ಸದನದಲ್ಲಿ ಕೊಬ್ಬರಿಗಾಗಿ ಕಿತ್ತಾಟ: ಶಿವಲಿಂಗೇಗೌಡ ಕ್ಷಮೆಯಾಚನೆಗೆ ರೇವಣ್ಣ ಪಟ್ಟು. ಅಸಲಿಗೆ ಆಗಿದ್ದೇನು?

ಸದನದಲ್ಲಿ ಇಬ್ಬರು ನಾಯಕರುಗಳ ನಡುವೆ ಪರಸ್ಪರ ವಾಕ್ ಸಮರ ನಡೆದಿದೆ. ಈ ಹಿಂದೆ ಒಂದೇ ಪಕ್ಷದಲ್ಲಿದ್ದ ಇಬ್ಬರ ನಾಯಕರು ಸದನದಲ್ಲಿ ಜಿದ್ದಾಜಿದ್ದಿಗೆ ಬಿದ್ದಿದ್ದಾರೆ. ಇಬ್ಬರ ನಡುವಿನ ಈ ಕೊಬರಿ ಕಾಳಗ, ದೊಡ್ಡ ಕದನಕ್ಕೆ ಚಳಿಗಾಲದ ಅಧಿವೇಶನ ಸಾಕ್ಷಿಯಾಗಿದೆ. ಇದೀಗ ಶಿವಲಿಂಗೇಗೌಡ ಕ್ಷಮೆಯಾಚನೆಗೆ ರೇವಣ್ಣ ಪಟ್ಟು ಹಿಡಿದಿದ್ದಾರೆ. ಅಸಲಿಗೆ ಆಗಿದ್ದೇನು?

ಸದನದಲ್ಲಿ ಕೊಬ್ಬರಿಗಾಗಿ ಕಿತ್ತಾಟ: ಶಿವಲಿಂಗೇಗೌಡ ಕ್ಷಮೆಯಾಚನೆಗೆ ರೇವಣ್ಣ ಪಟ್ಟು. ಅಸಲಿಗೆ ಆಗಿದ್ದೇನು?
Follow us
Anil Kalkere
| Updated By: ರಮೇಶ್ ಬಿ. ಜವಳಗೇರಾ

Updated on: Dec 07, 2023 | 8:40 AM

ಬೆಳಗಾವಿ, (ಡಿಸೆಂಬರ್ 07): ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ(Belagavi Winter Session) ಕೊಬ್ಬರಿ ವಿಚಾರವಾಗಿ ಕಾಂಗ್ರೆಸ್​ ಶಾಸಕ ಶಿವಲಿಂಗೇಗೌ (Shivalinge gowda)ಹಾಗೂ ಜೆಡಿಎಸ್ ಶಾಸಕ ಹೆಚ್​ಡಿ ರೇವಣ್ಣ(HD Revanna) ನಡುವೆ ದೊಡ್ಡ ಕದನವೇ ನಡೆದಿದೆ. ಇದೀಗ ಇದು ವೈಯಕ್ತಿ ಕಿತ್ತಾಟಕ್ಕೆ ತಿರುಗಿದೆ. ಕಾಂಗ್ರೆಸ್​ ಶಾಸಕ ಶಿವಲಿಂಗೇಗೌ ಅವರಿಂದ ರೇವಣ್ಣ ನಿಂದನೆ ವಿಚಾರವಾಗಿ ಶಿವಲಿಂಗೇಗೌಡರ ಮಾತನ್ನು ತಡವಾಗಿ ಅರಿತು ಮಾಜಿ ಸಚಿವ ರೇವಣ್ಣ ಅವರು ಕ್ಷಮೆಗೆ ಕೋರುವಂತೆ ಪಟ್ಟು ಹಿಡಿದಿದ್ದಾರೆ. ಸದನದಲ್ಲಿ ಶಿವಲಿಂಗೇಗೌಡ ವಿರುದ್ಧ ಕ್ರಮಕ್ಕೆ ರೇವಣ್ಣ ಆಗ್ರಹಿಸಿ. ನಾನು 25 ವರ್ಷಗಳಿಂದ ವಿಧಾನಸಭೆಯ ಸದಸ್ಯನಾಗಿದ್ದೇನೆ, ಸಭಾಧ್ಯಕ್ಷರೇ ನನ್ನ ರಕ್ಷಣೆಗೆ ನೀವು ಬರಬೇಕು ಎಂದು ಹಕ್ಕುಚ್ಯುತಿ ನಿರ್ಣಯದ ಬಗ್ಗೆ ನಾನು ಮನವಿ ಕೊಟ್ಟಿದ್ದೇನೆ ಎಂದು ಹೇಳಿದರು. ಅಲ್ಲದೇ ಸದನದಲ್ಲಿ ಅವರಿಂದ ಕ್ಷಮೆ ಕೇಳಿಸುವಂತೆ ರೇವಣ್ಣ ಪಟ್ಟು ಹಿಡಿದ್ದಾರೆ.

