ಸಾಲಮನ್ನ ಆಸೆಗೆ ಬರಗಾಲ ಬರಲಿ ಎನ್ನುತ್ತಾರೆ ರೈತರು: ಶಿವಾನಂದ ಪಾಟೀಲ್​ ಹೇಳಿಕೆಗೆ ಬಿಜೆಪಿ ನಾಯಕರ ಆಕ್ರೋಶ

| Updated By: ವಿವೇಕ ಬಿರಾದಾರ

Updated on: Dec 25, 2023 | 11:34 AM

ಶಿವಾನಂದ್ ಪಾಟೀಲ್ ಸ್ವತಃ ಒಬ್ಬ ರೈತರಾಗಿ ಇಂತ ಹೇಳಿಕೆ ದುರದೃಷ್ಟಕರ. ಮಂತ್ರಿ ಮಂಡಲದಲ್ಲಿ ಅವರು ಮುಂದುವರಿಯಬಾರದು. ಇದು ರೈತ ವಿರೋಧಿ ಸರ್ಕಾರ. ಸಾಲಮನ್ನಾಕ್ಕಾಗಿ ರೈತರು ಬರಗಾಲಕ್ಕಾಗಿ ಕಾಯುತ್ತಿದ್ದಾರೆ ಅನ್ನೋದು ಸೂಕ್ತವಲ್ಲ. ಸಚಿವ ಶಿವಾನಂದ ಪಾಟೀಲ್​ ಅವರು ಮಾನಸಿಕರಾಗಿ ಅಸ್ವತ್ಥರಾಗಿದ್ದಾರೆ. ಕರ್ನಾಟಕಕ್ಕೆ ಅವರು ಅವಮಾನ ಮಾಡಿದ್ದಾರೆ. ತಕ್ಷಣವೇ ಸಚಿವ ಸ್ಥಾನದಿಂದ ವಜಾ ಆಗಬೇಕು ಎಂದು ಮಾಜಿ ಸಚಿವ ಅಶ್ವತ್​ ನಾರಾಯಣ ಆಗ್ರಹಿಸಿದರು.

ಸಾಲಮನ್ನ ಆಸೆಗೆ ಬರಗಾಲ ಬರಲಿ ಎನ್ನುತ್ತಾರೆ ರೈತರು: ಶಿವಾನಂದ ಪಾಟೀಲ್​ ಹೇಳಿಕೆಗೆ ಬಿಜೆಪಿ ನಾಯಕರ ಆಕ್ರೋಶ
ಪ್ರಾತಿನಿಧಿಕ ಚಿತ್ರ
Image Credit source: NDTV
Follow us on

ಬೆಂಗಳೂರು, ಡಿಸೆಂಬರ್​ 25: ಬರಗಾಲ (Drought) ಬರಲಿ ಎಂದು ರೈತರಿಗೆ ಆಸೆ ಇರುತ್ತೆ ಎಂಬ ಸಚಿವ ಶಿವಾನಂದ ಪಾಟೀಲ್​​ ಹೇಳಿಕೆಗೆ ರಾಜ್ಯ ಬಿಜೆಪಿ (BJP) ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸರ್ಕಾರ ರೈತರನ್ನು ಪದೇ ಪದೆ ಅವಮಾನ ಮಾಡುತ್ತಿದೆ. ಸಚಿವ ಶಿವಾನಂದ ಪಾಟೀಲ್ (Shivanand Patil)​ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತೆ. ಶಿವಾನಂದ ಪಾಟೀಲ್​ ರೈತರ ಬಳಿ ಕ್ಷಮೆಯಾಚಿಸಬೇಕು. ಶಿವಾನಂದ ಪಾಟೀಲ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಆಗ್ರಹಿಸಿದರು.

