AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡಪರ ಸಂಘಟನೆ, ರೈತರು, ಹೋರಾಟಗಾರರ ಮೇಲಿನ ಕೇಸ್ ವಾಪಸ್; ಕರ್ನಾಟಕ ಸಚಿವ ಸಂಪುಟ ನಿರ್ಧಾರ

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕೌನ್ಸಿಲ್​ನಿಂದ ಕೆಲವು ತಿದ್ದುಪಡಿಗೆ ಸೂಚಿಸಲಾಗಿದೆ. ಅವುಗಳಲ್ಲಿ 2 ತಿದ್ದುಪಡಿಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ ಎಂದು ಪಾಟೀಲ್ ತಿಳಿಸಿದರು.

ಕನ್ನಡಪರ ಸಂಘಟನೆ, ರೈತರು, ಹೋರಾಟಗಾರರ ಮೇಲಿನ ಕೇಸ್ ವಾಪಸ್; ಕರ್ನಾಟಕ ಸಚಿವ ಸಂಪುಟ ನಿರ್ಧಾರ
ಕರ್ನಾಟಕ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ
Ganapathi Sharma
|

Updated on:Jun 28, 2023 | 3:54 PM

Share

ಬೆಂಗಳೂರು: ಕನ್ನಡಪರ ಸಂಘಟನೆ, ರೈತರು ಹಾಗೂ ಹೋರಾಟಗಾರರ ಮೇಲಿನ ವಿಚಾರಣೆ ಹಂತದಲ್ಲಿರುವ ಕೇಸ್​​ಗಳನ್ನು​ ಹಿಂಪಡೆಯಲು ಕರ್ನಾಟಕ ಸಚಿವ ಸಂಪುಟ (Karnataka Cabinet) ನಿರ್ಧರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಸ್​​ಗಳನ್ನು ಹಿಂಪಡೆಯುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಸಚಿವ ಹೆಚ್​ಕೆ ಪಾಟೀಲ್​ ತಿಳಿಸಿದರು. ಕೇಸ್​​ಗಳನ್ನು ಹಿಂಪಡೆಯಲು ಸಂಪುಟ ಉಪಸಮಿತಿ ರಚನೆ ಮಾಡಲು ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಕೃಷ್ಣ, ಕಾವೇರಿ ಸೇರಿದಂತೆ ವಿವಿಧ ನೀರಾವರಿ ವಿವಿಧ ನೀರಾವರಿ ನ್ಯಾಯಾಧಿಕರಣ ಕಾನೂನು ವಿಷಯಗಳ ಅನುಷ್ಠಾನ, ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಸಂಪುಟ ಉಪಸಮಿತಿ ರಚನೆ ಮಾಡಲಾಗುವುದು. ಆನೇಕಲ್, ಚಂದಾಪುರ ಒಳಚರಂಡಿ ಕಾಮಗಾರಿಗೆ 106 ಕೋಟಿ ರೂ. ಅನುದಾನ ಒದಗಿಸಲಾಗುವುದು ಎಂದು ಪಾಟೀಲ್ ತಿಳಿಸಿದರು.

ಜಿಎಸ್​ಟಿ ಕೌನ್ಸಿಲ್​ ಸೂಚಿಸಿದ 2 ತಿದ್ದುಪಡಿಗಿಲ್ಲ ಸಮ್ಮತಿ

ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಕೌನ್ಸಿಲ್​ನಿಂದ ಕೆಲವು ತಿದ್ದುಪಡಿಗೆ ಸೂಚಿಸಲಾಗಿದೆ. ಅವುಗಳಲ್ಲಿ 2 ತಿದ್ದುಪಡಿಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ ಎಂದು ಪಾಟೀಲ್ ತಿಳಿಸಿದರು. ಸರಕು ಮತ್ತು ಸೇವಾ ತೆರಿಗೆ ಪದ್ಧತಿಯ ಕೆಲವು ತಿದ್ದುಪಡಿಗೆ ಮಾತ್ರ ಒಪ್ಪಿಗೆ ಸೂಚಿಸಲಾಗಿದೆ. ಉಳಿದವು ಜಿಎಸ್​​ಟಿ ಕೌನ್ಸಿಲ್​ನಲ್ಲಿ ಮರು ಪ್ರಸ್ತಾಪ ಆಗಿ ಚರ್ಚೆಗೆ ಬರಲಿವೆ. ಈ ಬಗ್ಗೆ ಮುಂಬರುವ ಅಧಿವೇಶನದಲ್ಲೂ ಪ್ರಸ್ತಾಪ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Anna Bhagya Scheme; ಐದು ಕೆಜಿ ಅಕ್ಕಿ ಬದಲಿಗೆ ಹಣ; ಕರ್ನಾಟಕ ಸಚಿವ ಸಂಪುಟ ಮಹತ್ವದ ನಿರ್ಧಾರ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:54 pm, Wed, 28 June 23