ರೇವಣ್ಣ ಅವರು ಮಾತನಾಡುತ್ತಿದ್ದ ಸಂದರ್ಭದಲ್ಲಿ ಆಡಳಿತ ಪಕ್ಷದ ಮೊಗಸಾಲೆಯಲ್ಲಿ ಕಾಫಿ ಕುಡಿಯುತ್ತಿದ್ದ ಶಿವಲಿಂಗೇಗೌಡ ಅವರು, ರೇವಣ್ಣ ಮಾತನ್ನಾಡುತ್ತಿದಂತೆ ಸದನಕ್ಕೆ ಓಡಿ ಹೋದರು. ನಿನ್ನೆ ಶಿವಲಿಂಗೇಗೌಡ ಅವರು, ರೇವಣ್ಣ ಅವರನ್ನು ನೀಚಗೆಟ್ಟ , ಮಾನಗೆಟ್ಟ ಎಂದೆಲ್ಲ ನಿಂದಿಸಿದ್ದರು. ಇದನ್ನು ಅರಿತು ಹಕ್ಕು ಚ್ಯುತಿ ನೋಟಿಸ್ ತಗೊಳ್ಳುವಂತೆ ಸ್ಪೀಕರ್ ಗೆ ರೇವಣ್ಣ ಮನವಿ ಮಾಡಿದರು, ಆದರೆ ನೋಟಿಸ್ ತಗೊಳ್ಳಲು ನಿರಾಕರಣೆ ಮಾಡಿದ ಸ್ಪೀಕರ್ ಅವರು ಸದನವನ್ನು ನಾಳೆ ಬೆಳಗ್ಗೆ 11 ಗಂಟೆಗೆ ಮುಂದೂಡಿದರು.

ಇದನ್ನೂ ಓದಿ: ಸದನಲ್ಲಿ ಬಿಜೆಪಿಗೆ ಕೌಂಟರ್ ಕೊಡಲು ಸರ್ಕಾರ ಪ್ಲ್ಯಾನ್, ಸಿಎಲ್‌ಪಿ ಸಭೆಯಲ್ಲಿ ತಂತ್ರ ಹೆಣೆದ ಸಿದ್ದರಾಮಯ್ಯ

ಅಸಲಿಗೆ ಆಗಿದ್ದೇನು?

