AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರೇಶ್ ಮೇಸ್ತಾ ಪ್ರಕರಣದ ಸಿಬಿಐ ವರದಿ: ಸಮರ್ಥಿಸಿಕೊಳ್ಳಲು ಬಿಜೆಪಿಯಿಂದ ಹೊಸ ವರಸೆ

ಸಿಬಿಐ ತನಿಖಾ ವರದಿಯಿಂದ ಪರೇಶ್ ಮೇಸ್ತಾ ಸಾವು ಪ್ರಕರಣ ಹೊಸ ತಿರುವುಪಡೆದುಕೊಂಡಿದ್ದು, ರಾಜ್ಯ ರಾಜಕಾರಣದಲ್ಲಿ ಆರೋಪ-ಪತ್ಯಾರೋಪಗಳು ಶುರುವಾಗಿವೆ.

ಪರೇಶ್ ಮೇಸ್ತಾ ಪ್ರಕರಣದ ಸಿಬಿಐ ವರದಿ:  ಸಮರ್ಥಿಸಿಕೊಳ್ಳಲು ಬಿಜೆಪಿಯಿಂದ ಹೊಸ ವರಸೆ
ಸಂಸದ ತೇಜಸ್ವಿ ಸೂರ್ಯ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Oct 04, 2022 | 7:10 PM

Share

ಬೆಂಗಳೂರು: ಪರೇಶ್ ಮೇಸ್ತಾನನ್ನು ಕೊಲೆ ಮಾಡಿಲ್ಲ. ಅದೊಂದು ಸಹಜ ಸಾವು ಎಂದು ಸಿಬಿಐ ವರದಿ ನೀಡಿದ್ದು, ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಪರೇಶ್ ಮೇಸ್ತಾ ಸಾವಿನ ಪ್ರಕರಣದಲ್ಲಿ ಕೋಮುಬಣ್ಣ ಹಚ್ಚಿ ಅಂದಿನ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಬೀದಿಗಳಿದು ರಾಜಕೀಯ ಮೈಲೇಜ್ ಪಡೆದುಕೊಂಡಿತ್ತು.

ಇದೀಗ ಪರೇಶ್ ಮೇಸ್ತಾ ಕೇಸ್​ ಬಿ ರಿಪೋರ್ಟ್ ವಿಚಾರ ಇದೀಗ ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಸಿಬಿಐ ವರದಿ ಇದೀಗ ಆಡಳಿತರೂಢ ಬಿಜೆಪಿಗೆ ಇರುಸುಮುರುಸು ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅದನ್ನು ಸಮರ್ಥಿಸಿಕೊಳ್ಳಲು ಬಿಜೆಪಿ ನಾಯಕರು ಹೊಸ ವರಸೆ ಶುರು ಮಾಡಿದ್ದಾರೆ.

ಇದನ್ನೂ ಓದಿ: ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಿವೆ: ಕೈ ತಿರುಗೇಟು

 ಬಿಜೆಪಿಯ ಹೊಸ ವರಸೆ

ಪರೇಶ್ ಮೇಸ್ತಾನನ್ನು ಕೊಲೆ ಮಾಡಿಲ್ಲ ಎಂದು ಸಿಬಿಐ ವರದಿಯನ್ನು ಇಟ್ಟುಕೊಂಡು ಕಾಂಗ್ರೆಸ್​, ಬಿಜೆಪಿ ಮೇಲೆ ಮುಗಿಬಿದ್ದಿದೆ. ಇದರಿಂದ ಇದಕ್ಕೆ ತಿರುಗೇಟು ನೀಡಲು ಬಿಜೆಪಿ, ಪರೇಶ್ ಮೇಸ್ತಾ ಪೋಸ್ಟ್ ಮಾರ್ಟಮ್ ವರದಿ ಬರುವ ಮೊದಲೇ ಪ್ರೈಮರಿ ವರದಿ ನಾಶ ಮಾಡಿದ್ದಾರೆ ಎಂದು ಆರೋಪಿಸುತ್ತಿದೆ.

ಇನ್ನು ಈ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದು, ಸಿಬಿಐ ಮತ್ತು ಇಡಿ ಬಗ್ಗೆ ಬೆಳಗ್ಗೆ ರಾತ್ರಿ ಪ್ರಶ್ನೆ ಮಾಡ್ತಿದ್ದ ಕಾಂಗ್ರೆಸ್, ಈಗ ಸಿಬಿಐ ಪರವಾಗಿ ಮಾತನಾಡ್ತಿದ್ದಾರೆ. ಇದು ಅವರ ಅನುಕೂಲ ಸಿಂಧು ರಾಜಕಾರಣಕ್ಕೆ ಉದಾಹರಣೆ ಎಂದು ಟಾಂಗ್ ಕೊಟ್ಟಿದ್ದಾರೆ.

ಲೂಟಿ ಮಾಡಿದ್ದಾರೆ ಅಂತ ದಾಳಿ ಮಾಡಿದ್ರೆ ಸಿಬಿಐ ಸರಿ ಇಲ್ಲ ಅಂತಾರೆ. ಇಡಿ, ಐಟಿ ತನಿಖೆ ಮಾಡಿದ್ರೆ ಕೇಂದ್ರ ಸರ್ಕಾರದ ಕೈಗೊಂಬೆ ಅಂತ ಹೇಳ್ತಾರೆ. ಈಗ ಸಿಬಿಐ ವರದಿ ಕರೆಕ್ಟ್ ಅಂತಿದ್ದಾರೆ. ರಾಜ್ಯದ ಜನ ಎಲ್ಲರೂ ದಡ್ಡರಲ್ಲ. ಎಲ್ಲರೂ ರಾಹುಲ್ ಗಾಂಧಿ ಅಲ್ಲ ಎಂದು ಕಿಡಿಕಾರಿದರು.

