Hassan Ticket Fight: ಹಾಸನ‘ದಳ’ಮನೆಯಲ್ಲಿ ತಳಮಳ, ಕುಮಾರಸ್ವಾಮಿ ಭಾವುಕ ನುಡಿ..!
ದಳಕೋಟೆಯಲ್ಲಿ ಹಾಸನ ಕುರುಕ್ಷೇತ್ರದ ಟಿಕೆಟ್ ದಂಗಲ್ ಮತ್ತೊಂದು ಹಂತಕ್ಕೆ ಹೋಗಿದೆ. ಕದನ ಕಣದಲ್ಲಿ ನಾನೇ ಅಖಾಡಕ್ಕೆ ಇಳೀತಿನಿ ಎಂದು ಭವಾನಿ ರೇವಣ್ಣ ಬಾಂಬ್ ಎಸೆದಿದ್ದಾರೆ. ಇತ್ತ ಈಗಾಗಲೇ ನಾಲ್ವರು ಮಹಿಳೆಯರಿಗೆ ಟಿಕೆಟ್ ಘೋಷಿಸಿದ್ದೇವೆ, ಟಿಕೆಟ್ ನೀಡಲ್ಲ ಎಂದು ಹೆಚ್ಡಿಕೆ ಕಡ್ಡಿ ಮುರಿದಂತೆ ಹೇಳಿದ್ದಾರೆ. ತೆನೆಮನೆಯಲ್ಲಿ ನಡೆಯುತ್ತಿರುವ ಟಿಕೆಟ್ ಸಮರ ಕುಮಾರಸ್ವಾಮಿ ವರ್ಸಸ್ ರೇವಣ್ಣ ಫ್ಯಾಮಿಲಿ ಎನ್ನುವ ಮಟ್ಟಕ್ಕೆ ಬಂದು ನಿಂತಿದೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಕುಮಾರಸ್ವಾಮಿ ಭಾವುಕ ಮಾತುಳಗನ್ನಾಡಿದ್ದಾರೆ.
ರಾಯಚೂರು: ಅದು ಜೆಡಿಎಸ್‌ನ ಭದ್ರಕೋಟೆ. ಕಾರ್ಯಕರ್ತರ ನಡುವೆ ಆಗುತ್ತಿದ್ದ ಗೊಂದಲಗಳು ಅಲ್ಲೇ ಬಗೆ ಹರಿಯುತ್ತಿದ್ದವು, ದೇವೇಗೌಡರ ಫ್ಯಾಮಿಲಿಯೇ ಎಲ್ಲಾ ಸಮಸ್ಯೆ ಬಗೆಹರಿಸುತ್ತಿತ್ತು. ಆದ್ರೆ ಅದೇ ಫ್ಯಾಮಿಲಿಯಲ್ಲಿ ಈಗ ಟಿಕೆಟ್ ಫೈಟ್ ಶುರುವಾಗಿದೆ. ಅದರಲ್ಲೂ ರೇವಣ್ಣ ಪುತ್ರರು ಹೆಚ್ಡಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟಿದ್ದಾರೆ. ಇನ್ನು ಈ ಹಾಸನ ಟಿಕೆಟ್ ಫೈಟ್ ತಾರಕಕ್ಕೇರಿದ್ದು, ಈ ಬಗ್ಗೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಭಾವುಕ ಮಾತುಳನ್ನಾಡಿದ್ದಾರೆ. ರಾಯಚೂರಿನಲ್ಲಿ ಇಂದು(ಜನವರಿ 28) ಮಾತನಾಡಿರುವ ಕುಮಾರಸ್ವಾಮಿ, ಹಾಸನ ಟಿಕೆಟ್ ವಿಚಾರದಲ್ಲಿ ಹೆಚ್ಡಿ ದೇವೇಗೌಡರ ಹೆಸರು ತರಬೇಡಿ. ನಾನು ಭಾವನಾತ್ಮಕ ಜೀವಿ. ಅವರು ಎಂತಹ ಪರಿಸ್ಥಿತಿಯಲ್ಲಿದ್ದಾರೆಂದು ನಮಗೆ ಮಾತ್ರ ಗೊತ್ತಿದೆ. ದೇವೇಗೌಡರ ಆಯುಷ್ಯ ಕಡಿಮೆ ಮಾಡುವುದು ನನಗೆ ಇಷ್ಟವಿಲ್ಲ ಎಂದು ತಂದೆಯ ಆರೋಗ್ಯದ ಬಗ್ಗೆ ಕುಮಾರಸ್ವಾಮಿ ಭಾವನಾತ್ಮಕವಾಗಿ ಮಾತನಾಡಿದರು.
Hassan Ticket Fight: ಹಾಸನ ದಳ ಮನೆಯಲ್ಲಿ ಟಿಕೆಟ್ ತಳಮಳ, ಹೊಸ ರಾಜಕೀಯ ದಾಳ ಉರುಳಿಸುತ್ತಾರ ದೇವೇಗೌಡ್ರು?
