ಮಂಡ್ಯ: ಜೆಡಿಎಸ್ ಭದ್ರ ಕೋಟೆ ಎನಿಸಿಕಕೊಂಡಿರುವ ಸಕ್ಕರೆ ನಾಡು ಮಂಡ್ಯ(Mandya) ಜಿಲ್ಲೆಯಲ್ಲಿ ಈ ಭಾರಿಯ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಕಮಲ ಅರಳಿಸಬೇಕೆಂದು ಬಿಜೆಪಿ(BJP) ಸಾಕಷ್ಟು ಸರ್ಕಸ್ ಮಾಡುತ್ತಿದೆ. ಈ ನಿಟ್ಟಿನಲ್ಲಿ ಬಿಜೆಪಿ ಮಂಡ್ಯದಲ್ಲಿ ಇಂದು(ಅ.01) ಹಿಂದೂಳಿದ ವರ್ಗಗಳ ಜಾಗೃತಿ ಸಮಾವೇಶ ಆಯೋಜಿಸಿದ್ದು, ಮಂಡ್ಯದಲ್ಲಿ ಗೆದ್ದರೆ ಇಂಡಿಯಾ ಗೆದ್ದರಂತೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ಮಂಡ್ಯದ ಖಾಸಗಿ ಸಮುದಾಯ ಭವನದಲ್ಲಿ ಸಮಾವೇಶದಲ್ಲಿ ಮಾತನಾಡಿದ ಕ್ರೀಡಾ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ, ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ನಾಲ್ಕು ಸ್ಥಾನ ಗೆದ್ದರೆ ಇಂಡಿಯಾ ಗೆದ್ದಂತೆ. ಮಂಡ್ಯಕ್ಕೆ ಪ್ರಧಾನಿ ಮೋದಿ ಕರೆಸಿ ಶಕ್ತಿ ತುಂಬುವ ಕೆಲಸ ಮಾಡ್ತೇನೆ. ಲಕ್ಷಾಂತರ ಜನ ಸೇರಿಸಿ ಬೃಹತ್ ಕಾರ್ಯಕ್ರಮ ಮಾಡುತ್ತೇನೆ ಎಂದರು.
ಇದನ್ನೂ ಓದಿ: ತೋಡೋ ಪಿತಾಮಹನ ಮರಿಮಗನಿಂದ ಜೋಡಿಸಲು ಸಾಧ್ಯವೇ ? ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ಪಂಚ್
ಕೆ.ಆರ್.ಪೇಟೆ ಶಾಸಕನಾಗಲು ನೀವೆಲ್ಲರೂ ಆಶೀರ್ವಾದ ಮಾಡಿದ್ದೀರಿ. ಆ ಋಣ ತೀರಿಸಲು ಎಲ್ಲಾ ಜಾತಿಯವರಿಗೂ 20ಕ್ಕೂ ಹೆಚ್ಚು ಸಮುದಾಯ ಭವನ ನಿರ್ಮಿಸಲು ಮುಂದಾಗಿದ್ದೇನೆ. ಕೆ.ಆರ್.ಪೇಟೆಯಿಂದ ಹೋಗಿ ಶಿವಮೊಗ್ಗ ಉಸ್ತುವಾರಿ ಸಚಿವನಾಗಿದ್ದೇನೆ. ಹಾಗಾಗಿ ಮಂಡ್ಯ ಜಿಲ್ಲೆಯಲ್ಲಿ ಕೆಲಸ ಕೊರತೆ ಇದೆ ಎಂದು ಹೇಳಿದರು.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ಅ.14ರಂದು ಕುಂಭಮೇಳ ನಡೆಯಲಿದ್ದು, ಇದಕ್ಕೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಬರಲಿದ್ದಾರೆ. 7 ತಾಲೂಕಿನಿಂದ ಹೆಚ್ಚಿನ ಜನರು ಬನ್ನಿ. ಕುಂಭಮೇಳದಲ್ಲಿ ಸ್ಥಾನ ಮಾಡಿದ್ರೆ, ಹೊಸ ಜನ್ಮ ಪಡೆದಂತೆ ಎಂದು ಕರೆ ಕೊಟ್ಟರು. ಎಂದು ಸ್ಪಷ್ಟಪಡಿಸಿದರು.
ನಾನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ನನ್ನ ತೆಗೆದುಕೊಂಡು ಹೋಗಿ ಶಿವಮೊಗ್ಗಕ್ಕೆ ಕಟ್ಟಿಹಾಕಿದ್ದಾರೆ. ದೊಡ್ಡ ದೊಡ್ಡ ಹುಲಿ ಇದ್ದಾವೆ. ನಾನು ಚಿಕ್ಕವನಾಗಿ ಅಲ್ಲಿ ಕೆಲಸ ಮಾಡ್ತಿದ್ದೇನೆ. ಕೆ.ಆರ್.ಪೇಟೆಯಿಂದ ಹೋಗಿ ಶಿವಮೊಗ್ಗ ಉಸ್ತುವಾರಿ ಸಚಿವನಾಗಿದ್ದೇನೆ. ಅವರಿಗೆ ಸಾಷ್ಟಾಂಗ ನಮಸ್ಕಾರ ಹೇಳ್ತೇನೆ. ಶಿವಮೊಗ್ಗದಲ್ಲಿ ನಾನು ಮಾಡುವಂತ ಕೆಲಸ ಏನು ಇಲ್ಲ. ಎಲ್ಲವನ್ನು ಬುಗರಿ ತಿರಿಗಿಸಿದ ಹಾಗೆ ಈಶ್ವರಪ್ಪ ಮಾಡ್ತಿದ್ದಾರೆ ಎಂದು ತಿಳಿಸಿದರು.
ನಾರಾಯಣ್ ಗೌಡ ಹೋಗೋದು ಬರಿ ಉದ್ಘಾಟನೆ ಮಾಡೋದು. ಸುಮ್ಮನೆ ಕುರುವುದು ಊಟ ಮಾಡಿ ಬರುವುದು ಅಷ್ಟೇ. ಎಲ್ಲವನ್ನೂ ಈಶ್ವರಪ್ಪ ಅವರೇ ಮಾಡ್ತಿದ್ದಾರೆ. ಆದ್ರೆ, ಮಂಡ್ಯದಲ್ಲಿ ಕೆಲಸ ಕೊರತೆ ಇದೆ. ಎಲ್ಲವನ್ನೂ ಮಾಡಬೇಕು, ಸಮುದಾಯ ಭವನ ಕೊಡಬೇಕು ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:31 pm, Sat, 1 October 22