ಸತ್ತ ಹೆಣದ ಮೇಲೆ ರಾಜಕಾರಣ ಮಾಡೋರು ಬಿಜೆಪಿ; ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆ

ಮೋಹನ್ ಭಾಗವತ್ 2015ರಲ್ಲಿ ಬಿಹಾರದಲ್ಲಿ ಸಂವಿಧಾನ ಬದಲಾವಣೆ ಮಾಡಬೇಕೆಂದವರು. ಸಂವಿಧಾನ ವಿರುದ್ಧ ಮಾತನಾಡುವವರು ದೇಶದ್ರೋಹಿಗಳು. ಸಂವಿಧಾನ ಮೇಲೆ ನಂಬಿಕೆ ಇಲ್ಲದವರು ದೇಶ ಬಿಟ್ಟು ಹೋಗಬೇಕಾಗಿದೆ.

ಸತ್ತ ಹೆಣದ ಮೇಲೆ ರಾಜಕಾರಣ ಮಾಡೋರು ಬಿಜೆಪಿ; ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆ
ಮಾಜಿ ಸಚಿವ ಶಿವರಾಜ್ ತಂಗಡಗಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Apr 10, 2022 | 8:40 PM

ಕೊಪ್ಪಳ: ಸತ್ತ ಹೆಣದ ಮೇಲೆ ಬಿಜೆಪಿ (BJP) ಯವರು ರಾಜಕಾರಣ ಮಾಡುತ್ತಾರೆ. ಯಾರ ಸತ್ತರೂ ಅದು ದುಃಖಾನೆ, ಆದ್ರೆ ಆ ಹೆಣದ ಮೇಲೆ ರಾಜಕಾರಣ ಮಾಡೋರು ದುಷ್ಟರು ಎಂದು ಜಿಲ್ಲೆ ಕಾರಟಗಿಯಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿಕೆ ನೀಡಿದ್ದಾರೆ. ಬಿಜೆಪಿಯವರು ಕೊನೆ ದುಷ್ಟರು. ಹೆಣದ ಮೇಲೆ ರಾಜಕಾರಣ ಮಾಡೋದನ್ನ ಬಿಜೆಪಿ ನಾಯಕರು ಸಮರ್ಥನೆ ಮಾಡಕೋತಾರೆ. ಕೇಸರಿ ಬಿಜೆಪಿಯವರ ಅಪ್ಪನ ಆಸ್ತಿ ಅಲ್ಲ. ಕೇಸರಿ ನಂದು, ನಾನು ಹಿಂದೂ. ಕೇಸರಿ ತ್ಯಾಗದ ಸಂಕೇತ, ಇವರು ಕೇಸರಿ ಹಾಕೊಂಡು ಬೆಂಕಿ ಹಚ್ಚುತ್ತಾರೆ. ಕಾಳಿ ಸ್ವಾಮಿಗಳೇ ನಿಮಗೆ ಕೈ ಮುಗೀತಿನಿ, ಅದನ್ನು ಹಾಕೊಂಡು‌ ಕೋಳಿ ಕಟ್ ಮಾಡಬೇಡಿ. ಕೇಸರಿಗೆ ಒಂದು ಶಕ್ತಿ ಇದೆ. ರಾಜ್ಯದಲ್ಲಿ ನಡೆಯೋ ಘಟನೆಗಳ ಹಿಂದೆ ಬೊಮ್ಮಾಯಿ ಇದ್ದಾರೆ. ಇಡೀ ಸರ್ಕಾರ, ಮಂತ್ರಿ ಮಂಡಲದಿಂದಲೇ ಎಲ್ಲ ಬೆಳವಣಿಗೆ ನಡೆಯುತ್ತಿದೆ. ರಾಜ್ಯದ ಮುಖ್ಯಮಂತ್ರಿ ಒಂದು ಮಾತು ಮಾತಾಡುತ್ತಿಲ್ಲ. ಕಲ್ಲಂಗಡಿ ಕಿತ್ತು ಬೀಸಾಕ್ತಾರೆ ಅಂದ್ರೆ, ಇವರದು ಎಂತಹ ಮನಸ್ಥಿತಿಯವರು. ಸರ್ಕಾರದ ಕುಮ್ಮಕ್ಕಿನಿಂದಲೇ ಇದೆಲ್ಲ ನಡೀತಿದೆ. ಸರ್ಕಾರ ಸತ್ತು ಹೋಗಿದೆ. ನಾಚಿಕೆ ಮಾನ ಇಲ್ಲದ ಹೋಮ್ ಮಿನಿಸ್ಟರ್. ಅವರಿಗೆ ಗೊತ್ತಿರತ್ತಾ, ಅಧಿಕಾರಿಗಳಿಗೆ ಗೊತ್ತಿರತ್ತಾ. ಹೋಮ್ ಮಿನಿಸ್ಟರ್​ಗೆ ಜ್ಞಾನ ಇದೆಯೋ ಇಲ್ಲ ಅನ್ನೋದನ್ನ ಹುಡಕಬೇಕಾಗಿದೆ. ಹೋಮ್ ಮಿನಿಸ್ಟರ್ ವೆಸ್ಟ್. ಕಮಲ್‌ ಪಂಥ್ ಪರ ತಂಗಡಗಿ ಬ್ಯಾಟ್ ಬೀಸಿದ್ದು, ಕಮಲ್‌ ಪಂಥ್ ಒಳ್ಳೆ ಆಡಳಿತಗಾರ. ಇವರಿಗೆ ಚುನಾವಣೆ ಬಂದ ತಕ್ಷಣ ಪಾಕಿಸ್ತಾನ, ಸೈನಿಕ, ಧರ್ಮ ನೆನಪಾಗತ್ತೆ ಎಂದು ಹೇಳಿದರು.

