Viral Video: ಕೋಲಾರ ಅಭಿವೃದ್ಧಿ ಮಾಡುವವರಿಗೆ ಮಾತ್ರ ವೋಟ್, ಮತದಾರರು ಮತ್ತು ರೈತರಿಂದ ಆಣೆ ಪ್ರಮಾಣ

| Updated By: Rakesh Nayak Manchi

Updated on: Jan 28, 2023 | 7:08 PM

Karnataka Election 2023: ಸಚಿವರಂತೆ ಕೋಲಾರದಲ್ಲಿ ಮತದಾರರಿಂದಲೂ ಆಣೆ ಪ್ರಮಾಣ ಮಾಡುತ್ತಿದ್ದಾರೆ. ರೈತರ ಮೇಲೆ ಗೋಲಿ ಬಾರ್, ಲಾಠಿ ಚಾರ್ಚ್ ಮಾಡಿರುವ ಸರ್ಕಾರಗಳಿಗೆ ವೋಟ್ ಹಾಕುವುದಿಲ್ಲ, ಅಭಿವೃದ್ದಿ ಮಾಡದ ರೈತರ ನಿಲುವಿಗೆ ನಿಲ್ಲದ ಹೊರಗಿನವರಿಗೆ ಮಣೆ ಹಾಕಲ್ಲ ಎನ್ನುತ್ತಿದ್ದಾರೆ.

Viral Video: ಕೋಲಾರ ಅಭಿವೃದ್ಧಿ ಮಾಡುವವರಿಗೆ ಮಾತ್ರ ವೋಟ್, ಮತದಾರರು ಮತ್ತು ರೈತರಿಂದ ಆಣೆ ಪ್ರಮಾಣ
ಆಣೆ ಪ್ರಮಾಣ ಮಾಡುತ್ತಿರುವ ಮತದಾರರು
Follow us on

ಕೋಲಾರ: ಜಿಲ್ಲೆಯಲ್ಲಿ ಆಣೆ ಪ್ರಮಾಣ ರಾಜಕೀಯ ಮುಂದುವರಿದಿದೆ. ಯಥಾ ರಾಜ ತಥಾ ಪ್ರಜೆ ನಾಣ್ಣುಡಿಯಂತೆ ಮತದಾರರು ಸಚಿವರ ಅಣೆ ಪ್ರಮಾಣ ಹಾದಿ ಹಿಡಿದಿದ್ದಾರೆ. ಯಾರು ಕೋಲಾರವನ್ನು (Kolar) ಅಭಿವೃದ್ಧಿ ಮಾಡಿಲ್ಲವೋ, ಮಾಡುವುದಿಲ್ಲವೋ, ರೈತರ ಪರ ಇಲ್ಲವೋ ಅಥವಾ ಹೊರಗಿನವರಿಗೆ ಮತ ನೀಡುವುದಿಲ್ಲ ಎಂದು ಆಣೆ ಹಾಕುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದಾಗ ಕೋಲಾರದಲ್ಲಿ ಮತದಾರರು, ರೈತರು ಜಾಗೃತರಾದಂತೆ ಕಾಣುತ್ತಿದೆ.

ಕೋಲಾರ ಅಭಿವೃದ್ಧಿ ಮಾಡುವವರಿಗೆ ಮಾತ್ರ ಮತ ಮಾಡುತ್ತೇವೆ, ಸಮಗ್ರ ಅಭಿವೃದ್ದಿ, ನಿಷ್ಠಾವಂತ ಅಭ್ಯರ್ಥಿಗಳಿಗೆ ಮತ ಹಾಕುತ್ತೇವೆ. ಅಭಿವೃದ್ಧಿ ಮಾಡದ ಮಂತ್ರಿ, ಶಾಸಕರಿಗೆ, ರಸ್ತೆಗಳನ್ನ ಹಳ್ಳಕೊಳ್ಳಗಳನ್ನ ಮಾಡಿರುವ, ರೈತರ ಮೇಲೆ ಗೋಲಿ ಬಾರ್, ಲಾಠಿ ಚಾರ್ಚ್ ಮಾಡಿರುವ ಸರ್ಕಾರಗಳಿಗೆ ವೋಟ್ ಹಾಕುವುದಿಲ್ಲ ಎಂದು ಮತದಾರರು ಹಾಗೂ ರೈತರು ನಿರ್ಧರಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಬೌಲಿಂಗ್ ಕೋಲಾರದ ಕಡೆ ಹಾಕಿ, ರನ್ ವರಣಾ ಕಡೆ ಓಡ್ತಾರೆ: ಮಾಜಿ ಶಿಷ್ಯನ ಅಚ್ಚರಿ ಹೇಳಿಕೆ

