ನಾನು ಯಾವುದಕ್ಕೂ ಅರ್ಜೆಂಟ್​ನಲ್ಲಿ ಇಲ್ಲ: ಸಿಎಂ ಸ್ಥಾನದ ಬಗ್ಗೆ ಮಾರ್ಮಿಕವಾಗಿ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್​​

| Updated By: ಗಂಗಾಧರ​ ಬ. ಸಾಬೋಜಿ

Updated on: Nov 04, 2023 | 8:54 PM

ನಾನು ಯಾವುದಕ್ಕೂ ಅರ್ಜೆಂಟ್​ನಲ್ಲಿ ಇಲ್ಲ. ಇವತ್ತಿನವರೆಗೂ ನಾನು ಹೈಕಮಾಂಡ್​ ನಾಯಕರಿಗೆ ಯಾವುದನ್ನೂ ಕೇಳಿಲ್ಲ. ನಮ್ಮ ಹೈಕಮಾಂಡ್​ ಏನು ತೀರ್ಮಾನ ಮಾಡುತ್ತೋ ಮಾಡಲಿ ಎಂದು ಸಿಎಂ ಸ್ಥಾನದ ಗೊಂದಲ ಬಗ್ಗೆ ಮಾರ್ಮಿಕವಾಗಿ ಡಿಸಿಎಂ ಡಿಕೆ ಶಿವಕುಮಾರ್​​ ಉತ್ತರಿಸಿದ್ದಾರೆ.

ಬೆಂಗಳೂರು, ನವೆಂಬರ್​​​​ 04: ನಾನು ಯಾವುದಕ್ಕೂ ಅರ್ಜೆಂಟ್​ನಲ್ಲಿ ಇಲ್ಲ. ಇವತ್ತಿನವರೆಗೂ ನಾನು ಹೈಕಮಾಂಡ್​ ನಾಯಕರಿಗೆ ಯಾವುದನ್ನೂ ಕೇಳಿಲ್ಲ. ನಮ್ಮ ಹೈಕಮಾಂಡ್​ ಏನು ತೀರ್ಮಾನ ಮಾಡುತ್ತೋ ಮಾಡಲಿ ಎಂದು ಸಿಎಂ ಸ್ಥಾನದ ಗೊಂದಲ ಬಗ್ಗೆ ಮಾರ್ಮಿಕವಾಗಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​​ ಉತ್ತರಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಕೂಡ ನಮ್ಮ ಶಾಸಕರಿಗೆ ಏನು ಹೇಳಬೇಕೋ ಅದನ್ನು ಹೇಳಿದ್ದೇವೆ. ಕಾಂಗ್ರೆಸ್​ ಶಾಸಕರು, ಸಚಿವರಿಗೆ ಬುದ್ಧಿವಾದ ಹೇಳಿದ್ದೇವೆ ಎಂದರು.

ಜನರ ಮೇಲೆ ನಮಗೆ ವಿಶ್ವಾಸವಿತ್ತು, ನಮ್ಮನ್ನು ನಂಬಿ ಆಶೀರ್ವದಿಸಿದ್ದಾರೆ. ಜನರು ಆಶೀರ್ವಾದ ಮಾಡಿದ ಬಳಿಕ ಹೈಕಮಾಂಡ್​ ಬಳಿ ಹೋಗಿದ್ವಿ. ಆ ಬುತ್ತಿಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ವಿ. ಒನ್​ಲೈನ್ ರೆಸಲ್ಯೂಶನ್ ಮಾಡಿದರು. ಇದಕ್ಕೆ ನಾನು ಓಕೆ ಅಂದು ಕೇಳ್ತೀವಿ ಅಂತಾ ಹೇಳಿದ್ವಿ, ಅದು ನಮ್ಮ ಬದ್ಧತೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೊದಲು ಎನ್‌ಡಿಎನಿಂದ ಹೊರ ಬಂದು ಮಾತನಾಡಲಿ: ಹೆಚ್​ಡಿ ಕುಮಾರಸ್ವಾಮಿಗೆ ಟಾಂಗ್​ ಕೊಟ್ಟ ಡಿಕೆ ಶಿವಕುಮಾರ್‌

ಸಿಎಂ ಏನು ಹೇಳಿದ್ದಾರೆಂದು ಮಾಧ್ಯಮಗಳಲ್ಲಿ ಬೇರೆ ಬೇರೆ ತರ ಬಂದಿದೆ. ನಾನು ಅದನ್ನು ಚೆಕ್ ಮಾಡ್ತೀನಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಲೀಡರ್ ಅಂತಾ ನಾವು ಒಪ್ಪಿಯಾಗಿದೆ. ಸಿಎಂ ಲೀಡರ್​ಶಿಪ್​ನಲ್ಲಿ ಕೆಲಸ ಮಾಡ್ತೀನಿ, ಮುಂದುವರಿಯುತ್ತೇವೆ. ಪಕ್ಷ ಏನು ಹೇಳುತ್ತೋ ಅದನ್ನು ಕೇಳಿ ನಾವು ಮುಂದುವರಿಯುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್ ಪಾರ್ಟಿ ಬಗ್ಗೆ ಏಕೆ ಮಾತನಾಡುತ್ತೀರಾ?

