ಮಲ್ಲಿಕಾರ್ಜುನ ಖರ್ಗೆಯನ್ನು ಕಾಂಗ್ರೆಸ್ ಪಕ್ಷದ ಚುನಾಯಿತ ಅಧ್ಯಕ್ಷ ಎಂದು ಘೋಷಿಸಿದ ಮಧುಸೂದನ್ ಮಿಸ್ತ್ರಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 19, 2022 | 3:59 PM

ಅಧ್ಯಕ್ಷರ ಹೆಸರನ್ನು ಘೋಷಿಸಲು ಸುದ್ದಿಗೋಷ್ಠಿ ಕರೆದ ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಚುನಾಯಿತ ಕಾಂಗ್ರೆಸ್ ಅಧ್ಯಕ್ಷ ಎಂದು ಈ ಮೂಲಕ ಘೋಷಿಸುತ್ತೇನೆ

ಮಲ್ಲಿಕಾರ್ಜುನ ಖರ್ಗೆಯನ್ನು ಕಾಂಗ್ರೆಸ್ ಪಕ್ಷದ ಚುನಾಯಿತ ಅಧ್ಯಕ್ಷ ಎಂದು ಘೋಷಿಸಿದ ಮಧುಸೂದನ್ ಮಿಸ್ತ್ರಿ
ಮಧುಸೂದನ್ ಮಿಸ್ತ್ರಿ
Follow us on

ಕಾಂಗ್ರೆಸ್ ಅಧ್ಯಕ್ಷ ಚುನಾವಣೆಯಲ್ಲಿ ಶಶಿ ತರೂರ್ (Shashi Tharoor) ವಿರುದ್ಧ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಗೆಲುವು ಸಾಧಿಸಿದ್ದಾರೆ. ಪಕ್ಷದ ಅಧ್ಯಕ್ಷೀಯ ಚುನಾವಣೆಯಲ್ಲಿ (Congress presidential polls) ಖರ್ಗೆ ಅವರು 7,897 ಮತಗಳಿಂದ ಭರ್ಜರಿ ಗೆಲುವು ಸಾಧಿಸಿದರೆ, ಶಶಿ ತರೂರ್ ಪರವಾಗಿ 1,072 ಮತಗಳು ಲಭಿಸಿವೆ.. ನವದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಬೆಳಗ್ಗೆ 10 ಗಂಟೆಗೆ ಇಬ್ಬರು ಹಿರಿಯ ನಾಯಕರ ಆಯ್ಕೆಗೆ ಮತ ಎಣಿಕೆ ಆರಂಭವಾಗಿದೆ. ಸೋಮವಾರ ನಡೆದ ಚುನಾವಣೆಯಲ್ಲಿ 9,500ಕ್ಕೂ ಹೆಚ್ಚು ಮತ ಚಲಾವಣೆಯಾಗಿದೆ. ದೇಶದಾದ್ಯಂತ ಸ್ಥಾಪಿಸಲಾದ 68 ಮತಗಟ್ಟೆಗಳ ಎಲ್ಲಾ ಸೀಲ್ ಮಾಡಿದ ಮತಪೆಟ್ಟಿಗೆಗಳನ್ನು ಪಕ್ಷದ ಕಚೇರಿಯಲ್ಲಿ “ಸ್ಟ್ರಾಂಗ್ ರೂಮ್” ನಲ್ಲಿ ಇರಿಸಲಾಗಿತ್ತು. ಅಧ್ಯಕ್ಷರ ಹೆಸರನ್ನು ಘೋಷಿಸಲು ಸುದ್ದಿಗೋಷ್ಠಿ ಕರೆದ ಕಾಂಗ್ರೆಸ್ ಕೇಂದ್ರ ಚುನಾವಣಾ ಪ್ರಾಧಿಕಾರದ ಅಧ್ಯಕ್ಷ ಮಧುಸೂದನ್ ಮಿಸ್ತ್ರಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಚುನಾಯಿತ ಕಾಂಗ್ರೆಸ್ ಅಧ್ಯಕ್ಷ ಎಂದು ಈ ಮೂಲಕ ಘೋಷಿಸುತ್ತೇನೆ ಎಂದಿದ್ದಾರೆ. ಒಟ್ಟು ಎಣಿಕೆಯಾದ ಮತಗಳು 9,385.  ಅದರಲ್ಲಿ ಮಲ್ಲಿಕಾರ್ಜುನ ಖರ್ಗೆ 7,897 ಮತ್ತು ಶಶಿ ತರೂರ್ 1,072 ಮತಗಳನ್ನು ಪಡೆದರು. 416 ಅಸಿಂಧು ಮತಗಳು. ಭಾರತೀಯ ರಾಷ್ಟ್ರೀಯ ಸಂವಿಧಾನದ 18 (ಡಿ) ವಿಧಿ ಪ್ರಕಾರ, ನಾನು ಈ ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಪಕ್ಷದ ಚುನಾಯಿತ ಅಧ್ಯಕ್ಷ ಎಂದು ಘೋಷಿಸುತ್ತೇನೆ ಎಂದು ಮಿಸ್ತ್ರಿ ಹೇಳಿದರು.

