ಸಾತನೂರಿನಲ್ಲಿ ಟೆಂಟ್ ಹಾಕಿ ಬ್ಲೂ ಫಿಲ್ಮ್‌ ನಡೆಸುತ್ತಿದ್ರಲ್ಲಾ: ಮತ್ತೆ ಡಿಕೆ ಶಿವಕುಮಾರ್ ಗುಮ್ಮಿದ ಹೆಚ್​ಡಿ ಕುಮಾರಸ್ವಾಮಿ

ಘನತೆಗೆ ತಕ್ಕಂತೆ ಮಾತನಾಡಿ ಎಂದ ಡಿಕೆ ಶಿವಕುಮಾರ್ ವಿರುದ್ಧ ಗರಂ ಆದ ಹೆಚ್​ಡಿ ಕುಮಾರಸ್ವಾಮಿ, ಅವರ ಘನತೆಯನ್ನೇ ಪ್ರಶ್ನಿಸಿದರು. ಅಲ್ಲದೆ, ಸಾತನೂರಿನಲ್ಲಿ ಎರಡು ಟೆಂಟ್ ಇಟ್ಟುಕೊಂಡು ಕರೆಂಟ್ ಕೆನೆಕ್ಷನ್ ತಗೊಂಡು ಬ್ಲೂ ಫಿಲ್ಮ್ ನಡೆಸುತ್ತಿದ್ದರಲ್ಲ. ಆ ಸಂಸ್ಕೃತಿಯಿಂದ ಬಂದಿರುವುದರಿಂದ ಈ ಪೋಸ್ಟರ್ ಅಂಟಿಕೊಂಡು ಕುಳಿತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಹಾಸನ, ನ.20: ಘನತೆಗೆ ತಕ್ಕಂತೆ ಮಾತನಾಡಿ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K. Shivakumar) ಅವರು ಹೆಚ್.​ಡಿ. ಕುಮಾರಸ್ವಾಮಿಗೆ (H.D. Kumaraswamy) ಹೇಳಿದ್ದರು. ಇದನ್ನು ಮಾಧ್ಯಮದವರು ಪ್ರಶ್ನಿಸಿದಾಗ ಗರಂ ಆದ ಕುಮಾರಸ್ವಾಮಿ, ಅವರಿಗೆ ಯಾವ ಘನತೆ ಇದೆ ಎಂದು ಪ್ರಶ್ನಿಸಿದರು. ಅಲ್ಲದೆ, ಸಾತನೂರಿನಲ್ಲಿ ಟೆಂಟ್ ಹಾಕಿ ಬ್ಲೂ ಫಿಲ್ಮ್ ಪ್ರಸಾರ ಮಾಡುತ್ತಿದ್ದ ಹಿಂದಿನ ವಿಚಾರವನ್ನು ಕೆದಕಿದರು.

ಘನತೆಗೆ ತಕ್ಕಂತೆ ಮಾತನಾಡಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾಗಿ ಹಾಸನದಲ್ಲಿ ಮಾಧ್ಯಮದವರು ಕೇಳಿದಾಗ ಆಕ್ರೋಶಗೊಂಡ ಕುಮಾರಸ್ವಾಮಿ, ಅವರಿಗೆ ಯಾವ ಘನತೆ ಇದೆ? ಕರೆಂಟ್ ಕಳ್ಳ ಅಂತ ಪೋಸ್ಟರ್ ಅಂಟಿಸೋದಾ? ಇದಲ್ಲವೇ ನಿಮ್ಮ ಘನತೆ? ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನ ಘನತೆ ಇದಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.

ಇದನ್ನೂ ಓದಿ: ನಾವು ಹಿಂದೂ ಸಂಸ್ಕೃತಿಯಲ್ಲಿ ಹುಟ್ಟಿದ್ದೇವೆ, ನಮ್ಮ ಧರ್ಮ ಕಾಪಾಡಬೇಕಲ್ವಾ: ಜಮೀರ್ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು

ಕನಕಪುರದ ದೊಡ್ಡ ಆಲಹಳ್ಳಿಯ ಸಾತನೂರು ಬಳಿ ಎರಡು ಟೆಂಟ್ ಇಟ್ಟುಕೊಂಡು ಕನೆಕ್ಷನ್ ತಗೊಂಡು ಜನರಿಗೆ ಬ್ಲೂ ಫ್ಲಿಲ್ಮ್ ನಡೆಸುತ್ತಿದ್ದರಲ್ಲ. ಆ ಸಂಸ್ಕೃತಿಯಲ್ಲಿ ಬಂದಿರುವುದರಿಂದ ಈ ರೀತಿಯಾಗಿ ಕಳ್ಳ ಅಂತ ಹೇಳಿ ಪೋಸ್ಟರ್ ಅಂಟಿಸಿಕೊಂಡು ಕುಳಿತಿದ್ದೀರಿ. ದರೋಡೆ ಮಾಡಿಕೊಂಡು ಕುಳಿತಿದ್ದೀರಿ. ಎಲ್ಲೆಲ್ಲಿ ಏನೇನು ಮಾಡಿದ್ದೀರಿ? ಕದ್ದು ಗ್ರಾನೈಟ್ ಹೊಡ್ಕೊಂಡು ಕುಳಿತಿದ್ದಿರಿ. ಈಗಲೂ ನಡೆಸಿಕೊಂಡು ಕುಳಿತಿದ್ದೀರಿ ಅಲ್ವ, ಮತ್ತಿಕೆರೆ ರೈಲ್ವೇ ನಿಲ್ದಾಣದಲ್ಲಿ ಅರ್ಧ ರಾತ್ರಿಯಲ್ಲಿ ಬರುತ್ತಿದೆ. ನಾನು ಕಾಣದ್ದಲ್ಲ, ನಿಮ್ಮಿಂದ ನಾನು ಬದುಕನ್ನು ಕಲಿಬೇಕಾ ಎಂದು ಖಾರವಾಗಿ ಪ್ರಶ್ನಿಸಿದರು.

ಈ ಬಗ್ಗೆ ವಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಮಾಧ್ಯಮದವರು ಕೇಳಿದಾಗ, ಚಾನೆಲ್​ಗಳಲ್ಲಿ, ಕೆಲವು ಪತ್ರಿಕೆಗಳ ಸಂಪಾದಕೀಯಗಳಲ್ಲಿ, ಆರ್ಟಿಕಲ್​ಗಳಲ್ಲಿ ವಿಪಕ್ಷ ನಾಯಕ ಹೇಗಿರಬೇಕು ಎಂದು ಬರೆಯಲಾಗಿದೆ. ಇವುಗಳನ್ನು ನಾನು ಓದಿದ್ದೇನೆ. ನನ್ನದೇ ಆದ ಇತಿ ಮಿತಿಯಲ್ಲಿ ಜನರಿಗೆ ಏನು ಉಪಯೋಗ ಆಗುತ್ತದೆ, ಸರ್ಕಾರದ ವೈಫಲ್ಯಗಳನ್ನು ತೋರಿಸುವಂತಹ ವಿಚಾರಗಳಿಗೆ ಹೆಚ್ಚಿನ ಒತ್ತನ್ನು ನೀಡುತ್ತೇನೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:36 pm, Mon, 20 November 23

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us