ಕರ್ನಾಟಕದ ಕಲೆಕ್ಷನ್ ಮಾಸ್ಟರ್: ಲೂಟಿ ಮಾಡಲು ಪರವಾನಗಿ! ಸಿದ್ದರಾಮಯ್ಯ ಫೋಟೋ ಹರಿಬಿಟ್ಟ ಬಿಜೆಪಿ

ಸಿಎಂ ಸಿದ್ದರಾಮಯ್ಯ ಅವರನ್ನು ಕಲೆಕ್ಷನ್​​ ಮಾಸ್ಟರ್​​​ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಇದೀಗ ಕರ್ನಾಟಕದ ಕಲೆಕ್ಷನ್ ಮಾಸ್ಟರ್ (CM) - ಲೂಟಿ ಮಾಡಲು ಪರವಾನಗಿ ಎಂದು ಸಿಎಂ ಸಿದ್ದರಾಮಯ್ಯ ಫೋಟೋ ಹಂಚಿಕೊಳ್ಳುವ ಮೂಲಕ ಬಿಜೆಪಿ ಮತ್ತೆ ಕಿಡಿಕಾರಿದೆ.

ಕರ್ನಾಟಕದ ಕಲೆಕ್ಷನ್ ಮಾಸ್ಟರ್: ಲೂಟಿ ಮಾಡಲು ಪರವಾನಗಿ! ಸಿದ್ದರಾಮಯ್ಯ ಫೋಟೋ ಹರಿಬಿಟ್ಟ ಬಿಜೆಪಿ
ಬಿಜೆಪಿ ಹಂಚಿಕೊಂಡ ಫೋಟೋ
Follow us
ಗಂಗಾಧರ​ ಬ. ಸಾಬೋಜಿ
|

Updated on:Oct 19, 2023 | 7:51 PM

ಬೆಂಗಳೂರು, ಅಕ್ಟೋಬರ್​​​​​ 19: ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ವಿವಿಧೆಡೆ ಆದಾಯ ತೆರಿಗೆ (IT Raid) ಅಧಿಕಾರಿಗಳು ದಾಳಿ ನಡೆಸಿ ಗುತ್ತಿಗೆದಾರರು ಹಾಗೂ ಬಿಲ್ಡರ್ಸ್ ಬಳಿ 100 ಕೋಟಿಗೂ ಅಧಿಕ ನಗದನ್ನು ವಶಪಡಿಸಿಕೊಂಡಿದ್ದಾರೆ. ಈ ದಾಳಿ ಬಳಿಕ ಯಥಾಪ್ರಕಾರ ರಾಜಕೀಯ ತಿಕ್ಕಾಟ ಶುರುವಾಗಿದ್ದು, ವಿಪಕ್ಷಗಳು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿವೆ. ಸದ್ಯ ಬಿಜೆಪಿ ಕರ್ನಾಟಕದ ಕಲೆಕ್ಷನ್ ಮಾಸ್ಟರ್ (CM) – ಲೂಟಿ ಮಾಡಲು ಪರವಾನಗಿ ಎಂದು ಸಿಎಂ ಸಿದ್ದರಾಮಯ್ಯ ಫೋಟೋ ಹಂಚಿಕೊಳ್ಳುವ ಮೂಲಕ ಕಿಡಿಕಾರಿದೆ.

ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ಕಲೆಕ್ಷನ್ ಮಾಸ್ಟರ್ (CM) – ಲೂಟಿ ಮಾಡಲು ಪರವಾನಗಿ! ಎಂದು ಬರೆದುಕೊಂಡಿದೆ.

ಬಿಜೆಪಿ ಟ್ವೀಟ್ 

ರಾಜ್ಯದಲ್ಲಿ ಎಟಿಎಂ ಸರ್ಕಾರ ಬಂದ ಮೇಲೆ ಇಲಾಖೆಗಳನ್ನು ಭ್ರಷ್ಟಾಚಾರದ ಹಾಟ್‌ಸ್ಪಾಟ್‌ಗಳನ್ನಾಗಿ ಮಾಡಿ ಅಧಿಕಾರಿಗಳನ್ನು ಮಿನಿ ಏಜೆಂಟ್‌ಗಳನ್ನಾಗಿಸಿ ಲಂಚದ ಟಾರ್ಗೆಟ್‌ ಕೊಟ್ಟಿದೆ ಎಂದು ಇತ್ತೀಚೆಗೆ ಬಿಜೆಪಿ ವಾಗ್ದಾಳಿ ಮಾಡಿತ್ತು.

  • ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ಲಂಚ ವಸೂಲಿ
  • ಶಿಕ್ಷಣ ಇಲಾಖೆಯ ಅಧಿಕಾರಿಗಳಿಂದ ಲಂಚ ವಸೂಲಿ
  • ಇಂದಿರಾ ಕ್ಯಾಂಟೀನ್‌ ಅನುದಾನಕ್ಕೂ ಲಂಚ ವಸೂಲಿ
  • ಗುತ್ತಿಗೆದಾರರಿಗೆ ಬಿಲ್‌ ಪಾವತಿಸಲು ಲಂಚ ವಸೂಲಿ
  • ಲೋಕೋಪಯೋಗಿಯಲ್ಲಿ ಬೇನಾಮಿಗಳಿಂದ ಲಂಚ ವಸೂಲಿ
  • ದಸರಾ ಕಾರ್ಯಕ್ರಮ ನಡೆಸಲು ಲಂಚ ವಸೂಲಿ
  • ಕೃಷಿ ಇಲಾಖೆಯ ಅಧಿಕಾರಿಗಳಿಂದ ಲಂಚ ವಸೂಲಿ

ಲಂಚದ ದುಡ್ಡು ಮಂಚದ ಕೆಳಗೆ ಸಿಕ್ಕ ಮೇಲೆ ಸಿದ್ದರಾಮಯ್ಯ ಅವರ ಸರ್ಕಾರ ₹1000 ಕೋಟಿ ರೂ. ಹೊಂದಿಸಲು ಲಂಚಕ್ಕೆ ಹೊಸ ಲೈಸೆನ್ಸ್‌ ಕೊಟ್ಟಿದೆ ಎಂದು ಕಿಡಿಕಾರಿತ್ತು.

ಇದನ್ನೂ ಓದಿ: ನನ್ನನ್ನು ಕೆಣಕಿದ್ದೀರಿ, ಇದರ ಪರಿಣಾಮ ಮುಂದೆ ಕಾದು ನೋಡಿ: ಸಿಎಂ ಇಬ್ರಾಹಿಂ

ರಾಜ್ಯದಲ್ಲಿ ಕಲೆಕ್ಷನ್‌ ದಂಧೆಯನ್ನು ಮತ್ತೊಂದು ಮೈಲುಗಲ್ಲಿಗೆ ತೆಗೆದುಕೊಂಡು ಹೋಗುತ್ತಿರುವ ಸಿದ್ದರಾಮಯ್ಯ ಅವರ ಎಟಿಎಂ ಸರ್ಕಾರ ಇದೀಗ ಶಿಕ್ಷಣ ಇಲಾಖೆಯನ್ನು ಭ್ರಷ್ಟಾಚಾರದ ಹಾಟ್‌ಸ್ಪಾಟ್‌ ಮಾಡಿಕೊಂಡಿದೆ. ಶಾಲೆಯ ಪರ್ಮಿಷನ್‌, ಹೊಸ ಶಾಲೆ, ರಿನಿವೆಲ್‌, ಆಪ್‌ ಗ್ರೇಡ್‌ಗೆ ಕಂತೆ ಕಂತೆ ಹಣ ನೀಡಲೇಬೇಕು. ಅಸಮರ್ಥ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಬೇಜವಾಬ್ದಾರಿ ಮತ್ತು ಭ್ರಷ್ಟಾಚಾರದ ದಾಹಕ್ಕೆ ಶಿಕ್ಷಣ ವ್ಯವಸ್ಥೆಯೇ ಅಯೋಮಯವಾಗಿದೆ ಎಂದು ಬಿಜೆಪಿ ವಾಗ್ದಾಳಿ ಮಾಡಿದೆ.

ಇದನ್ನೂ ಓದಿ: ಕುಮಾರಸ್ವಾಮಿಗೆ ಬುದ್ಧಿ ಸ್ವಲ್ಪ ಹೆಚ್ಚು ಕಡಿಮೆಯಾಗಿದೆ ಎಂದಿದ್ದೇಕೆ ಡಿಕೆ ಶಿವಕುಮಾರ್?

ಹೈಕಮಾಂಡ್‌ ಕೊಟ್ಟಿರುವ ₹1000 ಕೋಟಿ ರೂ. ಕಲೆಕ್ಷನ್‌ ಗುರಿಯನ್ನು ತಲುಪಲು ಹೆಣಗಾಡುತ್ತಿರುವ ಸಿದ್ದರಾಮಯ್ಯರವರ ಸರ್ಕಾರ ಇದೀಗ ಶಿಕ್ಷಣ ಸಂಸ್ಥೆಗಳನ್ನು ತನ್ನ ಎಟಿಎಂ ಮಾಡಿಕೊಳ್ಳಲು ಹೊರಟಿದೆ.

ಸಿದ್ದರಾಮಯ್ಯರನ್ನು ಕಲೆಕ್ಷನ್ ಮಾಸ್ಟರ್ ಎಂದು ಟೀಕಿಸಿ ಬಿಜೆಪಿ ಇತ್ತೀಚೆಗೆ ಟ್ವೀಟ್ ಮಾಡಿದ್ದು, ಸಿದ್ದರಾಮಯ್ಯ ಹಿಡಿದುಕೊಂಡ ಬಜೆಟ್ ಸೂಟ್‌ ಕೇಸ್ ಮೇಲೆ ಕಲೆಕ್ಷನ್ ಮಾಸ್ಟರ್ ಎಂದು ಬರೆದಿರುವ ಚಿತ್ರವನ್ನು ಹರಿಬಿಡಲಾಗಿತ್ತು. ಆ ಮೂಲಕ ಪಂಚ ರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಕೊಟ್ಟಿರುವ ಮೊದಲನೇ ಹಂತದಲ್ಲಿ 1000 ಕೋಟಿ ರೂಪಾಯಿ ಟಾರ್ಗೆಟ್ ನೀಡಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿತ್ತು.

ರಾಜ್ಯದ ಮತ್ತಷ್ಟು ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:51 pm, Thu, 19 October 23

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