ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯನಂತಹ ದ್ರೋಹಿ ಹಿಂದೆ ನೋಡಿಲ್ಲ, ಮುಂದೆಯೂ ನೋಡಲ್ಲ -ಈಶ್ವರಪ್ಪ ವಾಗ್ದಾಳಿ

| Updated By: ಆಯೇಷಾ ಬಾನು

Updated on: Dec 15, 2022 | 11:19 AM

ಒಂದು ಬಾರಿ ಬಾದಾಮಿ, ಮತ್ತೊಮ್ಮೆ ಕೋಲಾರ, ವರುಣಾ ಅಂತೀರಿ. ನಿಮಗೆ ನಿಮ್ಮ ಅಪ್ಪ-ಅಮ್ಮ ಯಾರೂ ಅಂತಾನೇ ಗೊತ್ತಿಲ್ಲ. ಕ್ಯಾಪ್ಟನ್​​ಗೆ ಪ್ಲೇಸ್​ ಇಲ್ಲ, ಪಾಪ ಫಾಲೋವರ್ಸ್​​ ಗತಿಯೇನು? ಎನ್ನುವ ಮೂಲಕ ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯನಂತಹ ದ್ರೋಹಿ ಹಿಂದೆ ನೋಡಿಲ್ಲ, ಮುಂದೆಯೂ ನೋಡಲ್ಲ -ಈಶ್ವರಪ್ಪ ವಾಗ್ದಾಳಿ
ಕೆಎಸ್ ಈಶ್ವರಪ್ಪ
Follow us on

ಬಾಗಲಕೋಟೆ: ಕರ್ನಾಟಕ ರಾಜಕಾರಣದಲ್ಲಿ ಸಿದ್ದರಾಮಯ್ಯನಂತಹ(Siddaramaiah) ದ್ರೋಹಿಯನ್ನು ಹಿಂದೆ ನೋಡಿಲ್ಲ, ಮುಂದೆಯೂ ನೋಡಲ್ಲ ಎನ್ನುವ ಮೂಲಕ ಬಸವರಾಜ್ ಬೊಮ್ಮಾಯಿ(Basavaraj Bommai) ವೀಕ್ ಲೀಡರ್ ಅಂತ ಪದೇ ಪದೇ ಹೇಳ್ತಿರೋ ಮಾಜಿ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ(KS Eshwarappa) ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್​ನಲ್ಲಿ ಯಾರ ನೇತೃತ್ವ? ಕ್ಷೇತ್ರ ಗೊತ್ತಿಲ್ಲ, ಜನರು ಓಟ್ ಕೊಟ್ಟು ಗೆಲ್ಲಿಸಿಲ್ಲ. ಆಗಲೇ ನಾನೇ ಮುಖ್ಯಮಂತ್ರಿ ಅಂತಿದ್ದೀರಿ. ಕರ್ನಾಟಕದ ರಾಜಕಾರಣದಲ್ಲಿ ಇಂಥ ದ್ರೋಹಿ ಯಾರೂ ನೋಡಿಲ್ಲ, ಮುಂದೆ ನೋಡಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಿಮಗೆ ನಿಮ್ಮ ಅಪ್ಪ-ಅಮ್ಮ ಯಾರೂ ಅಂತಾನೇ ಗೊತ್ತಿಲ್ಲ

