AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಜಾಬ್ ವಿಚಾರಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಹುಚ್ಚು ನಾಯಿಯಂತೆ ಕೂಗುತ್ತಿದೆ, ಸಿದ್ದರಾಮಯ್ಯ ತಕ್ಷಣ ರಾಜಕೀಯ ನಿವೃತ್ತಿ ಪಡೆಯಲಿ; ಸಚಿವ ಈಶ್ವರಪ್ಪ ಹೇಳಿಕೆ

ಹಿಂದೂ, ಮುಸ್ಲಿಮರಿಗೆ ಪರಿಹಾರ ತಾರತಮ್ಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನೀಚ ಕೆಲಸಕ್ಕೆ ಕೈಹಾಕಿದ್ದಾರೆ. ಸಿದ್ದರಾಮಯ್ಯ ಮಠಗಳನ್ನು ಒಡೆಯಲು ಹೊರಟಿದ್ದಾರೆ ಎಂದರು.

ಹಿಜಾಬ್ ವಿಚಾರಕ್ಕೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಹುಚ್ಚು ನಾಯಿಯಂತೆ ಕೂಗುತ್ತಿದೆ, ಸಿದ್ದರಾಮಯ್ಯ ತಕ್ಷಣ ರಾಜಕೀಯ ನಿವೃತ್ತಿ ಪಡೆಯಲಿ; ಸಚಿವ ಈಶ್ವರಪ್ಪ ಹೇಳಿಕೆ
ಕೆ.ಎಸ್.ಈಶ್ವರಪ್ಪ (ಸಂಗ್ರಹ ಚಿತ್ರ)
TV9 Web
| Updated By: sandhya thejappa|

Updated on:Mar 26, 2022 | 11:05 AM

Share

ಶಿವಮೊಗ್ಗ: ಹಿಜಾಬ್ ವಿಚಾರವಾಗಿ ಬಿಜೆಪಿ (BJP) ವಿರುದ್ಧ ಕಾಂಗ್ರೆಸ್ (Congress) ಹುಚ್ಚು ನಾಯಿಯಂತೆ ಕೂಗುತ್ತಿದೆ ಅಂತ ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ (KS Eshwarappa) ಹೇಳಿದ್ದಾರೆ. ದೇಶದ ಜನರನ್ನು ಕಾಂಗ್ರೆಸ್ ಮೋಸ ಮಾಡುತ್ತಾ ಬಂದಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಡ್ರೆಸ್​ಗೇ ಇರಲ್ಲ. ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಕಾಂಗ್ರೆಸ್​ನವರು ಮಾತನಾಡುತ್ತಿಲ್ಲ. ಧೈರ್ಯ ಇದ್ದರೆ ಕಾಂಗ್ರೆಸ್ ನಾಯಕರು ಇದನ್ನು ಖಂಡಿಸಲಿ. ಸಿದ್ದರಾಮಯ್ಯ ಕಾಂಗ್ರೆಸ್ ನಿರ್ನಾಮ ಮಾಡಿ ಹೋಗುತ್ತಾರೆ ಅಂತ ಹೇಳಿದರು.

ಹಿಂದೂ, ಮುಸ್ಲಿಮರಿಗೆ ಪರಿಹಾರ ತಾರತಮ್ಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ನೀಚ ಕೆಲಸಕ್ಕೆ ಕೈಹಾಕಿದ್ದಾರೆ. ಸಿದ್ದರಾಮಯ್ಯ ಮಠಗಳನ್ನು ಒಡೆಯಲು ಹೊರಟಿದ್ದಾರೆ ಎಂದರು.

ಹರ್ಷ ಕೊಲೆ ಆದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ತುಟಿ ಬಿಚ್ಚಿಲ್ಲ. ಹಿಂದೂ ಮತ್ತು ಮುಸ್ಲಿಂರು ಹೊಂದಾಣಿಕೆ ಮಾಡಿಕೊಳ್ಳಬೇಕಿದೆ. ಕಳೆದ ಚುನಾವಣೆಯಲ್ಲಿ ಮೂರೂವರೆ ಸಾವಿರ ಮತಗಳು ನನಗೆ ಬಂದಿದೆ. ಇಡೀ ದೇಶದಲ್ಲಿ ಮುಸ್ಲಿಂರು ಬಿಜೆಪಿಗೆ ಮತ ಹಾಕುತ್ತಿದ್ದಾರೆ. ದೇಶದಲ್ಲಿ ಪರಿವರ್ತನೆ ಆಗುತ್ತದೆ. ಈ ಪರಿವರ್ತನೆಗೆ ಕಾಂಗ್ರೆಸ್​ನವರು ಮುಸ್ಲಿಂರನ್ನು ಬಿಡುತ್ತಿಲ್ಲ ಅಂತ ಈಶ್ವರಪ್ಪ ಹೇಳಿದ್ದಾರೆ.

ಹಿಜಾಬ್ ವಿವಾದದಲ್ಲಿ ಸ್ವಾಮೀಜಿಗಳ ಬಟ್ಟೆ ಪ್ರಸ್ತಾಪಿಸಿದ ಸಿದ್ದರಾಮಯ್ಯ ರಾಜಕೀಯ ತೆವಲು ತೀರಿಸಿಕೊಳ್ಳಲು ಇಂತಹ ಹೇಳಿಕೆ ನೀಡಿದ್ದಾರೆ. ಇದು ಸಿದ್ದರಾಮಯ್ಯ ಮಾಡಿದ ಅಕ್ಷಮ್ಯ ಅಪರಾಧ. ಸಿದ್ದರಾಮಯ್ಯ ತಕ್ಷಣ ರಾಜಕೀಯ ನಿವೃತ್ತಿ ಪಡೆಯಲಿ. ಸಿದ್ದರಾಮಯ್ಯರನ್ನು ರಾಜ್ಯದ ಜನರು ಕ್ಷಮಿಸುವುದಿಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ನಡವಳಿಕೆ ಹಿಂದೂ ವಿರೋಧಿ. ಸಿದ್ದರಾಮಯ್ಯ ಭಂಡರು, ರಾಜಕೀಯ ನಿವೃತ್ತಿ ಪಡೆಯಲ್ಲ. ಸಿದ್ದರಾಮಯ್ಯರನ್ನು ಕಾಂಗ್ರೆಸ್ ಪಕ್ಷದಿಂದ ವಜಾ ಮಾಡಿ ಅಂತ ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ

ಬೆಂಗಳೂರು ಕರಗದಲ್ಲಿ ಮುಸ್ಲಿಮರಿಗೆ ಮಳಿಗೆ ಹಾಕಲು ಬಿಡಲ್ಲ; ಕರಗ ಉತ್ಸವದ ಮಾಜಿ ಅಧ್ಯಕ್ಷ ಗೋಪಿ ಹೇಳಿಕೆ

ರಾಜಸ್ಥಾನ ರಾಜ್ಯ ಸರ್ಕಾರದ ವಿರುದ್ಧ ಶಾಸಕನ ಪ್ರತಿಭಟನೆ; ಪಾರ್ಕ್​​ನಲ್ಲಿ 12 ತಾಸು ಓಡುವುದಾಗಿ ಘೋಷಣೆ

Published On - 11:03 am, Sat, 26 March 22