Hassan Ticket Fight: ಹಾಸನ ದಳ ಮನೆಯಲ್ಲಿ ಟಿಕೆಟ್ ತಳಮಳ, ಹೊಸ ರಾಜಕೀಯ ದಾಳ ಉರುಳಿಸುತ್ತಾರ ದೇವೇಗೌಡ್ರು?
ಬಿಕ್ಕಟ್ಟಿನ ಬಿರುಗಾಳಿ.. ಹಾಸನ ಅಖಾಡದಲ್ಲಿ ಭುಗಿಲೆದ್ದಿತು ಟಿಕೆಟ್ ಕಗ್ಗಂಟಿನ ಸುಂಟರಗಾಳಿ.. ಒಬ್ಬರಿಗೆ ಭರವಸೆ.. ಇನ್ನೊಬ್ಬರಿಗೆ ತಮಗೆ ಟಿಕೆಟ್ ಸಿಗುತ್ತೆಂಬ ಆಸೆ.. ಇಬ್ಬರ ನಿರೀಕ್ಷೆಗೆ ಬಿಗ್ ಟ್ವಿಸ್ಟ್ ಕೊಟ್ಟ ದಳಪತಿಯ ಮಾತಿನ ವರಸೆ..
ಹಾಸನ: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಸಮೀಪಿಸುತ್ತಿದ್ದಂತೆಯೇ ಹಾಸನ(Hassan) ಕದನ ಕಣ ರಂಗೇರಿದೆ. ಅಖಾಡದಲ್ಲಿ ಕಾಂಗ್ರೆಸ್, ಬಿಜೆಪಿಗಿಂತಲೂ ದಳಪತಿಗಳ ಸದ್ದು ಬೆಂಗಳೂರಿನ ಪದ್ಮಾನಾಭನಗರದ ದೊಡ್ಡಗೌಡರ ಮನೆವರೆಗೂ ಕೇಳುತ್ತಿದೆ. ಯಾಕಂದ್ರೆ ಅಭ್ಯರ್ಥಿ ಘೋಷಣೆಗೂ ಮುನ್ನವೇ ಹಾಸನದ ಸಿಂಹಾಸನಕ್ಕಾಗಿ ಮಾಜಿ ಸಚಿವ ರೇವಣ್ಣ ಪತ್ನಿ ಭವಾನಿ ರೇವಣ್ಣ (Bhavani Revanna) ಅಖಾಡಕ್ಕೆ ಇಳಿಯೋಕೆ ಸನ್ನದ್ಧರಾಗಿದ್ದಾರೆ. ಆದ್ರೆ, ಇತ್ತ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್ಡಿ ಕುಮಾರಸ್ವಾಮಿ(HD Kumaraswamy) ಹಾಸನದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಆದ್ರೆ ಭವಾನಿ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಕ್ಷೇತ್ರದಲ್ಲಿ ಫುಲ್ ರೌಂಡ್ಸ್ ಹಾಕುತ್ತಿದ್ದಾರೆ. ಕುಮಾರಸ್ವಾಮಿ ಎಚ್ಚರಿಕೆ ನಡುವೆಯೂ ಭವಾನಿ ರೇವಣ್ಣ ನಡೆ ಇದೀಗ ಇದು ವಿಭಿನ್ನ ಚರ್ಚೆಗೆ ಕಿಚ್ಚು ಹಚ್ಚಿದ್ದು, ಹಾಸನ ಟಿಕೆಟ್ ಗೊಂದಲದ ಚೆಂಡು ದೇವಗೌಡರ ಅಂಗಳಕ್ಕೆ ಹೋಗಿದೆ.
ದೊಡ್ಡಗೌಡ್ರಿಗೆ ಹಾಸನ ಪರಿಸ್ಥಿತಿ ಮನವರಿಕೆ ಮಾಡಿಕೊಟ್ಟ ಹೆಚ್ಡಿಕೆ
ಹೌದು… ಭವಾನಿ ರೇವಣ್ಣ ಅವರಿಗ ಟಿಕೆಟ್ ನೀಡಬೇಕೆಂದು ಕೆಲ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆಗಿಳಿದಿದ್ದಾರೆ. ಈ ಹೈಡ್ರಾಮಾ ಬೆನ್ನಲ್ಲೇ ಎಚ್ಡಿ ಕುಮಾರಸ್ವಾಮಿ ದೇವೇಗೌಡರಿಗೆ ಫೋನ್ ಮಾಡಿ ಹಾಸನ ರಾಜಕೀಯ ಸ್ಥಿತಿಯನ್ನು ವಿವರಿಸಿದ್ದಾರೆ. ಮಾಜಿ ಶಾಸಕ ಪ್ರಕಾಶ್ ಪುತ್ರ ಸ್ವರೂಪ್ಗೆ ಟಿಕೆಟ್ ನೀಡಲು ಹೆಚ್ಡಿಕೆ ಆಸಕ್ತಿ ವಹಿಸಿದ್ದಾರೆ. ಆದ್ರೆ, ಇತ್ತ ರೇವಣ್ಣ ಕುಟುಂಬ ಮಾತ್ರ ಟಿಕೆಟ್ಗೆ ಬಿಗಿಪಟ್ಟು ಹಿಡಿದಿದೆ. ಇದರಿಂದ ಕುಮಾರಸ್ವಾಮಿ ಗರಂ ಆಗಿದ್ದು, ದೇವೇಗೌಡ ಅವರಿಗೆ ಫೋನ್ ಕರೆ ಮಾಡಿ ಹಾಸನ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.
ಹಾಸನ ಹಾಲಿ ಬಿಜೆಪಿ ಶಾಸಕ ಪ್ರೀತಂ ಗೌಡ ನಮ್ಮ ಕುಟುಂಬ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ರೇವಣ್ಣ ಫ್ಯಾಮಿಲಿ ಗರಂ ಆಗಿದೆ. ಈ ಹಿನ್ನೆಲೆಯಲ್ಲಿ ಈ ಬಾರಿ ಭವಾನಿ ಮೂಲಕವೇ ಪ್ರೀತಂಗೌಡನನ್ನು ಸೋಲಿಸಲು ರೇವಣ್ಣ ಕುಟುಂಬ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ರೇವಣ್ಣ ಕುಟುಂಬ ಹಾಸನ ಕ್ಷೇತ್ರ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಶಾಸಕ ಪ್ರೀತಂಗೌಡ ಅವರನ್ನ ಹಾಸನದಲ್ಲಿ ಸೋಲಿಸಲು ಭವಾನಿ ಕಣಕ್ಕಿಳಿದ್ರೆ ಒಳ್ಳೆಯದು ಎಂದಿದ್ದಾರೆ. ಮಾಜಿ ಶಾಸಕ ಪ್ರಕಾಶ್ ಪುತ್ರ ಸ್ವರೂಪ್ಗೆ ಟಿಕೆಟ್ ನೀಡಲು ಹೆಚ್ಡಿಕೆ ಆಸಕ್ತಿ ವಹಿಸಿದ್ದಾರೆ. ರೇವಣ್ಣ ಎಷ್ಟೇ ಒತ್ತಡ ಹಾಕಿದ್ರೂ ಕುಮಾರಸ್ವಾಮಿ ಒಪ್ಪಿಕೊಳ್ಳುತ್ತಿಲ್ಲ. ಇದರಿಂದ ಜೆಡಿಎಸ್ ವಿರಷ್ಠ ದೇವೇಗೌಡರಿಗೆ ಹಾಸನ ಕ್ಷೇತ್ರದ ಟಿಕೆಟ್ ಕಗ್ಗಂಟಾಗಿದೆ.
ಹೊಸ ರಾಜಕೀಯ ದಾಳ ಉರುಳಿಸುತ್ತಾರ ಗೌಡ್ರು?
ಅತ್ತ ಹಾಸನದಲ್ಲಿ ಭವಾನಿ ರೇವಣ್ಣಗೆ ಟಿಕೆಟ್ ಕೊಡಬೇಕೆಂದು ಬಿಗಿಪಟ್ಟು, ಇತ್ತ ಕುಮಾರಸ್ವಾಮಿ ಭವಾನಿಗೆ ಟಿಕೆಟ್ ಕೊಡಲು ಒಪ್ಪುತ್ತಿಲ್ಲ. ಇದರಿಂದ ಒಂದು ರೀತಿಯಲ್ಲಿ ಫ್ಯಾಮಿಲಿ ಫೈಟ್ ಶುರುವಾಗಿದ್ದು, ಅಂತಿಮವಾಗಿ ದೇವೇಗೌಡರೇ ಫೈನಲ್ ಎನ್ನುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಗೊಂದಲದ ಚೆಂಡು ದೇವಗೌಡರ ಅಂಗಳಕ್ಕೆ ಬಿದ್ದಿದ್ದು, ಈ ಬಗ್ಗೆ ದೇವೇಗೌಡ್ರು ಇದುವರೆಗೂ ಯಾವುದೇ ಪ್ರತಿಕ್ರಿಯಿಸಿದೇ ಸೈಲೆಂಟ್ ಆಗಿ ಗೊಂದಲ ನಿವಾರಿಸಲು ಮುಂದಾಗಿದ್ದಾರೆ. ಕುಮಾರಸ್ವಾಮಿ ಹಾಗೂ ರೇವಣ್ಣ ಕುಟುಂಬದ ಅಭಿಪ್ರಾಯಗಳನ್ನ ಸಂಗ್ರಹಿಸಿರುವ ದೇವೇಗೌಡ್ರು, ಕುಮಾರಸ್ವಾಮಿ ಮನವರಿಕೆಗೆ ಮಣೆ ಹಾಕುತ್ತಾರಾ? ಅಥವಾ ರೆವಣ್ಣನ ಒತ್ತಡಕ್ಕೆ ಮಣಿಯುತ್ತಾರಾ? ಇವರಿಬ್ಬರನ್ನು ಬಿಟ್ಟು ಹೊಸ ರಾಜಕೀಯ ದಾಳ ಉರುಳಿಸುತ್ತಾರ ಎನ್ನುವ ಕುತೂಹಲ ಮೂಡಿಸಿದೆ.
ಒಟ್ಟಾರೆ ಭವಾನಿ ಟಿಕೆಟ್ ಮಾತು ದಳ ಮನೆಯಲ್ಲಿ ಒಂದು ರೀತಿ ಕಂಪನ ಶುರು ಮಾಡಿದೆ. ಅದೇನೆ ಆಗಲಿ ಟಿಕೆಟ್ ಗಿಟ್ಟಿಸಿಕೊಳ್ಳಲೇ ಬೇಕು ಎಂದು ಭವಾನಿ ಇದ್ರೆ, ಕುಮಾರಸ್ವಾಮಿ ಮೌನದಿಂದಲೇ ಬೇಡ ಎನ್ನುವ ಸಂದೇಶ ಕೊಡ್ತಿದ್ದಾರೆ. ಹೀಗಾಗಿ ಮುಂದೆ ಇದು ಯಾವ ಹಂತಕ್ಕೆ ಹೋಗುತ್ತೆ? ದೇವೇಗೌಡ್ರು ಯಾವ ತೀರ್ಮಾನ ತೆಗೆದುಕೊಳ್ತಾರೆ? ಎನ್ನುವುದೇ ಕುತೂಹಲ ಮೂಡಿಸಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