ಬೆಂಗಳೂರು: ನಗರದ ದಾಸರಹಳ್ಳಿ ಕ್ಷೇತ್ರದ (Dasarahalli Constituency) ಕಾಮಗಾರಿಯಲ್ಲಿ ಅಕ್ರಮ ಆರೋಪ ಕೇಳಿಬಂದಿತ್ತು. ಈ ಕುರಿತಾಗಿ ಮಾಜಿ ಶಾಸಕ ಎಸ್. ಮುನಿರಾಜ್ ನಿನ್ನೆ ಆರೋಪಿಸಿದ್ದರು. ಸದ್ಯ ಈ ವಿಚಾರವಾಗಿ ತಮ್ಮ ವಿರುದ್ಧದ ಆರೋಪಕ್ಕೆ ಬೆಂಗಳೂರಿನ ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ R.ಮಂಜುನಾಥ್ (R Manjunath) ಸ್ಪಷ್ಟನೆ ನೀಡಿದ್ದಾರೆ. ಇಂದು (ಫೆ. 12) ಸುದ್ದಿಗೊಷ್ಠಿಯಲ್ಲಿ ಮಾತನಾಡಿ, ದಾಸರಹಳ್ಳಿ ಕ್ಷೇತ್ರದಲ್ಲಿ ಅಷ್ಟು ದೊಡ್ಡ ಮೊತ್ತದ ಕಾಮಗಾರಿಗಳೇ ನಡೆದಿಲ್ಲ. ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ದಾಸರಹಳ್ಳಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಕ್ಷೇತ್ರದ ಕಾಮಗಾರಿ ಸಂಬಂಧ ಬಾಕಿ ಹಣವನ್ನೇ ಸರ್ಕಾರ ರಿಲೀಸ್ ಮಾಡ್ತಿಲ್ಲ ಎಂದು ಹೇಳಿದರು.
ದಾಸರಹಳ್ಳಿ ಕ್ಷೇತ್ರಕ್ಕೆ ಇನ್ನೂ 90 ಕೋಟಿ ಅನುದಾನ ಬಿಡುಗಡೆ ಆಗಬೇಕಿದೆ. ಕ್ಷೇತ್ರಕ್ಕೆ ಬಾಕಿ ಅನುದಾನ ಬಿಡುಗಡೆ ಆಗದಂತೆ ಸಚಿವ ಅಶೋಕ್ ತಡೆದಿದ್ದಾರೆ. ಇದಕ್ಕೆ ದಾಸರಹಳ್ಳಿ ಕ್ಷೇತ್ರದ ಮಾಜಿ ಶಾಸಕರ ಕೈವಾಡ ಇದೆ ಎಂದು ಮಾಜಿ ಶಾಸಕ ಮುನಿರಾಜು ಹೆಸರು ಹೇಳದೆ ಪರೋಕ್ಷವಾಗಿ ಆರೋಪಿಸಿದರು.
ಇದನ್ನೂ ಓದಿ: HDK ಸಿಎಂ ಆಗಿದ್ದಾಗ ದಾಸರಹಳ್ಳಿಗೆ 30 ಕೋಟಿ ರೂ. ಅನುದಾನ, ಶಾಸಕರು ಪರ್ಸೆಂಟೇಜ್ ತೆಗೆದುಕೊಂಡು ಬಿಲ್ ಮಾಡಿರುವ ಆರೋಪ
ನನ್ನ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗುತ್ತಿದೆ. ಅಭಿವೃದ್ಧಿ ಆಗ್ತಿರೋದ್ರಿಂದ ವಿರೋಧಿಗಳ ಹೋರಾಟ ಇದ್ದೇ ಇದೆ. ನನ್ನ ಕ್ಷೇತ್ರದ ಜನರಿಗೆ ನನ್ನ ಮೇಲೆ ನಂಬಿಕೆ ಇದೆ. ಅದೇ ರೀತಿ ನಾನು ಸಹ ನನ್ನ ಸ್ವಂತ ಖರ್ಚಿನಲ್ಲಿ ದಿನದ 24 ಗಂಟೆಯೂ ಕೆಲಸ ಮಾಡ್ತಿದ್ದೇನೆ. ನನ್ನ ಅಭಿವೃದ್ಧಿ ಕೆಲಸಗಳು ಸಹಸಲಾರದೆ ಪ್ರತಿಭಟನೆ ಮೂಲಕ ಆರೋಪ ಮಾಡ್ತಿದ್ದಾರೆ. ಏನೆ ಆರೋಪ ಮಾಡಿದ್ರು ನನ್ನ ಕ್ಷೇತ್ರದ ಜನರ ಕಣ್ಣಿಗೆ ಮಣ್ಣೆರಚಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.
ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ದಾಸರಹಳ್ಳಿ ಕ್ಷೇತ್ರಕ್ಕೆ 30 ಕೋಟಿ ರೂ. ಅನುದಾನ ಕೊಟ್ಟಿದ್ರು. ಶಾಸಕರು ಪರ್ಸೆಂಟೇಜ್ ತಗೊಂಡು ಬಿಲ್ ಮಾಡಿದ್ರು. ಆದ್ರೆ ಯಾವುದೇ ಕಾಮಗಾರಿ ಆಗಿರಲಿಲ್ಲ. 2 ಕೋಟಿ 80 ಲಕ್ಷ ಅವ್ಯವಹಾರ ಆಗಿದೆ ಎಂದು ಟಿವಿಸಿಸಿ ವರದಿ ಮಾಡಿದೆ. ಹಣವನ್ನ ರಿಕವರಿ ಮಾಡಿ ಎಂದು ಆದೇಶ ಮಾಡಿದೆ ಎಂದು ಶಾಸಕ ಮಂಜುನಾಥ ವಿರುದ್ಧ ಮಾಜಿ ಶಾಸಕ ಎಸ್. ಮುನಿರಾಜು ವಾಗ್ದಾಳಿ ಮಾಡಿದರು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 4 ವರ್ಷದಲ್ಲಿ ವಾರ್ಡ್ ಕಾಮಗಾರಿಗೆ 471 ಕೋಟಿ ಬಂದಿದೆ. ಕಾಮಗಾರಿ ಮುಗಿದಿದೆ ಎಂದು ಬಿಲ್ ಮಾಡಿದ್ದಾರೆ. ಇವರ ಕಾಲದಲ್ಲಿ ಆಗಿರುವ ಕಾಮಗಾರಿ ಕಳಪೆ ಗುಣಮಟ್ಟದಾಗಿದೆ. ದಾಸರಹಳ್ಳಿ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗಿಲ್ಲ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರ ಪತನ ನಂತರ ಕುಮಾರಸ್ವಾಮಿ 700 ಕೋಟಿ ಕೊಟ್ಟಿದ್ದರು. ಅದನ್ನ ಸಮ್ಮಿಶ್ರ ಸರ್ಕಾರ ವಾಪಸ್ ಪಡೆದುಕೊಂಡಿದೆ ಎಂದು ಶಾಸಕರು ಭಾಷಣಗಳಲ್ಲಿ ಹೇಳ್ತಾರೆ. ಕಳೆದ ನಾಲ್ಕು ವರ್ಷದಲ್ಲಿ ಕ್ಷೇತ್ರಕ್ಕೆ ವಾರ್ಡ್ ಕಾಮಗಾರಿಗೆಂದು 471 ಕೋಟಿ ರೂ. ಬಿಲ್ ಆಗಿದೆ. ಮುಖ್ಯ ರಸ್ತೆಗಳಿಗೆ 89 ಕೋಟಿ ಅನುದಾನ ಕೊಡಲಾಗಿದೆ. ತೋಟಗಾರಿಕೆಗೆ 20 ಕೋಟಿ 82 ಲಕ್ಷ ಹಣ ಕೊಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.