ಸಂವಿಧಾನ ವಿರುದ್ಧ ಮಾತನಾಡುವವರು ದೇಶದ್ರೋಹಿಗಳು; ಬಿ.ಕೆ.ಹರಿಪ್ರಸಾದ್

ಬೆಳಗಾವಿ: ಮೋಹನ್ ಭಾಗವತ್ 2015ರಲ್ಲಿ ಬಿಹಾರದಲ್ಲಿ ಸಂವಿಧಾನ ಬದಲಾವಣೆ ಮಾಡಬೇಕೆಂದವರು. ಸಂವಿಧಾನ ವಿರುದ್ಧ ಮಾತನಾಡುವವರು ದೇಶದ್ರೋಹಿಗಳು. ಸಂವಿಧಾನ ಮೇಲೆ ನಂಬಿಕೆ ಇಲ್ಲದವರು ದೇಶ ಬಿಟ್ಟು ಹೋಗಬೇಕಾಗಿದೆ. ಇವರು ಬ್ರಿಟಿಷರ ಗುಲಾಮರಾಗಿದ್ದವರು ಎಂದು ಬೆಳಗಾವಿಯಲ್ಲಿ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದಾರೆ. ಇವರಿಗೆ ಸಂವಿಧಾನ ಮೇಲೆ ನಂಬಿಕೆ ಇಲ್ಲ. ಇಲ್ಲಿ ಒಂದೇ ಒಂದು ಧರ್ಮ. ಒಂದೇ ಒಂದು ಭಾಷೆ ಹೇರಲು ಸಾಧ್ಯವಿಲ್ಲ. ಅರೆಪ್ರಜ್ಞೆಯಲ್ಲಿರುವ ಅರಗ ಜ್ಞಾನೇಂದ್ರರನ್ನು ರಾಜ್ಯಪಾಲರು ವಜಾ ಮಾಡಬೇಕು. ಸಿಐಡಿ ವರ್ಗಾವಣೆ ಆಗಲಿ ಮೊದಲು ಬೇಜವಾಬ್ದಾರಿ ಗೃಹ ಮಂತ್ರಿ ರಾಜೀನಾಮೆ ನೀಡಬೇಕು. ಬೆಂಗಳೂರು ನಗರ ಪೊಲೀಸ್ ಆಯುಕ್ತರ ವರ್ಗಾವಣೆ ಬಗ್ಗೆ ಚರ್ಚೆ ವಿಚಾರಕ್ಕೆ ಸಂಬಂಧಿಸಿದಂತೆ  ಕಮಲ್ ಪಂತ್​ರಿಗೆ ಪ್ರಮೋಷನ್ ಮಾಡಿ ಕಂಟಿನ್ಯೂ ಮಾಡಿದ್ದಾರೆ. ಅವರಿಗೆ ಯಾರಿಗೂ ಸರಿಯಾದ ಪರ್ಯಾಯ ಅಧಿಕಾರಿ ಸಿಕ್ಕಿಲ್ಲ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಬಗ್ಗೆ ನಾನೇನೂ ಹೇಳೋದಿಲ್ಲ. ಅವರು ಪ್ರಮೋಟ್​ ಆಗಿ ಡಿಜಿ ರ್ಯಾಂಕ್‌ನಲ್ಲಿ ಇದ್ದವರು. ಒಂದು ವರ್ಷದ ಹಿಂದೆಯೇ ವರ್ಗಾವಣೆ ಆಗಬೇಕಿತ್ತು. ಕಮಿಷನರ್ ಆದವರು ಎಡಿಜಿ ರ್ಯಾಂಕ್‌ನಲ್ಲಿ ಇರ್ತಾರೆ. ಹಿಂದೆ ಕಮಿಷನರ್ ಆದ ಭಾಸ್ಕರ್‌ರಾವ್ ಸೇರಿ ಏನೇನು ಹೇಳಿಕೆ ಕೊಟ್ಟಿದ್ದಾರೆ ನೋಡಿ. ಟ್ರಾನ್ಸಫರ್​ಗೆ ಯಾರ್ಯಾರು ಎಷ್ಟೆಷ್ಟು ಹಣ ಪಡೆದಿದ್ದಾರೆ ಅಂದಿದ್ದಾರೆ. ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಬಿಜೆಪಿ ಪಕ್ಷ ಮುಳುಗಿದೆ. ಕಮಲ್ ಪಂತ್ ಪ್ರಮೋಷನ್ ಆಗಿ ಒಂದು ವರ್ಷ ಆಗಿದೆ. ಇವರ ಹತ್ತಿರ ಚಾಯ್ಸ್ ಇಲ್ಲ. ದಕ್ಷ ಅಧಿಕಾರಿ ಇಲ್ಲ ಅಂತಾ ಕಂಟಿನ್ಯೂ ಮಾಡಿದ್ದಾರೆ. ಇರೋರಲ್ಲಿ ಸತ್ಯ ಹೇಳುವಂತಹ ಕಮಿಷನರ್ ಅವರು ಎಂದು ಹೇಳಿದ್ದಾರೆ.