ರೈತರನ್ನು ಕಡೆಗಣಿಸಿದರೆ ಅವರ ಶಾಪಕ್ಕೆ ಸರ್ಕಾರ ಗುರಿಯಾಗುತ್ತದೆ

ಸಚಿವ ಶಿವಾನಂದ ಪಾಟೀಲ್​ ಹಿಂದೆಯೂ ಸಹ ರೈತರ ಆತ್ಮಹತ್ಯೆ ವಿಚಾರವಾಗಿ ಮಾತನಾಡಿದ್ದರು. ಪರಿಹಾರ ಜಾಸ್ತಿ ಸಿಗುತ್ತೆಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದರು. ಮೊದಲು ಒಂದು ಲಕ್ಷ ಪರಿಹಾರ ಇತ್ತು, ಈಗ 5 ಲಕ್ಷ ರೂ. ಕೊಡುತ್ತಾರೆ. ಅದಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದರು. ಇದು ರೈತ ವಿರೋಧಿ ಸರ್ಕಾರ, ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. ಹಿಂದೆ ರೈತರ ಬಗ್ಗೆ ಹಗುರವಾಗಿ ಹೇಳಿದಾಗಲೂ ಕ್ರಮ ತೆಗೆದುಕೊಳ್ಳಲಿಲ್ಲ. ಮುಖ್ಯಮಂತ್ರಿಯಾದರೂ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ರೈತರನ್ನು ಕಡೆಗಣಿಸಿದರೆ ಅವರ ಶಾಪಕ್ಕೆ ಸರ್ಕಾರ ಗುರಿಯಾಗುತ್ತದೆ.ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್​ ಅಶೋಕ್​ ಹೇಳಿದರು.

ಮಂತ್ರಿ ಮಂಡಲದಲ್ಲಿ ಅವರು ಮುಂದುವರಿಯಬಾರದು

ಪ್ರತಿ ಬಾರಿಯೂ ಈ ರೀತಿಯ ಯಟವಟ್ಟು ಮಾಡಿಕೊಂಡಿಕೊಳ್ಳುತ್ತಿದ್ದಾರೆ. ರೈತರಿಗೆ ಅವಮಾನ ಮಾಡುತ್ತಿದ್ದಾರೆ. ಇವರ ಮನೆಯ ಹಣ, ರೈತರಿಗೆ ಧಾನ-ಧರ್ಮ ಮಾಡುವ ರೀತಿ ದುರಹಂಕಾರದ ಹೇಳಿಕೆ ನೀಡುತ್ತಿದ್ದಾರೆ. ಈ ಹಿಂದೆಯೇ ಈ ರೀತಿಯ ಹಗುರವಾದ ಹೇಳಿಕೆ ಕೊಟ್ಟಿದ್ದರು. ಹಣಕ್ಕೋಸ್ಕರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿಕೆ ಕೊಟ್ಟಿದ್ದರು. ಅನ್ನದಾತರು ಎಲ್ಲರಿಗೂ ಕೊಡುವವರು. ರೈತರಿಗೆ ಸಮಾಜದಲ್ಲಿ ಮೊದಲ ಗೌರವ ಸಲ್ಲುವುದು ಎಂದು ಹೇಳಿದರು.

ಇದನ್ನೂ ಓದಿ: ಸಾಲಮನ್ನ ಆಸೆಗೆ ಬರಗಾಲ ಬರಲಿ ಎನ್ನುತ್ತಾರೆ ರೈತರು: ಶಿವಾನಂದ ಪಾಟೀಲ್

ಶಿವಾನಂದ್ ಪಾಟೀಲ್ ಸ್ವತಃ ಒಬ್ಬ ರೈತರಾಗಿ ಇಂತ ಹೇಳಿಕೆ ದುರದೃಷ್ಟಕರ. ಮಂತ್ರಿ ಮಂಡಲದಲ್ಲಿ ಅವರು ಮುಂದುವರಿಯಬಾರದು. ಇದು ರೈತ ವಿರೋಧಿ ಸರ್ಕಾರ. ಸಾಲಮನ್ನಾಕ್ಕಾಗಿ ರೈತರು ಬರಗಾಲಕ್ಕಾಗಿ ಕಾಯುತ್ತಿದ್ದಾರೆ ಅನ್ನೋದು ಸೂಕ್ತವಲ್ಲ. ಅವರು ಮಾನಸಿಕರಾಗಿ ಅಸ್ವತ್ಥರಾಗಿದ್ದಾರೆ. ಕರ್ನಾಟಕಕ್ಕೆ ಅವರು ಅವಮಾನ ಮಾಡಿದ್ದಾರೆ. ತಕ್ಷಣವೇ ಸಚಿವ ಸ್ಥಾನದಿಂದ ವಜಾ ಆಗಬೇಕು ಎಂದು ಆಗ್ರಹಿಸಿದರು.
ಶಾಸಕ ಸುನೀಲ್ ಕುಮಾರ್ ಪ್ರತಿಕ್ರಿಯೆ.

