ಬೆಂಗಳೂರು, ಸೆ.19: ಭಾರತದ ನೂತನ ಸಂಸತ್ನಲ್ಲಿ ಇಂದು(ಸೆ.19) ಮೊದಲ ಕಲಾಪ ನಡೆದಿದ್ದು, ಮಹಿಳಾ ಮೀಸಲಾತಿ ಮಸೂದೆ ಮಂಡನೆ ಆಗಿದೆ. ಈ ಕುರಿತು ‘ಮೂರು ದಶಕಗಳಿಂದ ಮಹಿಳಾ ಮೀಸಲಾತಿ ಮಸೂದೆ ಮಂಡನೆ ಆಗಲಿ ಎಂದು ಕಾಯುತ್ತಿದ್ದೇವೂ ಎಂದು ಮಾಜಿ ಸಚಿವೆ ಜಯಮಾಲಾ(Jayamala)ಹೇಳಿದ್ದಾರೆ. ಇಂದಿರಾ ಗಾಂಧಿ ಅವರು ರಾಷ್ಟ್ರವನ್ನು ಆಳಿದ್ದಾರೆ. ಅವರ ಹಾಗೆಯೇ ಮಹಿಳೆಯರಿಗೆ ಅವಕಾಶ ಸಿಗಬೇಕು. ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ನಮಗೆ ಖುಷಿಯಾಗುತ್ತಿದೆ ಎಂದರು.
ಹೌದು, ಇದು ಸೋನಿಯಾ ಹಾಗೂ ರಾಜೀವ್ ಗಾಂಧೀಜಿ ಅವರ ಫಲ. ಇದು ಕರ್ನಾಟಕದ 224 ಕ್ಷೇತ್ರಗಳಲ್ಲಿ ಒಬ್ಬರಿಗೋ, ಇಬ್ಬರಿಗೂ ಸಿಗುತ್ತದೆ. ಟಿಕೆಟ್ ಪಡೆಯಲು ಸಾಕಷ್ಟು ಕಷ್ಟ ಪಡುತ್ತಾಳೆ. ಆ ಹೆಣ್ಣು ಮಕ್ಕಳನ್ನು ಸೋಲಿಸುವ ಪ್ರಯತ್ನ ಕೂಡ ಮಾಡುತ್ತಾರೆ. ಯಾವ ಕೆಲಸ ಕೊಟ್ಟರು ಮಾಡಿ ತೋರಿಸುತ್ತಿದ್ದಾಳೆ. ನಾಳೆ ಪಂಚಮಿ ದಿನ ಇದ್ದು ಒಳ್ಳೆಯದಾಗಲಿ, ಪುರುಷ ಮನಸ್ಸು ಮೀಸಲಾತಿ ಕೊಡಲು ಇಷ್ಟಪಡುತ್ತಿರಲಿಲ್ಲ. ತಂದೆ- ಮಕ್ಕಳಲ್ಲೂ ಸಹ ಅಧಿಕಾರಕ್ಕೆ ಬಂದಾಗ ಮಗಳಿಗೆ ಅವಕಾಶ ಕೊಡುತ್ತಿರಲಿಲ್ಲ.
ಇದನ್ನೂ ಓದಿ:ಮಹಿಳಾ ಮೀಸಲಾತಿ ಮಸೂದೆ ಅಂಗೀಕಾರಕ್ಕೆ ಬೇಷರತ್ ಬೆಂಬಲ ನೀಡಿದ ರಾಹುಲ್ ಗಾಂಧಿ
ಇನ್ನು ಈ ಕುರಿತು ಬಿಜೆಪಿ- ಕಾಂಗ್ರೆಸ್ ಎಂದು ಬೊಟ್ಟು ಮಾಡಲ್ಲ. ಕಾಂಗ್ರೆಸ್ ಮಾಡಲು ಹೊರಟಾಗ, ಬಿಜೆಪಿ ನಿಲ್ಲಿಸಿತ್ತು. ಅವರು ಮಾಡಿದ ತಪ್ಪನ್ನು ಸರಿ ಪಡಿಸಿಕೊಳ್ಳಲಿ. ಅಂದು ಯಾರು ವಿರೋಧಿಸದರೊ, ಇಂದು ಅವರೇ ಮಂಡನೆ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವೆ ಜಯಮಾಲ ಹೇಳಿದರು.