ಆರ್​​ಎಸ್​ಎಸ್​ನವರು ರಣಹೇಡಿಗಳು. ಧಾರವಾಡದಲ್ಲಿ ಹಣ್ಣಿನ ವ್ಯಾಪಾರಿ ಮೇಲೆ ಹಲ್ಲೆ ಮಾಡಿದ್ದಾರೆ. ಬ್ರಿಟಿಷರ ಕಾಲದಲ್ಲೂ ಸಹ ಇವರು ರಣಹೇಡಿಗಳಾಗಿದ್ದರು ಎಂದು ಬೆಳಗಾವಿಯಲ್ಲಿ RSS​ ವಿರುದ್ಧ ಬಿ‌.ಕೆ‌.ಹರಿಪ್ರಸಾದ್ ವಾಗ್ದಾಳಿ ಮಾಡಿದ್ದಾರೆ. ಬ್ರಿಟಿಷರ ಜೊತೆ ಶಾಮೀಲಾಗಿ ಏಜೆಂಟ್, ಗುಲಾಮ ಆಗಿದ್ದವರು. ಸಂವಿಧಾನದ ಚೌಕಟ್ಟಿನಲ್ಲಿ ಇವರು ಹೋರಾಟ ಮಾಡಲಿ. ಸ್ವತಃ ಗೃಹಸಚಿವ ಆರಗ ಜ್ಞಾನೇಂದ್ರ ಪ್ರಚೋದನೆ ನೀಡುತ್ತಿದ್ದಾರೆ. ರಾಜ್ಯಪಾಲರು ಇದನ್ನೆಲ್ಲಾ ಗಮನಿಸುತ್ತಾ ಕಣ್ಣುಮುಚ್ಚಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ವಯಂಪ್ರೇರಿತವಾಗಿ ವಜಾ ಮಾಡಬೇಕು. ಸಂಪುಟದಿಂದ ಆರಗ ಜ್ಞಾನೇಂದ್ರ ವಜಾ ಮಾಡಲು ಒತ್ತಾಯ. ಸಿಎಂ ಬಸವರಾಜ ಬೊಮ್ಮಾಯಿ ಪಾತ್ರಧಾರಿಗಳು ಆಗಿದ್ದಾರೆ. ಅವರ ಸೂತ್ರಧಾರಿಗಳು ನಾಗಪುರದಲ್ಲಿರುವ ವಿಷಜಂತುಗಳು. ಇಡೀ ರಾಷ್ಟ್ರದ ಕೋಮು ಸೌಹಾರ್ದತೆ ಕದಡಲು ಯತ್ನ ಮಾಡಲಾಗಿದೆ.

