ಗದಗ: ನಾನು ಸಿಎಂ ಆಗಿದ್ದಾಗ ಜಾತಿಗಣತಿ ವರದಿ ಪ್ರಸ್ತಾವನೆ ಮಾಡಿಲ್ಲ. ಜಾತಿಗಣತಿ ವರದಿ ಬಿಡುಗಡೆ ಮಾಡುವ ಬಗ್ಗೆ ನನಗೆ ಹೇಳಿಲ್ಲ. ನನಗೆ ಪ್ರಸ್ತಾವನೆ ಬಂದಿಲ್ಲ ಅಂದ್ರೆ ಹೇಗೆ ಬಿಡುಗಡೆ ಮಾಡಲಿ. ಸಿದ್ದರಾಮಯ್ಯ ಸಿಎಂ ಆಗಿದ್ದ ಕಾಲದಲ್ಲೇ ವರದಿ ಸಿದ್ಧವಾಗಿತ್ತು. ಆದರೆ ಅವರು ಏಕೆ ಜಾತಿಗಣತಿ ವರದಿ ಬಿಡುಗಡೆ ಮಾಡಲಿಲ್ಲ. ಅವರ ತಪ್ಪು ಮುಚ್ಚಿಕೊಳ್ಳುವುದಕ್ಕೆ ನನ್ನ ಹೆಸರು ಹೇಳುತ್ತಿದ್ದಾರೆ. ಅಧಿಕಾರ ಹೋದಾಗ ಮಾತ್ರ ಹಿಂದುಳಿದವರು ನೆನಪಾಗುತ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರಿನಲ್ಲಿ ದಿಂಗಾಲೇಶ್ವರ ಸ್ವಾಮೀಜಿ ಭೇಟಿ ನಂತರ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಕೊರೊನಾ ಹಿನ್ನೆಲೆ ಬಹಿರಂಗ ಕಾರ್ಯಕ್ರಮ ಮಾಡುತ್ತಿರಲಿಲ್ಲ. ಈಗ ಪಕ್ಷ ಸಂಘಟನೆ ಅನಿವಾರ್ಯ ಹಿನ್ನೆಲೆ ಕಾರ್ಯಕ್ರಮ ನಡೆಸುತ್ತಿದ್ದೇವೆ. ಕೊವಿಡ್ ನಿಯಮ ಉಲ್ಲಂಘಿಸದೆ ಕಾರ್ಯಕ್ರಮ ಮಾಡಬೇಕು. ನಾವು ಎಷ್ಟೇ ಪ್ರಯತ್ನ ಮಾಡಿದರೂ ಸ್ವಲ್ಪ ಸಮಸ್ಯೆಗಳು ಆಗ್ತಿವೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಎಚ್ಚರಿಕೆ ವಹಿಸಲು ಯತ್ನಿಸ್ತೇವೆ ಎಂದು ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ. ಉದ್ಯಮಿ ಜಯಾನಂದ ಜಾವಣ್ಣವರ ಪಕ್ಷ ಸೇರ್ಪಡೆ ಹಿನ್ನೆಲೆ, ಹಾವೇರಿಯಲ್ಲಿ ಜೆಡಿಎಸ್ ಕಾರ್ಯಕ್ರಮ ಆಯೋಜಿಸಿದೆ.
ಉದ್ಯಮಿ ಜಯಾನಂದ ಜಾವಣ್ಣವರ ಬಿಜೆಪಿಯಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಶ್ರೀರಾಮನಕೊಪ್ಪ ಗ್ರಾಮದ ನಿವಾಸಿಯಾಗಿರೋ ಉದ್ಯಮಿ ಜಯಾನಂದ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಮಾರಂಭದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.