ಮಹಿಳಾ ಮೀಸಲಾತಿ ಮಸೂದೆ ಮಂಡನೆ ವಿಚಾರ ಕುರಿತು ‘ಮಹಿಳೆಯರ ರಾಜಕೀಯ ಭವಿಷ್ಯ ನಿರ್ಮಾಣ ಮಾಡುವ ವಿಧೇಯಕ ಇದಾಗಿದೆ. ಕೇಂದ್ರ ಸರ್ಕಾರ ಮಂಡನೆ ಮಾಡುತ್ತಿರುವುದನ್ನು ನಾವು ಸ್ವಾಗತ ಮಾಡುತ್ತೇನೆ ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದರು. ಮಹಿಳಾ ಮೀಸಲಾತಿ ಬಗ್ಗೆ ದೇಶಾದ್ಯಂತ ಸಾಕಷ್ಟು ಜನ ಮುಖಂಡರು ಒತ್ತಡ ಹಾಕುತ್ತಿದ್ದರು. ರಾಜೀವ ಗಾಂಧಿ ಅವರು ಮಹಿಳಾ ಮೀಸಲಾತಿ ಪರವಾಗಿ ಇದ್ದವರು. ಕಾಂಗ್ರೆಸ್ನವರಿಗೆ ಬಹಳ ಸಂತೋಷವಾಗಿದೆ ಎಂದರು.
ಇದನ್ನೂ ಓದಿ:ಮಹಿಳಾ ಮೀಸಲಾತಿ ಮಸೂದೆ ಮಂಡನೆಗೆ ಕೇಂದ್ರ ಸಂಪುಟ ಅಸ್ತು, ಐತಿಹಾಸಿಕ ನಿರ್ಣಯ ಕೈಗೊಂಡ ಮೋದಿ ಸರ್ಕಾರ
ಇನ್ನು ನಾನು ಕ್ರೆಡಿಟ್ ಬಗ್ಗೆ ಮಾತಾಡಲ್ಲ. ಆದರೆ, ಚುನಾವಣೆ ಕ್ರೆಡಿಟ್ಗಾಗಿ ಅವರು ಮಾಡಿದ್ರೆ, ನಾವು ಹಿಂದೇಯೇ ಮಾಡಿದ್ದೇವೆ. ದೇವೇಗೌಡರ ಕಾಲದಲ್ಲಿ ಆಯಿತು. ಸಿಪಿಎಂ ನಾಯಕಿಯೊಬ್ಬರು ಮೂವ್ ಮಾಡಿದ್ರು, ಹಾಗಾಗಿ ಇದಕ್ಕಾಗಿ ಹೋರಾಟ, ಪ್ರಯತ್ನ ಮಾಡಿದವರಿಗೆ ಕ್ರೆಡಿಟ್ ಸಿಗಬೇಕು. ನಾವು ಮಾಡಿದನ್ನು ಇವರು ಮುಂದುವರೆಸಿಕೊಂಡು ಬಂದಿದ್ದಾರೆ. ಇವರು ಕಾಂಗ್ರೆಸ್ ನವರು ಮಾಡಿದನ್ನು ಟೀಕೆ, ಗದ್ದಲ ಮಾಡುತ್ತಾರೆ. ಅಧಿಕಾರ ಬಂದ ಮೇಲೆ ಈ ಸರ್ಕಾರ ಅವುಗಳನ್ನು ಒಪ್ಪಿಕೊಳ್ಳುತ್ತಾ ಹೋಗುತ್ತದೆ.
ಇನ್ನು ಇದನ್ನು ಲೋಕಸಭೆ ಚುನಾವಣೆಗೆ ಅಳವಡಿಸಿದ್ರೆ, ಒಳ್ಳೆಯದಾಗುತ್ತದೆ. ಮಹಿಳೆಯರಿಗೆ ಹೆಚ್ಚಿನ ಅವಕಾಶ ಸಿಗುತ್ತದೆ. ಶಾಸಕರು, ಸಂಸದರಾಗಲು ಸಾಧ್ಯ. ಪರಿಷತ್ನಲ್ಲೂ ಮುಂದೆ ಅವಕಾಶ ಸಿಗಲಿದೆ ಎಂದು ಮಾಜಿ ಸಚಿವೆ ಉಮಾಶ್ರಿ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಜೊತೆಗೆ ಇದೇ ವೇಳೆ ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ‘ಕೆ.ಎನ್ ರಾಜಣ್ಣ ಅವರು ಅವರ ಅಭಿಪ್ರಾಯ ಹೇಳಿದ್ದಾರೆ. ಆದರೆ, ತೀರ್ಮಾನ ಹೈಕಮಾಂಡ್ ಮಾಡುತ್ತಾರೆ. ಈ ಹಿಂದೆ ಕಾರ್ಯಾಧ್ಯಕ್ಷರನ್ನ ಮಾಡಿದ್ರು, ಹಾಗಾಗಿ ಹೇಳಿರಬಹುದು. ಮಹಿಳೆಯರಿಗೆ ಕಾರ್ಯಾಧ್ಯಕ್ಷ, ಡಿಸಿಎಂ ಹುದ್ದೆ ಕೊಡಲಿಬಿಡಿ ಎಲ್ಲರಿಗೂ ಅವಕಾಶ ಸಿಗಲಿ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:30 pm, Tue, 19 September 23