ಯಡಿಯೂರಪ್ಪ ಸರ್ಕಾರ ಬರಬೇಕಾದ್ರೆ ಬಳ್ಳಾರಿ ರೆಡ್ಡಿ ಸಹೋದರರು ಹಣದ ಸಹಾಯ ಮಾಡಿದ್ದರು: ಬಿಜೆಪಿ ಶಾಸಕ ಬಹಿರಂಗ ಹೇಳಿಕೆ

| Updated By: ganapathi bhat

Updated on: Apr 10, 2022 | 10:39 PM

ಕರುಣಾಕರ ರೆಡ್ಡಿ ಅವರು ಜನಾರ್ದನ ರೆಡ್ಡಿ ಅವರಿಗೆ ಪೋನ್ ಮಾಡಿದ್ದರು. ಒಂದೇ ಮಾತಿಗೆ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಬೇಕಾದ್ರೆ ನಾನು ಹಣದ ಸಹಾಯ ಮಾಡುವೆ ಎಂದು ಹೇಳಿ ಹಣಕಾಸಿನ ಸಹಾಯವನ್ನು ರೆಡ್ಡಿ ಸಹೋದರರು ಮಾಡಿದ್ದರು ಎಂದು ಬಿಜೆಪಿ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ.

ಯಡಿಯೂರಪ್ಪ ಸರ್ಕಾರ ಬರಬೇಕಾದ್ರೆ ಬಳ್ಳಾರಿ ರೆಡ್ಡಿ ಸಹೋದರರು ಹಣದ ಸಹಾಯ ಮಾಡಿದ್ದರು: ಬಿಜೆಪಿ ಶಾಸಕ ಬಹಿರಂಗ ಹೇಳಿಕೆ
ಬಿಎಸ್ ಯಡಿಯೂರಪ್ಪ, ಜನಾರ್ದನ ರೆಡ್ಡಿ
Follow us on

ವಿಜಯನಗರ: ಈ ಹಿಂದೆ ಬಿ.ಎಸ್ ಯಡಿಯೂರಪ್ಪ ಸರ್ಕಾರ ಬರಬೇಕಾದ್ರೆ ಬಳ್ಳಾರಿ ರೆಡ್ಡಿ ಸಹೋದರರು ಹಣದ ಸಹಾಯ ಮಾಡಿದ್ದರು. 2008 ಕ್ಕಿಂತ ಮೊದಲು ಬಿಜೆಪಿ ಸರ್ಕಾರ ಇರಲಿಲ್ಲ. ಸರ್ಕಾರ ಬರಬೇಕಿದ್ದರೆ ಹಣ ಬೇಕು. ಈ ವಿಚಾರವನ್ನು ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ ಅವರು ಕರುಣಾಕರ ರೆಡ್ಡಿ ಬಳಿ ಹೇಳಿದ್ದರು. ತಕ್ಷಣ ಕರುಣಾಕರ ರೆಡ್ಡಿ ಅವರು ಜನಾರ್ದನ ರೆಡ್ಡಿ ಅವರಿಗೆ ಪೋನ್ ಮಾಡಿದ್ದರು. ಒಂದೇ ಮಾತಿಗೆ ಬಿ.ಎಸ್ ಯಡಿಯೂರಪ್ಪ ಸಿಎಂ ಆಗಬೇಕಾದ್ರೆ ನಾನು ಹಣದ ಸಹಾಯ ಮಾಡುವೆ ಎಂದು ಹೇಳಿ ಹಣಕಾಸಿನ ಸಹಾಯವನ್ನು ರೆಡ್ಡಿ ಸಹೋದರರು ಮಾಡಿದ್ದರು ಎಂದು ಬಿಜೆಪಿ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ನಡೆದ ಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಬಹಿರಂಗವಾಗಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಹಾಗೂ ಶ್ರೀರಾಮಲು ಈ ಮೂರು ಜನ ಬಿ.ಎಸ್. ಯಡಿಯೂರಪ್ಪ ಅವರಿಗೆ ಸಹಕಾರ ನೀಡಿ ರಾಜ್ಯ ಸುತ್ತಿದ್ದರು. ಇವರ ಸಹಕಾರದ ಪರಿಣಾಮ 2008 ರಿಂದ 2013 ವರೆಗೆ ಬಿಜೆಪಿ ಸರ್ಕಾರ ಬಂತು ಎಂದು ರೆಡ್ಡಿಗಳು ಬಿಜೆಪಿಗೆ ಚುನಾವಣೆ ವೇಳ ಹಣಕಾಸಿನ ಸಹಾಯ ಮಾಡಿದ್ದನ್ನು ಬಹಿರಂಗ ವೇದಿಕೆಯಲ್ಲಿಯೇ ಬಿಜೆಪಿ ಚನ್ನಗಿರಿ ಕ್ಷೇತ್ರದ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಬಾಯಿ ಬಿಟ್ಟಿದ್ದಾರೆ. ಚುನಾವಣೆ ವೇಳೆ ಹಣಕಾಸಿನ ಸಹಾಯ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಾರೆ.