ನಾವು ತರೂರ್ ಪತ್ರಕ್ಕೆ ಪ್ರತಿಕ್ರಿಯಿಸುತ್ತೇವೆ. ಅವರು ಅದನ್ನು ಮಾಧ್ಯಮದವರಿಗೆ ನೀಡಬಾರದಿತ್ತು. ಅವರು ನಮ್ಮಲ್ಲಿಗೆ ಬರಬೇಕಿತ್ತು ಎಂದಿದ್ದೆ. ಉತ್ತರ ಪ್ರದೇಶದಲ್ಲಿ 6 ಮತಪೆಟ್ಟಿಗೆಗಳಿದ್ದವು, ಅದರಲ್ಲಿ 4ರಲ್ಲಿ  ಯಾವುದೇ ಸಮಸ್ಯೆಗಳಿಲ್ಲ. ಇಂದು ಬೆಳಿಗ್ಗೆ ನಾವು ಎಲ್ಲಾ ಮತಪೆಟ್ಟಿಗೆಗಳ ಸೀಲ್‌ಗಳನ್ನು ಪರಿಶೀಲಿಸಿದ್ದೇವೆ. ಶಶಿ ತರೂರ್ ಅವರು 2 ಮತಪೆಟ್ಟಿಗೆಗಳಲ್ಲಿ ಸಂಖ್ಯೆಗಳು ಇರಲಿಲ್ಲ ಎಂದು ಹೇಳಿರುವುದಾಗಿ ಮಿಸ್ತ್ರಿ ಹೇಳಿದ್ದಾರೆ.

24 ವರ್ಷಗಳಲ್ಲಿ ಮೊದಲ ಗಾಂಧಿಯೇತರ ಅಧ್ಯಕ್ಷ ಖರ್ಗೆ

ಕರ್ನಾಟಕದ ಕಟ್ಟಾ ಗಾಂಧಿ ಕುಟುಂಬದ ನಿಷ್ಠಾವಂತ ಮಾಪಣ್ಣ ಮಲ್ಲಿಕಾರ್ಜುನ ಖರ್ಗೆ ಅವರು 24 ವರ್ಷಗಳಲ್ಲಿ ಕಾಂಗ್ರೆಸ್‌ನ ಮೊದಲ ಗಾಂಧಿಯೇತರ ಅಧ್ಯಕ್ಷರಾಗಿದ್ದಾರೆ. ಅಕ್ಟೋಬರ್ 17 ರಂದು ನಡೆದ ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ದೇಶದಾದ್ಯಂತ 9,500 ಕ್ಕೂ ಹೆಚ್ಚು ಪ್ರತಿನಿಧಿಗಳು ಮತ ಚಲಾಯಿಸುವ ಮೂಲಕ ಖರ್ಗೆ ಅವರು ತಿರುವನಂತಪುರಂನ ಸಂಸದ ಶಶಿ ತರೂರ್ ಅವರನ್ನು ಸೋಲಿಸಿದರು.

ಇಂದು ಸಂಜೆ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಠಿ

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಇಂದು ಸಂಜೆ -4:30ಹೊತ್ತಿಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.

Published On - 3:57 pm, Wed, 19 October 22