AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಲಮನ್ನ ಆಸೆಗೆ ಬರಗಾಲ ಬರಲಿ ಎನ್ನುತ್ತಾರೆ ರೈತರು: ಶಿವಾನಂದ ಪಾಟೀಲ್

ರೈತರ ಕುರಿತು ಸಚಿವ ಶಿವಾನಂದ ಪಾಟೀಲ್​​ ಮತ್ತೆ ಉಡಾಫೆ ಮಾತುಗಳನ್ನು ಆಡಿದ್ದಾರೆ. ಪದೇ ಪದೆ ಬರಗಾಲ ಬರಲಿ ಎಂದು ರೈತರಿಗೆ ಆಸೆ ಇರುತ್ತದೆ. ಬರಗಾಲ ಬಂದರೇ ರೈತರು ಸಾಲಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ ಎಂದು ರೈತರ ವಿಚಾರದಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹಗುರವಾಗಿ ಮಾತನಾಡಿದ್ದಾರೆ.

ಸಾಲಮನ್ನ ಆಸೆಗೆ ಬರಗಾಲ ಬರಲಿ ಎನ್ನುತ್ತಾರೆ ರೈತರು: ಶಿವಾನಂದ ಪಾಟೀಲ್
ಸಚಿವ ಶಿವಾನಂದ ಪಾಟೀಲ್
ಮಹಾಂತೇಶ ಕುರಬೇಟ, ಟಿವಿ9 ಚಿಕ್ಕೋಡಿ
| Edited By: |

Updated on:Dec 25, 2023 | 10:10 AM

Share

ಚಿಕ್ಕೋಡಿ, ಡಿಸೆಂಬರ್​ 25: ರೈತರ (Farmers) ಕುರಿತು ಸಚಿವ ಶಿವಾನಂದ ಪಾಟೀಲ್ (Shivand Patil)​​ ಮತ್ತೆ ಉಡಾಫೆ ಮಾತುಗಳನ್ನು ಆಡಿದ್ದಾರೆ. ಪದೇ ಪದೆ ಬರಗಾಲ ಬರಲಿ ಎಂದು ರೈತರಿಗೆ ಆಸೆ ಇರುತ್ತದೆ. ಕೃಷ್ಣಾ ನದಿ ನೀರು ಪುಕ್ಸಟ್ಟೆ ಇದೆ, ಕರೆಂಟ್‌ ಕೂಡ ಪುಕ್ಸಟ್ಟೆ ಇದೆ. ಬಹಳಷ್ಟು ಮುಖ್ಯಮಂತ್ರಿಗಳು ಬಿತ್ತನೆ ಬೀಜ ಕೊಟ್ಟರು, ಗೊಬ್ಬರನೂ ಕೊಟ್ಟರು. ಬರಗಾಲ ಬಂದರೇ ರೈತರು ಸಾಲಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ ಎಂದು ರೈತರ ವಿಚಾರದಲ್ಲಿ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಹಗುರವಾಗಿ ಮಾತನಾಡಿದ್ದಾರೆ.

ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದ ವಿವಿಧೋದ್ದೇಶ ಸಹಕಾರಿ ಸಂಘದ 25ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಹಿಂದಿನ ಸರ್ಕಾರಗಳು ಸಾಲಮನ್ನಾ ಮಾಡಿವೆ. ಆದರೆ ಸರ್ಕಾರ ಸಂಕಷ್ಟದಲ್ಲಿದ್ದಾಗ ರೈತರ ಸಾಲಮನ್ನ ಕಷ್ಟ ಸಾಧ್ಯ ಎಂದು ಹೇಳಿದರು.

ಇದನ್ನೂ ಓದಿ: ನೇಕಾರರಿಗೆ ದಸರಾ ಉಡುಗೊರೆ ನೀಡಿದ ಸರ್ಕಾರ: ಉಚಿತ ವಿದ್ಯುತ್ ಘೋಷಣೆ: ಸಚಿವ ಶಿವಾನಂದ ‌ಪಾಟೀಲ್‌

ಪರಿಹಾರಕ್ಕೆ ರೈತರು ಆತ್ಮಹತ್ಯೆ

ಕುಡಿದು ಕುಡಿದು ಸತ್ತರೂ, ಹೃದಯಾಘಾತದಿಂದ ಸತ್ತರೂ ಆತ್ಮಹತ್ಯೆ ಅಂತ ದೂರು ಕೊಟ್ಟರೇ ಪರಿಹಾರ ಸಿಗುತ್ತೆ ಎನ್ನೋದು ದುರಾಸೆ ಸಂಬಂಧಿಕರದ್ದು. ರೈತರು ಇಂದಿನಿಂದಲ್ಲ ಹಿಂದಿನಿಂದಲೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ನಾವು 2015 ರಲ್ಲಿ ಐದು ಲಕ್ಷ ಪರಿಹಾರ ಕೊಡಲು ಶುರು ಮಾಡಿದ್ದೇವೆ. ಅವತ್ತಿನಿಂದ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ನಿಜವಾಗಿ ರೈತರಿಗೆ ಅನ್ಯಾಯ ಆಗಿದ್ದರೇ ಪರಿಹಾರ ವಿಳಂಬ ಮಾಡುವುದಿಲ್ಲ. ಜನಪ್ರತಿನಿಧಿಗಳ ಮೇಲೆ ಜನ ಸಾಮಾನ್ಯರು ಒತ್ತಡ ತರುತ್ತಾರೆ. ಪರಿಹಾರ ಸಿಗಬಹುದು ಎಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಈ ಹಿಂದೆ ಸಚಿವ ಶಿವಾನಂದ ಪಾಟೀಲ್​ ಹೇಳಿದ್ದರು.

ಪರಿಹಾರಕ್ಕಾಗಿ ರೈತರ ಆತ್ಮಹತ್ಯೆ ವರದಿ ಹೆಚ್ಚಳವಾಗುತ್ತಿದೆ. 2014 ರ ಹಿಂದೆ ಎಷ್ಟು, 2015 ರ ನಂತರ ಎಷ್ಟು ಜನರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ನೀವೆ ನೋಡಿ. ಆ ವೇಳೆ ಇಷ್ಟೊಂದು ವರದಿ ಆಗುತ್ತಿರಲ್ಲಿ. ಇವಾಗ ಹೆಚ್ಚು ವರದಿ ಆಗುತ್ತಿವೆ ಎಂದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:47 am, Mon, 25 December 23

Follow Us
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ಚಂದ್ರ ಗ್ರಹಣದಂದು ಮಂತ್ರಾಲಯ ರಾಯರ ಮಠದಲ್ಲಿಲ್ಲ ಯಾವುದೇ ನಿರ್ಬಂಧ!
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
ವಿದಾಯ ಪಂದ್ಯದಲ್ಲಿ ಹೊಸ ಇತಿಹಾಸ ನಿರ್ಮಿಸಿದ ಅಲಿಸಾ ಹೀಲಿ
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು
‘ಹಯಗ್ರೀವ’ ಬಿಡುಗಡೆಗೆ ತೊಂದರೆ ಮಾಡಿದವರಿಗೆ ಧನ್ವೀರ್ ಗೌಡ ಖಡಕ್ ತಿರುಗೇಟು