ಬಿಜೆಪಿ, ಆರ್‌ಎಸ್ಎಸ್‌ನವರು ಕರ್ನಾಟಕದ ಜನ ತಲೆತಗ್ಗಿಸುವಂತ ಕೆಲಸ ಮಾಡುತ್ತಿದ್ದಾರೆ. ಕಿತ್ತೂರು ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರು. ರಾಷ್ಟ್ರವನ್ನು ಸ್ಥಾಪನೆ ಮಾಡಿದವರಿಗೂ ಅಪಮಾನ ಮಾಡುವಂತ ಘಟನೆ ನಡೀತಿದೆ. ಸ್ವಾತಂತ್ರ್ಯ ಹೋರಾಟ ಕೇವಲ ಒಂದು ಜಾತಿ, ಭಾಷೆ, ಪ್ರಾಂತ್ಯದ ವಿಚಾರ ಆಗಿರಲಿಲ್ಲ. ಲಕ್ಷಾಂತರ ಜನ ತ್ಯಾಗ ಬಲಿದಾನ ಮಾಡಿ ಸ್ವಾತಂತ್ರ್ಯ ಪಡೆದಿರುವಂತಹದ್ದು. ಸಂವಿಧಾನ ವಿರುದ್ಧ ಬಿಜೆಪಿ, ಮಂತ್ರಿಗಳು, ಸಂಘಪರಿವಾರ ಸದಸ್ಯರು ಷಡ್ಯಂತ್ರ ಮಾಡೋದನ್ನ ನೋಡುತ್ತಿದ್ದೇವೆ. ಮೊಟ್ಟಮೊದಲಿನ ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿದ್ದು ಬಹದೂರ್ ಎಸ್ ಜಾಫರ್. ತದನಂತರ 1857ರಲ್ಲಿ ಝಾನ್ಸಿ ರಾಣಿ ಯಾವುದೇ ಧರ್ಮ, ಜಾತಿ, ಭಾಷೆ, ಪ್ರಾಂತ್ಯ ಲೆಕ್ಕಿಸದೇ ಸ್ವಾತಂತ್ರ್ಯ ಹೋರಾಟ ಮಾಡಿದ್ರು. ಏನೂ ನಿರೀಕ್ಷೆ ಇಲ್ಲದೇ ಈ ಭಾರತ ದೇಶವನ್ನ ನಮ್ಮ ಕೈಗೆ ಕೊಟ್ಟಿದ್ದಾರೆ. ಧಾರವಾಡ, ರಾಯಚೂರು, ಕೋಲಾರದಲ್ಲಿ ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡಿದ್ದಾರೆ. ಮೊದಲು ದಲಿತರ ಮೇಲೆ, ಮಹಿಳೆಯರ ಮೇಲೆ ದೌರ್ಜನ್ಯ ಎಸಗಲಾಗಿದೆ. ಬಳಿಕ ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ. ಮೀಸಲಾತಿ ರದ್ದು ಮಾಡಿ ಅವಕಾಶ ತಪ್ಪಿಸುವಂತಹ ಕೆಲಸ ನಡೀತಿದೆ. ಈಗ ಅಲ್ಪಸಂಖ್ಯಾತರ ಮೇಲೆ ನೇರವಾಗಿ ದೌರ್ಜನ್ಯ ಮಾಡಲಾಗುತ್ತಿದೆ. ಬಹುಸಂಖ್ಯಾತರ ಭಾವನೆ ಕೆರಳಿಸಿ ಕೆಲವು ಸಮುದಾಯಗಳನ್ನು ಎರಡನೇ ದರ್ಜೆ ನಾಗರಿಕರನ್ನಾಗಿಸಲು ಪ್ರಯತ್ನ ಮಾಡಲಾಗುತ್ತಿದೆ. ಮನುಸ್ಮೃತಿ ಸಂವಿಧಾನ ಅಡಿಯಲ್ಲಿ ಪ್ರಬಲ ಜಾತಿ ಬಿಟ್ರೆ ಎಲ್ಲರೂ ಎರಡನೇ ದರ್ಜೆ ನಾಗರಿಕರು. ಅವರೆಲ್ಲ ಜೀತದಾಳರು, ಗುಲಾಮರು ಅನ್ನೋ ಭಾವನೆ ಮೂಡಿಸಲು ಬಿಜೆಪಿ, ಆರ್‌ಎಸ್ಎಸ್ ಪ್ರಯತ್ನ ಮಾಡುತ್ತಿದೆ. ಇದನ್ನ ನಾನು ಖಂಡಿಸುತ್ತೇನೆ ಎಂದು ಬಿ.ಕೆ.ಹರಿಪ್ರಸಾದ್ ಹೇಳದಿದ್ದಾರೆ.

ಇದನ್ನೂ  ಓದಿ:

ಅಮ್ಮಾ, ನೀನಿರುವ ಸ್ವರ್ಗಕ್ಕೆ ಬರಲು ನಾನೂ ಒಳ್ಳೆಯ ಕೆಲಸಗಳನ್ನೇ ಮಾಡುತ್ತೇನೆ; ರಷ್ಯಾ ಸೈನಿಕರ ದಾಳಿಗೆ ಮೃತಪಟ್ಟ ತಾಯಿಗೆ ಪುಟ್ಟ ಮಗಳ ಪತ್ರ

Published On - 3:45 pm, Sun, 10 April 22