Manpreet Singh Badal: ಕಾಂಗ್ರೆಸ್ ತೊರೆದ ಕೆಲವೇ ಗಂಟೆಗಳಲ್ಲಿ ಬಿಜೆಪಿ ಸೇರಿದ ಮನ್‌ಪ್ರೀತ್ ಸಿಂಗ್ ಬಾದಲ್

| Updated By: ರಶ್ಮಿ ಕಲ್ಲಕಟ್ಟ

Updated on: Jan 18, 2023 | 5:06 PM

ರಾಹುಲ್ ಗಾಂಧಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ, ಮನ್‌ಪ್ರೀತ್ ಸಿಂಗ್ ಬಾದಲ್ ತಾನು ಕಾಂಗ್ರೆಸ್ ಪಕ್ಷದಿಂದ ಭ್ರಮನಿರಸನಗೊಂಡಿರುವುದಾಗಿ ಹೇಳಿದ್ದಾರೆ.

Manpreet Singh Badal: ಕಾಂಗ್ರೆಸ್ ತೊರೆದ ಕೆಲವೇ ಗಂಟೆಗಳಲ್ಲಿ ಬಿಜೆಪಿ ಸೇರಿದ ಮನ್‌ಪ್ರೀತ್ ಸಿಂಗ್ ಬಾದಲ್
ಮನ್‌ಪ್ರೀತ್ ಸಿಂಗ್ ಬಾದಲ್
Follow us on

ಚಂಡೀಗಢ/ದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮತ್ತು ಪಂಜಾಬ್ ಮಾಜಿ ಹಣಕಾಸು ಸಚಿವ ಮನ್‌ಪ್ರೀತ್ ಸಿಂಗ್ ಬಾದಲ್  (Manpreet Singh Badal) ಕಾಂಗ್ರೆಸ್ (Congress) ಪಕ್ಷವನ್ನು ತೊರೆದ ಕೆಲವೇ ಗಂಟೆಗಳ ನಂತರ ಇಂದು(ಬುಧವಾರ) ಬಿಜೆಪಿ (BJP) ಸೇರಿದ್ದಾರೆ.ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ವಿವಿಧ ನಾಯಕರ ಸಮ್ಮುಖದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಯಾದರು. ರಾಹುಲ್ ಗಾಂಧಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ, ಬಾದಲ್ ತಾನು ಕಾಂಗ್ರೆಸ್ ಪಕ್ಷದಿಂದ ಭ್ರಮನಿರಸನಗೊಂಡಿರುವುದಾಗಿ  ಹೇಳಿದ್ದಾರೆ. ಪಕ್ಷದಲ್ಲಿ ಮತ್ತು ಸರ್ಕಾರದಲ್ಲಿ ನಾನು ಹೊಂದಿರುವ ಜವಾಬ್ದಾರಿಗೆ ಪ್ರತಿ ಔನ್ಸ್ ಶಕ್ತಿಯನ್ನು ವಿನಿಯೋಗಿಸಿದ್ದೇನೆ. ನನಗೆ ಈ ಅವಕಾಶಗಳನ್ನು ಒದಗಿಸಿದ್ದಕ್ಕಾಗಿ ಮತ್ತು ಈ ಹಿಂದೆ ನೀವು ನನಗೆ ತೋರಿದ ದಯೆ ಮತ್ತು ಸೌಜನ್ಯಕ್ಕಾಗಿ ನಾನು ನಿಮಗೆ ಧನ್ಯವಾದಗಳು ಎಂದು ಬಾದಲ್ ತಮ್ಮ ರಾಜೀನಾಮೆ ಪತ್ರವನ್ನು ಟ್ವೀಟ್ ಮಾಡಿದ್ದಾರೆ.


ಪಕ್ಷದೊಳಗಿನ ಪ್ರಚಲಿತ ಸಂಸ್ಕೃತಿ ಮತ್ತು ಪ್ರಸ್ತುತ ಹೊತ್ತಲ್ಲಿ ಧಿಕ್ಕರಿಸುವ ಬಯಕೆಯನ್ನು ಗಮನಿಸಿದರೆ, ನಾನು ಇನ್ನು ಮುಂದೆ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಭಾಗವಾಗಲು ಬಯಸುವುದಿಲ್ಲ ಎಂದು ಅವರು ಹೇಳಿದರು.

ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಸೇವೆ ಸಲ್ಲಿಸಿದ ಮನ್‌ಪ್ರೀತ್ ಸಿಂಗ್ ಬಾದಲ್, “ಏಳು ವರ್ಷಗಳ ಹಿಂದೆ ನಾನು ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಅನ್ನು ನಿಮ್ಮ ಪಕ್ಷದೊಂದಿಗೆ ವಿಲೀನಗೊಳಿಸಿದ್ದೇನೆ. ನಾನು ಪಂಜಾಬ್‌ನ ಜನರಿಗೆ ಮತ್ತು ಅದರ ಹಿತಾಸಕ್ತಿಗಳೆರಡಕ್ಕೂ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ಅನುವು ಮಾಡಿಕೊಡುವ ಶ್ರೀಮಂತ ಇತಿಹಾಸವನ್ನು ಹೊಂದಿರುವ ಸಂಸ್ಥೆಯಲ್ಲಿ ಏಕೀಕರಣಗೊಳ್ಳುವ ಅಪಾರ ಭರವಸೆ ಮತ್ತು ನಿರೀಕ್ಷೆಯೊಂದಿಗೆ ನಾನು ಹಾಗೆ ಮಾಡಿದ್ದೇನೆ. ಆರಂಭಿಕ ಉತ್ಸಾಹವು ಕ್ರಮೇಣ ನಿರಾಶಾದಾಯಕ ಭ್ರಮನಿರಸನಕ್ಕೆ ದಾರಿ ಮಾಡಿಕೊಟ್ಟಿತು” ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