ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ಬಗ್ಗೆ ಚರ್ಚೆ ಮಾಡೋದು ಬೇಡ: ಮುನಿರತ್ನ
ಭ್ರಷ್ಟಾಚಾರವನ್ನು ಮಾಡಿರುವವರೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಡಿಕೆಶಿ ಮಾತಿಗೆ ವ್ಯಂಗ್ಯವಾಗಿ ಉತ್ತರಿಸಿದ ಸಚಿವರು ೪೦ ಪರ್ಸೆಂಟ್ ಕುರಿತು ಮಾತನಾಡುವವರು ನ್ಯಾಯಾಲಯಕ್ಕೆ ಬಂದು ಉತ್ತರ ಕೊಡಲಿ ಎಂದಿದ್ದಾರೆ
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ (Siddaramaiah) ಸ್ಪರ್ಧೆ ವಿಚಾರ ಬಗ್ಗೆ ಚರ್ಚೆ ಮಾಡುವುದು ಬೇಡ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ (Muniratna) ಹೇಳಿದ್ದಾರೆ. ಚುನಾವಣೆ ಸ್ಪರ್ಧೆ ಬಗ್ಗೆ ಯಾರು ಎಲ್ಲಿ ಬೇಕಾದರೂ ಹೇಳಬಹುದು. ಆದರೆ ಸ್ಪರ್ಧೆ ಮಾಡಿದಾಗ ಮಾತ್ರ ಗೊತ್ತಾಗುತ್ತದೆ ಎಂದು ಸಚಿವರು ಹೇಳಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ರೈತರಿಗಾಗಿ ಹಲವು ಯೋಜನೆಗಳನ್ನು ಜಾರಿ ಮಾಡುತ್ತೇವೆ. 8 ಕೋಟಿ 55 ಲಕ್ಷ ವೆಚ್ಚದ ಕ್ರೀಡಾಂಗಣ ಅಭಿವೃದ್ಧಿಗೆ ಚಾಲನೆ, ಜಿಲ್ಲೆಯ ಎಲ್ಲಾ ಕೆರೆ ಅಭಿವೃದ್ದಿಗೆ ನಮ್ಮ ಸರ್ಕಾರ ಬದ್ದವಾಗಿದೆ. ರಸ್ತೆಗಳಲ್ಲಿನ ಗುಂಡಿಯ ಬಗ್ಗೆ ಸಾರ್ವಜನಿಕರೇ ಉತ್ತರ ಕೊಡುತ್ತಾರೆ. ಚುನಾವಣೆ ಬಂದಿದೆ ಎಂದು ಕೆಲವರು ಸಖತ್ ಅಲರ್ಟ್ ಆಗಿದ್ದಾರೆ.ಅದಕ್ಕಾಗಿ ರಸ್ತೆ ಗುಂಡಿ ಮುಚ್ಚುತ್ತಿದ್ದಾರೆ.
ಈ ಬಾರಿ ಬಜೆಟ್ ನಲ್ಲಿ ಮಾವು ಸಂಸ್ಕರಣಾ ಘಟಕ, ಜಿಲ್ಲೆಗೆ ಮೆಡಿಕಲ್ ಕಾಲೇಜು ನೀಡಲಾಗುವುದು. ಕಾಂಗ್ರೆಸ್ ನವರ ಹೇಳಿಕೆಗೆ ನಾನು ಉತ್ತರ ಕೊಡಲ್ಲ ಎಂದು ಸಚಿವರು ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉತ್ತಮ ಆಡಳಿತ ಕೊಡುತ್ತಿವೆ. ರೈತರ ಬಗ್ಗೆ ೨೦ ಗಂಟೆ ಯೋಚನೆ ಮಾಡುತ್ತೇವೆ. ರೈತರಿಗಾಗಿ ನಾವು ಸಾಕಷ್ಟು ಯೋಜನೆಗಳನ್ನ ಕೊಡುತ್ತೇವೆ. ಬೇಡಿಕೆ ಇದ್ದಷ್ಟು ಅನುದಾನವನ್ನ ರೈತರಿಗೆ ಕೊಡುತ್ತಿದ್ದೇವೆ. ಬೇರೆ ಯಾರಾದರೂ ಕೇಳಿದಿದ್ದರೆ ಅದಕ್ಕೆ ಉತ್ತರ ಕೊಡುತ್ತಿದ್ದೆ ಎಂದಿದ್ದಾರೆ ಅವರು.
ಇದನ್ನೂ ಓದಿ:ಕೋಲಾರದಲ್ಲಿ ರಾಜಕೀಯ ಮೇಲಾಟ, ಟಗರು ಲೆಕ್ಕಾಚಾರ ಉಲ್ಟಾಪಲ್ಟಾ: ಸಿದ್ದರಾಮಯ್ಯಗೆ ಶುರುವಾಯ್ತು ಮತ್ತೊಂದು ಆತಂಕ
ಭ್ರಷ್ಟಾಚಾರವನ್ನು ಮಾಡಿರುವವರೇ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂದು ಡಿಕೆಶಿ ಮಾತಿಗೆ ವ್ಯಂಗ್ಯವಾಗಿ ಉತ್ತರಿಸಿದ ಸಚಿವರು ೪೦ ಪರ್ಸೆಂಟ್ ಕುರಿತು ಮಾತನಾಡುವವರು ನ್ಯಾಯಾಲಯಕ್ಕೆ ಬಂದು ಉತ್ತರ ಕೊಡಲಿ ಎಂದಿದ್ದಾರೆ .ನಾನು ಬೆಡ್ ರೂಂನಲ್ಲಿ ಇಲ್ಲ ಅವರಿಗೆ ಕೇಳಿ ಏನ್ ಬೆಡ್ ರೂಂ ವಿಚಾರ ಅಂತ. ನಿನ್ನೆ ಅರೋಗ್ಯ ಸಚಿವ ಸುಧಾಕರ್ ಹಾಗೂ ಸಂಸದ ಮುನಿಸ್ವಾಮಿ ಗುತ್ತಿಗೆದಾರ ಕೃಷ್ಣಾ ರೆಡ್ಡಿಯನ್ನ ಭೇಟಿ ವಿಚಾರ ನನಗೆ ಗೊತ್ತಿಲ್ಲ ಎಂದ ಸಚಿವ ಮುನಿರತ್ನ ಹೇಳಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:25 pm, Thu, 26 January 23