ಕೊಬ್ಬರಿ ಬೆಲೆ ಕುಸಿತ ಹಾಗೂ ಬೆಂಬಲ ಬೆಲೆ ಕುರಿತ ಚರ್ಚೆಯ ವಿಷಯ ಪ್ರಸ್ತಾಪ ಮಾಡುವ ವಿಚಾರವಾಗಿ ಸದನದಲ್ಲಿ ಶಿವಲಿಂಗೇಗೌಡ ಮತ್ತು ಎಚ್​ಡಿ ರೇವಣ್ಣ ನಡುವೆ ಮಾತಿನ ಜಟಾಪಟಿ ನಡೆದಿತ್ತು. ಶೂನ್ಯ ವೇಳೆಯಲ್ಲಿ ವಿಚಾರ ಪ್ರಸ್ತಾಪಕ್ಕೆ ಶಿವಲಿಂಗೇಗೌಡ ಅವರಿಗೆ ಅವಕಾಶ ನೀಡಿದರು, ಆದರೆ ಈ ವೇಳೆ ರೇವಣ್ಣ ಅವರು ತಮಗೆ ಮೊದಲು ಅವಕಾಶ ನೀಡಬೇಕು ಎಂದು ಮಧ್ಯ ಪ್ರವೇಶಿಸಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಶಿವಲಿಂಗೇಗೌಡ ಅವರು, ಕೊಬ್ಬರಿ ಬೆಲೆ ಕುರಿತು ಚರ್ಚೆ ಮಾಡಿ ರೈತರಿಗೆ ಅನುಕೂಲ ಆದರೆ ನನಗೆ ಹೆಸರು ಬರುತ್ತೆ ಅಂತ ರೇವಣ್ಣ ಅವರು ಹೊಟ್ಟೆಕಚ್ಚಿನಿಂದ ಅಡ್ಡಿ ಪಡಿಸುತ್ತಿದ್ದಾರೆ. ಅವರನ್ನು ಬಿಟ್ಟು ಬಂದೇ ಅಂತ ಈ ರೀತಿ ಮಾಡ್ತಿದ್ದಾರೆ ಎಂದು ಬೇಸರ ಹೊರ ಹಾಕಿದರು.

ವಾ.ಓ: ರೇವಣ್ಣ ಅವರು ಯೋಗ್ಯತೆ ತಕ್ಕಂತೆ ನಡೆದುಕೊಳ್ಳಬೇಕು, ನಿಮ್ಮದು ಮಾನಗೆಟ್ಟ ಬುದ್ಧಿ. ಅನಗತ್ಯವಾಗಿ ಗಲಾಟೆ ಮಾಡ್ತಿದ್ದಾರೆ. ಮಾನ-ಮಾರ್ಯದೆ ಇಲ್ಲದ ಕೆಲಸ ಮಾಡ್ತಿದ್ದಾರೆ. ನಾನು ಇಂತಹ ಮಾನಗೆಟ್ಟ ಬುದ್ಧಿ ಬಾಳೋದಿಲ್ಲ ಥೂ.. ನಿಮ್ಮನ್ನು ಬಿಟ್ಟು ಹೋಗಿದ್ದೀನಿ ಅನ್ನೋ ಒಂದೇ ಒಂದು ಕಾರಣಕ್ಕೆ ನಾನು ಪ್ರಶ್ನೆ ಮಾಡೋಕೆ ಬಿಡೋದಿಲ್ಲ ಎಂದರೇ ಹೇಗೆ? ಒಂದು ಪ್ರಶ್ನೆಗೆ ತಡೆದುಕೊಳ್ಳುವ ಯೋಗ್ಯತೆ ಇಲ್ಲ ಎಂದರೇ ಹೇಗೆ? ನಿಮಗೆ ಮಾನ ಮಾರ್ಯದೆ ಇಲ್ಲ, ಇಂತಹ ಕೆಲಸ ಮಾಡಬೇಡಿ. ಹಾಸನ ಜಿಲ್ಲೆಯನ್ನು ಇವರೇ ಗೊತ್ತಿಗೆ ತೆಗೆದುಕೊಂಡ ಹಾಗೇ ಮಾಡ್ತಿದ್ದಾರೆ, ಶಿವಲಿಂಗೇಗೌಡ ಅವರಿಗೆ ಹೆಸರು ಬರುತ್ತೆ ಅಂತ ಈಗ್ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