AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ನಾಯಕರು ಗೋಡ್ಸೆ ಪ್ರತಿಮೆ ಮುಂದೆ ಧರಣಿ ಮಾಡಬೇಕಿತ್ತು, ಸದನ ಬಹಿಷ್ಕಾರಕ್ಕೆ ಸಿದ್ದರಾಮಯ್ಯ ಚಾಟಿ

ಬಿಜೆಪಿ ಶಾಸಕರು, ವಿಧಾನಪರಿಷತ್ ಸದಸ್ಯರು ಕಲಾಪ ಬಹಿಷ್ಕರಿಸಿ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಮಾಡಿದ್ದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಲೇವಡಿ ಮಾಡಿದ್ದಾರೆ.

ಬಿಜೆಪಿ ನಾಯಕರು ಗೋಡ್ಸೆ ಪ್ರತಿಮೆ ಮುಂದೆ ಧರಣಿ ಮಾಡಬೇಕಿತ್ತು, ಸದನ ಬಹಿಷ್ಕಾರಕ್ಕೆ ಸಿದ್ದರಾಮಯ್ಯ ಚಾಟಿ
ಗಾಂಧಿ ಪ್ರತಿಮೆ ಮುಂದೆ ಬಿಜೆಪಿ ಪ್ರತಿಭಟನೆ
ಪ್ರಸನ್ನ ಗಾಂವ್ಕರ್​
| Updated By: ರಮೇಶ್ ಬಿ. ಜವಳಗೇರಾ|

Updated on: Jul 21, 2023 | 1:08 PM

Share

ಬೆಂಗಳೂರು, (ಜುಲೈ 21): ಸದನದ (Karnataka Assembly Session 2023) ಕೊನೆ ದಿನವಾದ ಇಂದು (ಜುಲೈ 21) ಸಹ ವಿಪಕ್ಷಗಳಾದ ಜೆಡಿಎಸ್ (JDS) ಹಾಗೂ ಬಿಜೆಪಿ (BJP) ಬಹಿಷ್ಕಾರ ಮಾಡುವೆ. ತಮ್ಮ ಶಾಸರಕನ್ನು ಸದನದಿಂದ ಅಮಾನತು ಮಾಡಿದ್ದರಿಂದ ಬಿಜೆಪಿ ನಾಯಕರು ರಾಜ್ಯಪಾಲರಿಗೆ ಈಗಾಗಲೇ ದೂರು ನೀಡಿದ್ದು, ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆ ಮುಂದುವರಿಸಿದೆ. ಇನ್ನು ಇದಕ್ಕೆ ವಿಧಾನ ಪರಿಷತ್​ನಲ್ಲಿ ಬಜೆಟ್​ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah )  ವಿಪಕ್ಷ ಕಲಾಪ ಬಹಿಷ್ಕಾರಕ್ಕೆ ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಗಾಂಧಿ ಪ್ರತಿಮೆ ಮುಂದೆ ಕುಳಿತು ಬಿಜೆಪಿಯವರು ಧರಣಿ ನಡೆಸಿದ್ದಾರೆ. ಬಿಜೆಪಿ ನಾಯಕರು ಗೋಡ್ಸೆ ಪ್ರತಿಮೆ ಮುಂದೆ ಧರಣಿ ಮಾಡಬೇಕಿತ್ತು. ಗಾಂಧಿ ಕೊಂದವರು ಅದೇ ಪ್ರತಿಮೆ ಮುಂದೆ ಧರಣಿ ನಡೆಸಿದ್ದು ವಿಪರಿಯಾಸ. ಸುಳ್ಳು ಹೇಳುವುದು, ಸಂಘರ್ಷ ಉಂಟು ಮಾಡುವುದು,ಸಮಾಜ ಒಡೆಯುವುದೇ ಬಿಜೆಪಿಯವರು ಮಾಡುವ ಕೆಲಸ ಎಂದು ಚಾಟಿ ಬೀಸಿದರು

ಇದನ್ನೂ ಓದಿ: ಬಿಜೆಪಿ ಮುಕ್ತ ಭಾರತವಾಗಲಿ ಅಂತಾ ಹೇಳುವುದಿಲ್ಲ, ಆದರೆ ಅವನತಿ ಶುರುವಾಗಿದೆ ಎಂದ ಸಿಎಂ ಸಿದ್ಧರಾಮಯ್ಯ