ರೈತರಿಗೆ ಸಾಲಮನ್ನಾ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಸಿಎಂ ಆಗಲು ಒಪ್ಪಿದೆ
ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಒಪ್ಪಿಗೆ ನೀಡ್ತಿಲ್ಲ. ರಾಜ್ಯ ಸರ್ಕಾರದವರು ಕೇವಲ ಘೋಷಣೆ ಮಾಡುತ್ತಿದ್ದಾರೆ. ಮಳೆಯಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ಪರಿಹಾರ ಎಂದಿದ್ದಾರೆ. ಆದರೆ, ಒಂದು ಕಂತಿನ ಹಣ ನೀಡಿ ಬಳಿಕ ಯಾವುದೇ ಹಣ ನೀಡಿಲ್ಲ. ಮಳೆ, ನೆರೆಯಿಂದ ಹಾನಿಯಾದ ಬೆಳೆಗೆ ಪರಿಹಾರ ನೀಡಿಲ್ಲ. ಸಾಲಮನ್ನಾ ಆಗಿಲ್ಲವೆಂದು ಕೆಲವು ರೈತರು ಮನವಿ ನೀಡಿದ್ದಾರೆ. ರೈತರ ಸಾಲಮನ್ನಾ ಮಾಡಿದಾಗ ನನ್ನನ್ನು ಅಪಹಾಸ್ಯ ಮಾಡಿದ್ರು. ಕಾಂಗ್ರೆಸ್, ಬಿಜೆಪಿ ನಾಯಕರು ಅಪಹಾಸ್ಯ ಮಾಡಿದ್ರು ಎಂದು ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಜೆಡಿಎಸ್ಗೆ ನೀಡಲಿಲ್ಲ. ಬೇರೆ ಪಕ್ಷಗಳ ಜತೆ ಸೇರಿ ಸರ್ಕಾರ ರಚಿಸುವ ಮನಸ್ಸಿರಲಿಲ್ಲ. ಆದ್ರೆ, ಕಾಂಗ್ರೆಸ್ ನಾಯಕರೇ ನಮ್ಮ ಮನೆ ಬಾಗಿಲಿಗೆ ಬಂದ್ರು. ದೇವೇಗೌಡರು ಜೆಡಿಎಸ್ಗೆ ಸಿಎಂ ಹುದ್ದೆ ಬೇಡ ಎಂದಿದ್ದರು. ಆದರೆ, ರೈತರಿಗೆ ಸಾಲಮನ್ನಾ ಭರವಸೆ ನೀಡಿದ್ದ ಹಿನ್ನೆಲೆಯಲ್ಲಿ ಒಪ್ಪಿದೆ. ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗಲು ನಾನು ಒಪ್ಪಿಕೊಂಡಿದ್ದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಸ್ವತಂತ್ರ ಸರ್ಕಾರ ಕೊಡಿ
ಇದಕ್ಕೂ ಮೊದಲು ಮಾತನಾಡಿದ್ದ ಅವರು, 75 ವರ್ಷದಿಂದ ಕಾಂಗ್ರೆಸ್, ಬಿಜೆಪಿ ಸರ್ಕಾರ ನೋಡಿದ್ದೀರಿ. ನಗೆ 20 ವರ್ಷ ಅಧಿಕಾರ ಬೇಡ, 5 ವರ್ಷ ಕೊಡಿ ಸಾಕು. ಒಂದು ಚುನಾವಣೆ ಪರೀಕ್ಷೆ ಮಾಡಿ. ನಿಮ್ಮ ಬದುಕನ್ನು ಒಳ್ಳೆಯ ರೀತಿಯಲ್ಲಿ ಮಾಡುವೆ. ಇನ್ನೊಬ್ಬರ ಜೊತೆ ಸರ್ಕಾರ ಮಾಡೋದಕ್ಕೆ ಆಗಲ್ಲ. ಸ್ವತಂತ್ರ ಸರ್ಕಾರ ಕೊಡಿ. ಯಾವ ಸರ್ಕಾರಕ್ಕೂ ಅರ್ಜಿ ಕೊಡದ ರೀತಿಯಲ್ಲಿ ಯೋಜನೆಗಳನ್ನು ಸಿದ್ಧ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಜನರ ಬಳಿ ಮನವಿ ಮಾಡಿದ್ದರು.
ಇದನ್ನೂ ಓದಿ: ಇನ್ನೊಬ್ಬರ ಜತೆ ಸರ್ಕಾರ ರಚಿಸಲು ಆಗದು, ಸ್ವತಂತ್ರ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಿ: ಕುಮಾರಸ್ವಾಮಿ ಮನವಿ
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಯಾಕೆ ಜಾತಿ ಜನಗಣತಿ ವರದಿ ಬಿಡುಗಡೆ ಮಾಡಿಲ್ಲ? ಸಚಿವ ಕೋಟ ಶ್ರೀನಿವಾಸ ಮಾರ್ಮಿಕ ಪ್ರಶ್ನೆ
Published On - 8:04 pm, Mon, 23 August 21