ಬಹಳ ದಿನಗಳ ನಂತರ ಬಹಿರಂಗವಾಗಿ ಕಾಣಿಸಿಕೊಂಡ ದೇವೇಗೌಡ, ಎಚ್​ಡಿಕೆ ಬಗ್ಗೆ ಸ್ಫೋಟಕ ಭವಿಷ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Oct 08, 2022 | 7:40 PM

ಕೊಂಚ ಅನಾರೋಗ್ಯದಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ದೇವೇಗೌಡ್ರು 3 ತಿಂಗಳ ಬಳಿಕ ಪಕ್ಷದ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.

ಬಹಳ ದಿನಗಳ ನಂತರ ಬಹಿರಂಗವಾಗಿ ಕಾಣಿಸಿಕೊಂಡ ದೇವೇಗೌಡ, ಎಚ್​ಡಿಕೆ ಬಗ್ಗೆ ಸ್ಫೋಟಕ ಭವಿಷ್ಯ
HDK HDD
Follow us on

ಬೆಂಗಳೂರು: ಬಹಳ ದಿನಗಳ ನಂತರ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ (HD Devegowda)  ಅವರು ಬಹಿರಂಗವಾಗಿ ಕಾಣಿಸಿಕೊಂಡಿದ್ದಾರೆ.

ಕೊಂಚ ಅನಾರೋಗ್ಯದಿಂದ 3 ತಿಂಗಳ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ದೇವೇಗೌಡ್ರು ಇಂದು(ಅ.08) ಬೆಂಗಳೂರಿನ ನ್ಯಾಷನಲ್​ ಕಾಲೇಜು ಮೈದಾನದಲ್ಲಿ ನಡೆದ ಜೆಡಿಎಸ್​​ ಜನತಾ ಮಿತ್ರ ಸಮಾರೋಪ ಸಮಾವೇಶದಲ್ಲಿ ಭಾಗವಹಿಸಿ, ಪುತ್ರನ ಬಗ್ಗೆ ಭವಿಷ್ಯ ನುಡಿದ್ದಾರೆ.

ಜೆಡಿಎಸ್​​ ಜನತಾ ಮಿತ್ರ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ, ನನ್ನ ಕಣ್ಣ ಮುಂದೆ ಜೆಡಿಎಸ್​​ಗೆ ಪವರ್ ಬರೋದು ಸತ್ಯ. ಹೆಚ್​.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: ಜಿಲ್ಲೆಯಿಂದ ಬಹಿಷ್ಕಾರ ಹಾಕಲು ನಾನೇನು ಉಗ್ರನಾ? ಹಸುಗಳನ್ನು ನೆನೆದು ಮಾಜಿ ಸಚಿವ ಭಾವುಕ

ಕುಮಾರಸ್ವಾಮಿ ಪಕ್ಷವನ್ನು ಉಳಿಸುವುದಕ್ಕೆ 10 ವರ್ಷಗಳಿಂದ ಏನು ಮಾಡಿದ್ದಾರೆ ಎನ್ನುವುದು ಗೊತ್ತು/ ನನ್ನ ಆರೋಗ್ಯ ಇನ್ನು ಸುಧಾರಣೆ ಆಗುತ್ತೆ ಅನ್ನುವ ನಂಬಿಕೆ ಇದೆ. ನಾನು ಒಂದು ಕಡೆ ಇರುತ್ತೇನೆ ಎಂದು ಭಾವಿಸಬೇಡಿ. ಸ್ವಲ್ಪ ದಿನಗಳು ಆದಮೇಲೆ ರಾಜ್ಯದ ಅನೇಕ ಕೇಂದ್ರಗಳಿಗೆ ಭೇಟಿ ನೀಡುತ್ತೇನೆ ಎಂದರು.