ರೈತರ ಪರವಾದ ಚಿಂತನೆಯನ್ನ ಸಿದ್ದರಾಮಯ್ಯ ಸರ್ಕಾರ ಮಾಡಲಿಲ್ಲ

ಸಹಜವಾಗಿ ಈ ಸರ್ಕಾರ ರೈತರ ಪರವಾದ ಸರ್ಕಾರವಲ್ಲ. ಬರಗಾಲಕ್ಕೆ ಸಂಬಂಧಪಟ್ಟಂತೆ ಕ್ರಮವನ್ನ ಈ ಸರ್ಕಾರ ತೆಗೆದುಕೊಳ್ಳಬೇಕಿತ್ತು. ರೈತರನ್ನ ಅಪಮಾನ ಮಾಡುವಂತ ಕೆಲಸ ಮಾಡುತ್ತಲೇ ಬಂದಿದ್ದಾರೆ. ಬರಗಾಲ ಘೋಷಣೆಯಾದ ನಂತರ ರೈತರ ಖಾತೆಗೆ ಒಂದು ರೂಪಾಯಿ ಹಣವನ್ನು ಹಾಕಿಲ್ಲ. ಒಬ್ಬ ಜವಾಬ್ದಾರಿ ಸಚಿವರು ಬರಗಾಲ ಬರುವುದೇ ರೈತರ ಪರಿಹಾರ ಕೇಳುವುದಕ್ಕೆ ಎಂದಿದ್ದಾರೆ. ರೈತರ ಬಗ್ಗೆ ಅಸಂಬದ್ಧ ಹೇಳಿಕೆ ನೀಡಿದ್ದಾರೆ. ಇದನ್ನ ನಾವು ಖಂಡಿಸುತ್ತೇವೆ. ರೈತ ಪರವಾದ ಚಿಂತನೆಯನ್ನ ಸಿದ್ದರಾಮಯ್ಯನವರ ಸರ್ಕಾರ ಮಾಡಲಿಲ್ಲ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.

ಶಿವಾನಂದ ಪಾಟೀಲ್ ಬಾಯಲ್ಲಿ ಬಂದ ಈ ಮಾತು ಸಹನೀಯವಲ್ಲ

ಶಿವಾನಂದ ಪಾಟೀಲ್ ಬಾಯಲ್ಲಿ ಬಂದ ಈ ಮಾತು ಸಹನೀಯವಲ್ಲ. ರೈತರು ಬರದಿಂದ ಸಾಯುತ್ತಾರೆ ಅನ್ನೋದು ರೈತರಿಗೆ ಮಾಡಿದ ಅಪಮಾನ. ಮಣ್ಣನ್ನೇ ಪೂಜೆಸಿ, ಮಣ್ಣಲ್ಲೇ ಬೆರತು, ಜಗತ್ತಿಗೆ ಆಹಾರ ಹಂಚೋರು ರೈತರು. ಇದು ಸರ್ಕಾರದ ಅಹಂಕಾರದ ಒಂದು ಭಾವನೆ. ಪಿತ್ತ ನೆತ್ತಿಗೇರಿ ಅಹಂಕಾರದ ಸ್ಥಿತ ಪ್ರಜ್ಞೆ ಕಳೆದುಕೊಂಡಿದ್ದಾರೆ. ಸಿಎಂಗೆ ಮನವಿ ಮಾಡುತ್ತೇನೆ, ನೀವೇ ನಿಮ್ಮ ಸಚಿವರ ಮದ ಇಳಿಸಿ. ಇಲ್ಲವಾದರೆ ಜನ ನಿಮ್ಮನ್ನೂ ಸೇರಿಸಿ ಎಲ್ಲಾ ಸಚಿವರ ಮದ ಇಳಿಸುತ್ತಾರೆ ಎಂದು ಬಿಜೆಪಿ ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