ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡಿದ ಆರೋಪ, ಮಾಜಿ ಶಾಸಕ ವಾಸುಗೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ತೂಗುಗತ್ತಿ

| Updated By: ರಮೇಶ್ ಬಿ. ಜವಳಗೇರಾ

Updated on: Jul 21, 2023 | 10:50 AM

ವಿಧಾನಸಭೆ ಚುನಾವಣೆ ಪಕ್ಷ ವಿರೋಧ ಚಟುವಟಿಕೆ ಮಾಡಿದ ಆರೋಪ ಹಿನ್ನೆಲೆಯಲ್ಲಿ ಮಾಜಿ ಶಾಸಕ ಮಾಜಿ ಶಾಸಕ ವಾಸುಗೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ತೂಗುಗತ್ತಿ ನೇತಾಡುತ್ತಿದೆ.

ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡಿದ ಆರೋಪ, ಮಾಜಿ ಶಾಸಕ ವಾಸುಗೆ ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ತೂಗುಗತ್ತಿ
ಪಿ ವಾಸು
Follow us on

ಮೈಸೂರು, (ಜುಲೈ 21): ವಿಧಾನಸಭೆ ಚುನಾವಣೆಯಲ್ಲಿ (Karnataka Assembly Elections 2023) ಪಕ್ಷ ವಿರೋಧ ಚಟುವಟಿಕೆ ಮಾಡಿದ ಆರೋಪ ಕೇಳಿಬಂದಿದ್ದರಿಂದ ಮಾಜಿ ಶಾಸಕ ಪಿ.ವಾಸುಗೆ(P Vasu) ಕಾಂಗ್ರೆಸ್ (Congress) ಪಕ್ಷದಿಂದ ಉಚ್ಚಾಟನೆ ತೂಗುಗತ್ತಿ ನೇತಾಡುತ್ತಿದೆ. ಪಕ್ಷ ವಿರೋಧಿ ಚಟುವಟಿಕೆ ದೂರು ಬಂದ ಹಿನ್ನೆಯಲ್ಲಿ ಕಾಂಗ್ರೆಸ್ ಶಿಸ್ತುಪಾಲನ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಅವರು ವಾಸುಗೆ ನೋಟಿಸ್ ನೀಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದೀರಿ. ಚಾಮರಾಜ ಕ್ಷೇತ್ರದ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದೀರಿ. ಈ ಬಗ್ಗೆ ಕೆಪಿಸಿಸಿಗೆ ಲಿಖಿತ ಪತ್ರ ಬಂದಿದೆ. ನಿಮಗೆ ಪತ್ರ ಬಂದ 7 ದಿನಗಳಳೊಗೆ ಲಿಖಿತ ವಿವರಣೆ ಕೊಡಿ ಎಂದು ನೋಟಿಸ್​ನಲ್ಲಿ ಸೂಚಿಸಿದ್ದಾರೆ.

ಇದನ್ನೂ ಓದಿ: ಮೈಸೂರು ಕಾಂಗ್ರೆಸ್​​ನಲ್ಲಿ ಅಂತರಿಕ ಜಗಳ ಬಹಿರಂಗ: ಸಿದ್ದರಾಮಯ್ಯಗೆ ಬೆಂಬಲ ನೀಡದ ಮಾಜಿ ಶಾಸಕಗೆ ಪಕ್ಷದಿಂದ ಗೇಟ್ ಪಾಸ್‌?

ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿಸಿ ಮೇಲುಗೈ ಸಾಧಿಸಿದ್ದ ಸಿದ್ದರಾಮಯ್ಯ ಬೆಂಬಲಿಗರು, ಇದೀಗ ವಾಸುಗೆ ಪಕ್ಷದಿಂದ ಗೇಟ್ ಪಾಸ್ ಕೊಡಿಸಲು ಶತ ಪ್ರಯತ್ನ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ಗೆ ಜೈ‌ ಎಂದಿದ್ದೆ ವಾಸುಗೆ‌ ಮುಳುವಾಗುತ್ತಿದೆಯಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಟಿಕೆಟ್​ ತಪ್ಪಿಸಿದ್ದಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಪಿ ವಾಸು ಅವರು ಸಿದ್ದರಾಮಯ್ಯಗೆ ಬೆಂಬಲ ನೀಡಿಲ್ಲ. ಈ ಬಗ್ಗೆ ಕೆಲ ನಾಯಕರು ಸಿದ್ದರಾಮಯ್ಯನವರ ಗಮನಕ್ಕೆ ತಂದಿದ್ದು, ಇದಕ್ಕೆ ಸಿಎಂ ಗರಂ ಆಗಿದ್ದು, ತಮ್ಮ ಬೆಂಬಲಿಗರನ್ನು ವಾಸು ವಿರುದ್ಧ ಛೂ ಬಿಟ್ಟಿದ್ದಾರೆ.

ಮಾಜಿ ನಗರಸಭೆ ಸದಸ್ಯ, ಸಿದ್ದರಾಮಯ್ಯನವರ ಬೆಂಬಲಿಗ ಆರ್.ಸುನಂದಕುಮಾರ್, ಈ ಬಗ್ಗೆ ಮೈಸೂರು ಜಿಲ್ಲಾಧ್ಷಕ್ಷ ಆರ್ ಮೂರ್ತಿ ಅವರಿಗೆ ಪತ್ರ ಬರೆದಿದ್ದು, ವಾಸು ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡಿದ್ದಾರೆ. ಅಲ್ಲದೇ ಚಾಮರಾಜ ಕ್ಷೇತ್ರದಲ್ಲೂ ಸಹ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದಾರೆ. ಹೀಗಾಗಿ ವಾಸು ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಒತ್ತಾಯಿಸಿದ್ದರು. ಇದೀಗ ಕಾಂಗ್ರೆಸ್ ಶಿಸ್ತುಪಾಲನ ಸಮಿತಿಯಿಂದಲೂ ಸಹ ನೋಟಿಸ್​ ಜಾರಿಯಾಗಿದ್ದು, ಉಚ್ಚಾಟನೆ ತೂಗುಗತ್ತಿ ನೇತಾಡುತ್ತಿದೆ.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 10:49 am, Fri, 21 July 23