ಬೆಂಗಳೂರಿಗೆ ಯಾರು ಏನು ಮಾಡಿದ್ದಾರೆ ಎನ್ನುವುದು ಎಲ್ಲಾ ವಿವರವನ್ನು ನೀಡಲು ಸಾಧ್ಯವಿದೆ. 16 ಪಾರ್ಲಿಮೆಂಟ್ ಸೀಟ್ಅನ್ನು ಯಾವ ಪ್ರಯತ್ನದಿಂದ ಗೆದ್ದೆ. ಮುಖ್ಯಮಂತ್ರಿ ಸ್ಥಾನಕ್ಕೆ ಹೋರಾಟ ಆಯಿತು ಹಿರಿಯರು ಹೇಳಿದ್ರು. ನನ್ನ ಮುಖ್ಯಮಂತ್ರಿ ಮಾಡುತ್ತೆನೆ ಅಂತ ಅದು ನನಗೆ ಹೇಳಿದ್ರು . 1991ರಲ್ಲಿ ನಾನು ಪಕ್ಷದಿಂದ ಹೊರಕ್ಕೆ ಹೋದೆ. ಆ ದಿನವನ್ನು ನೆನಪಿಸಿಕೊಳ್ಳುತ್ತಿದ್ದೇನೆ ನಾನು ಏಕಾಂಗಿಯಾಗಿ ಸನ್ ಮಿತ್ರರೊಂದಿದೆ ಹೋದೆ. ನನ್ನ ಪಕ್ಷದಿಂದ ಒದ್ದು ಹೊರಗೆ ಹಾಕಿದ್ರು . ಅಲ್ಲಿಂದ ನಾನು ಕನಕಪುರದಲ್ಲಿ ಒಮ್ಮೆ ಸೋತೆ ಎಂದು ಹಿಂದಿನ ರಾಜಕೀಯ ಹೋರಾಟವನ್ನು ನೆನಪಿಸಿಕೊಂಡರು.

ನನಗೆ ಇನ್ನು ಹೋರಾಟ ಮಾಡುವ ಶಕ್ತಿ ಇದೆ. ಕಾರ್ಯಕ್ರಮದಲ್ಲಿ ಬಂದು 4 ನಿಮಿಷ ಮಾತನಾಡಿ ಎಂದು ಹೇಳಿದ್ರು. ಪಕ್ಷ ಉಳಿಸಲು 10 ವರ್ಷಗಳಿಂದ ಯಾವ ಯಾವ ಕಾರ್ಯಕ್ರಮ ಮಾಡಿದ್ದಾರೆ ಎಂದು ಗೊತ್ತು. ಹಿಂದಿನ ವಿಚಾರಗಳನ್ನು ಮಾತನಾಡಲು ಇಷ್ಟ ಪಡುವುದಿಲ್ಲ. ತಾವೇ ಸ್ವಯಂ ಪ್ರೇರಣೆಯಿಂದ ಕಾರ್ಯಕ್ರಮ ಬಂದು ಮಾತನಾಡಬೇಕು ಎಂದು ಹೇಳಿದ್ರು. ನನ್ನ ಆರೋಗ್ಯ ಇನ್ನು ಚೇತರಿಸಿಕೊಳ್ಳ ಬೇಕು. ನಾನು ಈ ರಾಜ್ಯದ ಅನೇಕ ಕೇಂದ್ರಗಳಿಗೆ ಭೇಟಿ ನೀಡುತ್ತೇನೆ. ದಯವಿಟ್ಟುಈ ಪಕ್ಷ ಉಳಿಸಿ ಎಂದು ಮನವಿ ಮಾಡಿದರು.

ಕಾರ್ಯಕಾರಣಿ ಸಭೆ ಯಲ್ಲೂ ಭಾಗಿಯಾಗ್ತೀನಿ. ಯಾವುದೇ ಒಂದು ಸಮಾಜಕ್ಕೆ ನೋವಾಗಲು ಬಿಡಲಿಲ್ಲ. ಹೇಳಿದ ಮೇಲೆ ನಾವು ಕಾರ್ಯಗತ ಮಾಡಲು ಆಗಬೇಕು. ಮುಸ್ಲಿಂರಿಗೆ ಮೀಸಲಾತಿ ಅಂತ ಎಂದೂ ಹೇಳಿರಲಿಲ್ಲ ಆದರೂ ಮಾಡಿದೆ. ಈ ಪಕ್ಷ ಉಳಿದ ಬೆಳಸಿ ಎಂದು ಕೈ ಮುಗಿದು ಮನವಿ ಮಾಡುತ್ತೆನೆ ಎಂದರು.