ಬಾಗಲಕೋಟೆಯಲ್ಲಿ ಮಾತನಾಡಿದ ಕೆಎಸ್​ ಈಶ್ವರಪ್ಪ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಬೊಮ್ಮಾಯಿ ವೀಕ್ ಲೀಡರ್​ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಇವರು, ಮಾಜಿ ಸಿಎಂ ಸಿದ್ದರಾಮಯ್ಯ ವೀಕ್​ ಲೀಡರ್ ಆಗಿದ್ದಕ್ಕೆ ಸೋತಿದ್ದು. ಸಿದ್ದರಾಮಯ್ಯ ಸ್ಟ್ರಾಂಗ್ ಸಿಎಂ ಆಗಿದ್ದರೆ ಯಾಕೆ ಸೋಲುತ್ತಿದ್ದರು? ಯಾವಾಗಲೂ ಯಾರು ವೀಕ್​ ಅಂತಾ ಹೇಳ್ತಾರೋ ಅವರೇ ವೀಕ್. ಒಂದು ಬಾರಿ ಬಾದಾಮಿ, ಮತ್ತೊಮ್ಮೆ ಕೋಲಾರ, ವರುಣಾ ಅಂತೀರಿ. ನಿಮಗೆ ನಿಮ್ಮ ಅಪ್ಪ-ಅಮ್ಮ ಯಾರೂ ಅಂತಾನೇ ಗೊತ್ತಿಲ್ಲ. ಕ್ಯಾಪ್ಟನ್​​ಗೆ ಪ್ಲೇಸ್​ ಇಲ್ಲ, ಪಾಪ ಫಾಲೋವರ್ಸ್​​ ಗತಿಯೇನು? ಮಾಜಿ ಸಿಎಂ ಸಿದ್ದರಾಮಯ್ಯ ಆಡುವ ಆಟ ಬಿಜೆಪಿ ಮೇಲೆ ನಡೆಯಲ್ಲ. ರಾಜ್ಯದ ಜನರ ಮೇಲೂ ನಡೆಯಲ್ಲ, ಕಾಂಗ್ರೆಸ್​ನಲ್ಲಿ ಮಾತ್ರ ನಡೆಯುತ್ತೆ. ಬಿಜೆಪಿ, ಕೆಜೆಪಿ ಒಡೆದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು. ಈಗ ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಬೊಮ್ಮಾಯಿ & ಬಿಎಸ್​​ವೈ ನಾಯಕತ್ವ ಇದೆ. ಇದನ್ನು ಒಡೆಯಲು ಆಗಲ್ಲ. ಅದುಕ್ಕೆ ಬೊಮ್ಮಾಯಿ ನಾಯಕತ್ವ ಸರಿ ಇಲ್ಲ ಅಂತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಮಕ್ಕಳ ವಿಶೇಷ ಭೋಜನಕ್ಕೆ ಶಿಕ್ಷಣ ಇಲಾಖೆ ಭಿಕ್ಷೆ ಬೇಡುತ್ತಿದೆ: ಎದುರಾಗಿದೆ ಗಂಭೀರ ವಿರೋಧ

ಇನ್ನು ಇದೇ ವೇಳೆ ಜೆ.ಪಿ.ನಡ್ಡಾ ಕಾರ್ಯಕ್ರಮಕ್ಕೆ ಯಡಿಯೂರಪ್ಪ ಕಡೆಗಣನೆ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಈಶ್ವರಪ್ಪ, ಬಿಎಸ್​ವೈ ವಿಚಾರದಲ್ಲಿ ಕಡೆಗಣನೆ ಆಗಿದ್ರೆ ಅದು ನನಗೆ ಗೊತ್ತಿಲ್ಲ. ಅಕಸ್ಮಾತ್​ ಗೊಂದಲವಾಗಿದ್ರೆ ನಮ್ಮ ಹೈಕಮಾಂಡ್​ ಗಟ್ಟಿಯಾಗಿದೆ. ಏನಾದರೂ ಗೊಂದಲವಾಗಿದ್ರೆ ನಮ್ಮ ಹೈಕಮಾಂಡ್​ ಸರಿಪಡಿಸುತ್ತೆ. ಹೈಕಮಾಂಡ್​ ಸೂಚಿಸಿದ್ದನ್ನು ಪಾಲನೆ ಮಾಡುವ ಪಕ್ಷ ನಮ್ಮದು. ನಮಗೆ ಹೇಳೋರು ಕೇಳೋರು ಇದ್ದಾರೆ. ಆದ್ರೆ ಕಾಂಗ್ರೆಸ್​ನಲ್ಲಿ ಖರ್ಗೆ ಸಿದ್ದರಾಮಯ್ಯ, ಡಿಕೆಶಿ ತಂಡವನ್ನು ಕರೆದುಕೊಂಡು ಹೋಗಿದ್ದರು. ಎರಡು ಟೀಂ ಒಟ್ಟಿಗೆ ಹೋಗಬೇಕೆಂದು ಹೈಕಮಾಂಡ್ ಹೇಳಿತು. ಆದರೆ ಸಿದ್ದರಾಮಯ್ಯ ಪ್ರತ್ಯೇಕ ತಂಡವನ್ನು ಸಭೆಗೆ ಕರೆದರು ಎಂದರು.

ಸಂಪುಟ ವಿಸ್ತರಣೆ ವಿಚಾರ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ. ಕೇಂದ್ರ ನಾಯಕರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಿದ್ದೇನೆ. ಮಂತ್ರಿ ಆಗು ಅಂದರೆ ಆಗ್ತೀನಿ ಬೇಡ ಅಂದ್ರೆ ಶಾಸಕನಾಗಿರುತ್ತೇನೆ. ಈಗಾಗಲೇ ಎಲ್ಲ ಇಲಾಖೆಗಳ ಸಚಿವನಾಗಿ ಕೆಲಸ ಮಾಡಿದ್ದೇನೆ. ಇನ್ನೇನು ಮೂರ್ನಾಲ್ಕು ತಿಂಗಳು ಉಳಿದಿದೆ ಎಂದು ಬಾಗಲಕೋಟೆಯಲ್ಲಿ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