ಪರೇಶ್ ಮೇಸ್ತಾ, ಶರತ್ ಮಡಿವಾಳ ಕೇಸ್ ಎಲ್ಲವೂ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಆಗಿದ್ದು. ಯಾವುದೇ ಕ್ರೈಮ್ ನಲ್ಲಿ 24ಗಂಟೆ, 48 ಗಂಟೆಗಳ ವರದಿ ಬಹಳ ಮುಖ್ಯ. ಪೋಸ್ಟ್ ಮಾರ್ಟಮ್ ವರದಿ ಬರುವ ಮೊದಲೇ ಪ್ರೈಮರಿ ವರದಿ ನಾಶ ಮಾಡಿದರು ಎಂದು ಕಾಂಗ್ರೆಸ್​ಸ್ ತಿರುಗೇಟು ನೀಡಿದರು.

ಸಿಬಿಐಗೆ ಪರೇಶ್ ಮೇಸ್ತಾ ಕೇಸ್ ಕೊಡುವಾಗ ಕಾಂಗ್ರೆಸ್ ಸರ್ಕಾರ ಏನೆಲ್ಲಾ ಮಾಡಿದೆ ಅನ್ನೋದು ನಮಗೆ ಗೊತ್ತಿದೆ. ಶರತ್ ಮಡಿವಾಳ ಹತ್ಯೆ ಆದಾಗ ನಾನು ಮನೆಗೆ ಹೋಗಿದ್ದಾಗ ಪೋಸ್ಟ್ ಮಾರ್ಟಮ್ ವರದಿ ಬಂದಿರಲಿಲ್ಲ. ಆಗ ಸಿದ್ದರಾಮಯ್ಯ ಮಂಗಳೂರು ಪ್ರವಾಸದಲ್ಲಿದ್ದರು. ಅವರ ಕಾರ್ಯಕ್ರಮಕ್ಕೆ ತೊಂದರೆ ಆಗಬಾರದು ಅಂತ ಶವವನ್ನೂ ಹಸ್ತಾಂತರ ಮಾಡಿರಲಿಲ್ಲ. ಈ ಎಲ್ಲಾ ವಿಚಾರ ಬಹಳ ಸ್ಪಷ್ಟವಾಗಿದೆ ಎಂದರು.

ಈಗ ಯಾವುದೋ ರಿಪೋರ್ಟ್ ಬಂತು ಅಂತ 175 ಪಿಎಫ್ ಐ, ಕೆಎಫ್ ಡಿ ಕೇಸ್ ವಾಪಸ್ ಪಡೆದಿದ್ದು ಸುಳ್ಳಾಗಲ್ಲ. ಅನುಕೂಲ ಸಿಂಧು ರಾಜಕಾರಣ ಮಾಡಲಾಗಿದೆ. ಟಿಪ್ಪು ಜಯಂತಿ ಮಾಡಿ ಇಡೀ ರಾಜ್ಯಕ್ಕೆ ಬೆಂಕಿ ಹಚ್ಚಿದ್ದು ಜನ ಮರೆಯಲು ಆಗಲ್ಲ. ಈಗ ಬಂದ ವರದಿ ಇವರಿಗೆ ಸಹಾಯಕ್ಕೆ ಬರಲ್ಲ. ಕುಟ್ಟಪ್ಪ ಅವರಿಂದ ಹಿಡಿದು ರುದ್ರೇಶ್ ಹತ್ಯೆವರೆಗೂ ಯುಎಪಿಎ ಕೇಸ್ ಸರಿಯಾಗಿ ಹಾಕದೆ, ಅವರಿಗೆ ತಕ್ಷಣಕ್ಕೆ ಬೇಲ್ ಸಿಗುವಂತೆ ಮಾಡಿದರು ಎಂದು ಆರೋಪಿಸಿದರು.

ಕಾಂಗ್ರೆಸ್ ನವರಿಗೆ ಪಿಎಫ್ ಐ ಬ್ಯಾನ್ ಮಾಡಿರುವುದು ಹೇಳಿಕೊಳ್ಳಲಾಗದಷ್ಟು ನೋವಾಗ್ತಿದೆ. ಅವರೆಲ್ಲಾ ನಮ್ಮ ಬ್ರದರ್ಸ್ ಅಂತ ಅವರೇ ಹೇಳಿದ್ದರು . ಈಗ ಬ್ರದರ್ಸ್ ಬ್ಯಾನ್ ಮಾಡಿರೋದ್ರಿಂದ ನೋವಾಗಿದೆ. ಅದನ್ನು ಹೇಳಿಕೊಳ್ಳಲಾಗದೇ ಈಗ ಅವರನ್ನು ಪ್ರೋತ್ಸಾಹಿಸೋ ಕೆಲಸ ಮಾಡಲಾಗ್ತಿದೆ ಎಂದು ಹೇಳಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