ಶಾಸಕರ ತರಬೇತಿ ಶಿಬಿರದಲ್ಲಿ ಚುನಾವಣಾ ಟಾರ್ಗೆಟ್‌ ಗುಟ್ಟು ರಟ್ಟು ಮಾಡಿದ ಡಿಕೆ ಶಿವಕುಮಾರ್; ಏನದು?

| Updated By: Ganapathi Sharma

Updated on: Jun 27, 2023 | 10:55 PM

ಇದೇ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದ ಶಾಸಕರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಹದೇವಪುರದ ಕ್ಷೇಮವನದಲ್ಲಿ ಹಮ್ಮಿಕೊಂಡಿರುವ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ತಮಗೆ ನೀಡಲಾಗಿದ್ದ ಚುನಾವಣಾ ಟಾರ್ಗೆಟ್​​ನ ಗುಟ್ಟು ರಟ್ಟು ಮಾಡಿದ್ದಾರೆ.

ಶಾಸಕರ ತರಬೇತಿ ಶಿಬಿರದಲ್ಲಿ ಚುನಾವಣಾ ಟಾರ್ಗೆಟ್‌ ಗುಟ್ಟು ರಟ್ಟು ಮಾಡಿದ ಡಿಕೆ ಶಿವಕುಮಾರ್; ಏನದು?
ಡಿಕೆ ಶಿವಕುಮಾರ್
Follow us on

ಬೆಂಗಳೂರು: ಇದೇ ಮೊದಲ ಬಾರಿಗೆ ವಿಧಾನಸಭೆಗೆ ಆಯ್ಕೆಯಾದ ಶಾಸಕರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಹದೇವಪುರದ ಕ್ಷೇಮವನದಲ್ಲಿ ಹಮ್ಮಿಕೊಂಡಿರುವ ತರಬೇತಿ ಶಿಬಿರದಲ್ಲಿ ಭಾಗವಹಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar), ತಮಗೆ ನೀಡಲಾಗಿದ್ದ ಚುನಾವಣಾ ಟಾರ್ಗೆಟ್​​ನ ಗುಟ್ಟು ರಟ್ಟು ಮಾಡಿದ್ದಾರೆ. ಅದು ಬಿಜೆಪಿಯ ಮೂವರು ಶಾಸಕರಿಗೆ ಸಂಬಂಧಿಸಿದ್ದ ಟಾರ್ಗೆಟ್‌ ಆಗಿತ್ತು ಎಂದು ಅವರು ಹೇಳಿದ್ದಾರೆ.

ಆಗ ಡಬಲ್ ಎಂಜಿನ್ ಸರ್ಕಾರವಿತ್ತು, ಬಿಜೆಪಿಯವರು ಏನೇನೋ ಮಾಡಿದ್ದರು. ಆದ್ರೆ ನಾನು ಟಾರ್ಗೆಟ್‌ ಶೂಟ್ ಮಾಡಿದೆ, ಅದು ಉತ್ತಮವಾಗಿತ್ತು. ನಮಗೆ ಜಯನೂ ಸಿಕ್ಕಿತ್ತು. ನಮಗೆ ಇನ್ನೂ ಬಿಜೆಪಿಯ ಮೂರರಿಂದ ನಾಲ್ಕು ಶಾಸಕರ ಟಾರ್ಗೆಟ್‌ ಇತ್ತು. ಆ ಟಾರ್ಗೆಟ್ ಮಿಸ್ ಆಯಿತು, ಪರವಾಗಿಲ್ಲ ಮುಂದೆ ನೋಡೋಣ ಎಂದು 2ನೇ ದಿನದ ತರಬೇತಿ ಶಿಬಿರದಲ್ಲಿ ಶಿವಕುಮಾರ್ ಹೇಳಿದ್ದಾರೆ.

ಜನರಿಗಾಗಿ ಶ್ರಮಿಸಿ, ಜನರ ಸ್ವಾಭಿಮಾನಕ್ಕೆ ಯಾವುದೇ ರೀತಿ ಧಕ್ಕೆ ತರಬೇಡಿ. ಸ್ವಾಭಿಮಾನಕ್ಕೆ ಧಕ್ಕೆ ತಂದ್ರೆ ಜನರು ನಿಮ್ಮ ಜೊತೆ ನಿಲ್ಲಲ್ಲ ಎಂದು ಡಿಕೆ ಶಿವಕುಮಾರ್ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಜನರಿಗಾಗಿ ಶ್ರಮಿಸಿದರೆ ಅವರು ನಮ್ಮ ಜತೆ ನಿಲ್ಲುತ್ತಾರೆ ಎಂಬುದಕ್ಕೆ ನಾನೇ ಉದಾಹರಣೆ. ಬಿಜೆಪಿಯವರು ನನ್ನನ್ನು ಜೈಲಿಗೆ ಹಾಕಿಸಿದ್ರು. ನಾನು ಜೈಲಿಗೆ ಹೋದೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿಚಾರಣೆಯನ್ನು ಎದುರಿಸಿದೆ. ಆದ್ರೆ 50ರಿಂದ 75 ಸಾವಿರ ಜನರು ಬಂದು ನನ್ನ ಮೆರವಣಿಗೆ ಮಾಡಿದರು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಅಕ್ಕಿ ಪಾಲಿಟಿಕ್ಸ್: ಕಾಂಗ್ರೆಸ್ ಸರ್ಕಾರದ ಆರೋಪಕ್ಕೆ ಬಿಜೆಪಿ ಕೌಂಟರ್, ಮನೆ ಮನೆ ಅಭಿಯಾನಕ್ಕೆ ಸೂಚನೆ

ಹೊಸದಾಗಿ ಆಯ್ಕೆಯಾದ ಶಾಸಕರಿಗೆ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಮೂರು ದಿನಗಳ ಶಿಬಿರ ಆಯೋಜಿಸಿದ್ದಾರೆ. ಈ ಶಿಬಿರಕ್ಕೆ ಆಯ್ಕೆ ಮಾಡಿದ ಸಂಪನ್ಮೂಲ ವ್ಯಕ್ತಿಗಳ ಬಗ್ಗೆ ವಿವಾದ ಸೃಷ್ಟಿಯಾಗಿತ್ತು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ, ಶಿಕ್ಷಣ ತಜ್ಞ ಗುರುರಾಜ ಕರಜಗಿ ಅವರನ್ನು ಆಯ್ಕೆ ಮಾಡಿದ್ದಕ್ಕೆ ಎಡಪಂಥೀಯರಿಂದ ವಿರೋಧ ವ್ಯಕ್ತವಾಗಿತ್ತು. ಆದರೆ, ತಮ್ಮ ನಡೆಯನ್ನು ಖಾದರ್ ಸಮರ್ಥಿಸಿಕೊಂಡಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:54 pm, Tue, 27 June 23