12 ಲಿಂಗಾಯತ ಶಾಸಕರು ಒಬ್ಬೊಬ್ಬರು 1 ಕೆ.ಜಿ ಮಾಂಸ ತಿಂತಾರೆ, ಸಿದ್ದು ವಿರುದ್ಧ ಗೆಲ್ಲಲಿಲ್ಲ ಅಂದ್ರೆ ನಿಮಗೆ ಮುಖ ತೋರಿಸಲ್ಲ: ವರ್ತೂರು ಮಾತು ವೈರಲ್
ಕೋಲಾರದಲ್ಲಿ ಪತ್ರಿಕಾಗೋಷ್ಠಿಗೂ ವರ್ತೂರ್ ಪ್ರಕಾಶ್ ಪೋನ್ ನಲ್ಲಿ ಮಾತನಾಡುತ್ತಿದ್ದ ಗುಪ್ತ್ ಗುಪ್ತ್ ಮಾತುಕತೆಗಳು ವೈರಲ್ ಆಗಿವೆ.
ಕೋಲಾರ: ಬಿಜೆಪಿ ನಾಯಕ ವರ್ತೂರ್ ಪ್ರಕಾಶ್ (Varthur Prakash)ಸದ್ಯ ರಾಜ್ಯರಾಜಕಾಣದಲ್ಲಿ ಸುದ್ದಿಯಲ್ಲಿದ್ದಾರೆ. ಸಿದ್ದರಾಮಯ್ಯ (Siddarmaiah) ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆಂದು ಘೋಷಣೆ ಮಾಡಿದ ಬೆನ್ನಲ್ಲೇ ವರ್ತೂರ್ ಪ್ರಕಾಶ್ ವಾಗ್ದಾಳಿ ನಡೆಸಿದ್ದಾರೆ. ಪ್ರತಿದಿನ ಒಂದಲ್ಲ ಒಂದು ವಿಚಾರದಲ್ಲಿ ಸಿದ್ಧು ವಿರುದ್ಧ ಹರಿಹಾಯುತ್ತಿದ್ದಾರೆ. ಇದರ ಮಧ್ಯೆ ವರ್ತೂರು ಪ್ರಕಾಶ್ ಅವರ ಗುಪ್ತ್ ಗುಪ್ತ್ ಚರ್ಚೆಯೊಂದು ವೈರಲ್ ಆಗಿದೆ. ಸುದ್ದಿಗೋಷ್ಠಿಗೂ ಮುನ್ನ ಫೋನ್ನಲ್ಲಿ ಏನೆಲ್ಲಾ ಮಾತನಾಡಿದ್ದಾರೆ ಎನ್ನುವುದು ಈ ಕೆಳಗಿನಂತಿದೆ.
ಕೋಲಾರದಲ್ಲಿ ಇಂದು(ಜ.18) ಸುದ್ದಿಗೋಷ್ಠಿಗೂ ಮುನ್ನ ಕರೆ ಮಾಡಿ ಮಾತುಕತೆ ನಡೆಸಿದ್ದ ವರ್ತೂರ್ ಪ್ರಕಾಶ್, ವಿಧಾನಸಭೆಗೆ ಹೋಗಬೇಕಂದ್ರೆ ಕುಡಿಯೋದು ತಿನ್ನೋದು ಇರಲೇಬೇಕು. ಎಣ್ಣೆ ಹೊಡೆಯೋದು, ನಾನ್ ವೆಜ್ ತಿಂದಿಲ್ಲ ಅಂದ್ರೆ ಊಟ ಸಿಗಲ್ಲ ಸರ್. ನಾನ್ ವೆಜ್ ತಿಂದಿಲ್ಲ ಅಂದ್ರೆ ರಾಜಕೀಯದಲ್ಲಿ ಊಟ ಸಿಗಲ್ಲ ಸರ್. ಉತ್ತರ ಕರ್ನಾಟಕ ಭಾಗದ 12 ಲಿಂಗಾಯತ ಶಾಸಕರು ಇದ್ದಾರೆ. ಒಬ್ಬೊಬ್ಬರು 1 ಕೆಜಿ ಮಾಂಸ ತಿಂತಾರೆ, ಅವರೆಲ್ಲಾ ನನ್ನ ಫ್ರೆಂಡ್ಸ್ ಸರ್ ಎನ್ನುವ ಮಾತುಗಳು ಬೇರೆಯವರೊಂದಿಗೆ ಮಾತನಾಡಿದ್ದು ವೈರಲ್ ಆಗಿದೆ.
ಒಬ್ಬ ಬ್ರಾಹ್ಮಣ ಒಂದೂವರೆ ಕೆಜಿ ಮಾಂಸ ತಿಂತಾರೆ. ನಾನೇ ಹಾಕಿ ಕೊಡುತ್ತೇನೆ. ನೀವೊಬ್ಬರೇ ಎಣ್ಣೆ ಹೊಡೆಯದೆ, ಮಾಂಸ ತಿನ್ನದೆ ಗೆಟನ್ ಆಗಿದ್ದು ಸರ್. ನಾನು ಸಿದ್ದರಾಮಯ್ಯ ವಿರುದ್ಧ 50 ಸಾವಿರ ಲೀಡ್ನಲ್ಲಿ ಗೆಲ್ಲುತ್ತೇನೆ. ಗೆಲ್ಲಲಿಲ್ಲ ಅಂದ್ರೆ ನಿಮಗೆ ಮುಖ ತೋರಿಸಲ್ಲ ಎಂದು ವರ್ತೂರು ಪ್ರಕಾಶ್ ಮಾತನಾಡಿದ್ದಾರೆ.
ವರ್ತೂರ್ ಪ್ರಕಾಶ್ ಮಾಜಿ ಸಿಎಂ ಸಿದ್ದರಾಮಯ್ಯನವರ ಶಿಷ್ಯ/. ಆದ್ರೆ, ಇದೀಗ ಶಿಷ್ಯ ಗುರುವಿನ ವಿರುದ್ಧವೇ ಕೋಲಾರದಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅಲ್ಲದೇ ವರ್ತೂರ್ ಪ್ರಕಾಶ್ ಅವರು ಸಿದ್ದರಾಮಯ್ಯಗೆ ತೊಡೆತಟ್ಟಿ ಸವಾಲುಗಳನ್ನ ಹಾಕಿದ್ದಾರೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:08 pm, Wed, 18 January 23