ಆರು ವರ್ಷದ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ರೆಡ್ಡಿ ಬ್ರದರ್ಸ್

ಆರು ವರ್ಷಗಳ ಬಳಿಕ ಅಣ್ಣ ತಮ್ಮಂದಿರು ಒಂದಾಗಿದ್ದಾರೆ. ಬಳ್ಳಾರಿ ರೆಡ್ಡಿ ಸಹೋದರ ನಡುವೆ ನಿರ್ಮಾಣ ಆಗಿದ್ದ ಕದನಕ್ಕೆ ತೆರೆ ಬಿದ್ದಿದೆ. ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಶಾಸಕರಾದ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಹರಪನಹಳ್ಳಿಯಲ್ಲಿ ನಡೆಯುತ್ತಿರುವ ಸೀತಾರಾಮ ಕಲ್ಯಾಣ ಮಹೋತ್ಸವದಲ್ಲಿ ಮೂರು ಸಹೋದರು ಹಾಗೂ ರೆಡ್ಡಿ ಕುಟುಂಬದ ಆಪ್ತ ಸ್ನೇಹಿತ ಸಚಿವ ಶ್ರೀರಾಮಲು‌ ಭಾಗವಾಹಿಸಿದ್ದಾರೆ. ಜನಾರ್ದನ ರೆಡ್ಡಿ ಜೈಲು ಸೇರಿದ ಬಳಿಕ ಇಬ್ಬರು ಸಹೋದರಿಂದ ದೂರವಾಗಿದ್ದ ಹಿರಿಯ ಸಹೋದರ ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ, ಇಂದು ತಮ್ಮ 60 ವರ್ಷದ ಜನ್ಮ ದಿನದ ಹಿನ್ನೆಲೆ ಸೀತಾರಾಮ ಕಲ್ಯಾಣ ಮಹೋತ್ಸವ ಆಯೋಜನೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟ ಪಡಿಸಿದಂತೆ ಸೀತಾರಾಮ ಕಲ್ಯಾಣೋತ್ಸವದಲ್ಲಿ ಜನಾರ್ದನ ರೆಡ್ಡಿ ಕೂಡ ಭಾಗಿಯಾಗಿದ್ದಾರೆ.

ಇದನ್ನೂ ಓದಿ: BS Yediyurappa: ಬಿಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ; ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಮನ್ಸ್ ಜಾರಿ

ಇದನ್ನೂ ಓದಿ: ಆರು ವರ್ಷದ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ರೆಡ್ಡಿ ಬ್ರದರ್ಸ್; ಕರುಣಾಕರ ರೆಡ್ಡಿ ಜನ್ಮದಿನದ ವಿಶೇಷತೆಯಲ್ಲಿ ಜನಾರ್ಧನ ರೆಡ್ಡಿ, ಶ್ರೀರಾಮಲು‌ ಭಾಗಿ

Published On - 8:42 pm, Sun, 10 April 22