Maharashtra Governor: ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆ ಪ್ರಧಾನಿ ಮೋದಿಗೆ ತಿಳಿಸಿದ್ದೇನೆ: ಭಗತ್ ಸಿಂಗ್ ಕೊಶ್ಯಾರಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 23, 2023 | 4:56 PM

ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾನು ತನ್ನ ಎಲ್ಲ ರಾಜಕೀಯ ಚಟುವಟಿಗಳಿಗೆ ರಾಜೀನಾಮೆ ನೀಡಲು ಬಯಸುತ್ತಿದ್ದೇನೆ ಎಂದು ತಿಳಿಸಿದ್ದಾರೆ ಎಂದಿದ್ದಾರೆ.

Maharashtra Governor: ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡುವ ಬಗ್ಗೆ ಪ್ರಧಾನಿ ಮೋದಿಗೆ ತಿಳಿಸಿದ್ದೇನೆ: ಭಗತ್ ಸಿಂಗ್ ಕೊಶ್ಯಾರಿ
PM Modi And Bhagat Singh Koshyari
Follow us on

ಮುಂಬೈ: ಮಹಾರಾಷ್ಟ್ರದ ರಾಜ್ಯಪಾಲ (Maharashtra Governor) ಭಗತ್ ಸಿಂಗ್ ಕೊಶ್ಯಾರಿ (Bhagat Singh Koshyari) ಅವರು ಕಳೆದ ದಿನಗಳಿಂದ ಪ್ರತಿಪಕ್ಷಗಳೊಂದಿಗೆ ತಾವು ನೀಡಿದ ವಿವಾದಿತ ಹೇಳಿಕೆಯ ಬಗ್ಗೆ ಗುದ್ದಾಟದ ನಂತರ ಕೊಶ್ಯಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಾನು ತನ್ನ ಎಲ್ಲ ರಾಜಕೀಯ ಚಟುವಟಿಗಳಿಗೆ ರಾಜೀನಾಮೆ ನೀಡಲು ಬಯಸುತ್ತಿದ್ದೇನೆ ಎಂದು ತಿಳಿಸಿದ್ದಾರೆ ಎಂದಿದ್ದಾರೆ. ತಮ್ಮ ಜೀವನವನ್ನು ಓದುವುದು, ಬರವಣಿಗೆ ಮತ್ತು ಇತರ ವಿರಾಮ ಚಟುವಟಿಕೆಗಳಲ್ಲಿ ಕಳೆಯುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ರಾಜಭವನ ಹೊರಡಿಸಿದ ಹೇಳಿಕೆಯನ್ನು ತಿಳಿಸಿದ್ದಾರೆ.

ಸಂತರು, ಸಮಾಜ ಸುಧಾರಕರು ಮತ್ತು ಧೀರ ಹೋರಾಟಗಾರರ ನಾಡು ಮಹಾರಾಷ್ಟ್ರದಂತಹ ಮಹಾನ್ ರಾಜ್ಯದ ರಾಜ್ಯ ಸೇವಕ ಸೇವೆ ಸಲ್ಲಿಸುವುದು ನನಗೆ ಸಂಪೂರ್ಣ ಗೌರವ ಮತ್ತು ಸಂತೋಷ ಇದೆ ಎಂದು ಕೋಶ್ಯಾರಿ ಮಾಧ್ಯಮಗಳಿಗೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಪ್ರಧಾನಿ ಮೋದಿಯವರು ಮುಂಬೈಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಅಚ್ಚರಿಯ ನಡೆ ನಡೆದಿದೆ. ಮುಂಬೈ ನಗರಪಾಲಿಕೆ ಚುನಾವಣೆಗೂ ಮುನ್ನ ರಾಜ್ಯಪಾಲರು ಹುದ್ದೆಯಿಂದ ಕೆಳಗಿಳಿಯುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. 2019ರ ರಾಜ್ಯ ಚುನಾವಣೆಯ ನಂತರ ರಾಜಭವನದಲ್ಲಿ ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರ ಪ್ರಮಾಣ ವಚನ ಸಮಾರಂಭವನ್ನು ಆಯೋಜಿಸುವ ನಿರ್ಧಾರದಿಂದ ಕೋಶಿಯಾರಿ ಹಲವಾರು ವಿವಾದಗಳಿಗೆ ಸಿಲುಕಿದರು. ಸಾವಿತ್ರಿಬಾಯಿ ಫುಲೆ ಮತ್ತು ಜ್ಯೋತಿಬಾ ಫುಲೆ ವಿರುದ್ಧದ ಅವರ ಹೇಳಿಕೆಗಳು ಮತ್ತು ಎಂವಿಎ ಸರ್ಕಾರವು ರಾಜ್ಯ ಶಾಸಕಾಂಗಕ್ಕೆ ನಾಮನಿರ್ದೇಶನ ಮಾಡಿದ 12 ಎಂಎಲ್‌ಸಿಗಳ ಪಟ್ಟಿಯನ್ನು ಸ್ವೀಕರಿಸಲು ನಿರಾಕರಿಸಿದ ವಿವಾದಗಳು ನಡೆದಿತ್ತು.

ಇದನ್ನು ಓದಿ:ಮಹಾರಾಷ್ಟ್ರದ ರಾಜ್ಯಪಾಲರು ಕೇಂದ್ರ ಸರ್ಕಾರ ಅಮೆಜಾನ್ ಮೂಲಕ ಕಳುಹಿಸಿದ ಪಾರ್ಸೆಲ್: ಉದ್ಧವ್ ಠಾಕ್ರೆ

ಛತ್ರಪತಿ ಶಿವಾಜಿ ಮಹಾರಾಜರು ಹಳೆಯ ಕಾಲದ ಐಕಾನ್ ಎಂಬ ಅವರ ಹೇಳಿಕೆಯು ರಾಜ್ಯಾದ್ಯಂತ ಪ್ರತಿಭಟನೆಗೆ ಕಾರಣವಾಗಿತ್ತು. ಈ ಬಗ್ಗೆ ಉದ್ಧವ್ ಠಾಕ್ರೆ ಬಣ ಅವರು ಮಹಾರಾಷ್ಟ್ರದ ಐಕಾನ್‌ಗಳನ್ನು ಅವಮಾನಿಸಿದ್ದಾರೆ ಮತ್ತು “ಮರಾಠಿ ಮಾನೂಸ್” ವಿರುದ್ಧವಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಅವರನ್ನು “ಪಕ್ಷಪಾತಿ” ಎಂದು ಬಿಂಬಿಸಿ, ಪ್ರತಿಪಕ್ಷಗಳು ಕಳೆದ ತಿಂಗಳು ಕೋಶ್ಯಾರಿ ವಿರುದ್ಧ ಪ್ರತಿಭಟನೆಯನ್ನು ನಡೆಸಿತ್ತು, ಅವರನ್ನು ರಾಜ್ಯಪಾಲ ಹುದ್ದೆಯಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದರು. ಇದೀಗ ಇಂತಹ ಹೇಳಿಕೆಯನ್ನು ಸ್ವತಃ ರಾಜ್ಯಪಾಲರೇ ನೀಡಿರುವುದು ಇನ್ನೂ ಆಶ್ಚರ್ಯವನ್ನು ಉಂಟು ಮಾಡಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:51 pm, Mon, 23 January 23