ಔರಂಗಾಬಾದ್ ಹೆಸರು ಸಂಭಾಜಿನಗರ, ಉಸ್ಮಾನಾಬಾದ್ ಹೆಸರು ಧಾರಾಶಿವ್ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಮಹಾ ಸರ್ಕಾರ ಒಪ್ಪಿಗೆ

ಕಾಂಗ್ರೆಸ್ ಮತ್ತು ಎನ್‌ಸಿಪಿಯಂತಹ ಜಾತ್ಯತೀತ ಪಕ್ಷಗಳ ಆಜ್ಞೆಯ ಮೇರೆಗೆ ಪಕ್ಷವು ಕ್ರಮೇಣ ತನ್ನ ಮೂಲ ಸಿದ್ಧಾಂತದಿಂದ ದೂರ ಸರಿಯುತ್ತಿದೆ ಎಂದು ಬಂಡಾಯ ಶಾಸಕರು ಕಳೆದ ವಾರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾದ ಹಿಂದುತ್ವದ ಬದ್ಧತೆಯನ್ನು ಪ್ರಶ್ನಿಸಿದ್ದರು.

ಔರಂಗಾಬಾದ್ ಹೆಸರು ಸಂಭಾಜಿನಗರ, ಉಸ್ಮಾನಾಬಾದ್ ಹೆಸರು ಧಾರಾಶಿವ್ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಮಹಾ ಸರ್ಕಾರ ಒಪ್ಪಿಗೆ
ಉದ್ಧವ್ ಠಾಕ್ರೆ
Edited By:

Updated on: Jun 29, 2022 | 7:31 PM

ಔರಂಗಾಬಾದ್ (Aurangabad) ಹೆಸರು ಸಂಭಾಜಿನಗರ (Sambhajinagar), ಉಸ್ಮಾನಾಬಾದ್ (Osmanabad) ಹೆಸರು ಧಾರಾಶಿವ್ (Dharashiv) ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಮಹಾರಾಷ್ಟ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಅದೇ ವೇಳೆ ನವಿ ಮುಂಬೈ  ಹೆಸರನ್ನು ಡಿಬಿ ಪಾಟೀಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಬದಲಿಸಲಾಗುವುದು.ಗುರುವಾರ ವಿಶ್ವಾಸ ಮತವನ್ನು ಎದುರಿಸುತ್ತಿರುವ ಶಿವಸೇನೆಯ 31 ತಿಂಗಳ ಅವಧಿಯ ಮಹಾರಾಷ್ಟ್ರ ವಿಕಾಸ್ ಅಘಾಡಿ ಸರ್ಕಾರದಲ್ಲಿ ತನ್ನ ಕೊನೆಯ ಪ್ರಮುಖ ನಿರ್ಧಾರ ಇದು ಎಂದು ಎಂಬರೀತಿಯಲ್ಲಿ ಈ ಮರುನಾಮಕರಣವನ್ನು ನೋಡಲಾಗುತ್ತಿದೆ. ರಾಜ್ಯ ರಾಜಕೀಯದಲ್ಲಿ ಬಿಕ್ಕಟ್ಟು ಉಲ್ಬಣವಾಗಿರುವ ಹೊತ್ತಲ್ಲೇ ಶಿವಸೇನಾ ಎರಡು ನಗರಗಳನ್ನು ಮರುನಾಮಕರಣ ಮಾಡುವ ನಿರ್ಧಾರವನ್ನು ಕೈಗೊಂಡಿದೆ.

ಕಾಂಗ್ರೆಸ್ ಮತ್ತು ಎನ್‌ಸಿಪಿಯಂತಹ ಜಾತ್ಯತೀತ ಪಕ್ಷಗಳ ಆಜ್ಞೆಯ ಮೇರೆಗೆ ಪಕ್ಷವು ಕ್ರಮೇಣ ತನ್ನ ಮೂಲ ಸಿದ್ಧಾಂತದಿಂದ ದೂರ ಸರಿಯುತ್ತಿದೆ ಎಂದು ಬಂಡಾಯ ಶಾಸಕರು ಕಳೆದ ವಾರದಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾದ ಹಿಂದುತ್ವದ ಬದ್ಧತೆಯನ್ನು ಪ್ರಶ್ನಿಸಿದ್ದರು.

ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಯಗಢ ಮತ್ತು ಥಾಣೆ ಜಿಲ್ಲೆಯ ಯೋಜನೆ ಪೀಡಿತ ಜನರ ಮುಖಂಡರಾದ ದಿವಂಗತ ಡಿಬಿ ಪಾಟೀಲ್ ಅವರ ಹೆಸರನ್ನು ಇಡುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ.

Published On - 6:59 pm, Wed, 29 June 22