ಬಾಗಲಕೋಟೆ: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕಾಂಗ್ರೆಸ್ನಲ್ಲಿ ಮುಂದಿನ ಸಿಎಂ ಗಾದಿಗಾಗಿ ಭರ್ಜರಿ ಪೈಪೋಟಿ ಶುರುವಾಗಿದೆ. ಒಂದು ಕಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ (Siddaramiah) ನಡುವೆ ಸಿಎಂ ಕುರ್ಚಿಗಾಗಿ ಮುಸುಕಿನ ಗುದ್ದಾಟ ನಡೆದಿದೆ. ಹೈಕಮಾಂಡ್ ಎಷ್ಟೇ ಮುಲಾಮು ಹಚ್ಚಿದರೂ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರೂ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇದರ ಮಧ್ಯೆ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಡಿಕೆಶಿ ನಿಗೂಢ ಸಂಚಾರ ನಡೆಸಿದ್ದು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಹೌದು…ನಿನ್ನೆ(ನ.07) ಬೆಳಗಾವಿಯಿಂದ ನೇರವಾಗಿ ಬಾದಾಮಿ ತಾಲೂಕಿನ ಕೆರೂರನಲ್ಲಿ ಡಿಕೆ ಶಿವಕುಮಾರ್ ಪ್ರತ್ಯಕ್ಷರಾಗಿದ್ದು, ಕೆರೂರ ಪಟ್ಟಣದಲ್ಲಿ ಬೀದಿ ಬದಿಯಲ್ಲಿ ಕೆಲ ಯುವಕರನ್ನು ಮಾತನಾಡಿಸಿ ತೆರಳಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಪಕ್ಷದ ಮುಖಂಡರು, ಕಾರ್ಯಕರ್ತರು ಯಾರಿಗೂ ಮಾಹಿತಿ ನೀಡದೇ ಬಂದು ಹೋಗಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರದಲ್ಲಿ ಡಿಕೆಶಿ ನಿಗೂಢ ಸಂಚಾರ ಮಾಡಿರುವುದು ಇದು ಕಾಂಗ್ರೆಸ್ನಲ್ಲಿ ಮಾತ್ರವಲ್ಲ ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಮತ್ತೆ ಪ್ರತಿಧ್ವನಿಸಿದ ದಲಿತ CM ಕೂಗು: ದಲಿತ ಸಿಎಂ ಮಾಡಬೇಕೆಂದು ನಮ್ಮ ಪಕ್ಷಕ್ಕೆ ಆಗ್ರಹಿಸುತ್ತೇನೆ ಎಂದ ಬಿಜೆಪಿ ಸಂಸದ
ಡಿಕೆಶಿ ಬರ್ತಿರೋದು ಯಾರಿಗೂ ಮಾಹಿತಿ ನೀಡಿಲ್ಲ. ಜಿಲ್ಲೆಯ ಪೊಲೀಸರಿಗೂ ಮಾಹಿತಿ ಇಲ್ಲ. ಸಿದ್ದರಾಮಯ್ಯ ಬೆಂಬಲಿಗರಿಗೂ ಯಾವುದೇ ಸುಳಿವು ಇಲ್ಲ. ಯಾರನ್ನ ಭೇಟಿ ಮಾಡಲು ಬಂದಿದ್ರು? ಯಾಕಾಗಿ…? ಎನ್ನುವುದು ಈ ವರೆಗೂ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.
ಆದ್ರೆ, ಮೂಲಗಳ ಪ್ರಕಾರ ಡಿಕೆ ಶಿವಕುಮಾರ್ ಅವರು ತಮ್ಮ ವ್ಯಾಪಾರ, ವಹಿವಾಟಿಗಾಗಿ ಬಂದಿದ್ರು ಎನ್ನಲಾಗ್ತಿದೆ. ಮಾರ್ಗಮಧ್ಯೆ ಜಮೀನು ವೀಕ್ಷಣೆ ಮಾಡಿ ಹೋಗಿದ್ದಾರೆ ಎನ್ನುವ ಮಾಹಿತಿ ಇದೆ.
ವಿಧಾನಸಭೆ ಚುನಾವಣೆಗೆ ಐದಾರು ತಿಂಗಳು ಇರುವಾಗಲೇ ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಗಾದಿಗೆ ಫೈಟ್ ಜೋರಾಗಿದೆ. ಹೈಕಮಾಂಡ್ ಹಾಗೂ ರಾಹುಲ್ ಗಾಂಧಿ ಎಷ್ಟೇ ಸಂಧಾನ ಮಾಡಿದರೂ ಮುಂದಿನ ಸಿಎಂ ವಿಚಾರಕ್ಕೆ ಉಭಯ ನಾಯಕರ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಹೋದಲ್ಲೆಲ್ಲಾ ಇಬ್ಬರ ಪರವಾಗಿ ಮುಂದಿನ ಸಿಎಂ ಅನ್ನೋ ಘೋಷಣೆಗಳು ಕೇಳ್ತಿದೆ. ಇದರ ಮಧ್ಯೆ ಡಿಕೆ ಶಿವಕುಮಾರ್ ಅವರು ಸಿದ್ದು ಕ್ಷೇತ್ರಕ್ಕೆ ಭೇಟಿ ನೀಡಿದ್ದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