ಭ್ರಷ್ಟಾಚಾರವನ್ನು ಬೆಂಬಲಿಸಬೇಡಿ: ಬಂಗಾಳದ ಸಚಿವರ ಬಂಧನ ನಂತರ ಮೌನ ಮುರಿದ ಮಮತಾ ಬ್ಯಾನರ್ಜಿ

| Updated By: ರಶ್ಮಿ ಕಲ್ಲಕಟ್ಟ

Updated on: Jul 25, 2022 | 6:48 PM

ನಾನು ಭ್ರಷ್ಟಾಚಾರ ಅಥವಾ ಯಾವುದೇ ತಪ್ಪು ಕೃತ್ಯಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳುವ ಮೂಲಕ ಮಮತಾ ಪಾರ್ಥ ಚಟರ್ಜಿ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದಾರೆ.

ಭ್ರಷ್ಟಾಚಾರವನ್ನು ಬೆಂಬಲಿಸಬೇಡಿ: ಬಂಗಾಳದ ಸಚಿವರ ಬಂಧನ ನಂತರ ಮೌನ ಮುರಿದ ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Follow us on

ದೆಹಲಿ: ಭ್ರಷ್ಟಾಚಾರದ ಆರೋಪದಲ್ಲಿ ಪಶ್ಚಿಮ ಬಂಗಾಳದ ಸಚಿವ ಪಾರ್ಥ ಚಟರ್ಜಿ (Partha Chatterjee) ಬಂಧನಕ್ಕೊಳಗಾಗಿ ಎರಡು ದಿನಗಳ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಮೌನ ಮುರಿದಿದ್ದಾರೆ. ನಾನು ಭ್ರಷ್ಟಾಚಾರ ಅಥವಾ ಯಾವುದೇ ತಪ್ಪು ಕೃತ್ಯಗಳನ್ನು ಬೆಂಬಲಿಸುವುದಿಲ್ಲ ಎಂದು ಹೇಳುವ ಮೂಲಕ ಮಮತಾ ಪಾರ್ಥ ಚಟರ್ಜಿ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದಾರೆ. ಒಂದು ಕಾಲದಲ್ಲಿ ಚಟರ್ಜಿಯ ಆಪ್ತರಾಗಿದ್ದರು ಮಮತಾ. ಶಿಕ್ಷಕರ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಸಿದ ಪ್ರಕರಣದಲ್ಲಿ ಬಂಗಾಳದ ಕೈಗಾರಿಕಾ ಸಚಿವ ಪಾರ್ಥ ಚಟರ್ಜಿ ಅವನ್ನು ಶನಿವಾರ ಬಂಧಿಸಲಾಗಿತ್ತು. ಪಾರ್ಥ ಚಟರ್ಜಿ  ಅವರ ಆಪ್ತೆ ಅರ್ಪಿತಾ  ಮುಖರ್ಜಿ ಅವರ ಮನೆಯಲ್ಲಿ ಸರಿ ಸುಮಾರು 20 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.ಮಧ್ಯರಾತ್ರಿ ಸಚಿವರನ್ನು ಬಂಧಿಸಲಾಗಿತ್ತು. ಸಚಿವರು ಅರ್ಪಿತಾ ಮುಖರ್ಜಿ  ಜತೆ ಸಂಪರ್ಕದಲ್ಲಿದ್ದು, ಆ ಹಣ ಹಗರಣದ್ದು ಎಂದು ಹೇಳಲಾಗುತ್ತಿದೆ.

ಪಾರ್ಥ ಚಟರ್ಜಿ ಬಂಧನ ಬಗ್ಗೆ ಮಮತಾ ಬ್ಯಾನರ್ಜಿ ಇಲ್ಲಿಯವರೆಗೆ ಏನೂ ಮಾತನಾಡಿಲ್ಲ. 70 ಹರೆಯದ ಚಟರ್ಜಿ  ಬಂಧನಕ್ಕೊಳಗಾದ ನಂತರ  ಮೂರು ಬಾರಿ ಮುಖ್ಯಮಂತ್ರಿಗೆ ಫೋನ್ ಮಾಡಿದ್ದರೂ  ಅವರು ಕರೆ ಸ್ವೀಕರಿಸಿಲ್ಲ

Published On - 5:54 pm, Mon, 25 July 22