ಮತದಾರರ ಮುಂದುವರಿದ ಆಣೆ ಪ್ರಮಾಣದಂತೆ, ಅಭಿವೃದ್ಧಿ ಮಾಡದ ರೈತರ ನಿಲುವಿಗೆ ನಿಲ್ಲದ ಹೊರಗಿನವರಿಗೆ ಮಣೆ ಹಾಕುವುದಿಲ್ಲ. ಸ್ಥಳೀಯ ಅಭ್ಯರ್ಥಿಗಳಿಗೆ ಮಾತ್ರ ಮತ ನೀಡುತ್ತೇವೆ. ಮಾರಾಟವಾಗುವ, ಪಕ್ಷಾಂತರಿಗಳಿಗೆ ಯಾವುದೇ ಕಾರಣಕ್ಕೂ ಮತ ಹಾಕುವುದಿಲ್ಲ. ಈ ಮೂಲಕ ನಾವು ಸತ್ಯವನ್ನೆ ಹೇಳುತ್ತೇವೆ ಈ ಬಾರಿ ರೈತರು, ಸ್ಥಳೀಯರಿಗೆ ಆಧ್ಯತೆ ಕೊಡುತ್ತೇವೆ ಎಂದು ಪ್ರಮಾನ ಪಡೆದ ವಿಡಿಯೋ ವೈರಲ್ ಆಗುತ್ತಿದೆ.

ಟಿಕೆಟ್ ಆಕಾಂಕ್ಷಿಗಳನ್ನು ಒಂದು ಮಾಡಿಸಿ ಒಂದು ವೇಳೆ ಟಿಕೆಟ್ ಕೈತಪ್ಪಿ ಹೋದರೆ ಬಂಡಾಯ ಏಳದೆ ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ ಮಾಡಬೇಕೆಂದು ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರು ಆಣೆ ಪ್ರಮಾಣ ಮಾಡಿಸಿದ್ದರು. ಆಣೆ ಪ್ರಮಾಣದ ವಿಡಿಯೋ ಸಹ ವೈರಲ್ ಆಗಿತ್ತು. ಈ ಬಗ್ಗೆ ಸ್ವತಃ ಸಚಿವ ಮುನಿರತ್ನ ಸಮರ್ಥಿಸಿಕೊಂಡಿದ್ದರು.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ಕ್ಷೇತ್ರವೆಂದರೆ ಅದು ಕೋಲಾರ. ಇದಕ್ಕೆ ಕಾರಣ ಮೈಸೂರು ಮೂಲದವರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರದಿಂದ ಕಣಕ್ಕಿಳಿಯುತ್ತಿರುವುದು. ಚಾಮುಂಡೇಶ್ವರಿ, ಬಾದಾಮಿ ಬಿಟ್ಟು ಕೋಲಾರಕ್ಕೆ ಸಿದ್ದರಾಮಯ್ಯ ಲಗ್ಗೆ ಇಟ್ಟಿದ್ದು, ತಾನು ಗೆದ್ದೇ ಗೆಲ್ಲುತ್ತೇನೆ ಎಂಬ ಹುಮ್ಮಸ್ಸಿನಲ್ಲೂ ಇದ್ದಾರೆ. ಪಕ್ಷದೊಳಗಿನ ಬಣ ರಾಜಕೀಯ, ಜಾತಿ ರಾಜಕೀಯ ಸಿದ್ದುಗೆ ಕೋಲಾರದಲ್ಲಿ ಕೊಂಚ ಹೊಡೆತ ನೀಡುವ ಸಾಧ್ಯತೆ ಇದ್ದು, ಇನ್ನೊಂದೆಡೆ ವಿರೋಧಿ ಪಕ್ಷಗಳಾದ ಬಿಜೆಪಿ, ಜೆಡಿಎಸ್ ಕೂಡ ಸಿದ್ದರಾಮಯ್ಯರನ್ನು ಸೋಲಿಸಿಯೇ ಸೋಲಿಸುತ್ತೇವೆ ಎಂದು ತಂತ್ರಗಾರಿಕೆ ಹೂಡುತ್ತಿದ್ದಾರೆ. ಈ ನಡುವೆ ಹೊರಗಿನವರಿಗೆ ಮತ ನೀಡುವುದಿಲ್ಲ, ಸ್ಥಳೀಯರಿಗೆ ಮತ ನೀಡುತ್ತೇವೆ ಎಂದು ಅಲ್ಲಿನ ಮತದಾರರು ಹೇಳುತ್ತಿರುವುದನ್ನು ನೋಡಿದರೆ ಸಿದ್ದರಾಮಯ್ಯರ ಗೆಲುವಿಗೆ ಹೊಡೆತ ನೀಡಬಹುದಾ? ಕಾದು ನೋಡಬೇಕಿದೆ.

ರಾಜಕೀಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:51 pm, Sat, 28 January 23