ಡಿಕೆ ಶಿವಕುಮಾರ್​ ಸಿಎಂ ಆದರೆ JDS ಶಾಸಕರ ಬೆಂಬಲವಿದೆ ಎಂಬ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ದಯವಿಟ್ಟು ನಾನು ಹೆಚ್‌.ಡಿ.ಕುಮಾರಸ್ವಾಮಿಗೆ ಮನವಿ ಮಾಡುತ್ತೇನೆ. 136 ಶಾಸಕರಿದ್ದೇವೆ, ಸಾಕಷ್ಟು ಬೆಂಬಲ ಇದೆ, ನಿಮ್ಮ ಪಕ್ಷ NDAನಲ್ಲಿದೆ. ಎನ್‌ಡಿಎನಲ್ಲಿದ್ದು ಕಾಂಗ್ರೆಸ್ ಪಾರ್ಟಿ ಬಗ್ಗೆ ಏಕೆ ಮಾತನಾಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್​ ನಾಳೆ ಸಿಎಂ ಆಗೋದಾದ್ರೆ ಜೆಡಿಎಸ್​ನ 19 ಶಾಸಕರ ಬೆಂಬಲ: ಹೆಚ್​ಡಿ ಕುಮಾರಸ್ವಾಮಿ ಓಪನ್ ಆಫರ್​

ಹೆಚ್‌.ಡಿ.ಕುಮಾರಸ್ವಾಮಿ ಪ್ರೀತಿ ಏನು ಅಂತಾ ನನಗೆ ಚೆನ್ನಾಗಿ ಗೊತ್ತಿದೆ. ದೆಹಲಿಯಲ್ಲಿ ಏನು ನಡೆಯಿತು, ಹೆಚ್‌ಡಿ ಕುಮಾರಸ್ವಾಮಿ ಯಾರನ್ನು ಭೇಟಿಯಾಗಿದ್ದರು. ಏನೆಲ್ಲಾ ದೊಡ್ಡ ಪ್ಲ್ಯಾನ್‌ಗಳಾಗಿವೆ ಎಂದು ಜೊತೆಯಲ್ಲಿದ್ದವರೇ ಹೇಳಿದ್ದಾರೆ. ಅದರ ಬಗ್ಗೆ ಎಲ್ಲಾ ಬಿಚ್ಚಿ ಈಗ ಚರ್ಚೆ ಮಾಡುವುದು ಬೇಡ. ಅಷ್ಟು ಪ್ರೀತಿ, ಕರುಣೆ ಇದ್ದರೆ ಅವರು ಏನೇನು ಮಾತನಾಡಿದ್ದಾರೆಂದು ರಿಕಾಲ್‌ ಮಾಡಿಕೊಂಡು ಮಾತಾಡಲಿ ಎಂದಿದ್ದಾರೆ.

ಮೈತ್ರಿ ಸರ್ಕಾರ ಹೋದ ಮೇಲೆ ಏನೆಲ್ಲಾ ಘಟನೆಗಳು ಆಗಿದ್ದಾವೆ. ಏನೆಲ್ಲಾ ಚರ್ಚೆ ಆಗಿದೆ ಅನ್ನೋ ಬಗ್ಗೆ ಅವರ ಆತ್ಮಸಾಕ್ಷಿಗೆ ಪ್ರಶ್ನಿಸಿಕೊಳ್ಳಲಿ. ಆ ನಂತರ ಸಾರ್ವಜನಿಕವಾಗಿ ಮಾತನಾಡಲಿ ಎಂದು ಹೇಳಿದ್ದಾರೆ.

ಶಾಸಕರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಫುಲ್ ಗರಂ

ಯಾರಾದ್ರೂ ಶಾಸಕರು ನನ್ನ ಪರ ಮಾತಾಡಿದ್ರೆ ನೋಟಿಸ್ ಜಾರಿ ಮಾಡುವೆ ಎಂದು ತಮ್ಮ ಪರ ಬ್ಯಾಟಿಂಗ್‌ ಬೀಸಿದ ಶಾಸಕರ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಫುಲ್ ಗರಂ ಆಗಿದ್ದಾರೆ. ಪಕ್ಷದಲ್ಲಿ ಶಿಸ್ತು ಇರಬೇಕು, ನನಗೆ ಯಾರ ಶಾಸಕರ ಬೆಂಬಲವೂ ಬೇಡ. ನನಗೆ ಯಾರ ಶಿಫಾರಸು ಕೂಡ ಬೇಡ, ಯಾರ ಶಿಫಾರಸು ನಾನು ಬಯಸಲ್ಲ. ರಾಮನಗರ ಶಾಸಕ ಇಕ್ಬಾಲ್ ಹುಸೇನ್‌ಗೆ ನೋಟಿಸ್ ಕೊಡಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.