ಹಾಸನ ಟಿಕೆಟ್ ವಿಚಾರವನ್ನು ಸರಿಪಡಿಸುವುದು ಹೇಗೆಂದು ಗೊತ್ತಿದೆ. ಆದ್ರೆ ಯಾವುದೇ ಕಾರಣಕ್ಕೂ ದೇವೇಗೌಡರ ಹೆಸರು ತರಬೇಡಿ. ನಮ್ಮ ಮಕ್ಕಳು ದೇವೇಗೌಡರ ನಿರ್ಧಾರ ಅಂತಿಮವೆಂದು ಹೇಳಿರಬಹುದು. ಆದ್ರೆ ಹೆಚ್‌ಡಿಡಿ ಯಾವ ಪರಿಸ್ಥಿತಿಯಲ್ಲಿದ್ದಾರೆಂದು ಯಾರಿಗೂ ಗೊತ್ತಿಲ್ಲ. ನಾನು ಜೆಡಿಎಸ್ ಪಕ್ಷಕ್ಕೆ 120 ಸೀಟ್ ತರಬೇಕೆಂದು ಓಡಾಡುತ್ತಿದ್ದೇನೆ. 120 ಸೀಟ್ ಗೆದ್ದು ಹೆಚ್‌ಡಿಡಿರವರಿಗೆ ಗಿಫ್ಟ್ ಕೊಡಬೇಕು ಅಂತಾ ಇದ್ದೇನೆ. ಗೊಂದಲಗಳನ್ನ ಸೃಷ್ಟಿ ಮಾಡಿ ಅವರಿಗೆ ತೊಂದರೆ ಕೊಡಲು ಇಷ್ಟವಿಲ್ಲ ಎಂದು ಹಾಸನ ಪಾಲಿಟಿಕ್ಸ್ ವಿಚಾರದಲ್ಲಿ ಭಾವುಕರಾದರು.
ಇನ್ನು ಸೂರಜ್ ಪರೋಕ್ಷ ಟಾಂಗ್ ಕೊಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ನಮ್ಮ ಮನೆ ಮಕ್ಕಳು ಶಕುನಿ ಮಾತು ಕೇಳಿ ಮಾತನಾಡಿದ್ದಾರೆ. ನಮ್ಮ ಮನೆ ಮಕ್ಕಳು ನಮ್ಮನ್ನು ಪ್ರಶ್ನಿಸುವುದು ದೊಡ್ಡ ವಿಷಯವಲ್ಲ. ಅವರೆಲ್ಲಾ ನಮ್ಮ ಹುಡುಗರೇ ಮಾತನಾಡಿದ್ದಾರೆ. ನಾವು ಮನೆಯಲ್ಲಿ ಕೂತುಕೊಂಡು ಮಾತನಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಮಹಾಭಾರತದಲ್ಲಿ ನಡೆದಿದ್ದೇ ಇಲ್ಲೂ ನಡೆಯುತ್ತಿದೆ. ಇದು ಮಹಾಭಾರತವಾದ್ರೆ ಇದರಲ್ಲಿ ನಾನು ಸಾಮಾನ್ಯ ಪ್ರಜೆ. ಎಂಎಲ್‌ಸಿ ಸೂರಜ್, ಸಂಸದ ಪ್ರಜ್ವಲ್ ಹೇಳಿದ್ದರಲ್ಲಿ ತಪ್ಪೇನಿಲ್ಲ. ನಾನು ರಾಜ್ಯದ ಬಗ್ಗೆ ಗಮನಹರಿಸುತ್ತಿದ್ದೇನೆ. ರೇವಣ್ಣ ಹಾಸನ ನೋಡುತ್ತಿದ್ದಾರೆ. ಹಾಸನದಲ್ಲಿ ಪ್ರತಿ ಕೆಲಸ ನನ್ನಿಂದ, ದೇವೇಗೌಡರಿಂದ ಮಾಡಿಸಿಕೊಂಡಿದ್ದಾರೆ. ಯಾರು ನಿರ್ಧಾರ ಕೈಗೊಳ್ಳಬೇಕೆಂದು ಮನೆಯಲ್ಲಿ ತೀರ್ಮಾನಿಸುತ್ತೇವೆ. ಬೀದಿಯಲ್ಲಿ ಚರ್ಚೆ ಮಾಡಿ ಉತ್ತರ ಕೊಡಲ್ಲ ಎಂದು ಹೇಳಿದರು.
ಇನ್ನು ಇದೇ ವೇಳೆ ಕುಮಾರಸ್ವಾಮಿ ವರ್ಸಸ್ ರೇವಣ್ಣ ನಡೆಯುತ್ತಿದೆಯಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಹೆಚ್ಡಿಕೆ, ಹಾಸನ ವಿಧಾನಸಭಾ ವಿಷಯದಲ್ಲಿ ಕುಮಾರಸ್ವಾಮಿ ವರ್ಸಸ್ ಬಿಜೆಪಿ. ಇಲ್ಲಿಯವರೆಗೂ ಹಾಸನದ ಪರಿಚಯ ನನಗೆ ಇಲ್ಲ. ಪರಿಚಯ ಮಾಡಿಕೊಳ್ಳಲಿಕ್ಕೇನೆ ಹಾಸನದಲ್ಲಿ ಕುಮಾರಸ್ವಾಮಿ ವರ್ಸಸ್ ಬಿಜೆಪಿ. ಪ್ರತಿಭಟನೆ ಮಾಡುತ್ತಿರುವ ಕಾರ್ಯಕರ್ತರನ್ನು ಸರಿಪಡಿಸೋಣ. ಸ್ವರೂಪ್ ಅಗಬಹುದು ಅಥವಾ ಭವಾನಿ ಆಗಬಹುದು ಆಮೇಲೆ ಹೇಳುತ್ತೇನೆ ಎಂದು ತಿಳಿಸಿದರು.
Published On - 10:43 pm, Sat, 28 January 23