ವಿರೋಧ ಪಕ್ಷದವರು ಇಲ್ಲದೆಯೇ ಉತ್ತರ ನೀಡುತ್ತಿದ್ದೇನೆ. ಇದು ಬಿಜೆಪಿ, ಜೆಡಿಎಸ್​ನ ಜನವಿರೋಧಿ ನೀತಿ ಎಂದು ಗೊತ್ತಾಗುತ್ತೆ. ವಿಪಕ್ಷಗಳಿಗೆ ಟೀಕೆ ಮಾಡುವುದು, ಧರಣಿ ನಡೆಸುವ ಹಕ್ಕು ಇದೆ. ಸದನದ ಬಾವಿಗಿಳಿದು ಸರ್ಕಾರದ ಗಮನ ಸೆಳೆಯುವುದು ಅವರ ಹಕ್ಕು. ಆದರೆ ಡೆಪ್ಯುಟಿ ಸ್ಪೀಕರ್​ ವಿರುದ್ಧ ಅಮಾನುಷವಾಗಿ ನಡೆದುಕೊಂಡ್ರು. ಹೀಗಾಗಿ ಅನಾಗರಿಕವಾಗಿ ನಡೆದುಕೊಂಡ ಕೆಲ ಶಾಸಕರನ್ನು ಅಮಾನತು ಮಾಡಲಾಗಿದೆ. ಬಿಜೆಪಿ, ಜೆಡಿಎಸ್​​ ಸದನಕ್ಕೆ ಹಾಜರಾಗಬೇಕಿತ್ತು, ಆದರೆ ಹಾಜರಾಗಿಲ್ಲ ಎಂದು ಕಿಡಿಕಾರಿದರು.

ದಲಿತ ಡೆಪ್ಯುಟಿ ಸ್ಪೀಕರ್ ಮೇಲೆ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಮಾರ್ಷಲ್ ಇಲ್ಲದಿದ್ದರೆ ಏನು ಮಾಡುತ್ತಿದ್ದರೋ ಏನೋ/. ಅದಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ. ಒಂದು ಶಿಸ್ತು ಇರಬೇಕಲ್ಲ, ಪರಿಷತ್​ನಲ್ಲಿ ಗಲಾಟೆ ಆಗಿರಲಿಲ್ಲ. ಬಿಜೆಪಿಯವರು ಇಲ್ಲಿ(ಪರಿಷತ್​ ಕಲಾಪಕ್ಕೆ) ಹಾಜರಾಗಬಹುದಿತ್ತು ಎಂದು ಹೇಳಿದರು.

ಪರಿಷತ್​ನಲ್ಲಿ ಬಜೆಟ್​ ಮೇಲಿನ ಚರ್ಚೆಗೆ ಸಿಎಂ ಉತ್ತರ ನೀಡಿರುವ ಬಗ್ಗೆ ಮಾಜಿ ಸಚಿವ ಆರ್​.ಅಶೋಕ್ ಪ್ರತಿಕ್ರಿಯಿಸಿದ್ದು, ವಿಪಕ್ಷ ಇಲ್ಲದೆ ಕಾಂಗ್ರೆಸ್ ಸರ್ಕಾರ ಬಜೆಟ್ ಪಾಸ್ ಮಾಡುತ್ತಿದೆ. ಕಾಂಗ್ರೆಸ್​ನವರಿಗೆ ಮಾನಮಾರ್ಯದೆ ಇದಿಯಾ? ರಾಜಾರೋಷವಾಗಿ ಭಾಷಣ ಮಾಡುವ ಸಿಎಂ ಸಿದ್ದರಾಮಯ್ಯ, ನಾವಿದ್ದಾಗ ಬಜೆಟ್​ಗೆ ಉತ್ತರಿಸದೆ ನಾವಿಲ್ಲದಾಗ ಭಾಷಣ ಮಾಡ್ತಿದ್ದಾರೆ. ಅದು ಉತ್ತರ ಕುಮಾರನ ಪೌರುಷ ಎಂದು ವಾಗ್ದಾಳಿ ನಡೆಸಿದರು.

ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