ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಿವೆ: ಕೈ ತಿರುಗೇಟು

| Updated By: ರಮೇಶ್ ಬಿ. ಜವಳಗೇರಾ

Updated on: Oct 04, 2022 | 4:03 PM

ಪರೇಶ್ ಮೇಸ್ತ ಸಾವು ಪ್ರಕರಣ ಹಾಗೂ ಸಿಬಿಐ ಬಿ ರಿಪೋರ್ಟ್ ವಿಚಾರ ಇದೀಗ ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.

ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಿವೆ: ಕೈ ತಿರುಗೇಟು
Paresh mesta
Follow us on

ಬೆಂಗಳೂರು : 2017 ಡಿಸೆಂಬರ್‌ 6ರಂದು ಉತ್ತರ ಕನ್ನಡ ಜಿಲ್ಲೆಯ ಘಟಿಸಿದ ಪರೇಶ್ ಮೆಸ್ತಾ ಎನ್ನುವ ಯುವಕನ ಸಾವು ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಭಾರೀ ಅಲ್ಲೋಲ-ಕಲ್ಲೋಲವಾಗಿತ್ತು. ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ, ಭಾರೀ ರಾಜಕೀಯ ಕೋಲಾಹಲ ಸೃಷ್ಟಿಸಿತ್ತು. ಇದೀಗ ಪರೇಶ್ ಮೆಸ್ತಾ ಸಾವಿನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಬಿಜೆಪಿಗೆ ಭಾರೀ ಮುಖಭಂಗವಾದಂತಾಗಿದೆ.

ಹೌದು….ಪರೇಶ್ ಮೆಸ್ತಾ ಸಾವಿಗೆ ಕೋಮುಬಣ್ಣ ಬಳಿದು ಕಾಂಗ್ರೆಸ್ ವಿರುದ್ಧ ಬೀದಿಗಳಿದು ದೊಡ್ಡ ರಂಪಾಟ ಮಾಡಿತ್ತು. ಆದ್ರೆ, ಇದೀಗ ಸಿಬಿಐ ಪರೇಶ್ ಮೆಸ್ತಾ ಸಾವು ಕೊಲೆ ಅಲ್ಲ. ಬದಲಿಗೆ ಅದೊಂದು ಅಹಜ ಸಾವು ಎಂದು ವರದಿ ನೀಡಿದೆ. ಇದರಿಂದ ಬಿಜೆಪಿಗೆ ಇರುಸುಮುರುಸು ಉಂಟಾಗಿದೆ. ಇನ್ನು ಇದೀಗ ಇದಕ್ಕೆ ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಬಿಜೆಪಿಗೆ ತಿರುಗೇಟು ನೀಡಿದೆ.

ಇದನ್ನೂ ಓದಿ: ಬಿಜೆಪಿ ಅಧಿಕಾರದ ಕುರ್ಚಿಯಲ್ಲಿ ಪರೇಶ್ ಮೇಸ್ತರಂಥ ಯುವಕರ ರಕ್ತ ಕಲೆ: ಸಿಬಿಐ ವರದಿ ಬೆನ್ನಲ್ಲೇ ಕ್ಷಮೆ ಕೇಳಲು ಸಿದ್ದರಾಮಯ್ಯ ಆಗ್ರಹ

ಪರೇಶ್ ಮೇಸ್ತ ಸಾವು ಪ್ರಕರಣ ಹಾಗೂ ಸಿಬಿಐ ಬಿ ರಿಪೋರ್ಟ್ ವಿಚಾರ ಇದೀಗ ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿ ಆರೋಪಕ್ಕೆ ಟಾಂಗ್ ಕೊಟ್ಟಿದೆ.


ಡಿ.ಕೆ ರವಿ ಪ್ರಕರಣ ವೈಯುಕ್ತಿಕ ಕಾರಣಗಳಿಗೆ ಆತ್ಮಹತ್ಯೆ ಎಂದು ಸಿಬಿಐ ವರದಿಯಲ್ಲಿ ತಿಳಿಸಲಾಗಿದೆ. ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಸರ್ಕಾರಕ್ಕೆ ಸಂಬಂಧವಿಲ್ಲ ಎಂದು ವರದಿ, ಈಗ ಪರೇಶ್ ಮೇಸ್ತಾ ಪ್ರಕರಣ ಸಹಜ ಸಾವು ಎಂದು ಸಿಬಿಐ ವರದಿ ನೀಡುವ ಮೂಲಕ ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿಬಂದಿದ್ದ ಆರೋಪಕ್ಕೆ ಕ್ಲಿನ್ ಚಿಟ್ ದೊರೆತಿದೆ ಎಂದು ಕಾಂಗ್ರೆಸ್ ವಿರುದ್ಧ ಸುಳ್ಳು ಹೇಳಿದ್ದ ಬಿಜೆಪಿ ರಾಜ್ಯದ ಕ್ಷಮೆ ಕೇಳಬೇಕು ಎಂದಿದೆ.

ಅಂದು ಭಾರೀ ರಾಜಕೀಯ ಕೋಲಾಹಲ ಸೃಷ್ಟಿಸಿದ್ದ ಹೊನ್ನಾವರ ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖಾ ವರದಿಯನ್ನು ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ವರದಿಯಲ್ಲಿ ಪರೇಶ್ ಮೇಸ್ತಾ ಸಾವು ಹತ್ಯೆಯಲ್ಲ, ಆಕಸ್ಮಿಕವಾಗಿ ಘಟಿಸಿದೆ ಎಂದು ಉಲ್ಲೇಖಿಸಲಾಗಿದೆ. ವರದಿ ಪರಿಶೀಲಿಸಿದ ಹೊನ್ನಾವರ ನ್ಯಾಯಾಲಯ ನವೆಂಬರ್ 16ಕ್ಕೆ ತೀರ್ಪು ಕಾಯ್ದಿರಿಸಿದೆ.

Published On - 4:02 pm, Tue, 4 October 22