎಳ್ಳು: 7830 ರೂನಿಂದ 8635 ರೂಗೆ ಏರಿಕೆ
  16. ಕಪ್ಪು ಎಳ್ಳು: 7287 ರೂನಿಂದ 7734 ರೂಗೆ ಏರಿಕೆ
  17. ಹತ್ತಿ (ಮಧ್ಯಮ): 6080ರೂನಿಂದ 6620 ರೂಗೆ ಏರಿಕೆ
  18. ಹತ್ತಿ (ಉದ್ದದ್ದು): 6380 ರೂನಿಂದ 7020 ರೂಗೆ ಏರಿಕೆ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:11 pm, Thu, 8 June 23

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