ಬೆಂಗಳೂರು: ಎತ್ತಿನಹೊಳೆ ಯೋಜನೆ ಹೆಸರಲ್ಲಿ ಯಾರ ಜೇಬು ತುಂಬಿಸಿದ್ದೀರಿ? ಡಿಆರ್ಪಿ ಎಂದರೆ ನಿಮಗೆ ಬೇಕಾದಂತೆ ಬಳಸಿಕೊಳ್ಳುವುದಾ? ಗುತ್ತಿಗೆದಾರರಿಗೆ ಕೊಡೋಕೆ ನಿಮ್ಮ ಬಳಿ ದುಡ್ಡಿದೆ. ಆದರೆ ರೈತರಿಗೆ ದುಡ್ಡು ಕೊಡಲು ನಿಮ್ಮ ಬಳಿ ಆಗದು ಅಲ್ಲವೇ? ನಾವು ಕೋಲಾರ, ಚಿಕ್ಕಬಳ್ಳಾಪುರಕ್ಕೆ ಅನ್ಯಾಯ ಮಾಡಿದ್ದೀವೆಂದು ಸುಳ್ಳು ಅರೋಪ ಮಾಡಿದ್ದಾರೆ. ನೀರಾವರಿ ಹೋರಾಟ ಮಾಡಿದ ಕುಟುಂಬದಲ್ಲಿ ನಾವು ಹುಟ್ಟಿದ್ದೇವೆ ಎಂಬುದನ್ನು ಮರೆಯಬೇಡಿ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ಎತ್ತಿನಹೊಳೆ ಯೊಜನೆಯ ಹೆಸರಲ್ಲಿ ಯಾರೆಲ್ಲ ಕಿಸೆ ತುಂಬಿಸಿಕೊಂಡಿದ್ದೀರಿ ಎಂದು ಅವರು ಸಿದ್ದರಾಮಯ್ಯರನ್ನು ಪ್ರಶ್ನಿಸಿದರು. ನನಗೆ ಸಿಕ್ಕಿದ್ದು ತಾತ್ಕಾಲಿಕ ಅಧಿಕಾರ. ಸಿದ್ದರಾಮಯ್ಯ ಖಜಾನೆ ಭರ್ತಿ ಮಾಡಿಹೋಗಿದ್ದಕ್ಕೆ ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಮನೆ ಕೊಡೋದಕ್ಕಾಗಿಲ್ಲ ಎತ್ತಿನಹೊಳೆ ಯೋಜನೆ ಹೆಸರಲ್ಲಿ ಯಾರ ಯಾರ ಜೇಬು ತುಂಬಿಸಿದ್ದೀರಿ ಸಿದ್ದರಾಮಯ್ಯನವರೇ? ಸಿದ್ದರಾಮಯ್ಯ ಐದು ವರ್ಷ ಆಡಳಿತ ಮಾಡಿದ್ರಲ್ಲ ಯಾಕೆ ಆಗಲಿಲ್ಲ. ಇದೇ ರಮೇಶ್ ಕುಮಾರ್ ಏನೆಲ್ಲ ಮಾತನಾಡಿದ್ರು ಸಭೆಯಲ್ಲಿ? ಇವರೆಲ್ಲ ಸತ್ಯ ಹರಿಶ್ಚಂದ್ರ ಮಕ್ಕಳು. ನಮ್ಮ ಪಕ್ಷದಿಂದ ಮಹಾನಾಯಕರ ಹಿಂಡೇ ಹೋಯಿತು. ಆದರೂ ನಾವು 45 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೆವು ಎಂದು ಅವರು ವ್ಯಾಖ್ಯಾನಿಸಿದರು.
ಸಿದ್ದರಾಮಯ್ಯ ಜೆಡಿಎಸ್ನಲ್ಲಿದ್ದಾಗ ಶೇ.20ರಷ್ಟು ವೋಟ್ ಶೇರ್ ಬಂದಿತ್ತು. ಈಗಲೂ ನಮ್ಮ ವೋಟ್ ಶೇರ್ ಶೇ.18ರಿಂದ 20ರಷ್ಟಿದೆ. ನಮ್ಮ ಪಕ್ಷದ ಶಕ್ತಿ ನಾಯಕರಲ್ಲ, ಕಾರ್ಯಕರ್ತರು. ನಾವು ಏಕಾಂಗಿಯಾಗಿ 38ರಿಂದ 40 ಸೀಟ್ ಗೆದ್ದಿದ್ದೇವೆ. 130 ಸೀಟ್ ಗೆಲ್ಲುವುದು ಅಸಾಧ್ಯವಾದದ್ದಲ್ಲ. ಯಾರೋ ನಾಲ್ಕು ಜನ ಹೋದರೆ ಗಾಬರಿಯಾಗಬೇಕಿಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಜಾರಿಗಾಗಿ ಮತ್ತೊಮ್ಮೆ ಪಾದಯಾತ್ರೆಗೆ ಬಾಗಲಕೋಟೆ ಸಜ್ಜು
ಉಪಚುನಾವಣೆಯಲ್ಲಿ ಜೆಡಿಎಸ್ನಿಂದ ಮುಸ್ಲಿಂ ಅಭ್ಯರ್ಥಿ ವಿಚಾರ; ಸಿದ್ದರಾಮಯ್ಯ, ಕುಮಾರಸ್ವಾಮಿ ವಾಕ್ಸಮರ