Karnataka Politics: ಕಾಂಗ್ರೆಸ್​​ನಲ್ಲಿ ದಲಿತ ಸಿಎಂ ಬಳಿಕ ಈಗ ಮಹಿಳಾ ಮುಖ್ಯಮಂತ್ರಿ ಬೇಡಿಕೆ

ಇಷ್ಟು ದಿನ ಕರ್ನಾಟಕದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಕೇಳಿಬಂದಿತ್ತು. ಇದರ ಮಧ್ಯೆ ಇದೀಗ ಮಹಿಳಾ ಮುಖ್ಯಮಂತ್ರಿ ಮಾತು ಕೇಳಿಬಂದಿದೆ.

Karnataka Politics: ಕಾಂಗ್ರೆಸ್​​ನಲ್ಲಿ ದಲಿತ ಸಿಎಂ ಬಳಿಕ ಈಗ ಮಹಿಳಾ ಮುಖ್ಯಮಂತ್ರಿ ಬೇಡಿಕೆ
ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Dec 13, 2022 | 2:48 PM

ಹುಬ್ಬಳ್ಳಿ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್​ನಲ್ಲಿ ಮುಂದಿನ ಸಿಎಂ ಚರ್ಚೆಗ ಜೋರಾಗಿದೆ. ಈಗಾಗಲೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ಸಿಎಂ ಕುರ್ಚಿ ಕಾಳಗ ನಡೆದಿದ್ದರೆ, ಇತ್ತ ದಲಿತ ಸಿಎಂ ಬಗ್ಗೆ ಡಾ.ಜಿ. ಪರಮೇಶ್ವರ್ ಮಾತನಾಡುವ ಮೂಲಕ ಮುಖ್ಯಮಂತ್ರಿ ಕುರ್ಚಿ ಮೇಲೆ ಟವೆಲ್ ಹಾಕಿದ್ದಾರೆ. ಇನ್ನು ಇದರ ನಡುವೆ ಇದೀಗ ಮಹಿಳಾ ಮುಖ್ಯಮಂತ್ರಿ ಮಾತು ಕೇಳಿಬಂದಿದೆ. ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ್ ಅವರು ಪರೋಕ್ಷವಾಗಿ ಮಹಿಳಾ ಸಿಎಂ ಬೇಡಿಕೆಯಿಟ್ಟಿದ್ದಾರೆ.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾದರೂ ನಿರ್ಧಾರಕ್ಕಾಗಿ ಗಾಂಧಿ ಕುಟುಂಬಕ್ಕೆ ಜೋತು ಬಿದ್ದಿರುವ ಕಾಂಗ್ರೆಸ್: ಬಿಜೆಪಿ

ಹುಬ್ಬಳ್ಳಿಯಲ್ಲಿ ಇಂದು(ಡಿಸೆಂಬರ್ 13) ಸುದ್ದಿಗಾರರೊಂದಿಗೆ ಮಾತನಾಡಿದ ಪುಷ್ಪಾ ಅಮರನಾಥ್, ಮಹಿಳಾ ಮುಖ್ಯಮಂತ್ರಿ ಬರಬೇಕೆಂಬುದು ನಮ್ಮೆಲ್ಲರ ಆಶಯ. ನಾವು ಅರ್ಧದಷ್ಟು ಜನಸಂಖ್ಯೆ ಇದ್ದೇವೆ. ಯಾಕೆ ಕೊಡಬಾರದು. ಅದಕ್ಕೆ ತಕ್ಕ ವಾತಾವರಣ ಸೃಷ್ಟಿಯಾಗಬೇಕಿದೆ ಎಂದು ಹೇಳುವ ಮೂಲಕಮಹಿಳಾ ಸಿಎಂ ಬೇಡಿಕೆ ಇಟ್ಟರು

ಟಿಕೆಟ್​ ಹಂಚಿಕೆ ವೇಳೆ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಈಗಾಗಲೇ ನಮ್ಮ ನಾಯಕರ ಗಮನಕ್ಕೆ ತಂದಿದ್ದು, ಮಹಿಳೆಯರಿಗೆ ಟಿಕೆಟ್ ನೀಡುವ ಬಗ್ಗೆ ಪಕ್ಷದಲ್ಲೂ ಚರ್ಚಿಸಿದ್ದೇವೆ. ಜ.8ರಂದು ಚಿತ್ರದುರ್ಗದಲ್ಲಿ ಡಾ.ಜಿ.ಪರಮೇಶ್ವರ್ ನಾಯಕತ್ವದಲ್ಲಿ ಐಕ್ಯತಾ ಸಮಾವೇಶ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಕೂಗು ಸಹ ಇದೆ. ಕಾಂಗ್ರೆಸ್​ನಿಂದ ಮಾತ್ರ ದಲಿತ ಸಿಎಂ ಸಾಧ್ಯ. ಬಿಜೆಪಿಯವರು ದಲಿತರನ್ನು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ಅಂಬೇಡ್ಕರ್ ಬಗ್ಗೆ ಮಾತಾಡುವುದಕ್ಕೆ ಯೋಗ್ಯತೆ ಇರಲಿಲ್ಲ. ಅದು ಇತ್ತೀಚೆಗೆ ಆರಂಭವಾಗಿದೆ. ಬೊಮ್ಮಾಯಿ ಅವರು ಕೇವಲ ಎರಡು ಪದಗಳಿಗೆ ಮಹತ್ವ ಕೊಟ್ಟಿದ್ದಾರೆ. ಅದು ಕೇವಲ ತಾಕತ್ ಧಮ್. ನಾನು ನಿಮ್ಮದೇ ಪದದಲ್ಲಿ ತಾಕತ್ ಧಮ್ ಇದ್ರೆ ಮಹಿಳಾ ಮೀಸಲಾತಿ ಕೊಡಿ ಎಂದು ಬೊಮ್ಮಾಯಿ ದಾಟಿಯಲೇ ಟಾಂಗ್ ಕೊಟ್ಟರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 2:46 pm, Tue, 13 December 22