ಸಮಾನ ಹಕ್ಕುಗಳನ್ನು ನೀಡದ ಧರ್ಮ ಕಾಯಿಲೆಯಂತೆಯೇ; ಸ್ಟಾಲಿನ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಬೆಂಬಲ, ಬಿಜೆಪಿ ಕಿಡಿ

ತಮಿಳುನಾಡು ಸಚಿವರು ‘ಸನಾತನ ಧರ್ಮದ ನಿರ್ಮೂಲನೆ’ಗೆ ಕರೆ ನೀಡಿದ ಎರಡು ದಿನಗಳ ನಂತರ ಈ ಹೇಳಿಕೆ ಬಂದಿದೆ. ಈ ಮಧ್ಯೆ, ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಖಂಡಿಸುವ ಬದಲು ಅವರನ್ನು ಬೆಂಬಲಿಸಿದ್ದಕ್ಕಾಗಿ ಕರ್ನಾಟಕ ಬಿಜೆಪಿ ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಸಮಾನ ಹಕ್ಕುಗಳನ್ನು ನೀಡದ ಧರ್ಮ ಕಾಯಿಲೆಯಂತೆಯೇ; ಸ್ಟಾಲಿನ್ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಬೆಂಬಲ, ಬಿಜೆಪಿ ಕಿಡಿ
ಪ್ರಿಯಾಂಕ್ ಖರ್ಗೆ
Follow us
|

Updated on: Sep 04, 2023 | 5:18 PM

ಬೆಂಗಳೂರು, ಸೆಪ್ಟೆಂಬರ್ 4: ಸನಾತನ ಧರ್ಮದ ಕುರಿತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ ವಿವಾದಾತ್ಮಕ ಹೇಳಿಕೆಗೆ ಕರ್ನಾಟಕ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸೋಮವಾರ ಪ್ರತಿಕ್ರಿಯಿಸಿದ್ದಾರೆ. ಸಮಾನ ಹಕ್ಕುಗಳನ್ನು ನೀಡದ ಯಾವುದೇ ಧರ್ಮವು ರೋಗದಂತೆ’ ಎಂದು ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಸಮಾನತೆಯನ್ನು ಪ್ರೋತ್ಸಾಹಿಸದ ಅಥವಾ ಮಾನವರಾಗಿ ನಿಮ್ಮ ಘನತೆಯನ್ನು ಖಚಿತಪಡಿಸಿಕೊಳ್ಳದ ಯಾವುದೇ ಧರ್ಮವು ನನ್ನ ಪ್ರಕಾರ ಧರ್ಮವಲ್ಲ. ಸಮಾನ ಹಕ್ಕುಗಳನ್ನು ನೀಡದ ಅಥವಾ ನಿಮ್ಮನ್ನು ಮನುಷ್ಯರಂತೆ ನಡೆಸಿಕೊಳ್ಳದ ಯಾವುದೇ ಧರ್ಮವು ಧರ್ಮವಲ್ಲ ಮತ್ತು ಅದು ಕಾಯಿಲೆಯಂತೆಯೇ ಎಂದು ಹೇಳಿದರು.

ತಮಿಳುನಾಡು ಸಚಿವರು ‘ಸನಾತನ ಧರ್ಮದ ನಿರ್ಮೂಲನೆ’ಗೆ ಕರೆ ನೀಡಿದ ಎರಡು ದಿನಗಳ ನಂತರ ಈ ಹೇಳಿಕೆ ಬಂದಿದೆ. ಈ ಮಧ್ಯೆ, ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಖಂಡಿಸುವ ಬದಲು ಅವರನ್ನು ಬೆಂಬಲಿಸಿದ್ದಕ್ಕಾಗಿ ಕರ್ನಾಟಕ ಬಿಜೆಪಿ ಪ್ರಿಯಾಂಕ್ ಖರ್ಗೆ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಅಲ್ಲದೆ, ತಮಿಳುನಾಡು ಸರ್ಕಾರ ಆ ಬಗ್ಗೆ ಪ್ರತಿಕ್ರಿಯಿಸಬಹುದು ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಅವರು ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯನ್ನು ತಪ್ಪು ಎಂದು ಹೇಳಿದ್ದಾರೆ.

ಅವರು ಯಾವ ಸಂದರ್ಭದಲ್ಲಿ ಕಮೆಂಟ್ ಮಾಡಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ, ಯಾವುದೇ ಜಾತಿ ಅಥವಾ ಧರ್ಮದ ವಿರುದ್ಧ ಮಾತನಾಡುವುದು ತಪ್ಪು ಎಂದು ದರ್ಶನಾಪುರ ಹೇಳಿದ್ದಾರೆ.

ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆಗೆ ಅಮಿತ್ ಶಾ ತೀಕ್ಷ್ಣ ಪ್ರತಿಕ್ರಿಯೆ

ಉದಯನಿಧಿ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಬಿಜೆಪಿಯ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರನ್ನು ‘ಅಯೋಗ್ಯ’ ಎಂದು ಕರೆದಿದ್ದಾರೆ.

ಅವರ ತಂದೆಯಿಂದಲೂ ಸನಾತನ ಧರ್ಮವನ್ನು ನಾಶಮಾಡಲು ಸಾಧ್ಯವಿಲ್ಲ. ಅಯೋಗ್ಯರು ಈ ರೀತಿ ಮಾತನಾಡುತ್ತಾರೆ. ಈ ಹಿಂದೆ ಹೀಗೆ ಮಾತಾಡಿದ ಅನೇಕರು ನಾಶವಾಗಿದ್ದಾರೆ. ಸನಾತನ ಧರ್ಮದಿಂದ ಈ ದೇಶ ಉಳಿದಿದೆ ಎಂದು ಈಶ್ವರಪ್ಪ ಮೈಸೂರಿನಲ್ಲಿ ಹೇಳಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