ಹನುಮ ಧ್ವಜ ವಿವಾದ: ಮಂಡ್ಯದಲ್ಲಿ ಶಾಂತಿ ಯಾತ್ರೆ ಮಾಡಲು ಮುಂದಾದ ಕಾಂಗ್ರೆಸ್

| Updated By: ರಮೇಶ್ ಬಿ. ಜವಳಗೇರಾ

Updated on: Jan 29, 2024 | 7:45 PM

Mandya Hanuman Flag Row: ಮಂಡ್ಯದ ಕೆರಗೋಡು ಗ್ರಾಮದ ಧ್ವಜ ವಿವಾದ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಸಂಬಂಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಸೇರಿಕೊಂಡು ಬೃಹತ್ ಪ್ರತಿಭಟನೆ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಇದರ ಬೆನ್ನಲ್ಲೇ ಇದೀಗ ಕಾಂಗ್ರೆಸ್​ ಮಂಡ್ಯದಲ್ಲಿ ಶಾಂತಿ ಯಾತ್ರೆ ಮಾಡಲು ಮುಂದಾಗಿದೆ. ಈ ಸಂಬಂಧ ಕಾಂಗ್ರೆಸ್ ಶಾಸಕ ರವಿ ಗಾಣಿಗ ಮಾಹಿತಿ ನೀಡಿದ್ದಾರೆ.

ಹನುಮ ಧ್ವಜ ವಿವಾದ: ಮಂಡ್ಯದಲ್ಲಿ ಶಾಂತಿ ಯಾತ್ರೆ ಮಾಡಲು ಮುಂದಾದ ಕಾಂಗ್ರೆಸ್
ಕಾಂಗ್ರೆಸ್ ಶಾಸಕ ರವಿ ಗಾಣಿಗ
Follow us on

ಮಂಡ್ಯ, (ಜನವರಿ 29): ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಶುರುವಾದ ಧ್ವಜ ವಿವಾದ ಏಕಾಏಕಿ ರಾಜಕೀಯ ತಿರುವು ಪಡೆದುಕೊಂಡಿದ್ದು, ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಹನುಮ ಧ್ವಜ ಇಳಿಸಿ ರಾಷ್ಟ್ರ ಧ್ವಜ ಹಾರಿಸಿದ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಆರೋಪ-ಪತ್ಯಾರೋಪ ತಾರಕ್ಕೇರಿದೆ. ಅಲ್ಲದೇ ಹನುಮ ಧ್ವಜ ಹಾರಿಸಲೇಬೇಕೆಂದು ಬಿಜೆಪಿ-ಜೆಡಿಎಸ್ ನಾಯಕರು ಮಂಡ್ಯ ಚಲೋ ನಡೆಸಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮಂಡ್ಯ ಕಾಂಗ್ರೆಸ್​ ಶಾಸಕ ರವಿ ಗಾಣಿಗ ಸಹ ಬಿಜೆಪಿ ಮತ್ತು ಜೆಡಿಎಸ್​ಗೆ ಟಕ್ಕರ್ ನೀಡಲು ತ್ರಿರಂಗ ನಡಿಗೆ ಯಾತ್ರೆ ಮಾಡಲು ಮುಂದಾಗಿದ್ದಾರೆ.

ಈ ಬಗ್ಗೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರವಿ ಗಾಣಿಗ, ನಾನು ಶಾಂತಿ ಸಭೆ ಮಾಡಲು ಹೋಗಿದ್ರೆ ಕೊಲೆ ಮಾಡುತ್ತಿದ್ರು. ನನ್ನ ಫ್ಲೆಕ್ಸ್​​ ಅನ್ನೇ ಬಿಡ್ತಿಲ್ಲ, ಇನ್ನು ನಾನು ಹೋಗಿದ್ರೆ ಬಿಡ್ತಿದ್ರಾ? ನನಗೂ ಕೇಸರಿ ಧ್ವಜದ ವಿವಾದಕ್ಕೂ ಸಂಬಂಧವಿಲ್ಲ. ಶಾಂತಿ ಕಾಪಾಡುವ ನಿಟ್ಟಿನಲ್ಲಿ ನಾವು ಶಾಂತಿ ಯಾತ್ರೆ ಮಾಡುತ್ತೇವೆ. ಶೀಘ್ರದಲ್ಲೇ ಶಾಂತಿ ಯಾತ್ರೆ ದಿನಾಂಕ ಘೋಷಣೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕೆರಗೋಡಿಗೆ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಪ್ರತಿಭಟನೆಯಿಂದ ಕಾಲ್ಕಿತ್ತ ಬಿಜೆಪಿ ನಾಯಕರು; ದೋಸ್ತಿಗಳಲ್ಲಿ ಬಿರುಕು?

ನಾನು ಕೂಡ ಹಿಂದೂ, ಎಲ್ಲಾ ದೇವರನ್ನು ಪೂಜೆ ಮಾಡುತ್ತೇನೆ. ಮಂಡ್ಯದ RSS ಕಚೇರಿಗೆ ನಾನು 1 ಲಕ್ಷ ದೇಣಿಗೆ ಕೊಟ್ಟಿದ್ದೇನೆ. ಜನವರಿ 22ರಂದು ಸ್ಥಳೀಯ ರಾಮಮಂದಿರಕ್ಕೆ ಹೋಗಿದ್ದೇನೆ. ಇವರಿಂದ ದೇವರನ್ನು ಪೂಜೆ ಮಾಡುವುದನ್ನು ಕಲಿಯಬೇಕಿಲ್ಲ. ನಮ್ಮ ಇಂಟಲಿಜೆನ್ಸ್​ ಫೇಲ್ ಆಗಿದೆ. ಇಷ್ಟು ದೊಡ್ಡ ಗಲಾಟೆ ಆಗುತ್ತೆ, ಹೊರಗಿನಿಂದ ಬಂದು ಗಲಾಟೆ ಮಾಡಿದ್ದಾರೆ. ನಮ್ಮ ಇಂಟಲಿಜೆನ್ಸ್ ನವರು ಯಾಕೆ ಅವರನ್ನ ಒಳಗೆ ಬಿಟ್ಟರು. ಈ ಬಗ್ಗೆಯೂ ನಾನು ಸಿಎಂಗೆ ಪತ್ರ ಬರೆಯುತ್ತೇನೆ ಎಂದು ಹೇಳಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