ಹಾಸನ : ಬ್ರಹ್ಮಾಂಡ ಗುರೂಜಿ (Brahmanda Guruji) ಅವರು ಎರಡನೇ ಬಾರಿಗೆ ಹಾಸನಾಂಬೆ ದೇವಿ ದರ್ಶನ ಪಡೆದರು. ಇದೇ ವೇಳೆ ರಾಜ್ಯ ರಾಜಕಾರಣದಲ್ಲಿ (Karnataka Politics) ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಮೊನ್ನೇ ಅಷ್ಟೇ ಹಾಸನಾಂಬೆ ದರ್ಶನ ಪಡೆದಿದ್ದ ಬ್ರಹ್ಮಾಂಡ ಗುರೂಜಿ ಇಂದು(ಅಕ್ಟೋಬರ್ 21) ಎರಡನೇ ಬಾರಿಗೆ ದೇವಿ ದರ್ಶನ ಪಡೆದುಕೊಂಡರು. ಇದೇ ವೇಳೆ ಮಾತನಾಡಿದ ಗುರೂಜಿ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬಹಳ ಮುಖ್ಯವಾದ ಪಾತ್ರ ವಹಿಸುತ್ತೆ, ಸರ್ಕಾರ ನಡೆಸುತ್ತಾರೆ ಎಂದು ಭವಿಷ್ಯ ನುಡಿದಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ 2023: ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಜೆಡಿಎಸ್
ದೇವೇಗೌಡರಿಗೆ ಪರಿಪೂರ್ಣವಾದಂತಹ ಆರೋಗ್ಯ ಸಿಗಲು ಸಲಹೆ ಕೇಳಿದ್ರು. ದೇವೇಗೌಡರ ಆರೋಗ್ಯಕ್ಕೆ ದೇವಿಯಲ್ಲಿ ಪ್ರಾರ್ಥನೆ ಮಾಡಿ ಅಂತ ಕೇಳಿದ್ರು. ನಾನು ಎರಡು ಮೂರು ಸಲಹೆ ಕೊಟ್ಟಿದ್ದೇನೆ ಎಂದು ಹೇಳಿದರು.
ರೇವಣ್ಣ ಅವರು ಬಹಳ ಆಸ್ತಿಕರು. ಅವರ ತಂದೆಯವರ ಆರೋಗ್ಯ ಸುಧಾರಿಸುವುದಕ್ಕೊಸ್ಕರ ಏನು ಮಾಡಬಹುದು ಎಂದು ಪರಿಹಾರ ಹೇಳಿ ಎಂದರು. ಅವರ ಆರೋಗ್ಯ ಬಹಳ ಚೆನ್ನಾಗಿರಲಿ. ಯಡಿಯೂರಪ್ಪ, ಸಿದ್ದರಾಮಯ್ಯ (Siddaramaiah) ಬಂದರು ಆರೋಗ್ಯ ನೋಡಿಕೊಳ್ಳಿ ಅಂತ ಹೇಳ್ತಾರೆ ಎಂದು ತಿಳಿಸಿದರು.
ಕರ್ನಾಟಕದಿಂದ ಒಬ್ಬ ರೈತರ ಮಗ ಪ್ರಧಾನಮಂತ್ರಿ ಆಗಿದ್ದಾರೆ. ಲೋಕೋಪಯೋಗಿ ಸಚಿವರಾಗಿ, ಪ್ರಧಾನಮಂತ್ರಿಯಾಗಿ ಎಲ್ಲಾ ಪ್ರಾಜೆಕ್ಟ್‌ಗಳಿಗೆ ಅನುಮತಿ ನೀಡಿರುವವರು ದೇವೇಗೌಡರು ಒಬ್ಭರೇ ಎಂದು ದೊಡ್ಡಗೌಡ್ರನ್ನ ಹೊಗಳಿದರು.